![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Jul 31, 2022, 4:36 PM IST
ಜಮಖಂಡಿ: ಪೆನ್ನಿನ ಒಂದು ಹನಿ ಮಸಿಯಿಂದ ಕೋಟಿ ಜನರಿಗೆ ಬಿಸಿ ಮುಟ್ಟಿಸುವ ಕೆಲಸ ಪತ್ರಿಕೆಗಳಿಂದ ಮಾತ್ರ ಸಾಧ್ಯವಿದೆ ಎಂದು ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಹೇಳಿದರು.
ನಗರದ ಮಾಜಿ ಸೈನಿಕ ಭವನದಲ್ಲಿ ಕರ್ನಾಟಕ ಪ್ರಸ್ ಕ್ಲಬ್ ಸಹಯೋಗದಲ್ಲಿ ಪತ್ರಿಕಾ ದಿನಾಚರಣೆ, ತಾಲೂಕು ಘಟಕ ಉದ್ಘಾಟನೆ ಮತ್ತು ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಆಸೆ ಆಮಿಷಕ್ಕೊಳಗಾಗದೆ ಮತ್ತು ಬೆದರಿಕೆಗೆ ಹೆದರದೆ ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ಕೆಲಸವನ್ನು ಪತ್ರಿಕೆಗಳು ಮಾಡಿದರೆ ಮಾತ್ರ ಸಮಾಜ ಸುಧಾರಣೆಯಾಗಲಿದೆ. ದೇಶಕ್ಕೆ ಡಾ| ಬಿ.ಆರ್. ಅಂಬೇಡ್ಕರ್ ಶ್ರೇಷ್ಠ ಸಂವಿಧಾನ ನೀಡಿದ್ದಾರೆ. ಅದರಲ್ಲಿ ನ್ಯಾಯಾಂಗ, ಶಾಸಕಾಂಗ, ಕಾರ್ಯಾಂಗ ಕೆಲಸ ನಿರ್ವಹಿಸುತ್ತವೆ. ಅದರ ಜತೆಯಲ್ಲಿ ನಾಲ್ಕನೇ ಅಂಗ ಪತ್ರಿಕಾರಂಗ ಕೂಡ ಸಾಮಾಜಿಕ ಸೇವೆ ನಿರ್ವಹಿಸುತ್ತದೆ ಎಂದರು. ಉಧ್ಯಮಿ ಜಗದೀಶ ಗುಡಗುಂಟಿ, ರೈತ ಮುಖಂಡ ಬಸವರಾಜ ಸಿಂಧೂರ, ಜವಳಿ ನಿಗಮ ಮಾಜಿ ಉಪಾಧ್ಯಕ್ಷ ನಜೀರ ಕಂಗನೋಳ್ಳಿ, ಜಾಕೀರಹುಸೇನ ನಧಾಪ ಮಾತನಾಡಿದರು.
ಇದೇ ಸಂದರ್ಭದಲ್ಲಿ ಪತ್ರಕರ್ತರಾದ ಗುರುರಾಜ ವಾಳ್ವೆàಕರ, ಮಲ್ಲೇಶ ಆಳಗಿ, ಶಶಿಕಾಂತ ತೇರದಾಳ, ವಿಷ್ಣು ಕುಲಕರ್ಣಿ, ಸರೋಜಿನಿ ಅರಗೆ ಅವರಿಗೆ ಮಾಧ್ಯಮ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ರವೀಂದ್ರ ಜಂಬಗಿ, ಕಲ್ಯಾಣಪ್ಪ ಬಾಂಗಿ ಅವರಿಗೆ ದೃಶ್ಯ ಮಾಧ್ಯಮ ರತ್ನ ಪ್ರಶಸ್ತಿ ನೀಡಲಾಯಿತು. 25ಕ್ಕೂ ಸಾಧಕರಿಗೆ ಮಾತೃಭೂಮಿ ಸೇವಾ ರತ್ನ ಪ್ರಶಸ್ತಿ, ಆರಕ್ಷಕ ರತ್ನ ಪ್ರಶಸ್ತಿ ಮತ್ತು ನಿಷ್ಕಾಮ ಸೇವಾ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ದಾಸನಾಳಮಠದ ಸದಾಶಿವ ಶ್ರೀ ಸ್ವಾಮಿ ವಿವೇಕಾನಂದ ಆಶ್ರಮ ಗಿರೀಶಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಿಪಿಐ ಗುರುನಾಥ ಚವ್ಹಾಣ, ಎಂ.ವಾಲಿಕರ, ಅಬ್ದುಲಖಾದರ ನಧಾಪ, ಎಚ್.ಬಿ.ಚೌಧರಿ, ಎಸ್. ದಯಾನಂದ, ರಫೀಕ ಬಾರಿಗಡ್ಡಿ, ಗುಡುಸಾಬ ಹೊನವಾಡ, ರವಿ ಬೀಳಗಿ, ವೆಂಕಪ್ಪ ಹುಡೆದ ಇದ್ದರು. ಮಹಾಂತೇಶ ಮಠಪತಿ ಪ್ರಾರ್ಥಿಸಿದರು. ಕೇದಾರ ರಾವಳ್ಳೋಜಿ ಸ್ವಾಗತಿಸಿದರು. ಅಶೋಕ ಸತ್ತಿ ನಿರೂಪಿಸಿದರು. ರಾಜಕುಮಾರ ಪಾಟೀಲ ವಂದಿಸಿದರು.
You seem to have an Ad Blocker on.
To continue reading, please turn it off or whitelist Udayavani.