ಮಾನವೀಯ ಕಾರ್ಯಕ್ಕೆ ಮಿಡಿದ ಮನಗಳು

ಜನಪ್ರತಿನಿಧಿಗಳು- ಅಧಿಕಾರಿಗಳಾದಿಯಾಗಿ ನಿರಂತರ ಸೇವಾ ಕಾರ್ಯ| ಆಹಾರ ಧಾನ್ಯದ ಕಿಟ್‌-ಸ್ಯಾನಿಟೈಸರ್‌ ನೀಡಿದವರು ಹಲವರು

Team Udayavani, May 28, 2021, 7:30 PM IST

26-mlp-1b

ವರದಿ: ಚಂದ್ರಶೇಖರ ಮೋರೆ

ಮಹಾಲಿಂಗಪುರ: ಕೊರೊನಾ ಸಂದಿಗ್ಧ ಸ್ಥಿತಿಯಲ್ಲಿ ಪಟ್ಟಣದ ಕೆಲ ಜನಪ್ರತಿನಿಧಿಗಳು, ಅಧಿಕಾರಿಗಳು, ಯುವಕ ಸಂಘದ ಕಾರ್ಯಕರ್ತರು ಕಡುಬಡವರಿಗೆ, ಕೊರೊನಾ ವಾರಿಯರ್ಗೆ, ಪೌರ ಕಾರ್ಮಿಕರಿಗೆ, ಲಾರಿ ಚಾಲಕರಿಗೆ ಊಟ- ಉಪಹಾರ, ಚಹಾ ವಿತರಿಸುವುದರ ಜತೆಗೆ ಮಾಸ್ಕ್, ಸ್ಯಾನಿಟೈಸರ್‌ ನೀಡುವ ಹಲವರ ಸಂಕಷ್ಟಕ್ಕೆ ನೆರವಾಗಿದ್ದಾರೆ.

ಬಿಜೆಪಿ ಯುವ ಮೋರ್ಚಾ, ಶಾಸಕ ಸಿದ್ದು ಸವದಿ ಅಭಿಮಾನಿ ಬಳಗ, ಯುವ ನಾಯಕ ರವಿ ಜವಳಗಿ ಅಭಿಮಾನಿ ಬಳಗ, ಭಾರತೀಯ ಸಂಸ್ಕೃತಿ ಗಾರ್ಮೆಂಟ್ಸ್‌, ಸ್ವಾಮಿ ವಿವೇಕಾನಂದ ಪ್ರತಿಷ್ಠಾನ ಸೇರಿದಂತೆ ವಿವಿಧ ಸಂಘಟನೆಗಳ ಹತ್ತಾರು ಯುವಕರು ಪುರಸಭೆ ಸದಸ್ಯ ರವಿ ಜವಳಗಿ ನೇತೃತ್ವದಲ್ಲಿ ಪ್ರತಿನಿತ್ಯ ಭಿಕ್ಷುಕರಿಗೆ, ನಿರ್ಗತಿಕರಿಗೆ, ಲಾರಿ ಚಾಲಕರಿಗೆ ಆಹಾರ ಪೊಟ್ಟಣ, ನೀರಿನ ಬಾಟಲ್‌ ವಿತರಿಸುತ್ತಿದ್ದಾರೆ. ಇದರ ಜತೆಗೆ ಕೆಲ ಸಂಘಟನೆಗಳು ಪಟ್ಟಣದ ಕೋವಿಡ್‌ ಸೆಂಟರ್‌ಗಳಲ್ಲಿ ಮೃತಪಟ್ಟ ಅನಾಥರ ಅಂತ್ಯ ಸಂಸ್ಕಾರ ನೆರವೇರಿಸುತ್ತಿವೆ.

ಪುರಸಭೆ ಸದಸ್ಯ ರವಿ ಜವಳಗಿ, ಮಹಾಲಿಂಗ ಕಂಕನವಾಡಿ, ನಂದು ಲಾತೂರ, ಸಂಗಮೇಶ ಅಂಬಲ್ಯಾಳ, ಹನಮಂತ ನಾವ್ಹಿ, ದತ್ತ ಯರಗಟ್ಟಿಕರ, ಸಾಗರ ಶಿಂಧೆ, ಬೈರೇಶ ಆದೆಪ್ಪನವರ, ಬಸು ಮಡಿವಾಳ, ಕೃಷ್ಣಾ ಕಳ್ಳಿಮನಿ, ಮಹಾಂತೇಶ ಶಿವಣಗಿ, ಪ್ರಕಾಶ ಕಳ್ಳಿಮನಿ, ಅಭಿಷೇಕ ಲಮಾಣಿ, ಚನ್ನು ಆರೇಗಾರ, ಯಲ್ಲಪ್ಪ ಬನ್ನೆನ್ನವರ, ಸಂದೀಪ ಮುಗಳಖೋಡ, ಹರೀಶ ಮಂಟೂರ, ಅನಿಲ ಕವಾಸಿ, ಅಭಿಷೇಕ ಸೊನ್ನದ, ಮಹಾಲಿಂಗ ದೇಸಾಯಿ ಸೇರಿ ಹಲವಾರು ಯುವಕರು ನಿರಂತರ ಸೇವಾ ಕಾರ್ಯದಲ್ಲಿ ತೊಡಗಿದ್ದಾರೆ.

ಸಿ.ಎಂ.ಹುರಕಡ್ಲಿ ಫೌಂಡೇಶನ್‌: ಪುರಸಭೆ ಮಾಜಿ ಉಪಾಧ್ಯಕ್ಷ ಚನ್ನಬಸು ಹುರಕಡ್ಲಿ ಕೊರೊನಾದಿಂದ ಸಂಕಷ್ಟಕ್ಕೊಳಗಾದವರಿಗೆ, ಕೊರೊನಾ ವಾರಿಯರ್ಗೆ ತಮ್ಮ ಹುರಕಡ್ಲಿ ಪ್ರತಿಷ್ಠಾನದ ಅಡಿಯಲ್ಲಿ ನೆರವಾಗಿದ್ದಾರೆ. ಪಟ್ಟಣದಲ್ಲಿ ಸಾರ್ವಜನಿಕ ಶೌಚಾಲಯ ಗುತ್ತಿಗೆ ಹಿಡಿದು ಸ್ವತ್ಛತಾ ಕಾರ್ಯ ಕೈಗೊಂಡಿರುವ ಹೊರ ರಾಜ್ಯದ ಹತ್ತಾರು ಕುಟುಂಬಗಳಿಗೆ ಪಡಿತರ ಕಿಟ್‌ ವಿತರಿಸಿದ್ದಾರೆ. ಪತ್ನಿ ಪ್ರತಿನಿಧಿಸಿದ್ದ ವಾರ್ಡ್‌ 6 ಬಸವನಗರ ಮತ್ತು ವಿದ್ಯಾನಗರಗಳಲ್ಲಿ ತಮ್ಮ ಸ್ವಂತ ಖರ್ಚಿನಲ್ಲಿ ಸೋಡಿಯಂ ಪೋಕ್ಲೋರೈಡ್‌ ನ್ನು ಸಿಂಪಡಣೆ ಕೈಗೊಂಡಿದ್ದಾರೆ. ಜತೆಗೆ ಪೊಲೀಸರು, ಪುರಸಭೆ ಸಿಬ್ಬಂದಿ, ಪೌರ ಕಾರ್ಮಿಕರು, ಸರಕಾರಿ ಆಸ್ಪತ್ರೆ ಸಿಬ್ಬಂದಿಗೆ ಗುಣಮಟ್ಟದ ಮುಖರûಾ ಕವಚ, ಮಾಸ್ಕ್, ಸ್ಯಾನಿಟೈಸರ್‌, ಕನೇರಿ ಮಠದ ಶ್ರೀಗಳು ನೀಡಿದ ರೋಗನಿರೋಧಕ ಔಷಧ ಬಾಟಲಿಗಳನ್ನು ವಿತರಿಸಿದ್ದಾರೆ.

ಬಸವನಗರ-ವಿದ್ಯಾನಗರದ ಪ್ರತಿ ಮನೆಗೆ ನೀರಿನ ಡಬ್ಬಿ, ಕಸದ ಸಂಗ್ರಹಣೆಯ ಬಕೆಟ್‌, ಕಡು ಬಡವರಿಗೆ ಆಹಾರ ಕಿಟ್‌ ವಿತರಣೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಇಂತಹ ಸಮಯದಲ್ಲಿ ಬಡವರು- ನಿರ್ಗತಿಕರ ಸೇವೆ ಮಾಡುವುದು ಸೌಭಾಗ್ಯ ಎನ್ನುತ್ತಾರೆ ಸಮಾಜ ಸೇವಕ ಚನಬಸು ಹುರಕಡ್ಲಿ. ಕರ್ತವ್ಯದ ಜತೆ ಸೇವಾಕಾರ್ಯ: ಪಟ್ಟಣದ ಪುರಸಭೆ ಮುಖ್ಯಾಧಿಕಾರಿ ಎಚ್‌.ಎಸ್‌. ಚಿತ್ತರಗಿ, ಠಾಣಾಧಿಕಾರಿ ಜಿ.ಎಸ್‌. ಉಪ್ಪಾರ, ಸರಕಾರಿ ಆಸ್ಪತ್ರೆಯ ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಬಿ.ಗೋಣಿ ಕೊರೊನಾ ನಿಯಂತ್ರಣಕ್ಕಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಜಾಗೃತಿ ಮೂಡಿಸುವುದು, ತಿಳಿವಳಿಕೆ ನೀಡುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಠಾಣಾಧಿಕಾರಿ ಜಿ.ಎಸ್‌.ಉಪ್ಪಾರ ಪೊಲೀಸ್‌ ಇಲಾಖೆ ಒತ್ತಡದ ಕೆಲಸ ಕಾರ್ಯಗಳ ನಡುವೆಯೂ ಮಹಾಲಿಂಗೇಶ್ವರ ಗೋಶಾಲೆಗೆ ಮೇವು ಪೂರೈಸಿದ್ದಾರೆ. ಪಟ್ಟಣದ ನಾಲ್ಕು ಕೋವಿಡ್‌ ಸೆಂಟರ್‌ಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೊರೊನಾ ಸೋಂಕಿತರಿಗೆ, ಕರ್ತವ್ಯ ನಿರತ ಪೊಲೀಸ್‌ ಸಿಬ್ಬಂದಿಗೆ, ಪೌರ ಕಾರ್ಮಿಕರಿಗೆ ಊಟ-ಉಪಹಾರ ವ್ಯವಸ್ಥೆ ಕಲ್ಪಿಸಿದ್ದಾರೆ. ಸೇವಾನಿರತ ನಾಯಕರು: ಪುರಸಭೆ ಮಾಜಿ ಅಧ್ಯಕ್ಷ ಬಸವರಾಜ ರಾಯರ ಹಾಗೂ ಅಭಿಮಾನಿ ಬಳಗದವರು ಸಹ ಕೆಂಗೇರಿಮಡ್ಡಿಯಲ್ಲಿನ ಬಡವರಿಗೆ ತರಕಾರಿ ಕಿಟ್‌, ಪೊಲೀಸರಿಗೆ ಮಾಸ್ಕ್ ವಿತರಿಸಿದ್ದಾರೆ.

ರಬಕವಿಯ ಡಾ| ಪದ್ಮಜೀತ್‌ ನಾಡಗೌಡ ಅವರು ಕೋವಿಡ್‌ ಸೆಂಟರ್‌ ರೋಗಿಗಳಿಗೆ ನಿರಂತರ ಊಟದ ವ್ಯವಸ್ಥೆ ಮಾಡಿದ್ದಾರೆ. ಕಾಂಗ್ರೆಸ್‌ ಯುವ ಕಾರ್ಯಕರ್ತ ಸೂರಜ್‌ ಅವಟಿ ಲಾರಿ ಚಾಲಕರಿಗೆ ಊಟದ ವ್ಯವಸ್ಥೆ ಮಾಡಿಸುತ್ತಿದ್ದಾರೆ. ಬಿಜೆಪಿ ಮುಖಂಡ ಚನ್ನಪ್ಪ ಪಟ್ಟಣಶೆಟ್ಟಿ ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ, ಗ್ರಾಪಂ ಸಿಬ್ಬಂದಿಗೆ ಮಾಸ್ಕ್, ಸ್ಯಾನಿಟೈಸರ್‌ ವಿತರಿಸುತ್ತಿದ್ದಾರೆ.

ಟಾಪ್ ನ್ಯೂಸ್

ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ

ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ

ಮಾರ್ಗದರ್ಶಕರನ್ನು ಕಳೆದುಕೊಂಡುಕೊಂಡಿದ್ದೇವೆ… ಮನಮೋಹನ್ ಸಿಂಗ್ ನಿಧನಕ್ಕೆ ರಾಹುಲ್ ಸಂತಾಪ

ನನ್ನ ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇನೆ… ಮಾಜಿ ಪ್ರಧಾನಿ ನಿಧನಕ್ಕೆ ರಾಹುಲ್ ಸಂತಾಪ

2-gangavathi

Gangavathi: 25 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ

Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ

Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ

Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ

Bheema-Naik

KMF: ಸಂಕ್ರಾಂತಿ ಬಳಿಕ ಹಾಲಿನ ದರ ಪರಿಷ್ಕರಣೆ ಸರಕಾರದಿಂದ ನಿರ್ಧಾರ: ಭೀಮಾ ನಾಯ್ಕ

MM-Singh-ACC-Pm

Accidental Prime Minister: ದ ಮೇಕಿಂಗ್‌ ಆ್ಯಂಡ್‌ ಅನ್‌ಮೇಕಿಂಗ್‌ ಆಫ್ ಡಾ.ಸಿಂಗ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10

Bagalkot : ಸಕಲ ಸರ್ಕಾರಿ ಗೌರವಗಳೊಂದಿಗೆ ಯೋಧ ಮಹೇಶ್ ಮರೆಗೊಂಡ ಅಂತ್ಯಸಂಸ್ಕಾರ

ಪತ್ನಿ ಊರಿನತ್ತ ಪ್ರಯಾಣ ಬೆಳೆಸಿದರೆ… ಸಾವಿನ ಮನೆಯ ಕದ ತಟ್ಟಿದ ಯೋಧ ನಾಗಪ್ಪ ಮರೆಗೊಂಡ

ಪತ್ನಿ ಊರಿನತ್ತ ಪ್ರಯಾಣ ಬೆಳೆಸಿದರೆ… ಸಾವಿನ ಮನೆಯ ಕದ ತಟ್ಟಿದ ಯೋಧ ನಾಗಪ್ಪ ಮರೆಗೊಂಡ

4-soldier

Mahalingpur: ಇಂದು ಮೃತ ಯೋಧ ಮಹೇಶ ಅಂತ್ಯಕ್ರಿಯೆ; ಯೋಧನ ಮನೆಗೆ ಸಚಿವ ತಿಮ್ಮಾಪುರ ಭೇಟಿ

Mudhola

Mudhola: ಸಿಲಿಂಡರ್ ಸ್ಫೋಟ: ಹೊತ್ತಿ ಉರಿದ ಮನೆ

Banahatti: ತಾಂತ್ರಿಕ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಬದ್ಧಳಾಗಿದ್ದೇನೆ: ಉಮಾಶ್ರೀ

Banahatti: ತಾಂತ್ರಿಕ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಬದ್ಧಳಾಗಿದ್ದೇನೆ: ಉಮಾಶ್ರೀ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ

ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ

ಮಾರ್ಗದರ್ಶಕರನ್ನು ಕಳೆದುಕೊಂಡುಕೊಂಡಿದ್ದೇವೆ… ಮನಮೋಹನ್ ಸಿಂಗ್ ನಿಧನಕ್ಕೆ ರಾಹುಲ್ ಸಂತಾಪ

ನನ್ನ ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇನೆ… ಮಾಜಿ ಪ್ರಧಾನಿ ನಿಧನಕ್ಕೆ ರಾಹುಲ್ ಸಂತಾಪ

2-gangavathi

Gangavathi: 25 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ

Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ

Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ

Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.