ಸದೃಢ ಶರೀರಕ್ಕೆ ಕ್ರೀಡೆ ಅವಶ್ಯ: ಗುಡಗುಂಟಿ
ಇಂದಿನ ಯುವ ಶಕ್ತಿ ಕ್ರೀಡೆಯಲ್ಲಿ ಆಸಕ್ತಿ ಹೊಂದಿದೆ.
Team Udayavani, Nov 5, 2021, 2:15 PM IST
ಜಮಖಂಡಿ: ಶರೀರ ಸದೃಢವಾಗಲು ಕ್ರೀಡೆಗಳು ಅವಶ್ಯ. ಪ್ರತಿಯೊಬ್ಬರೂ ಮಾನಸಿಕ, ದೈಹಿಕವಾಗಿ ಸದೃಢ ಶರೀರ ಹೊಂದಲು ಕ್ರೀಡೆಗಳೇ ಆಧಾರ ಎಂದು ಕನ್ನಡ ಸಂಘದ ಅಧ್ಯಕ್ಷ, ಉದ್ಯಮಿ ಜಗದೀಶ ಗುಡಗುಂಟಿ ಹೇಳಿದರು.
ಕಡಪಟ್ಟಿ ಗ್ರಾಮದ ಬಸವೇಶ್ವರ ದೇವಸ್ಥಾನ ಆವರಣದಲ್ಲಿ ತಾಲೂಕು ಅಥ್ಲೆಟಿಕ್ ಅಸೋಸಿಯೇಷನ್ ಹಮ್ಮಿಕೊಂಡಿದ್ದ ಪುರುಷರ ರಾಷ್ಟ್ರ ಮಟ್ಟದ ಮುಕ್ತ ರಸ್ತೆ ಓಟದ ಸ್ಪರ್ಧೆಯ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಯುವ ಶಕ್ತಿ ಕ್ರೀಡೆಯಲ್ಲಿ ಆಸಕ್ತಿ ಹೊಂದಿದೆ. ಯುವಕರಿಗೆ ತರಬೇತಿ ನೀಡುವ ಸಂಘ-ಸಂಸ್ಥೆಗಳ ಕೊರತೆಯಿಂದ ಗುರಿ ಸಾಧಿಸಲು ಸಾಧ್ಯವಾಗುತ್ತಿಲ್ಲ. ನಮ್ಮ ಭಾಗದ ಕ್ರೀಡಾಪಟುಗಳಿಗೆ ಹೆಚ್ಚಿನ ಪ್ರೋತ್ಸಾಹ, ತರಬೇತಿ ಲಭಿಸಿದ್ದಲ್ಲಿ ಜಿಲ್ಲೆ, ರಾಜ್ಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೆಲುವು ಸಾಧಿಸಲು ಸಾಧ್ಯ. ಕುಸ್ತಿ, ಕಬಡ್ಡಿ, ವಾಲಿಬಾಲ್, ಸೈಕ್ಲಿಂಗ್, ಈಜು ಸ್ಪರ್ಧೆ, ಕಲೆ, ನೃತ್ಯ, ಸಾಹಿತ್ಯಕ್ಕೆ ತವರುಮನೆ ಜಮಖಂಡಿ. ಆದರೆ ತರಬೇತುದಾರರ ಕೊರತೆ ಎದ್ದು ಕಾಣುತ್ತಿದ್ದು ಅದಕ್ಕಾಗಿ ಈ ತರಹದ ಸಂಸ್ಥೆ ಮುಂದೆ ಬಂದರೆ ಕ್ರೀಡಾಪಟುಗಳ ಭವಿಷ್ಯ ಉತ್ತಮವಾಗಲಿದೆ ಎಂದರು.
ತಾಲೂಕು ಅಥ್ಲೆಟಿಕ್ ಅಸೋಸಿಯೇಷನ್ ಸಂಸ್ಥೆಗೆ ನನ್ನ ಆದಾಯದಲ್ಲಿ ವರ್ಷಕ್ಕೆ 1.50 ಲಕ್ಷ ಅನುದಾನ ನೀಡುತ್ತೇನೆ. ಈ ಬಗ್ಗೆ ಸಂಸ್ಥೆಗೆ ಲಿಖೀತವಾಗಿ ಬರೆದು ಕೊಡುತ್ತೇನೆ. ನಮ್ಮ ಭಾಗದ ಮಕ್ಕಳು ಕ್ರೀಡೆಯಲ್ಲಿ ಮುಂದೆ ಬಂದು ಅಂತಾರಾಷ್ಟ್ರ ಮಟ್ಟದಲ್ಲಿ ಗೆಲುವು ಸಾಧಿಸಬೇಕೆಂಬುದೇ ನನ್ನ ಆಸೆ ಎಂದರು. ಹನಮಂತರಾಯ ಬಿರಾದಾರ ಮಾತನಾಡಿ, ದೇಶದಲ್ಲಿ ಸಾಕಷ್ಟು ಯುವಕರು ಕ್ರೀಡೆಯಲ್ಲಿ ಸಾಧನೆಗೈದು ಪದಕ ಪಡೆದು ಕೀರ್ತಿ ಹೆಚ್ಚಿಸಿದ್ದಾರೆ. ನಮ್ಮ ಭಾಗದ ಕ್ರೀಡಾಪಟುಗಳು ತರಬೇತಿ ಪಡೆದು ಪ್ರಶಸ್ತಿ ಪಡೆಯಬೇಕು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಂ. ನ್ಯಾಮಗೌಡ ಮಾತನಾಡಿದರು. ಈ ವೇಳೆ ಸಂಸ್ಥೆ ಅಧ್ಯಕ್ಷ ಬಸನಗೌಡ ಪಾಟೀಲ, ಉಪಾಧ್ಯಕ್ಷೆ ರೇಖಾ ನಿಂಗಸಾನಿ, ಸಲ್ಮಾನ್ ಪಾರ್ಥನಳ್ಳಿ, ಬಸವರಾಜ ಕೋಟ್ಯಾಳ, ಅಜೇಯ ಕಡಪಟ್ಟಿ, ಚನ್ನಪ್ಪ ನ್ಯಾಮಗೌಡ, ನಾಗಪ್ಪ ಹೆಗಡೆ, ಬಸವರಾಜ ಇಟ್ಟಿ, ರಾಮಣ್ಣ ನಾಯಕ, ಗಂಗಪ್ಪ ತೇರದಾಳ, ಗುರುಪಾದ ಇಟ್ಟಿ, ಪಂಡಿತ ಇಟ್ಟಿ, ಮುತ್ತಪ್ಪ ತಳವಾರ, ಸೈಯದ ಪೆಂಡಾರಿ, ಪ್ರಕಾಶ ಖ್ಯಾತಗೊಂಡ, ಬಸವರಾಜ ಕಡಪಟ್ಟಿ ಇತರರಿದ್ದರು.
ರಸ್ತೆ ಓಟದ ಸ್ಪರ್ಧೆ ವಿಜೇತರು: 19 ವರ್ಷ ವಯೋಮಾನದೊಳಗಿನ 4 ಕಿ.ಮೀ ಓಟದ ಸ್ಪರ್ಧೆಗೆ ಶಾಸಕ ಆನಂದ ನ್ಯಾಮಗೌಡ ಚಾಲನೆ ನೀಡಿದರು. ಓಂಕಾರ ಪಡ್ಲೆàಕರ್ ಪ್ರಥಮ ಸ್ಥಾನ, ಸಿದ್ದಣ್ಣ ಇಮ್ಮಡಿ ದ್ವಿತೀಯ, ದಶರಥ ಗುಮ್ರೆ ತೃತೀಯ, ಭರತ ಸಲಗೋಡೆ ಚತುರ್ಥ, ವಿ. ಹನಮಂತ 5ನೇ ಸ್ಥಾನ ಪಡೆದರು. 6 ಕಿ.ಮೀ ಓಟದ ಸ್ಪರ್ಧೆಯಲ್ಲಿ ಸುಶಾಂತ ಗೋಡೆ ಪ್ರಥಮ, ಎನ್.ಡಿ. ಸುನೀಲ ದ್ವಿತೀಯ, ಅರುಣ ರಾಥೋಡ ತೃತೀಯ, ರಾಜು ನಾಯಕ ಚರ್ತುಥ, ಶಿವಾನಂದ ದೊಡಮನಿ 5ನೇ ಸ್ಥಾನ ಪಡೆದರು.
23 ವರ್ಷದೊಳಗಿನ ಬಾಲಕರ ಆರ್ಮಿ ಓಟದ ಸ್ಪರ್ಧೆಯಲ್ಲಿ ಓಂಕಾರ ಕುಂಬಾರ ಪ್ರಥಮ, ಲಕ್ಷ್ಮಣ ಬಂಡಿವಡ್ಡರ ದ್ವಿತೀಯ, ಸುಶಾಂತ ಗೆಡೆ ತೃತೀಯ, ಎಚ್.ಎಂ. ಸತೀಶ ಚತುರ್ಥ, ಸಂಗಮೇಶ ಮಾಳಿ ಐದನೇ ಸ್ಥಾನ ಪಡೆದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bagalkot : ಸಕಲ ಸರ್ಕಾರಿ ಗೌರವಗಳೊಂದಿಗೆ ಯೋಧ ಮಹೇಶ್ ಮರೆಗೊಂಡ ಅಂತ್ಯಸಂಸ್ಕಾರ
ಪತ್ನಿ ಊರಿನತ್ತ ಪ್ರಯಾಣ ಬೆಳೆಸಿದರೆ… ಸಾವಿನ ಮನೆಯ ಕದ ತಟ್ಟಿದ ಯೋಧ ನಾಗಪ್ಪ ಮರೆಗೊಂಡ
Mahalingpur: ಇಂದು ಮೃತ ಯೋಧ ಮಹೇಶ ಅಂತ್ಯಕ್ರಿಯೆ; ಯೋಧನ ಮನೆಗೆ ಸಚಿವ ತಿಮ್ಮಾಪುರ ಭೇಟಿ
Mudhola: ಸಿಲಿಂಡರ್ ಸ್ಫೋಟ: ಹೊತ್ತಿ ಉರಿದ ಮನೆ
Banahatti: ತಾಂತ್ರಿಕ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಬದ್ಧಳಾಗಿದ್ದೇನೆ: ಉಮಾಶ್ರೀ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.