ಎಸ್‌ಎಸ್‌ಎಲ್‌ಸಿ ಪರೀಕ್ಷಾ ಮಂಡಳಿ ಎಡವಟ್ಟು; ಪ್ರವೇಶಕ್ಕೆ ಇಕ್ಕಟ್ಟು
ಉತ್ತರ ಪತ್ರಿಕೆಯ ನಕಲು ಪ್ರತಿಯನ್ನು ಕಳೆದ ಶನಿವಾರವೇ ಪಿಡಿಎಫ್ ಫೈಲ್ ಕಳುಹಿಸಿ ಕೋರಿಯರ್ ಮಾಡಲಾಗಿದೆ
Team Udayavani, Jun 1, 2022, 5:47 PM IST
ಮಹಾಲಿಂಗಪುರ: ಎಸ್‌ಎಸ್‌ಎಲ್‌ಸಿ ಪರೀಕ್ಷಾ ಮಂಡಳಿ ಮಾಡಿದ ಎಡವಟ್ಟಿನಿಂದ ವಿದ್ಯಾರ್ಥಿನಿ ಕಾಲೇಜು ಪ್ರವೇಶಕ್ಕೆ ಪರದಾಡುವಂತಾಗಿದೆ. ಪಟ್ಟಣದ ಬಸವಾನಂದ ಪ್ರೌಢಶಾಲೆಯ ವಿದ್ಯಾರ್ಥಿನಿ ಬಿಸನಾಳ ಗ್ರಾಮದ ಅಮೃತಾ ಹುಲಿಗೆಪ್ಪ ಉಳ್ಳಾಗಡ್ಡಿ ವೆಬ್‌ಸೈಟ್ ಮೂಲಕ ಪ್ರಕಟಿಸಿದ ಫಲಿತಾಂಶದಲ್ಲಿ ಸಮಾಜ ವಿಜ್ಞಾನ ವಿಷಯಕ್ಕೆ ಒಟ್ಟು 100ಕ್ಕೆ 49 ಅಂಕ ಪಡೆದಿರುವುದಾಗಿ ನಮೂದಾಗಿದೆ. ವಿದ್ಯಾರ್ಥಿನಿ ಪಡೆದ ಸಮಾಜ ವಿಜ್ಞಾನ ಉತ್ತರ ಪತ್ರಿಕೆಯ ನಕಲು ಪ್ರತಿ ಪ್ರಕಾರ ಒಟ್ಟು 100ಕ್ಕೆ 100 ಅಂಕಗಳಾಗುತ್ತದೆ. ಇದರಿಂದ 51 ಅಂಕಗಳ ವ್ಯತ್ಯಾಸ ಕಂಡು ಬಂದಿದ್ದು, ವಿದ್ಯಾರ್ಥಿನಿಗೆ ಪಿಯು ಪ್ರವೇಶ ದೊರೆತಿಲ್ಲ.
ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್ ಪರೀಕ್ಷೆಯಲ್ಲಿ ಕನ್ನಡ 119, ಇಂಗ್ಲಿಷ್ 90, ಹಿಂದಿ 95, ಗಣಿತ 74, ವಿಜ್ಞಾನ 79, ಸಮಾಜ ವಿಜ್ಞಾನ 49 ಅಂಕಗಳು ಸೇರಿ ಒಟ್ಟು 506 (ಶೇ. 80.96) ಅಂಕ ಗಳಿಸಿದ್ದಾಳೆ. ಎಲ್ಲ ವಿಷಯಗಳಿಗೆ ಉತ್ತಮ ಅಂಕ ಬಂದಿವೆ.
ಆದರೆ ಸಮಾಜ ವಿಜ್ಞಾನ ವಿಷಯದಲ್ಲಿ 80 ಅಂಕಗಳ ಪೈಕಿ ಕೇವಲ 29 ಅಂಕಗಳು ಮಾತ್ರ ಬಂದಿರುವ ಕಾರಣ ವಿದ್ಯಾರ್ಥಿನಿ ಪಡೆದ ಉತ್ತರ ಪತ್ರಿಕೆಯ ನಕಲು ಪ್ರತಿಯಲ್ಲಿ ಆಶ್ಚರ್ಯ ಕಾದಿತ್ತು. ಅಮೃತಾ ಸಮಾಜ ವಿಜ್ಞಾನ ವಿಷಯದಲ್ಲಿ 80ಕ್ಕೆ 80 ಅಂಕ ಪಡೆದಿದ್ದಾಳೆ. ಆಂತರಿಕ 20 ಅಂಕಗಳು ಸೇರಿ ಸಮಾಜ ವಿಜ್ಞಾನ ಪರೀಕ್ಷೆಯ ಫಲಿತಾಂಶ 100ಕ್ಕೆ 100 ಆಗಿದೆ. ಆದರೆ ಫಲಿತಾಂಶದಲ್ಲಿ ದಾಖಲಿಸಿದ್ದು ಮಾತ್ರ 80ಕ್ಕೆ 29 ಅಂಕಗಳು ಮಾತ್ರ.
ಎಸ್‌ಎಸ್‌ಎಲ್‌ಸಿಯ ಪರೀಕ್ಷಾ ವಿಭಾಗದ ಮೌಲ್ಯಮಾಪಕರು, ಮೇಲ್ವಿಚಾರಕರು ಮಾಡಿದ ಎಡವಟ್ಟಿನಿಂದ ವಿದ್ಯಾರ್ಥಿಯ ಫಲಿತಾಂಶ ಕಡಿಮೆ ಬಂದು ಮಾನಸಿಕ ವೇದನೆ ಅನುಭವಿಸುವಂತಾಗಿದೆ.
ಇನ್ನೂ ಆನ್‌ಲೈನ್‌ನಲ್ಲಿ ಮಾಕ್ಸ್
ತಿದ್ದುಪಡಿ ಆಗಿಲ್ಲ ಉತ್ತರ ಪತ್ರಿಕೆಯ ನಕಲು ಪ್ರತಿಯನ್ನು ಶಾಲೆಗೆ ಮುಟ್ಟಿಸಿ, ಶಾಲೆಯಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಮಂಡಳಿಗೆ ಉತ್ತರ ಪತ್ರಿಕೆಯ ನಕಲು ಪ್ರತಿಯನ್ನು ಕಳೆದ ಶನಿವಾರವೇ ಪಿಡಿಎಫ್ ಫೈಲ್ ಕಳುಹಿಸಿ ಕೋರಿಯರ್ ಮಾಡಲಾಗಿದೆ. ಆದರೆ ಇಂದಿನವರೆಗೂ ಆನ್‌ಲೈನ್‌ನಲ್ಲಿ ಅಮೃತಾಳ ಫಲಿತಾಂಶ ತಿದ್ದುಪಡಿಯಾಗಿಲ್ಲ. ಪರೀಕ್ಷಾ ಮಂಡಳಿ ಆನ್‌ಲೈನ್ ಫಲಿತಾಂಶ ತಿದ್ದುಪಡಿ ಮಾಡಿ, ವಿದ್ಯಾರ್ಥಿನಿಯ ಪಿಯು ಪ್ರವೇಶಾತಿಗೆ ಅನುಕೂಲ ಮಾಡಿಕೊಡಬೇಕು.
ಮಗಳಿಗೆ ವಸತಿ ಶಾಲೆಯಲ್ಲಿ ಸೀಟ್ ಕೊಡಿಸಿ
ನಮ್ಮ ಮಗಳಿಗೆ ಹಲಗಲಿ ಮತ್ತು ಬಾಗಲಕೋಟೆಯಲ್ಲಿನ ವಸತಿ ಕಾಲೇಜಿನಲ್ಲಿ ಪಿಯು ಸೀಟ್‌ಗಾಗಿ ಅರ್ಜಿ ಸಲ್ಲಿಸಿದ್ದೇವೆ. ಮೊದಲು 80.96 ಫಲಿತಾಂಶವಾಗಿತ್ತು. ಕಡಿಮೆ ಅಂಕ ಬಂದ ಸಮಾಜ ವಿಜ್ಞಾನ ವಿಷಯದಲ್ಲಿ 80ಕ್ಕೆ 80 ಅಂಕಗಳು ಬಂದಿವೆ. ಮೊದಲಿದ್ದ 506 ಅಂಕಗಳಿಗೆ ಹೆಚ್ಚುವರಿಯಾಗಿ 51 ಅಂಕಗಳು ಬರುವುದರೊಂದಿಗೆ 557(89.12) ಫಲಿತಾಂಶ ಬಂದಿದೆ. ಈಗ ಬಹುತೇಕ ಕಾಲೇಜುಗಳಲ್ಲಿ ಸೀಟ್ ಭರ್ತಿಯಾಗಿವೆ. ಅದಕ್ಕಾಗಿ ಸಂಬಂಧಿಸಿದ ಶಿಕ್ಷಣ ಇಲಾಖೆ ಅ ಧಿಕಾರಿಗಳು, ಜನಪ್ರತಿನಿಧಿಗಳು ನಮ್ಮ ಮಗಳಿಗೆ ವಸತಿ ಶಾಲೆಯಲ್ಲಿ ಸೀಟ್ ಕೊಡಿಸಿ, ಅವಳ ಭವಿಷ್ಯದ ಶೈಕ್ಷಣಿಕ ಜೀವನಕ್ಕೆ ಸಹಕರಿಸಬೇಕು.
ಹುಲಿಗೆಪ್ಪ ಉಳ್ಳಾಗಡ್ಡಿ, ವಿದ್ಯಾರ್ಥಿನಿ ಅಮೃತಾ ತಂದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
India: ಒಂದು ದೇಶ ಒಂದು ಚುನಾವಣೆ ಜಾರಿ ಆಗಲಿ: ಪೇಜಾವರ ಸ್ವಾಮೀಜಿ
Rabkavi Banahatti: ಲೋಕ ಅದಾಲತ್ ನಲ್ಲಿ ಒಂದಾದ ದಂಪತಿಗಳು
ವಿಳಾಸ ಕೇಳುವ ನೆಪದಲ್ಲಿ ವ್ಯಕ್ತಿಯ ಕೊರಳಲ್ಲಿದ್ದ ಚಿನ್ನದ ಚೈನ್ ಕದ್ದ ಅಪರಿಚಿತ ವ್ಯಕ್ತಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shimoga; ಇದು ಸಿ.ಟಿ.ರವಿ ಅವರನ್ನು ಸದೆಬಡಿಯುವ ಪ್ರಯತ್ನ;ಶಾಸಕ ಚನ್ನಬಸಪ್ಪ
Mangaluru: ಕೊಕ್ಕಡದ ʼಸಾಂತಾ ಕ್ಲಾಸ್ʼ ವಿನ್ಸೆಂಟ್ ಕ್ರಿಸ್ಮಸ್ ತಿರುಗಾಟಕ್ಕೆ 25 ವರ್ಷ!
Bantwal: ಪುರಸಭೆ ಆಸ್ತಿ ರಕ್ಷಣೆಗೆ ಸದಸ್ಯರ ಆಗ್ರಹ
Video: ಮೊಟ್ಟೆ ಕದ್ದು ಸಿಕ್ಕಿಬಿದ್ದರೇ ಶಾಲೆಯ ಪ್ರಾಂಶುಪಾಲರು…? ಇಲಾಖೆಯಿಂದ ನೊಟೀಸ್
Akhila Bharata Kannada Sahitya Sammelana: ಹಚ್ಚೇವು ಕನ್ನಡದ ದೀಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.