ಅಪಘಾತಕ್ಕೆ ಸಿಲುಕಿದ್ದ ಬೀದಿ ನಾಯಿ ಮರಿಗೆ ಚಿಕಿತ್ಸೆ
ನಾಯಿಮರಿಗೆ ಮರುಜೀವ ನೀಡಿದ ಭಾಂಡಗೆ
Team Udayavani, May 19, 2021, 2:29 PM IST
ಬಾಗಲಕೋಟೆ: ಅಪಘಾತದಲ್ಲಿ ಗಾಯಗೊಂಡು ಪ್ರಾಣಾಪಾಯದಲ್ಲಿದ್ದ ಶ್ವಾನವೊಂದಕ್ಕೆ ಸಕಾಲದಲ್ಲಿ ಆಹಾರ, ಚಿಕಿತ್ಸೆ ಕೊಡಿಸಿ ಮರುಜೀವ ನೀಡಿದ ಪ್ರಸಂಗ ನಗರದಲ್ಲಿ ನಡೆದಿದ್ದು, ಈ ಪ್ರಾಣಿಪ್ರಿಯ ಪ್ರಸಂಗಕ್ಕೆ ಹಲವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಚಲನಚಿತ್ರ ನಿರ್ಮಾಪಕ, ಪ್ರಾಣಿಪ್ರಿಯ ಘನಶಾಂ ಭಾಂಡಗೆ ಮಾನವೀಯತೆ ಮೆರೆದು ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ನವನಗರ ಬೈಪಾಸ್ ರಸ್ತೆಯ ಯಮನೂರಪ್ಪನ ದರ್ಗಾ ಬಳಿ ಎರಡು ದಿನಗಳ ಹಿಂದೆ ಅಪಘಾತಕ್ಕೆ ಸಿಲುಕಿದ್ದ ಬೀದಿ ನಾಯಿ ಮರಿಯೊಂದು ಹಿಂದಿನ ಕಾಲುಗಳಿಗೆ ಒಳಪೆಟ್ಟಾಗಿ ಅರೆಪ್ರಜ್ಞಾವಸ್ಥೆಯಲ್ಲಿ ನರಳಾಡುತ್ತಿತ್ತು. ಕೊರೊನಾ ಕರ್ಫ್ಯೂ ನಿಯಮ ಜಾರಿಯಲ್ಲಿರುವುದರಿಂದ ಜನರ ಸಂಚಾರವೂ ಕಡಿಮೆಯಿದ್ದ ಈ ಸ್ಥಳಕ್ಕೆ ಕೆಲವು ಕ್ಷಣಗಳ ನಂತರ ಅನಿರೀಕ್ಷಿತವಾಗಿ ಆಗಮಿಸಿದ ಘನಶಾಂ, ಹತ್ತಿರ ಹೋಗಿ ಶ್ವಾನ ಉಸಿರಾಡುತ್ತಿರುವುದನ್ನು ಗಮನಿಸಿದರು. ಅದನ್ನು ಹತ್ತಿರದ ಕೆಂಚಮ್ಮ ದೇವಿ ದೇವಸ್ಥಾನದ ಬಳಿ ಕರೆದುಕೊಂಡು ಹೋಗಿ ನೀರು ಕುಡಿಸಿದರು. ಅದು ತಕ್ಷಣ ಚೇತರಿಸಿಕೊಳ್ಳದೆ ಇದ್ದಾಗ ಹಿರಿಯ ಪಶು ವೈದ್ಯಕೀಯ ಪರೀಕ್ಷಕ ಡಾ|ಈರಣ್ಣ ಜಿಗಜಿನ್ನಿ ಅವರಿಗೆ ಮಾಹಿತಿ ನೀಡಿದರು. ಕೂಡಲೇ ಸ್ಥಳಕ್ಕೆ ಆಗಮಿಸಿದ ಡಾ|ಜಿಗಜಿನ್ನಿ, ನಾಯಿ ಮರಿಗೆ ಪ್ರಾಥಮಿಕ ಚಿಕಿತ್ಸೆ ಜೊತೆಗೆ ಎರಡು ಇಂಜೆಕ್ಷನ್ ನೀಡಿದರು.
ಕೆಲ ಹೊತ್ತಿನ ನಂತರ ಘನಶಾಂ ಸಿರೇಂಜ್ ಮೂಲಕ ನಾಯಿಮರಿಗೆ ಹಾಲು ಕುಡಿಸಿದರು. ಮರು ದಿನವೂ ಬಂದು ಅದಕ್ಕೆ ಆಹಾರ ನೀಡಿದರು. ಡಾ.ಜಿಗಜಿನ್ನಿ ಕೂಡ ಮೂರ್‍ನಾಲ್ಕು ಬಾರಿ ಸ್ಥಳಕ್ಕೆ ಬಂದು ಚಿಕಿತ್ಸೆ ನೀಡಿದರು. ಸದ್ಯ ನಾಯಿಮರಿ ಚೇತರಿಸಿಕೊಳ್ಳುತ್ತಿದೆ. ಸಕಾಲದಲ್ಲಿ ಚಿಕಿತ್ಸೆ ಕೊಡಿಸಿ ಪ್ರಾಣಾಪಾಯದಿಂದ ಪಾರುಮಾಡಿದ ಭಾಂಡಗೆ ಅವರಿಗೆ ಕಣ್ಣೀರಿನಿಂದಲೇ ಕೃತಜ್ಞತೆ ಸಲ್ಲಿಸುತ್ತಿದೆ. ಇದನ್ನು ಕಂಡ ಪ್ರಾಣಿಪ್ರಿಯರು ಭಾಂಡಗೆ ಅವರ ಕಳಕಳಿ, ಸಕಾಲದಲ್ಲಿ ಚಿಕಿತ್ಸೆ ನೀಡಿದ ವೈದ್ಯರ ಕಾಳಜಿ ಬಗ್ಗೆ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.
ಬೀದಿ ನಾಯಿಗಳು ಸೇರಿದಂತೆ ಎಲ್ಲ ಪ್ರಾಣಿಗಳಿಗೂ ನಿತ್ಯ ಆಹಾರ ನೀಡುವ ಘನಶಾಂ ಭಾಂಡಗೆ ಈ ಕಾರ್ಯವನ್ನು ಪ್ರಸ್ತುತ ಆಹಾರಕ್ಕಾಗಿ ಪ್ರಾಣಿಗಳು ಪರದಾಡುತ್ತಿರುವ ಕೊರೊನಾ ಸಂದರ್ಭದಲ್ಲೂ ಮುಂದುವರಿಸಿ ಮಾನವೀಯತೆ ಮೆರೆಯುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪತ್ನಿ ಊರಿನತ್ತ ಪ್ರಯಾಣ ಬೆಳೆಸಿದರೆ… ಸಾವಿನ ಮನೆಯ ಕದ ತಟ್ಟಿದ ಯೋಧ ನಾಗಪ್ಪ ಮರೆಗೊಂಡ
Mahalingpur: ಇಂದು ಮೃತ ಯೋಧ ಮಹೇಶ ಅಂತ್ಯಕ್ರಿಯೆ; ಯೋಧನ ಮನೆಗೆ ಸಚಿವ ತಿಮ್ಮಾಪುರ ಭೇಟಿ
Mudhola: ಸಿಲಿಂಡರ್ ಸ್ಫೋಟ: ಹೊತ್ತಿ ಉರಿದ ಮನೆ
Banahatti: ತಾಂತ್ರಿಕ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಬದ್ಧಳಾಗಿದ್ದೇನೆ: ಉಮಾಶ್ರೀ
Soldier: ಕಾಶ್ಮೀರದಲ್ಲಿ ಕಂದಕಕ್ಕೆ ಉರುಳಿದ ಸೇನಾ ವಾಹನ; ಮಹಾಲಿಂಗಪುರದ ಯೋಧ ಹುತಾತ್ಮ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mangaluru: ಪದವು ಜಂಕ್ಷನ್- ಶರ್ಬತ್ ಕಟ್ಟೆ ರಸ್ತೆಗೆ ಅಗತ್ಯವಿದೆ ಫುಟ್‌ಪಾತ್
Padil: ಡಿಸಿ ಕಚೇರಿ ಸಂಕೀರ್ಣಕ್ಕೆ ಚಿನ್ನದ ಬಣ್ಣದ ರಾಷ್ಟ್ರ ಲಾಂಛನ
Uppunda: ಪಾಳು ಕೆರೆ ಈಗ ಈಜುಕೊಳ!; ಚೌಂಡಿ ಕೆರೆಗೆ ಊರಿನ ಯುವಕರಿಂದ ಕಾಯಕಲ್ಪ
Bajpe: ತಂಗುದಾಣ ತೆರವು, ಪ್ರಯಾಣಿಕರು ಅನಾಥ!
Perfect: ಎಡ್ ಶಿರನ್ ಹಾಡಿನಿಂದ ರಾಷ್ಟ್ರೀಯ ಸೆನ್ಸೇಶನ್ ಆದ ಉಡುಪಿಯ ಹುಡುಗ | Video
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.