ವಿದ್ಯಾರ್ಥಿಗಳಿಗೆ ಪ್ರತ್ಯೇಕ ಬಸ್ ಓಡಿಸಲು ಆಗ್ರಹ
Team Udayavani, Dec 12, 2021, 1:18 PM IST
ರಬಕವಿ-ಬನಹಟ್ಟಿ: ನೂತನ ತಾಲೂಕಾಗಿ ವರ್ಷಗಳೇ ಕಳೆದರೂ ಅಭಿವೃದ್ಧಿ ಕಾರ್ಯಗಳು ಮಾತ್ರ ಬೆಳೆಯುತ್ತಿಲ್ಲ, ತಾಲೂಕಿನ ಸುತ್ತಮುತ್ತಲ ಅನೇಕ ಗ್ರಾಮಗಳಿಂದ ಸಾವಿರಾರು ವಿದ್ಯಾರ್ಥಿಗಳು ನಿತ್ಯ ವಿದ್ಯಾರ್ಜನೆಗೆ ಅರಸಿ ಬರುತ್ತಾರೆ. ಆದರೆ, ಇಲ್ಲಿಗೆ ಬಂದು ಹೋಗಲು ಸಂಪೂರ್ಣ ಸಾರಿಗೆ ವ್ಯವಸ್ಥೆ ಇಲ್ಲದ ಕಾರಣ ಅನೇಕ ವಿದ್ಯಾರ್ಥಿಗಳು ಶಿಕ್ಷಣದಿಂದವಂಚಿತರಾಗುತ್ತಿದ್ದಾರೆ.
ತಾಲೂಕಿನ ಹನಗಂಡಿ, ತೇರದಾಳ, ತಮದಡ್ಡಿ, ಗೊಲಬಾಂವಿ, ಚಿಮ್ಮಡ, ಮಹಾಲಿಂಗಪುರ,ಢವಳೇಶ್ವರ, ಸಮೀರವಾಡಿ, ಜಗದಾಳ,ನಾವಲಗಿ, ಯಲ್ಲಟ್ಟಿ, ಕಲ್ಲೊಳ್ಳಿ, ಮದನಮಟ್ಟಿ, ಹಳಿಂಗಳಿ ಸೇರಿದಂತೆ ಹೀಗೆ ಹತ್ತು ಹಲವು ಹಳ್ಳಿಗಳಿಂದ ಸಾವಿರಾರು ವಿದ್ಯಾರ್ಥಿಗಳು ನಿತ್ಯತಾಲೂಕು ಕೇಂದ್ರಕ್ಕೆ ಬರುತ್ತಾರೆ. ಆದರೆ, ಇಲ್ಲಿಗೆಬರಲು ಹಾಗೂ ಶಾಲೆ ಮುಗಿಸಿ ಮರಳಿ ಮನೆಗೆತೆರಳಲು ಸರಿಯಾದ ಬಸ್ ವ್ಯವಸ್ಥೆ ಇಲ್ಲದ ಕಾರಣ ಇದ್ದ ಬಸ್‌ಗಳಲ್ಲಿಯೇ ಜೀವ ಕೈಯಲ್ಲಿಹಿಡಿದುಕೊಂಡು ಹೋಗುವಂತಾಗಿದೆ ಎನ್ನುತ್ತಾರೆ ವಿದ್ಯಾರ್ಥಿಗಳು.
ತಾಲೂಕು ಕೇಂದ್ರವಾಗಿದ್ದರಿಂದ ರಬಕವಿ ಬನಹಟ್ಟಿಯಿಂದಲೇ ನೇರವಾಗಿ ಬಸ್‌ಗಳನ್ನು ಗ್ರಾಮೀಣ ಭಾಗಗಳಿಗೆ ಬಿಡುವ ವ್ಯವಸ್ಥೆಯಾಗಬೇಕು. ಎಲ್ಲ ಬಸ್‌ಗಳುಜಮಖಂಡಿ ಹಾಗೂ ವಿಜಯಪುರದಿಂದತಾಲೂಕಿನ ಮಾರ್ಗವಾಗಿ ಹೋಗುತ್ತಿದ್ದು, ನಿರ್ವಾಹಕರು ಪಾಸ್ ಇದ್ದ ವಿದ್ಯಾರ್ಥಿಗಳನ್ನು ಬಸ್ ಏರಲು ಬಿಡುವುದಿಲ್ಲ. ಇದರಿಂದ ಗಂಟೆಗಟ್ಟಲೆ ಬಸ್ ನಿಲ್ದಾಣದಲ್ಲಿ ಖಾಲಿ ಬಸ್ ಬರುವುದನ್ನು ಕಾಯುತ್ತಾ ಕುಳಿತುಕೊಳ್ಳಬೇಕು ಎನ್ನುತ್ತಾರೆ ವಿದ್ಯಾರ್ಥಿಗಳು.
ಈಗ ಪರೀಕ್ಷೆಗಳು ಆರಂಭವಾಗಿವೆ, ಒಮ್ಮೇಲೆ ಎಲ್ಲ ಶಾಲೆ-ಕಾಲೇಜುಗಳು ಬಿಡುವುದರಿಂದ ಈ ರೀತಿ ಗದ್ದಲವಾಗುತ್ತಿದೆ. ಆದರೂ ನಾವು ವಿದ್ಯಾರ್ಥಿಗಳಿಗೆ ತೊಂದರೆಯಾಗದ ಹಾಗೆ ಹೆಚ್ಚಿನ ಬಸ್ ಬಿಡುವ ವ್ಯವಸ್ಥೆಯನ್ನು ನಾಳೆಯಿಂದಲೇ ಮಾಡುತ್ತೇವೆ. ಪ್ರತಿ ದಿನ ನಿಗಾ ಇಡುತ್ತೇವೆ. ಬಸ್ ನಿಲ್ದಾಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಮತ್ತು ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾದಾಗ ಹೆಚ್ಚುವರಿ ಬಸ್‌ಗಳನ್ನು ಓಡಿಸುತ್ತೇವೆ.-ಸಂಗಮೇಶ ಮಟೋಳಿ, ಸಾರಿಗೆ ಘಟಕ ವ್ಯವಸ್ಥಾಪಕರು ಜಮಖಂಡಿ
ಬಾಲಕರು ಹೇಗೋ ಹರಸಾಹಸ ಮಾಡಿ ಬಸ್ ಏರಿ ಹೋಗುತ್ತಾರೆ. ಆದರೆ, ನಾವು ಮಹಿಳೆಯರು ಈಗದ್ದಲದಲ್ಲಿ ಬಸ್ ಏರಲು ಸಾಧ್ಯವೇ ಆಗುವುದಿಲ್ಲ. ಬಸ್ ಅವ್ಯವಸ್ಥೆ ಗಮನಿಸಿದರೆಶಾಲೆನೇ ಬೇಡ ಎನಿಸುತ್ತಿದೆ. ರಬಕವಿ ಬನಹಟ್ಟಿಯಿಂದ ನೇರವಾಗಿ ಬಸ್‌ಗಳನ್ನು ಬಿಡುವ ವ್ಯವಸ್ಥೆಯಾದಾಗ ಮಾತ್ರ ಸಮಸ್ಯೆ ಸರಿಹೋಗುತ್ತದೆ.-ಸ್ವಪ್ನಾ ಲಾಳಕೆ, ವಿದ್ಯಾರ್ಥಿನಿ.
ನಿರ್ವಾಹಕರು ಪಾಸ್ ಇದ್ದ ವಿದ್ಯಾರ್ಥಿಗಳೆಂದರೆ ವಿಚಿತ್ರವಾಗಿ ಕಾಣುತ್ತಾರೆ. ಬಸ್ ಏರಲು ಬಿಡುವುದೇ ಇಲ್ಲ, ಏರಿದರೆ ಸಿಟಿ ಮೇಲೆ ಕುಳಿತುಕೊಳ್ಳುವಂತಿಲ್ಲ.ನಮಗೆ ತೊಂದರೆಯಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆ ಇರುವ ದೇಶದಲ್ಲಿ ಪ್ರಜೆಗಳಿಗೆ ಸೇವೆಎಂಬ ಪದವನ್ನು ಸರ್ಕಾರಗಳು ಡಿಲಿಟ್‌ಮಾಡಿದಂತಾಗಿದೆ. ಕೇವಲ ಲಾಭದಾಯಕ ಎಂದರೆ ಹೇಗೆ ನಡೆಯುತ್ತದೆ . -ಮೋಹನ ಕ್ಷೀರಸಾಗರ,ವಿದ್ಯಾರ್ಥಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
India: ಒಂದು ದೇಶ ಒಂದು ಚುನಾವಣೆ ಜಾರಿ ಆಗಲಿ: ಪೇಜಾವರ ಸ್ವಾಮೀಜಿ
Rabkavi Banahatti: ಲೋಕ ಅದಾಲತ್ ನಲ್ಲಿ ಒಂದಾದ ದಂಪತಿಗಳು
ವಿಳಾಸ ಕೇಳುವ ನೆಪದಲ್ಲಿ ವ್ಯಕ್ತಿಯ ಕೊರಳಲ್ಲಿದ್ದ ಚಿನ್ನದ ಚೈನ್ ಕದ್ದ ಅಪರಿಚಿತ ವ್ಯಕ್ತಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.