ನಿರಂತರ ಉದ್ಯೋಗಕ್ಕಾಗಿ ಸೂಕ್ತ ಕ್ರಮ: ವರ್ಗೀಸ್ ನೇಗಿ
Team Udayavani, Aug 23, 2024, 5:34 PM IST
ಉದಯವಾಣಿ ಸಮಾಚಾರ
ರಬಕವಿ-ಬನಹಟ್ಟಿ: ಕೆಎಚ್‌ಡಿಸಿ ನಿಗಮದ ನೇಕಾರರಿಗೆ ನಿರಂತರ ಉದ್ಯೋಗ ನೀಡುವ ನಿಟ್ಟಿನಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು. ಈಗಾಗಲೇ ಅಗಸ್ಟ್ ಕೊನೆಯವರೆಗೆ ಕಚ್ಚಾ ನೂಲಿನ ಪೂರೈಕೆ ಮಾಡಲಾಗಿದೆ. ಇನ್ನೂ ಮುಂದಿನ ಆರು ತಿಂಗಳ ಕಾಲಾವಾ ಯವರಿಗೆ ಕಚ್ಚಾ ನೂಲು ಖರೀದಿಗೂ ಟೆಂಡರ್ ಕರೆಯಲಾಗಿದೆ ಎಂದು ಕೆಎಚ್‌ಡಿಸಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ವರ್ಗೀಸ್ ನೇಗಿ ಹೇಳಿದರು.
ನಗರದ ಕೆಎಚ್‌ಡಿ ಸಿ ನಿಗಮಕ್ಕೆ ಭೇಟಿ ನೀಡಿ ನೇಕಾರ ಮುಖಂಡರೊಂದಿಗೆ ನಿಗಮದ ಸಮಸ್ಯೆಗಳ ಕುರಿತು ಚರ್ಚಿಸಿ ಅವರು
ಮಾತನಾಡಿದರು.
ಇನ್ನೂ ಇಲ್ಲಿಯ ನೇಕಾರ ಕುಟುಂಬಗಳು ವಾಸಿಸುತ್ತಿರುವ ಮನೆಗಳಿಗೆ ಹಕ್ಕು ಪತ್ರ ವಿತರಣೆ ಕುರಿತು ಮಾತನಾಡಿದ ಅವರು, ಇದು ಕಂದಾಯ ಇಲಾಖೆ, ಅರಣ್ಯ ಇಲಾಖೆ ಹಾಗೂ ನಿಗಮ ಸೇರಿದಂತೆ ಮೂರು ಇಲಾಖೆಗಳ ಅಧಿಕಾರಿಗಳು ಕಾರ್ಯ ಮಾಡಬೇಕಾಗಿದೆ. ಈಗಾಗಲೇ ನಿಗಮದ ಅಧಿಕಾರಿಗಳು ಸಂಬಂಧಪಟ್ಟ ಪ್ರಸ್ತಾವನೆಯನ್ನು ಮೇಲಧಿಕಾರಿಗಳಿಗೆ ಮತ್ತು ವಿವಿಧ ಇಲಾಖೆಯ ಅಧಿ ಕಾರಿಗಳಿಗೆ ನೀಡಿದ್ದಾರೆ. ಒಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಕೆಎಚ್‌ಡಿಸಿ ನೇಕಾರರ ಅಭಿವೃದ್ಧಿಗೆ ಸರ್ಕಾರ ಮತ್ತು ನಿಗಮದ
ಬದ್ಧವಾಗಿದೆ ಎಂದು ನೇಗಿ ತಿಳಿಸಿದರು.
ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘದ ಅಧ್ಯಕ್ಷ ಶಿವಲಿಂಗ ಟಿರಕಿ ಮಾತನಾಡಿ, ಇಲ್ಲಿಯ ಕಾರ್ಮಿಕರು ತಮ್ಮ ಅಳಿವು ಮತ್ತು ಉಳಿವೆಗಾಗಿ ಹಲವಾರು ಹೋರಾಟಗಳನ್ನು ಮಾಡಿದರೂ ಯಾವುದೆ ಪ್ರಯೋಜನವಾಗಿಲ್ಲ. ಇಲ್ಲಿಯ ನೇಕಾರರು ವಾಸ ಮಾಡಲು ಆರಂಭಿಸಿ 37 ವರ್ಷಗಳು ಆದರೂ ಇದುವರೆಗೆ ಅವರಿಗೆ ಹಕ್ಕು ಪತ್ರ ದೊರೆತಿಲ್ಲ. ಇದರಿಂದಾಗಿ ಅವರಿಗೆ ಬಹಳಷ್ಟು ಸಮಸ್ಯೆಯಾಗಿದೆ.
ಇನ್ನೂ ಇಲ್ಲಿಯ 55 ವರ್ಷ ಮೇಲ್ಪಟ್ಟ ನೇಕಾರರಿಗೆ ರೂ. ಐದು ಸಾವಿರ ಮಾಸಾಶನ ಮತ್ತು ಕಾರ್ಮಿಕ ಸೌಲಭ್ಯಗಳು ದೊರೆಯವಂತೆ ಕ್ರಮ ತೆಗೆದುಕೊಳ್ಳಬೇಕು. ನಿಗಮದಲ್ಲಿ ನಡೆದ ನೂರಾರು ಕೋಟಿ ಮೊತ್ತದ ಹಗರಣದ ಕುರಿತು ಮತ್ತೊಮ್ಮೆ ಮರು ತನಿಖೆಯಾಗಬೇಕು ಎಂದು ತಿಳಿಸಿದರು.
ಮತ್ತೋರ್ವ ನೇಕಾರ ಮುಖಂಡ ಸದಾಶಿವ ಗೊಂದಕರ್ ಮಾತನಾಡಿದರು. ನಿಗಮದ ಅ ಧಿಕಾರಿ ವಿಜಯಕುಮಾರ
ಚಲವಾದಿ, ಬಸಪ್ಪ ಅಮಟಿ, ವಸಂತ ಪೋರೆ, ಶಂಕರ ಬಾಡಗಿ, ಶ್ರೀಶೈಲ ಮುಗಳೊಳ್ಳಿ, ಮಲ್ಲಿಕ್ ಜಮಾದರ, ಮಲ್ಲಿಕಾರ್ಜುನ ಜೋತಾವರ ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ
K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
India: ಒಂದು ದೇಶ ಒಂದು ಚುನಾವಣೆ ಜಾರಿ ಆಗಲಿ: ಪೇಜಾವರ ಸ್ವಾಮೀಜಿ
Rabkavi Banahatti: ಲೋಕ ಅದಾಲತ್ ನಲ್ಲಿ ಒಂದಾದ ದಂಪತಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.