24 ಗಂಟೆಯಲ್ಲಿ ಟಿಸಿ ಬದಲಾವಣೆಗೆ ಕ್ರಮ ವಹಿಸಿ
ಕೆಪಿಟಿಸಿಎಲ್-ಹೆಸ್ಕಾಂ ಪ್ರಗತಿ ಪರಿಶೀಲನಾ ಸಭೆ
Team Udayavani, Apr 20, 2022, 12:30 PM IST
ಬಾಗಲಕೋಟೆ: ವಿಫಲವಾದ ಪರಿವರ್ತಕಗಳನ್ನು 24 ಗಂಟೆಗಳಲ್ಲಿ ಬದಲಾವಣೆಗೆ ಕ್ರಮ ವಹಿಸುವಂತೆ ಇಂಧನ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನೀಲಕುಮಾರ ಅಧಿಕಾರಿಗಳಿಗೆ ಸೂಚಿಸಿದರು.
ನೂತನ ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಮಂಗಳವಾರ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ಹಾಗೂ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಕಳೆದ ಸಾಲಿನ ಸೆಪ್ಟೆಂಬರ್ ಮಾಹೆಯಿಂದ ಇಲ್ಲಿಯವರೆಗೆ ಒಟ್ಟು 14,464 ಪರಿವರ್ತಕಗಳು ವಿಫಲಗೊಂಡಿದ್ದು, ಈ ಪೈಕಿ 24 ಗಂಟೆಯಲ್ಲಿ 11,060 ಪರಿವರ್ತಕಗಳನ್ನು ಮಾತ್ರ ಬದಲಾವಣೆ ಮಾಡಲಾಗಿದೆ. 24 ಗಂಟೆಗಳ ನಂತರ 3501 ಹಾಗೂ ಬಾಕಿ 99 ಉಳಿದಿವೆ. ಈ ಬಗ್ಗೆ ಅಧಿಕಾರಿಗಳು ಕ್ರಮ ವಹಿಸುವ ಅಗತ್ಯವಿದೆ ಎಂದರು.
ಪರಿವರ್ತಕಗಳ ಬದಲಾವಣೆಗೆ ಟಿಸಿ ಬ್ಯಾಂಕ್, ವೆಹಿಕಲ್ ನೀಡಲಾಗಿದೆ. 24 ಗಂಟೆಗಳಲ್ಲಿ ಬದಲಾಯಿಸಲು ಇರುವ ಸಮಸ್ಯೆಗಳ ಬಗ್ಗೆ ಚರ್ಚಿಸಿದಾಗ ಬಲಾವಣೆಗೊಳಿಸುವಲ್ಲಿ ಆಗುವ ತೊಂದರೆಗಳ ಬಗ್ಗೆ ಪರಿಹಾರ ಕಂಡುಕೊಂಡು ನಿಗದಿತ ವೇಳೆಯಲ್ಲಿ ಪರಿವರ್ತಕಗಳ ಬಲಾವಣೆಗೆ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಪರಿವರ್ತಕಗಳ ಬಲಾವಣೆಯಲ್ಲಿ ವಿಳಂಬ ಧೋರಣೆಯಾದಲ್ಲಿ ಸಂಬಂಧಿಸಿದ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುತ್ತದೆ. ಪರಿವರ್ತಕಗಳನ್ನು ಹಾಳಾಗದಂತೆ ನಿರ್ವಹಣೆಗೆ 10 ದಿನಗಳ ಕಾಲ ಅಭಿಯಾನ ಹಮ್ಮಿಕೊಳ್ಳಲು ತಿಳಿಸಿದರು.
ಬೆಳಕು ಯೋಜನೆಯಡಿ ವಿದ್ಯುತ್ ಸಂಪರ್ಕಕ್ಕೆ ಗ್ರಾಮ ಪಂಚಾಯಿತಿಯಿಂದ ಎನ್‌ಒಸಿ ಪಡೆದುಕೊಳ್ಳುವುದು ಕಡ್ಡಾಯವಲ್ಲ. ಈ ಪೈಕಿ ಆಧಾರ ಕಾರ್ಡ ಮತ್ತು ರೇಶನ್ ಕಾರ್ಡ್ ಇದ್ದರೆ ಸಾಕು. ತೋಟದ ಮನೆಗಳಿಗೆ ಈ ಯೋಜನೆ ಅನ್ವಯವಾಗುವುದಿಲ್ಲವೆಂದು ಸ್ಪಷ್ಟಪಡಿಸಿದರು. ಶಾಲಾ ಕಾಲೇಜುಗಳ ವಿದ್ಯುತ್ ಅಪಾಯಕಾರಿ ಸ್ಥಳಗಳನ್ನು ಬದಲಾವಣೆಗೆ ಈ ಮಾಹೆಯ ಅಂತ್ಯದೊಳಗೆ ಕ್ರಮ ವಹಿಸಬೇಕು ಎಂದರು. ಗಂಗಾ ಕಲ್ಯಾಣ ಯೋಜನೆಯಡಿ ಅರ್ಜಿ ನೋಂದಣಿ ದಿನಾಂಕದಿಂದ ಒಂದು ತಿಂಗಳಲ್ಲಿ ಸಂಪರ್ಕ ಕಲ್ಪಿಸುವ ಕೆಲವಾಗಬೇಕು ಎಂದರು.
ವಿದ್ಯುತ್ ಕುಂದು ಕೊರತೆ ನಿವಾರಣೆಗೆ ವಿದ್ಯುತ್ ಅದಾಲತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದ್ದು, ಸಾರ್ವಜನಿಕರು ತರುವ ದೂರುಗಳ ನಿವಾರಣೆಗೆ ಎಲ್ಲ ರೀತಿಯಿಂದ ಸಿದ್ಧತೆ ಮಾಡಿಕೊಳ್ಳಲು. ಸಮಸ್ಯೆಗೆ ಬೇಗನೇ ಪರಿಹರಿಸುವಂತಾಗಬೇಕು. ಗಂಗಾ ಕಲ್ಯಾಣ ಯೋಜನೆಗೆ ಸಂಬಂಸಿದ ವಿದ್ಯುತ್ ಸಂಪರ್ಕ, ಹೊಸ ಕಲೆಕ್ಷನ್, ಕುಡಿಯುವ ನೀರು, ಟಿಸಿ ಬದಲಾವಣೆ ಸೇರಿದಂತೆ ಯಾವುದೇ ರೀತಿಯ ದೂರು ಬರದಂತೆ ಕ್ರಮ ವಹಿಸಿ ಇಲಾಖೆಯಲ್ಲಿ ಸುಧಾರಣೆ ತರುವ ಕೆಲಸವಾಗಬೇಕು ಎಂದರು.
ಹೆಸ್ಕಾಂ ಹಾಗೂ ಕೆಪಿಟಿಸಿಎಲ್ ವ್ಯಾಪ್ತಿಯಲ್ಲಿ ಕೈಗೊಳ್ಳಲಾದ ಎಲ್ಲ ಕಾಮಗಾರಿಗಳು ಬರುವ ಡಿಸೆಂಬರ್ ಒಳಗಾಗಿ ಪೂರ್ಣಗೊಳಿಸಿ ಉದ್ಘಾಟನೆಗೆ ಸಜ್ಜುಗೊಳಿಸಬೇಕು. ಬರುವ ಜೂನ್ ಮಾಹೆಯಿಂದ ಮಳೆಗಾಲ ಆರಂಭಗೊಳ್ಳಲಿದ್ದು, ವಿದ್ಯುತ್ ಸಂಪರ್ಕಕ್ಕೆ ಎದುರಾಗುವ ಸಮಸ್ಯೆಗಳನ್ನು ಎದುರಿಸಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲು ತಿಳಿಸಿದರು.
ಟಿಸಿ ರಿಪೇರಿ, ಐಪಿ ಸೆಟ್‌ನಲ್ಲಿ ನಿರ್ವಹಣೆ ಮಾಡಿ. ಈ ನಿಟ್ಟಿನಲ್ಲಿ ಅಧಿಕಾರಿಗಳು ಚೆನ್ನಾಗಿ ಕೆಲಸ ನಿರ್ವಹಿಸಿ, ಸಭೆಯಲ್ಲಿ ನೀಡಲಾದ ನಿರ್ದೇಶನಗಳನ್ನು ತಮ್ಮ ಕೆಳ ಹಂತದ ನೌಕರರಿಗೆ ತಲುಪಿಸಿ ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುವ ಕಾರ್ಯ ಮಾಡಲು ತಿಳಿಸಿದರು.
ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಡಿ.ಭಾರತಿ, ಕೆಪಿಟಿಸಿಎಲ್‌ನ ನಿರ್ದೇಶಕ ಜಿ.ಆರ್. ಚಂದ್ರಶೇಖರಯ್ಯ, ಮುಖ್ಯ ಎಂಜಿನಿಯರ್ ಎಸ್.ವಿ. ಮಂಜುನಾಥ, ಕಾರ್ಯ ನಿರ್ವಾಹಕ ಎಂಜಿನಿಯರ್ ಕೆ.ಎ. ಆನಂದ, ಅಧೀಕ್ಷಕ ಅಭಿಯಂತರ ಜಿ.ಕೆ. ಗೊಟ್ಯಾಳ, ಹೆಸ್ಕಾಂ ಡಿಟಿ ಎ.ಎನ್. ಕಾಂಬಳೆ, ಡಿಎಫ್‌ಒ ಬಿ. ಮಂಜುನಾಥ, ಫೈನಾನ್ಸ್ ಅಡವೈಸರ್ ಮಂಜಪ್ಪ, ಮುಖ್ಯ ಅಭಿಯಂತರ ಹೆಬ್ಟಾಳ ಮುಂತಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
R.Ashwin retirement: ಅಶ್ವಿನ್ ವಿದಾಯದ ಸುತ್ತಮುತ್ತ…
Surathkal: ತಡಂಬೈಲ್‌ನಲ್ಲಿ ಅಡುಗೆ ಅನಿಲ ದುರಂತ; ಇಬ್ಬರು ಮಹಿಳೆಯರಿಗೆ ಗಂಭೀರ ಗಾಯ
Mangaluru: ಇನ್ನು ಯುಪಿಐ ಮೂಲಕವೂ ಟ್ರಾಫಿಕ್ ದಂಡ ಪಾವತಿ
Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು
Mangaluru: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: 1.15 ಕೋ.ರೂ. ಚಿನ್ನ, ಕೇಸರಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.