ತೇರದಾಳ: ದೇವಸ್ಥಾನ ನಿರ್ಮಿಸಿ ಮಾದರಿಯಾದ ಕಾಲತಿಪ್ಪಿ ಗ್ರಾಮಸ್ಥರು
Team Udayavani, Feb 7, 2024, 5:39 PM IST
ಉದಯವಾಣಿ ಸಮಾಚಾರ
ತೇರದಾಳ: ಸುಮಾರು 45ಲಕ್ಷ ರೂ.ಗಳಿಗೂ ಹೆಚ್ಚು ವೆಚ್ಚದಲ್ಲಿ ಶ್ರೀ ವೀರಭದ್ರೇಶ್ವರ ಹಾಗೂ ಭದ್ರಕಾಳಿ ನೂತನ ದೇವಸ್ಥಾನ ನಿರ್ಮಿಸುವ ಮೂಲಕ ಕಾಲತಿಪ್ಪಿ ಗ್ರಾಮಸ್ಥರು ಮಾದರಿಯಾಗಿದ್ದಾರೆ.
ಗ್ರಾಮದಲ್ಲಿ ವೀರಭದ್ರೇಶ್ವರ ದೇವಸ್ಥಾನವೇ ಇರಲಿಲ್ಲ. ಗ್ರಾಮದ ಲಟ್ಟಿ ಮನೆತನದ 25 ಕುಟುಂಬದವರು ನಾವೇಕೆ ಗ್ರಾಮದಲ್ಲಿ ವೀರಭದ್ರೇಶ್ವರ ದೇವಸ್ಥಾನ ನಿರ್ಮಿಸಬಾರದೆಂದು ನಿರ್ಧರಿಸಿ, ಶ್ರೀಶೈಲ ಜಗದ್ಗುರು ಡಾ|ಚನ್ನಸಿದ್ಧರಾಮ ಪಂಡಿತಾರಾಧ್ಯ
ಶಿವಾಚಾರ್ಯ ಭಗವತ್ಪಾದರೊಂದಿಗೆ ಚರ್ಚಿಸಿ 2019 ಅ.30ರಂದು ಜಗದ್ಗುರುಗಳಿಂದಲೇ ಭೂಮಿಪೂಜೆ ನೆರವೇರಿಸಿದ್ದಾರೆ. ಲಟ್ಟಿ ಬಂಧುಗಳು ದೇವಸ್ಥಾನ ನಿರ್ಮಿಸುತ್ತಿರುವುದನ್ನು ಕಂಡ ಗ್ರಾಮಸ್ಥರು ನಾವೂ ದೇಣಿಗೆ ನೀಡುತ್ತೇವೆಂದು ಮುಂದೆ ಬಂದಿದ್ದಾರೆ. ಕಾಲತಿಪ್ಪಿ ಗ್ರಾಮಸ್ಥರಷ್ಟೇ ಅಲ್ಲ ಬೇರೆ ಊರುಗಳ ಭಕ್ತರು, ತೇರದಾಳ ಶಾಸಕ ಸಿದ್ದು ಸವದಿ ಸಹಾಯ ಮಾಡಿದ್ದಾರೆ.
ಗೋಕಾಕ ತಾಲೂಕಿನ ಅರಭಾಂವಿ, ಜಮಖಂಡಿ ತಾಲೂಕಿನ ಕುಂಬಾರಹಳ್ಳದ ಬಿಳಿ ಕಲ್ಲಿನಲ್ಲಿ ದೇವಸ್ಥಾನ ನಿರ್ಮಿಸಲಾಗಿದ್ದು, ಸೈದಾಪುರದ ಶಿಲ್ಪಿ ಪರಶುರಾಮ ಪಾತ್ರೋಟ ಕೆತ್ತಿದ್ದಾರೆ. ಶ್ರೀಶೈಲ ಜಗದ್ಗುರುಗಳ ಸೂಚನೆ ಮೇರೆಗೆ ಲೋಕಾಪುರದ ಶಿವಾನಂದ ಬಡಿಗೇರ ವೀರಭದ್ರೇಶ್ವರ ಹಾಗೂ ಭದ್ರಕಾಳಿ ಮೂರ್ತಿ ಕೆತ್ತಿದ್ದಾರೆ. ಸುತ್ತಲೂ ಕಾಂಪೌಂಡ್ ನಿರ್ಮಿಸಲಾಗಿದೆ.
ಮೊದಲು ಲಟ್ಟಿ ಬಂಧುಗಳು ತಮ್ಮ ಜಮೀನಿನಲ್ಲಿ ದೇವಸ್ಥಾನ ನಿರ್ಮಿಸಲು ನಿರ್ಧರಿಸಿದ್ದರು. ಗ್ರಾಮದಲ್ಲೂ ಜಾಗ ಗುರುತಿಸಿದ್ದರು. ಒಟ್ಟು ಜಾಗದ ಪೈಕಿ ಎಲ್ಲಿ ನಿರ್ಮಿಸಿದರೆ ಸೂಕ್ತ ಎಂದು ತೇರದಾಳ ವೀರಭದ್ರೇಶ್ವರ ದೇವಸ್ಥಾನದಲ್ಲಿ ಕವಲು ಕಟ್ಟಿದರು.
ಆರು ಬಾರಿ ಕೇಳಿದರು ಈಗ ನಿರ್ಮಿಸಿರುವ ಜಾಗದ ಹೆಸರಿನಲ್ಲೇ ಕವಲು ಆಗಿದೆ. ಸುಮಾರು 10 ಕುಟುಂಬಗಳಿಗೆ ಸೇರಿದ್ದ ಜಾಗ(91×48 ಅಡಿ ಅಳತೆ)ವನ್ನು ಆಯಾ ಕುಟುಂಬದವರು ಭಕ್ತಿಯಿಂದ ನೀಡಿದ್ದಾರೆ.
ಕಾಲತಿಪ್ಪಿ ಗ್ರಾಮ ಹಾಗೂ ವಿವಿಧ ಊರಿನ ಭಕ್ತರ ಸಹಕಾರದಿಂದ ವೀರಭದ್ರೇಶ್ವರ, ಭದ್ರಕಾಳಿ ದೇವಸ್ಥಾನ ನಿರ್ಮಿಸಲಾಗಿದೆ. ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ. ದೇವಸ್ಥಾನಗಳ ಲೋಕಾರ್ಪಣೆ, ನೂತನ ಮೂರ್ತಿಗಳ ಪ್ರತಿಷ್ಠಾಪನೆ ಕಾರ್ಯಕ್ರಮ ಯಶಸ್ಸಿಗೆ ಎಲ್ಲರೂ ಶ್ರಮಿಸಲು ಕೋರುತ್ತೇವೆ.
*ದೇವಸ್ಥಾನ ಕಮೀಟಿ, ಕಾಲತಿಪ್ಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
India: ಒಂದು ದೇಶ ಒಂದು ಚುನಾವಣೆ ಜಾರಿ ಆಗಲಿ: ಪೇಜಾವರ ಸ್ವಾಮೀಜಿ
Rabkavi Banahatti: ಲೋಕ ಅದಾಲತ್ ನಲ್ಲಿ ಒಂದಾದ ದಂಪತಿಗಳು
ವಿಳಾಸ ಕೇಳುವ ನೆಪದಲ್ಲಿ ವ್ಯಕ್ತಿಯ ಕೊರಳಲ್ಲಿದ್ದ ಚಿನ್ನದ ಚೈನ್ ಕದ್ದ ಅಪರಿಚಿತ ವ್ಯಕ್ತಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.