Terdal: ಎಲ್ಲದಕ್ಕೂ ಶಿಕ್ಷಣ ಪ್ರಗತಿಯೆ ಮೂಲಾಧಾರ-ಸವದಿ


Team Udayavani, Dec 19, 2023, 4:30 PM IST

Terdal: ಎಲ್ಲದಕ್ಕೂ ಶಿಕ್ಷಣ ಪ್ರಗತಿಯೆ ಮೂಲಾಧಾರ-ಸವದಿ

ತೇರದಾಳ: ಸರ್ವ ಪ್ರಗತಿಗೂ ಶಿಕ್ಷಣವೇ ಮೂಲಾಧಾರ ಎಂದರಿತಿರುವ ಇಂದಿನ ಪಾಲಕರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವತ್ತ ಎಂಥದೇ ಬಡತನದ ನಡುವೆಯೂ ಶ್ರಮಿಸುತ್ತಿದ್ದಾರೆ ಎಂದು ಶಾಸಕ ಸಿದ್ದು
ಸವದಿ ಹೇಳಿದರು.

ಪಟ್ಟಣದ ಜಿನಸೇನಾಚಾರ್ಯ ಸಭಾಭವನದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ, ಕ್ಷೇತ್ರ ಸಮನ್ವಯಾಧಿಕಾರಿ ಕಾರ್ಯಾಲಯ, ಶ್ರೀ ಜಿನಸೇನಾಚಾರ್ಯ ವಿದ್ಯಾಮಂಡಳ ತೇರದಾಳ ಮತ್ತು ಕನ್ನಡ ಸಾಹಿತ್ಯ ಪರಿಷತ್‌ ಆಶ್ರಯದಲ್ಲಿ ಆಯೋಜಿಸಿದ್ದ ಕನ್ನಡ ಸಾಧಕರ ಅಭಿನಂದನಾ ಸಮಾರಂಭದಲ್ಲಿ ಎಸ್‌ಎಸ್‌ ಎಲ್‌ಸಿ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ 125ಕ್ಕೆ 125 ಅಂಕ ಪಡೆದ ವಿದ್ಯಾರ್ಥಿಗಳಿಗೆ, ಕನ್ನಡ ಬೋಧಕರಿಗೆ ಕ್ರಮವಾಗಿ ಕನ್ನಡ ಕಣ್ಮಣಿ, ಕನ್ನಡ ರತ್ನ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

ವಿದ್ಯಾರ್ಥಿಗಳಾಗಿದ್ದಾಗ ಇದ್ದ ಶಿಕ್ಷಣ ಕ್ಷೇತ್ರದಲ್ಲಿನ ಗುಣಮಟ್ಟತೆ ಇಂದು ಉನ್ನತ ದರ್ಜೆಗೇರಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗುಣಮಟ್ಟದ ವಿಶ್ವದರ್ಜೆಯ ಶಿಕ್ಷಣ ನೀಡಿ ನಮ್ಮ ಪ್ರತಿಭೆಗಳು ಪ್ರಪಂಚದ ಯಾವುದೇ ಮಕ್ಕಳಿಗೂ ಕಡಿಮೆಯಿಲ್ಲದಂತೆ ನೋಡಿಕೊಳ್ಳುತ್ತಿವೆ. ಅರ್ಹತಾ ಪರೀಕ್ಷೆಗಳ ಮೂಲಕ ನೇಮಕವಾಗುತ್ತಿರುವ ಪ್ರತಿಭಾವಂತ ಶಿಕ್ಷಕರಿಂದಲೂ ಇಂದು ಶಿಕ್ಷಣ ಕ್ಷೇತ್ರದಲ್ಲಿ ದಾಖಲೆಯ ಸಾಧನೆ ಮೂಡಲು ಕಾರಣವಾಗುತ್ತಿದೆ ಎಂದರು.

ಭಾರತ ವಿಶ್ವಗುರುವಾಗುವತ್ತ ಸದೃಢ ಹೆಜ್ಜೆಗಳನ್ನಿಡಲು ನಮ್ಮಲ್ಲಿನ ಶಿಕ್ಷಣದ ಪ್ರಸರಣತೆಯೇ ಕಾರಣವಾಗಿದೆ. ಮಕ್ಕಳು ಶಾಲೆಯಿಂದ ಹೊರಗುಳಿಯದಂತೆ ಇಲಾಖೆ, ಶಿಕ್ಷಕರು ನೋಡಿಕೊಳ್ಳಬೇಕು. ಶಿಕ್ಷಕರು ರಾಜಕೀಯ ಮಾಡದೇ ಪ್ರಾಮಾಣಿಕವಾಗಿ ಬೋಧನೆಯತ್ತ ತೊಡಗಬೇಕು. ದೇಶ ಇಂದು ಸಂಪೂರ್ಣ ಸಾಕ್ಷರತೆ ಸಾಧಿಸುವತ್ತ ದಾಪುಗಾಲಿಡುತ್ತಿದೆ. ಸರ್ಕಾರದ ಸೌಲಭ್ಯಗಳು ಬಡವರಿಗೆ ದೊರೆತು ಅವರೂ ಮುಖ್ಯ ಪ್ರವಾಹಿನಿಯಲ್ಲಿ ತೊಡಗುವತ್ತ ಎಲ್ಲರೂ ಶ್ರಮಿಸಬೇಕು ಎಂದು ಶಾಸಕರು ಹೇಳಿದರು.

ಸಾನ್ನಿಧ್ಯ ವಹಿಸಿದ್ದ ರಬಕವಿಯ ಶ್ರೀ ಗುರುದೇವ ಬ್ರಹ್ಮಾನಂದ ಆಶ್ರಮದ ಗುರುಸಿದ್ದೇಶ್ವರ ಶ್ರೀ ಮಾತನಾಡಿ, ದೇಶದೆಲ್ಲೆಡೆ ಶಿಕ್ಷಣಕ್ಕೆ ಪ್ರಾತಿನಿಧ್ಯತೆ ಸಿಗುತ್ತಿದೆ. ವಿಶ್ವಮಟ್ಟದಲ್ಲಿ ಸಾಧನೆ ಮೆರೆಯುವ ಪ್ರತಿಭೆಗಳನ್ನು ಭಾರತ ನಿರಂತರವಾಗಿ ನೀಡುತ್ತಲೇ ಬಂದಿದೆ. ಜ್ಞಾನದ ಬರ ಈ ದೇಶಕ್ಕೆ ಎಂದಿಗೂ ಬಂದಿಲ್ಲ. ಜ್ಞಾನ, ವಿಜ್ಞಾನಗಳ ಮಿಶ್ರಣವೇ ಭಾರತೀಯರ ಪ್ರಾಚೀನ ಶಿಕ್ಷಣದ ಮೂಲದ್ರವ್ಯವಾಗಿದೆ. ಆಧುನಿಕತೆಯ ಸ್ಪರ್ಶದಲ್ಲಿ ಮತ್ತು ಮೂಲಭೂತ ಸೌಕರ್ಯಗಳ ಹೆಚ್ಚಳದಿಂದ ಇಂದಿನ ಮಕ್ಕಳು ಕಲಿಕೆಯಲ್ಲಿ ಮುಂದಿದ್ದಾರೆ. ನಾವು ಎಷ್ಟೇ ವಿದ್ಯಾವಂತರಾದರೂ ಭಾರತಮಾತೆಯ ಅಭಿಮಾನವನ್ನು ವಿಶ್ವದೆಲ್ಲೆಡೆ ಪ್ರದರ್ಶಿಸಬೇಕೇ ಹೊರತು ದೇಶಕ್ಕೆ ಮಾರಕರಾಗುವತ್ತ ಜ್ಞಾನ ಬಳಸಬಾರದು ಎಂದರು.

ಮಾತೃಭಾಷೆಯಲ್ಲಿ ಗರಿಷ್ಠ ಅಂಕ ಪಡೆದ ಮಕ್ಕಳನ್ನು ಮತ್ತು ಶಿಕ್ಷಕರನ್ನು ಸನ್ಮಾನಿಸುವ ಪರಂಪರೆಗೆ ನಾಂದಿ ಹಾಡಿದ್ದು, ಮುಂದೆಯೂ ಇದೇ ಸಾಧನೆ ಮಕ್ಕಳಿಂದ ಮೂಡಿ ಬರಲೆಂದು ಆಶೀರ್ವಚನ ನೀಡಿದರು. ಬಿಇಒ ಅಶೋಕ ಬಸಣ್ಣವರ ಮಾತನಾಡಿ, ಕಳೆದ ವರ್ಷದ ಸಾಧನೆ ಮೆಚ್ಚುವಂತದ್ದಾಗಿದೆ. ಈ ಬಾರಿಯೂ 625ಕ್ಕೆ 625 ಅಂಕ ಪಡೆಯುವ ನಿಟ್ಟಿನಲ್ಲಿ ಮಕ್ಕಳಿಗೆ ಶಿಕ್ಷಕರು ಮಾರ್ಗದರ್ಶನ ನೀಡುತ್ತಿದ್ದಾರೆ.

ಉತ್ಸಾಹದಿಂದ ಕಾರ್ಯ ನಿರ್ವಹಿಸಿದರೆ ಎಲ್ಲವೂ ಸಾಧ್ಯ ಎಂದರು. ಶಿಕ್ಷಣ ಸಂಯೋಜಕ, ಎಸ್‌ಎಸ್‌ಎಲ್‌ಸಿ ನೋಡಲ್‌ ಅ ಧಿಕಾರಿ ಶ್ರೀಶೈಲ ಬುರ್ಲಿ ಪ್ರಾಸ್ತಾವಿಕ ಮಾತುಗಳಾಡಿ, ಅವಿಭಜಿತ ಜಮಖಂಡಿ ತಾಲೂಕಲ್ಲಿ ಒಟ್ಟು 229 ಮಕ್ಕಳು ಗರಿಷ್ಠ ಅಂಕ ಪಡೆದುಕೊಂಡಿದ್ದರೆ, ರಬಕವಿ-ಬನಹಟ್ಟಿ ಹಾಗೂ ತೇರದಾಳ ತಾಲೂಕಿನ 121 ಮಕ್ಕಳು ಗರಿಷ್ಠ ಸಾಧನೆ ಮೆರೆದಿದ್ದಾರೆ. ಒಟ್ಟು 31 ಶಾಲೆಗಳ 34 ಕನ್ನಡ ವಿಷಯ ಬೋಧಕರಿಗೆ ಗುರುಮಾತೆ ಡಾ| ಶಾರದಾ ಮುಳ್ಳೂರ ತಲಾ ಒಂದು ಸಾವಿರ ನಗದು ಬಹುಮಾನ ನೀಡಿ ಮುಂದಿನ ಬಾರಿಯೂ ಇನ್ನಷ್ಟು ಶೈಕ್ಷಣಿಕ ಸಾಧನೆ ಮೆರೆಯಲೆಂದು ಉತ್ತೇಜಿಸಿದ್ದಾರೆಂದರು.

ಜೆವ್ಹಿ ಮಂಡಳದ ಡಿ.ಆರ್‌. ಪಾಟೀಲ, ಡಾ| ಜೆ.ಬಿ. ಆಲಗೂರ, ಸುರೇಶ ಅಕಿವಾಟ, ಮಹಾವೀರ ಕೊಕಟನೂರ, ರಮೇಶ ಅವಟಿ, ಪ್ರವೀಣ ನಾಡಗೌಡ, ಎಂ.ಪಿ. ಅಸ್ಕಿ, ಪಿ.ಜಿ. ಹಟ್ಟಿ, ಪಿ.ಡಿ. ಬದನಿಕಾಯಿ, ಬಿ.ಎಸ್‌. ಕಡಕೋಳ, ಬಾಬಾಗೌಡ ಪಾಟೀಲ, ಎಸ್‌. ಎಂ. ಹರಗೆ, ಡಿ.ಬಿ. ಪಾಟೀಲ ಮುಂತಾದವರಿದ್ದರು.ಇದೇ ಸಂದರ್ಭದಲ್ಲಿ ಶಿಕ್ಷಕ-ಸಾಹಿತಿ ಡಾ.ರೇವಣಸಿದ್ದಪ್ಪ ಗೌಡರ ಬರೆದ ಬ್ರಾಂಡೆಡ್‌
ಆತ್ಮಗಳು, ಲೋಕಲ್‌ ಆತ್ಮಗಳು ಕೃತಿಯನ್ನು ಬಿಡುಗಡೆಗೊಳಿಸಲಾಯಿತು. ಎಸ್‌.ಎನ್‌.ಹೆಬ್ಟಾಳೆ ಗುರುಮಾತೆ ಸ್ವಾಗತಿಸಿದರು. ಕೆ.ಎ. ಸಾವಂತನವರ ನಿರೂಪಿಸಿದರು. ಎಂ.ಬಿ.ಯಾತಗಿರಿ ವಂದಿಸಿದರು.

ಟಾಪ್ ನ್ಯೂಸ್

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

mohan bhagwat

Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ

ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

Krantiveer Brigade launched by worshipping the feet of 1008 saints: KS Eshwarappa

Politicss; 1008 ಸಾಧುಸಂತರ ಪಾದಪೂಜೆ‌ ಮೂಲಕ‌ ಕ್ರಾಂತಿವೀರ ಬ್ರಿಗೇಡ್‌ ಗೆ ಚಾಲನೆ: ಈಶ್ವರಪ್ಪ

India: ಒಂದು ದೇಶ ಒಂದು ಚುನಾವಣೆ ಜಾರಿ ಆಗಲಿ: ಪೇಜಾವರ ಸ್ವಾಮೀಜಿ

India: ಒಂದು ದೇಶ ಒಂದು ಚುನಾವಣೆ ಜಾರಿ ಆಗಲಿ: ಪೇಜಾವರ ಸ್ವಾಮೀಜಿ

Rabkavi Banhatti: ಲೋಕ ಅದಾಲತ್ ನಲ್ಲಿ ಒಂದಾದ ದಂಪತಿಗಳು

Rabkavi Banahatti: ಲೋಕ ಅದಾಲತ್ ನಲ್ಲಿ ಒಂದಾದ ದಂಪತಿಗಳು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಳೆಬಾಳುವ ಎತ್ತು ಬಲಿ

Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ

Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ

Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.