Terdal:ಮನುಷ್ಯನ ಆರೋಗ್ಯಕ್ಕೆ ನೀರು ಅವಶ್ಯ-ಕೆಸರಗೊಪ್ಪ
ಕಾಳಜಿಯಿಂದ ಬಳಸಿದರೆ ಮಾತ್ರ ಭವಿಷ್ಯದಲ್ಲಿ ಅದು ನಮಗೆ ದೊರೆಯುತ್ತದೆ
Team Udayavani, Nov 9, 2023, 11:20 AM IST
ತೇರದಾಳ: ನೀರು ಮನುಷ್ಯನ ಬದುಕಿಗೆ ಮತ್ತು ಆರೋಗ್ಯಕ್ಕೆ ಅವಶ್ಯಕ. ಅದನ್ನು ಎಲ್ಲರೂ ಹಿತವಾಗಿ ಮತ್ತು ಮಿತವಾಗಿ
ಬಳಸುವುದು ಅಗತ್ಯವಾಗಿದೆ. ಅಲ್ಲದೆ, ಜಲಮೂಲಗಳ ಸ್ವಚ್ಛತೆಗೆ ಆದ್ಯತೆ ನೀಡಬೇಕಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಆನಂದ ಕೆಸರಗೊಪ್ಪ ಹೇಳಿದರು.
ಪಟ್ಟಣದ ಪುರಸಭೆ ನಿರ್ವಹಿಸುವ ಜಲಶುದ್ಧೀಕರಣ ಕೇಂದ್ರದಲ್ಲಿ ನೀರು ಸರಬರಾಜು ಹಾಗೂ ಡೇ-ನಲ್ಮ ವಿಭಾಗದಡಿಯಲ್ಲಿ ಹಮ್ಮಿಕೊಂಡ ಜಲ ದೀಪಾವಳಿ ಕಾರ್ಯಕ್ರಮದಲ್ಲಿ ಮಹಿಳೆಯರಿಗಾಗಿ ನೀರು, ನೀರಿಗಾಗಿ ಮಹಿಳೆಯರು ಕುರಿತು ಅವರು ಮಾತನಾಡಿದರು.
ಸದ್ಯ ನೀರಿನ ಕೊರತೆ ಇದೆ. ಅದನ್ನು ಕಾಳಜಿಯಿಂದ ಬಳಸಿದರೆ ಮಾತ್ರ ಭವಿಷ್ಯದಲ್ಲಿ ಅದು ನಮಗೆ ದೊರೆಯುತ್ತದೆ. ಇಲ್ಲದಿದ್ದರೆ ಸಾಕಷ್ಟು ತೊಂದರೆ ಎದುರಾಗುತ್ತದೆ. ಎಲ್ಲ ಕೆಲಸವನ್ನು ಪುರಸಭೆಯೆ ಮಾಡಲಿ ಎಂಬ ಮನೋಭಾವ ತೊರೆದು ಎಲ್ಲರೂ ಕೂಡಿ ಸಹಕಾರದಿಂದ ಪುರಸಭೆಗೆ ಕೈ ಜೋಡಿಸಬೇಕು ಎಂದರು.
2005ರಲ್ಲಿ ಪುರಸಭೆ ವ್ಯಾಪ್ತಿಯಲ್ಲಿ 2.5 ಮಿಲಿಯನ್ ಲೀಟರ್ ನೀರಿನ ಬೇಡಿಕೆಗೆ ಅನುಗುಣವಾಗಿ ನೀರು ಪೂರೈಕೆ ಆರಂಭಿಸಿತ್ತು. ಈಗ ಜನಸಂಖ್ಯೆ ಹೆಚ್ಚಾಗಿದ್ದು, ಇದರ ಅಗತ್ಯಕ್ಕೆ ತಕ್ಕಂತೆ ನೀರು ಪೂರೈಕೆ ಮಾಡಲು ಕಾರ್ಯಕ್ರಮ ಹಾಕಿಕೊಳ್ಳಬೇಕಾಗಿದೆ ಎಂದರು.
ಪುರಸಭೆ ಜೆಇ ಎಸ್.ಬಿ. ಮಾತಾಳಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ 35ಕ್ಕೂ ಹೆಚ್ಚಿನ ಸ್ತ್ರೀ ಶಕ್ತಿ ಸಂಘದವರಿಗೆ ನದಿಯಿಂದ
ನೀರು ಎತ್ತುವ ಕಾರ್ಯದಿಂದ ಆರಂಭಿಸಿ ಶುದ್ಧ ನೀರು ಸಂಗ್ರಹ, ಅಲ್ಲಿಂದ ಮನೆಯ ನಲ್ಲಿಗೆ ಬರುವ ನೀರು ಕುರಿತು ಫಿಲ್ಟರ್
ಹೌಸನಲ್ಲಿ ನಡೆಯುವ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ವಿವರಿಸಿದರು.
ಪುರಸಭೆ ಕಚೇರಿ ವ್ಯವಸ್ಥಾಪಕ ಮಲ್ಲಿಕಾರ್ಜುನ ಬಿರಾದಾರಪಾಟೀಲ್, ಸಿಬ್ಬಂದಿ ಭರಮು ದನಗರ, ಗೌರಿ ಮಾಲಾಪುರ, ನೇತ್ರಾವತಿ ಹಟ್ಟಿ, ಪ್ರಭು ಧರೆನ್ನವರ, ನೀರು ಸರಬರಾಜು ಸಿಬ್ಬಂದಿ ರಮೇಶ ದೊಡಮನಿ, ರವೀಂದ್ರ ರೋಡಕರ, ಮಶ್ಚೇಂದ್ರ ಗೋಠಡಕಿ, ಭರತ ಗುಡಕ್ಕನವರ, ಸ್ತ್ರೀ ಶಕ್ತಿ ಸಂಘದ ಮಹಿಳೆಯರು ಸೇರಿದಂತೆ ಅನೇಕರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kulgeri Cross; ನಾಡಿನಲ್ಲಿಯೇ ಪ್ರಥಮ…ತಾಯಿ ಭುವನೇಶ್ವರಿ ರಥೋತ್ಸವ
ರಬಕವಿ-ಬನಹಟ್ಟಿ: ಜಗದಾಳ ರೈತ ಬೆಳೆದ ಬಾಳೆಹಣ್ಣುಇರಾನ್ ದೇಶಕ್ಕೆ ರಫ್ತು!
ರಕ್ತ ಹರಿದರೂ ಚಿಂತೆಯಿಲ್ಲ, ಜಮೀನು ಬಿಟ್ಟು ಕೊಡಲ್ಲ: ಶಾಸಕ ಸಿದ್ದು ಸವದಿ
Rabakavi: ರೈತರ ಬದುಕಿನ ರೊಟ್ಟಿಯನ್ನು ಕಾಂಗ್ರೆಸ್ ಕಸಿದುಕೊಳ್ಳುತ್ತಿದೆ: ಶಾಸಕ ಸಿದ್ದು ಸವದಿ
Rabkavi Banhatti: ಜಗದಾಳದಲ್ಲಿ ರಾಜ್ಯ ಮಟ್ಟದ ಹೊನಲು ಬೆಳಕಿನ ಪಗಡೆಯಾಟ
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.