ತೊಗುಣಶಿ-ಕೋಟೆಕಲ್ದಿಂದ ಢಾಣಕಶಿರೂರಗೆ ಯಾರೂ ಹೋಗಿಲ್ಲ
Team Udayavani, May 6, 2020, 1:37 PM IST
ಗುಳೇದಗುಡ್ಡ: ಕೋವಿಡ್ 19 ಸೋಂಕು ಕಾಣಿಸಿಕೊಂಡ ಬಾದಾಮಿ ತಾಲೂಕಿನ ಢಾಣಕಶಿರೂರ ಗ್ರಾಮದ ಗರ್ಭಿಣಿ ಸೀಮಂತ ಕಾರ್ಯಕ್ಕೆ ತೋಗುಣಶಿ ಗ್ರಾಮದವರು ತೆರಳಿದ್ದಾರೆ ಎಂಬ ಶಂಕೆಯಿಂದ ಗ್ರಾಮಕ್ಕೆ ತಹಶೀಲ್ದಾರ್ ಜಿ.ಎಂ. ಕುಲಕರ್ಣಿ, ಪಿಎಸ್ಐ ಡಾ| ಲಕ್ಷ್ಮೀಕಾಂತ ಬಾನಿಕೋಲ ಭೇಟಿ ನೀಡಿ, ಮಾಹಿತಿ ಕಲೆ ಹಾಕಿದರು.
ಕುಟುಂಬದವರನ್ನು ಅಧಿಕಾರಿಗಳು ವಿಚಾರಿಸಿದಾಗ, ನಾವು ಯಾರೂ ಆ ಊರಿಗೆ ಹೋಗಿಲ್ಲ. ಯಾವುದೇ ಸೀಮಂತ ಕಾರ್ಯದಲ್ಲಿ ಭಾಗವಹಿಸಿಲ್ಲ. ನಮಗೆ ಸಂಬಂಧಿಕರಲ್ಲ ಎಂಬ ಮಾಹಿತಿಯನ್ನು ಅಧಿ ಕಾರಿಗಳಿಗೆ ನೀಡಿದ್ದಾರೆ. ತಹಶೀಲ್ದಾರ್ ಜಿ.ಎಂ. ಕುಲಕರ್ಣಿ ಮಾತನಾಡಿ, ತೋಗುಣಶಿ ಹಾಗೂ ಕೋಟೆಕಲ್ನಲ್ಲಿ ಕೆಲ ಕುಟುಂಬದವರು ಢಾಣಕಶಿರೂರ ಗ್ರಾಮದ ಸೊಂಕಿತ ಗರ್ಭಿಣಿಯ ಸೀಮಂತ ಕಾರ್ಯಕ್ಕೆ ತೆರಳಿದ್ದಾರೆಂಬ ಶಂಕೆ ಮೂಡಿದ್ದರಿಂದ ತೊಗುಣಶಿಯ ಕೆಲ ಕುಟುಂಬಗಳ ಸದಸ್ಯರನ್ನು ವಿಚಾರಿಸಲಾಗಿದೆ. ಯಾರೊಬ್ಬರೂ ಢಾಣಕಶಿರೂರಗೆ ತೆರಳಿಲ್ಲ. ಎಲ್ಲ ರೀತಿಯಿಂದ ಮಾಹಿತಿ ಕಲೆ ಹಾಕಿದ್ದು, ಅವರಿಗೂ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದ್ದಾರೆ. ಜನರು ಆತಂಕ ಪಡುವುದು ಬೇಡ. ಸದ್ಯ ಯಾವುದೇ ತೊಂದರೆ ಇಲ್ಲ ಎಂದು ಹೇಳಿದರು.
ಪಿಎಸ್ಐ ಡಾ| ಲಕ್ಷ್ಮೀಕಾಂತ ಬಾನಿಕೋಲ ಮಾತನಾಡಿ, ಗ್ರಾಮದಲ್ಲಿನ ಕೆಲ ಕುಟುಂಬಗಳಿಂದ ಮಾಹಿತಿ ಕಲೆ ಹಾಕಿದ್ದೇವೆ. ಢಾಣಕಶಿರೂರಿಗೆ ಯಾರು ಹೋಗಿಲ್ಲ ಎಂದು ಹೇಳಿದರು. ಕೋಟೆಕಲ್ ಗ್ರಾಪಂ ಪಿಡಿಒ ಎಲ್.ಎಸ್. ಶಾಂತಗೇರಿ, ಕಂದಾಯ ನೀರಿಕ್ಷಕ ಮಹಾಂತೇಶ ಅಂಗಡಿ ಸೇರಿದಂತೆ ಇತರರು ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.