ಸೋಂಕಿತರ ಪ್ರದೇಶ; ಹೊರ ಬಂದ್ರೆ ಎಫ್‌ಐಆರ್
Team Udayavani, Apr 17, 2020, 3:26 PM IST
ಸಾಂದರ್ಭಿಕ ಚಿತ್ರ
ಬಾಗಲಕೋಟೆ: ನಗರದಲ್ಲಿ ಕೋವಿಡ್ 19 ಸೋಂಕಿತರು ಪತ್ತೆಯಾದ ಹಿನ್ನೆಲೆಯಲ್ಲಿ ನಿಷೇಧಿತ ಪ್ರದೇಶವೆಂದು ಘೋಷಿಸಲಾಗಿದೆ. ಈ ಪ್ರದೇಶದಲ್ಲಿ ಯಾರೇ ಮನೆಯಿಂದ ಹೊರ ಬಂದರೂ ಅವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಬಾಗಲಕೋಟೆಯ ತಹಶೀಲ್ದಾರ್ ಜಿ.ಎಸ್. ಹಿರೇಮಠ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು,ಕಂಟೆನ್‌ಮೆಂಟ್ ಝೋನ್‌ನಲ್ಲಿ ಸಾರ್ವಜನಿಕರ ಚಲನವಲನ ಸಂಪೂರ್ಣ ನಿಷೇಧಿಸಲಾಗಿದೆ. ದ್ವಿಚಕ್ರ ವಾಹನದಲ್ಲಿ ಅನಗತ್ಯವಾಗಿ ಒಬ್ಬರು ಪ್ರಯಾಣಿಸಿದರೆ ವಾಹನ ಜಪ್ತಿ ಮಾಡುವ ಜತೆಗೆ ಕೇಸ್ ದಾಖಲಿಸಲಾಗುವುದು. ವಯೋವೃದ್ಧರು, ಚಿಕ್ಕಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತಿದ್ದು, ಅವರು ಯಾವುದೇ ಕಾರಣಕ್ಕೂ ಮನೆಯಿಂದ ಹೊರ ಬರಬಾರದು ಎಂದುತಿಳಿಸಿದ್ದಾರೆ.
ಪಡಿತರ, ಕಿರಾಣಿ, ಹಾಲು, ಹಣ್ಣು, ತರಕಾರಿಗಳನ್ನು ವಿತರಣಾ ಸಿಬ್ಬಂದಿಗೆ ದೂರವಾಣಿ ಕರೆ ಮಾಡಿದಲ್ಲಿ ತಮ್ಮ ಮನೆಯ ಬಾಗಿಲಿಗೆ ತಲುಪಿಸಲಿದ್ದಾರೆ. ಮೆಡಿಕಲ್ ಸೌಲಭ್ಯ, ಔಷಗಳನ್ನು ಸಹ ಮನೆ ಮನೆಗೆ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ. ಗುಂಪು ಕೂಡುವುದಾಗಲಿ, ಇಬ್ಬಿಬ್ಬರು ತಿರುಗಾಡಿದು, ಕಂಡುಬಂದರೆ ಸೂಕ್ತ ಕಾನೂನಿನ ಕ್ರಮ ಕೈಗೊಳ್ಳಲಾಗುವುದು. ಕರ್ತವ್ಯ ನಿರತ ವೈದ್ಯರು, ಅಧಿಕಾರಿಗಳು ಹಾಗೂ ಸಿಬ್ಬಂದಿಗಳೊಂದಿಗೆ ಸಹಕರಿಸಬೇಕು. ಯಾವುದೇ ದಾನ ಮಾಡಿದ ಪದಾರ್ಥಗಳನ್ನು ಸೇವಿಸದಿರಿ. ಯಾವುದೇ ರೀತಿಯ ಆತಂಕ ಬೇಡ, ಸಾಮಾಜಿಕ ಅಂತರ ಕಾಯ್ದುಕೊಂಡು ಮನೆಯಲ್ಲಿಯೇ ಇರುವಂತೆ ಕೋರಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.