ಅನುಕಂಪದ ಜತೆ ಜಾತಿ ಬಲವಿದ್ದವರಿಗೆ ಗೆಲುವು
Team Udayavani, Oct 31, 2018, 6:00 AM IST
ಬಾಗಲಕೋಟೆ: ನಗರದಲ್ಲಿ ಕಾಂಗ್ರೆಸ್‌ನ ನ್ಯಾಮಗೌಡರಿಗೆ ಒಲವು, ಗ್ರಾಮೀಣ ಭಾಗದಲ್ಲಿ ಬಿಜೆಪಿಯ ಶ್ರೀಕಾಂತ ಕುಲಕರ್ಣಿಗೆ ಬಲ. ಹೀಗಾಗಿ, ಜಮಖಂಡಿ ಉಪ ಚುನಾವಣೆಯಲ್ಲಿ ಎರಡೂ ಪಕ್ಷಗಳಿಗೆ ಗೆಲುವು ಎಂಬುದು ಕಬ್ಬಿಣದ ಕಡಲೆ. ಜಮಖಂಡಿ ಕ್ಷೇತ್ರದ ಉಪ ಚುನಾವಣೆಯ ಸಂಕ್ಷಿಪ್ತ ವಿಶ್ಲೇಷಣೆಯಿದು. ಈ ಚುನಾವಣೆಯನ್ನು ಎರಡೂ ಪಕ್ಷಗಳು ಪ್ರತಿಷ್ಠೆಯಾಗಿ ಪರಿಗಣಿಸಿವೆ. ಜಾತಿವಾರು ಮತ
ದಾರರನ್ನು ಸೆಳೆಯಲು, ಆಯಾ ಸಮಾಜದ ನಾಯಕರನ್ನೇ ಕರೆಸಿ ಪ್ರಚಾರ ನಡೆಸಿವೆ. ಕ್ಷೇತ್ರ ದಲ್ಲಿ ಒಟ್ಟು 1,02,216 ಪುರುಷ, 1,01,460 ಮಹಿಳೆಯರು ಹಾಗೂ ಇತರರು 5 ಸೇರಿ ಒಟ್ಟು 2,03,681 ಮತದಾರರಿದ್ದಾರೆ. ಜಮಖಂಡಿ ನಗರಸಭೆ ವ್ಯಾಪ್ತಿಯಲ್ಲೇ 59,458 ಮತದಾರರಿದ್ದು, ಮುಸ್ಲಿಂ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
ಇಡೀ ಕ್ಷೇತ್ರದಲ್ಲಿ ದಲಿತ, ಮುಸ್ಲಿಂ, ಲಿಂಗಾಯತ, ಗಾಣಿಗ ಮತದಾರರು ನಿರ್ಣಾಯಕ ಸ್ಥಾನದಲ್ಲಿದ್ದಾರೆ. ಮುಸ್ಲಿಂ ಮತ್ತು
ಕುರುಬ ಮತಗಳು ಈ ಬಾರಿ ವಿಭಜನೆ ಆಗದಂತೆ ಸಿದ್ದರಾಮಯ್ಯ ಮತ್ತು ಇಬ್ರಾಹಿಂ ಪ್ಲ್ರಾನ್ ಮಾಡಿದ್ದು, ಶೇ.80ರಷ್ಟು ಮತಗಳು ಬರಲಿವೆ ಎಂಬ ವಿಶ್ವಾಸ ಕಾಂಗ್ರೆಸ್‌ನದ್ದು. ಕಾಂಗ್ರೆಸ್‌ನ ಈ ವಿಶ್ವಾಸವನ್ನು ಬುಡಮೇಲು ಮಾಡಲು ಬಿಜೆಪಿಯ ಕೆ.ಎಸ್.ಈಶ್ವರಪ್ಪ ಅವರು, ಕುರುಬ ಮತಗಳು ಹೆಚ್ಚಿರುವ ಗ್ರಾಮಗಳಲ್ಲಿ ಪ್ರಚಾರ ನಡೆಸಿದ್ದಾರೆ. ಹೀಗಾಗಿ, ಕಾಂಗ್ರೆಸ್ ನೆಚ್ಚಿಕೊಂಡಿರುವ ಕುರುಬ ಮತಗಳಲ್ಲಿ ಒಂದಷ್ಟು ಬಿಜೆಪಿ ಪಾಲಾಗುವ ಸಾಧ್ಯತೆಯಿದೆ. ಎಸ್‌ಸಿ ಮತ್ತು ಎಸ್‌ಟಿ ಸಮುದಾಯದ 27,890 ಮತದಾರರಿದ್ದು, ಇವು ನಮ್ಮ ಸಾಂಪ್ರದಾಯಿಕ ಮತಗಳೆಂದು ಕಾಂಗ್ರೆಸ್ ನಂಬಿಕೊಂಡಿದೆ. ಆದರೆ, ನ್ಯಾ.ಸದಾಶಿವ ಆಯೋಗದ ವರದಿ ಜಾರಿ ವಿಳಂಬ ಹಿನ್ನೆಲೆಯಲ್ಲಿ ದಲಿತರಲ್ಲಿ ಮಾದಿಗ ಸಮಾಜ ಪೂರ್ಣ ಪ್ರಮಾಣದಲ್ಲಿ ಕಾಂಗ್ರೆಸ್ ಪರ ನಿಲ್ಲುವುದು ಅನುಮಾನ. ಗಾಣಿಗ ಸಮಾಜದ 25,917 ಮತಗಳಿದ್ದು, ಅದೇ ಸಮಾಜಕ್ಕೆ ಸೇರಿದ ಕಾಂಗ್ರೆಸ್ ಅಭ್ಯರ್ಥಿ ಆನಂದ ನ್ಯಾಮಗೌಡ ಪರವಾಗಿ ಹೆಚ್ಚಿನ ಸಂಖ್ಯೆಯಲ್ಲಿ ನಿಲ್ಲುವ ಸಾಧ್ಯತೆ ಇದೆ.
ಈ ಮಧ್ಯೆ, ಸಂಸದ ಗದ್ದಿಗೌಡರ, ಮಾಜಿ ಶಾಸಕ ಜಿ.ಎಸ್.ನ್ಯಾಮಗೌಡ ಅವರ ಮೂಲಕ ಗಾಣಿಗ ಸಮಾಜದ ಮತಗಳು ಕಾಂಗ್ರೆಸ್‌ಗೆ ಹೆಚ್ಚು ಬೀಳುವುದನ್ನು ತಡೆಯಲು ಬಿಜೆಪಿ ಗಂಭೀರ ಪ್ರಯತ್ನ ನಡೆಸಿದೆ. ಕ್ಷೇತ್ರದಲ್ಲಿ ಜೈನ ಮತ್ತು ಮರಾಠಾ ಸಮಾಜದವರೂ ಸಮಾನ ಸಂಖ್ಯೆಯಲ್ಲಿದ್ದಾರೆ. ಈ ಎರಡೂ ಸಮಾಜಗಳು ಬಹುತೇಕ ಬಿಜೆಪಿ ಪರವಾಗಿವೆ ಎಂಬ ನಂಬಿಕೆ ಬಿಜೆಪಿಯದ್ದು. ಈ ಮತಗಳಲ್ಲಿ ಶೇ.15ರಿಂದ 20ರಷ್ಟು ಮತಗಳನ್ನು ಸೆಳೆಯಲು ಮರಾಠಿ ಭಾಷಣ, ಮಹಾರಾಷ್ಟ್ರ ಸಿಎಂ ಪೃಥ್ವಿರಾಜ್ ಚವ್ಹಾಣ ಪ್ರಚಾರದ ಮೂಲಕ ಕಾಂಗ್ರೆಸ್ ಪ್ರಯತ್ನಿಸಿದೆ. ನೇಕಾರ, ಉಪ್ಪಾರ, ಬ್ರಾಹ್ಮಣ, ಮಾಳಿ (ಮಾಳಗಾರ) ಸಮಾಜದ ಮತಗಳು ತಲಾ 4ರಿಂದ 5 ಸಾವಿರ ಅಂತರದಲ್ಲಿವೆ. ಗೆಲುವಿನ ಅಂತರ ಅಥವಾ ಗೆಲುವು ನಿರ್ಧರಿಸುವಲ್ಲಿ ಈ ಸಮಾಜದ ಮತಗಳೂ ನಿರ್ಣಾಯಕವಾಗಲಿದ್ದು, ಕ್ಷೇತ್ರದಲ್ಲಿ ಇರುವ ಯಾವ ಸಮಾಜವನ್ನೂ ನಿರ್ಲಕ್ಷ ಮಾಡದೆ ಮತಬೇಟೆ ನಡೆಸಲಾಗುತ್ತಿದೆ.
ಅನುಕಂಪದ ಅಸ್ತ್ರ: ಉಪ ಚುನಾವಣೆಯಲ್ಲಿ ಒಟ್ಟು 7 ಜನ ಅಭ್ಯರ್ಥಿಗಳಿದ್ದರೂ ಕಾಂಗ್ರೆಸ್, ಬಿಜೆಪಿ ನಡುವೆ ನೇರ ಪೈಪೋಟಿಯಿದೆ. ಎರಡೂ ಪಕ್ಷಗಳ ಅಭ್ಯರ್ಥಿಗಳು ಅನುಕಂಪದ ಅಸ್ತ್ರ ಬಳಸುತ್ತಿದ್ದಾರೆ. ಸಿದ್ದು ನ್ಯಾಮಗೌಡರ ನಿಧನ, ಅವರ ಸಾಧನೆ, ಬ್ಯಾರೇಜ್ ನಿರ್ಮಾಣ, ಅವರು ಕಂಡ ಕನಸು ನನಸಾಗಲು ಅವರ ಮಗನಿಗೆ ಮತ ಕೊಡಿ ಎಂದು ಕಾಂಗ್ರೆಸ್ ನಾಯಕರು ತಮ್ಮ ಭಾಷಣದಲ್ಲಿ ಉಲ್ಲೇಖೀಸುತ್ತಿದ್ದಾರೆ. ಇದರ ಜತೆಗೆ ಜೆಡಿಎಸ್ ಕೂಡ ಕಾಂಗ್ರೆಸ್ ಪರ ಪ್ರಚಾರ ನಡೆಸಿದ್ದು, ಕಾಂಗ್ರೆಸ್‌ಗೆ ಕೊಂಚ ಲಾಭವಾಗುವ ಲೆಕ್ಕಾಚಾರ ಮಾಡಲಾಗಿದೆ. ಕ್ಷೇತ್ರದಲ್ಲಿ ಜಂಗಮ ಸಮಾಜದ 6 ಸಾವಿರ, ರೆಡ್ಡಿ 8 ಸಾವಿರ ಹಾಗೂ ಮುಖ್ಯವಾಗಿ ಪಂಚಮ
ಸಾಲಿ-ಬಣಜಿಗ ಸೇರಿ ಲಿಂಗಾಯತ ಮತಗಳು 24 ಸಾವಿರ ಇವೆ. ಇವುಗಳೇ ಬಿಜೆಪಿಯ ಗೆಲುವಿಗೆ ನಿರ್ಣಾಯಕ ಎಂಬ ವಿಶ್ವಾಸ ಬಿಜೆಪಿಯದು. ಹೀಗಾಗಿಯೇ ಸಿದ್ದರಾಮಯ್ಯ ಧರ್ಮ ಒಡೆದವರು, ಜಾತಿಯಲ್ಲಿ ಜಗಳ ಹಚ್ಚಿದವರು ಎಂಬ ಪ್ರಮುಖ ಅಂಶವನ್ನೇ ಬಿಜೆಪಿ ಪ್ರಚಾರದ ಅಸ್ತ್ರವಾಗಿಸಿಕೊಂಡಿದೆ.
ಕಾಂಗ್ರೆಸ್‌ನ ಅನುಕಂಪದ ಅಸ್ತ್ರಕ್ಕೆ ಪ್ರತಿತಂತ್ರವಾಗಿ ಬಿಜೆಪಿ ಅಭ್ಯರ್ಥಿ ಶ್ರೀಕಾಂತ ಕುಲಕರ್ಣಿ ಕೂಡ ಎರಡು ಬಾರಿ ಸೋತಿದ್ದೇನೆ. ಮುಂದಿನ ಚುನಾವಣೆಗೆ ನಾನು ನಿಲ್ಲುವುದಿಲ್ಲ. ಇದೊಂದು ಬಾರಿ ಗೆಲ್ಲಿಸಿ ಎಂಬ ಅನುಕಂಪದ ಮಾತುಗಳನ್ನು ಆಡುತ್ತಿದ್ದಾರೆ. ರಾಜಕೀಯ ಕ್ಷೇತ್ರಕ್ಕೆ ಆನಂದ ಸಂಪೂರ್ಣ ಹೊಸಬರು. ಬಿಜೆಪಿಯ ಶ್ರೀಕಾಂತ ಕುಲಕರ್ಣಿ ಪಳಗಿದ ರಾಜಕಾರಣಿ.
ಏಳು ಅಭ್ಯರ್ಥಿಗಳು
ಬಿಜೆಪಿಯಿಂದ ಶ್ರೀಕಾಂತ ಕುಲಕರ್ಣಿ, ಕಾಂಗ್ರೆಸ್ -ಜೆಡಿಎಸ್‌ನಿಂದ ಆನಂದ ಸಿದ್ದು ನ್ಯಾಮಗೌಡ, ಪ್ರಜಾ ಪರಿವರ್ತನಾ ಪಾರ್ಟಿಯಿಂದ ಪರಶುರಾಮ ಮಹಾರಾಜನವರ, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ಯಮನಪ್ಪ ಗುಣದಾಳ, ಪಕ್ಷೇತರರಾಗಿ ಅಂಬ್ರೋಸ್ ಡಿ.ಮೆಲ್ಲೋ, ರವಿ ಶಿವಪ್ಪ ಪಡಸಲಗಿ, ಸಂಗಮೇಶ ಚಿಕ್ಕನರಗುಂದ ಸೇರಿ ಒಟ್ಟು ಏಳು ಜನ ಕಣದಲ್ಲಿದ್ದಾರೆ.
ತಂದೆ ಮಾಡಿದ ಅಭಿವೃದ್ಧಿ
ಕಾರ್ಯಗಳು, ಅವರು ಕಂಡಿದ್ದ ಮಾದರಿ ಕ್ಷೇತ್ರ, ಜಮಖಂಡಿ ಜಿಲ್ಲಾ ಕೇಂದ್ರ ಮಾಡುವ ಬೇಡಿಕೆಗೆ ಸ್ಪಂದನೆ ನನ್ನ ಗುರಿ.
ಇಡೀ ಕ್ಷೇತ್ರದಲ್ಲಿ ಕಾಂಗ್ರೆಸ್ ಪರ ಜನರಿದ್ದಾರೆ. ನಮ್ಮ ಪಕ್ಷದ ನಾಯಕರು ಹಲವು ಬಾರಿ ಪ್ರಚಾರ ನಡೆಸಿದ್ದಾರೆ. ತಂದೆಯಿಂದ ತೆರವಾದ ಈ ಕ್ಷೇತ್ರದಲ್ಲಿ ನನ್ನನ್ನು ಗೆಲ್ಲಿಸಲು ಜನ ಆಶೀರ್ವಾದ ಮಾಡಲಿದ್ದಾರೆ.
● ಆನಂದ ನ್ಯಾಮಗೌಡ, ಕಾಂಗ್ರೆಸ್ ಅಭ್ಯರ್ಥಿ
ಕಾಂಗ್ರೆಸ್ ಆಡಳಿತ, ಈಗಿನ ಸಮ್ಮಿಶ್ರ ಸರ್ಕಾರದ ಕಾರ್ಯವೈಖರಿ ಎಲ್ಲವನ್ನೂ ಜನ ನೋಡಿದ್ದಾರೆ. ಸರ್ಕಾರ ಅಸ್ತಿತ್ವದಲ್ಲಿಲ್ಲ ಎಂಬ ಅನಿಸಿಕೆ ಜನರಲ್ಲಿದೆ. ಕಾಂಗ್ರೆಸ್ ಏನೇ ತಂತ್ರಗಾರಿಕೆ ನಡೆಸಿದರೂ ಕ್ಷೇತ್ರದ ಜನರು ಬಿಜೆಪಿ ಗೆಲ್ಲಿಸಲಿದ್ದಾರೆ. ಜನರಿಂದ ಉತ್ತಮ ಸ್ಪಂದನೆ ಸಿಗುತ್ತಿದೆ.
● ಶ್ರೀಕಾಂತ ಕುಲಕರ್ಣಿ, ಬಿಜೆಪಿ ಅಭ್ಯರ್ಥಿ
ಶ್ರೀ ಶೈಲ ಕೆ ಬಿರಾದಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi; 36 ಗಂಟೆಯಲ್ಲಿ ತಾಯಿ ಮಡಿಲು ಸೇರಿದ ಮಗು: ಪೊಲೀಸರ ಭರ್ಜರಿ ಕಾರ್ಯಾಚರಣೆ
Bengaluru; ಪಾರ್ಕ್ ಗಳಲ್ಲಿ ನಾಯಿ ಮಲ ವಿಸರ್ಜಿಸಿದ್ರೆ ಮಾಲಿಕರಿಗೆ ದಂಡ: ಹೈಕೋರ್ಟ್
BJP Internal Dispute: ಶಾಸಕ ಬಸನಗೌಡ ಯತ್ನಾಳ್ ವಿವಾದ ಇತ್ಯರ್ಥಕ್ಕೆ ಡಿ.9ರ ಗಡುವು
Constitution Day: ಉಡುಪಿ ಪೇಜಾವರ ಶ್ರೀ ಮನುಸ್ಮೃತಿ ಪ್ರತಿಪಾದಕರು: ಸಿಎಂ ಸಿದ್ದರಾಮಯ್ಯ
Congress: ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಸ್ವರ ಎತ್ತಿದರೆ ಶಿಸ್ತುಕ್ರಮ: ಡಿ.ಕೆ.ಶಿವಕುಮಾರ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Kalaburagi; 36 ಗಂಟೆಯಲ್ಲಿ ತಾಯಿ ಮಡಿಲು ಸೇರಿದ ಮಗು: ಪೊಲೀಸರ ಭರ್ಜರಿ ಕಾರ್ಯಾಚರಣೆ
Ballari: ಜಿಲ್ಲಾಸ್ಪತ್ರೆಯಲ್ಲಿ ಮತ್ತೊಬ್ಬ ಬಾಣಂತಿ ಸಾವು; ಮೃತರ ಸಂಖ್ಯೆ 4ಕ್ಕೆ
ICC; ಚಾಂಪಿಯನ್ಸ್ ಟ್ರೋಫಿ ಸುತ್ತಲಿನ ಬಿಕ್ಕಟ್ಟು: ಶುಕ್ರವಾರ ಮಹತ್ವದ ತೀರ್ಮಾನ?
Jasprit Bumrah ನಾಯಕತ್ವದ ಜವಾಬ್ದಾರಿಯನ್ನು ಆನಂದಿಸುತ್ತಾರೆ: ರವಿಶಾಸ್ತ್ರಿ
Lebanon; ಇಸ್ರೇಲ್, ಹೆಜ್ಬುಲ್ಲಾ ಕದನ ವಿರಾಮಕ್ಕೆ ಒಪ್ಪಿಗೆ: ಯುಎಸ್ ಸಮನ್ವಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.