ಸಂಭ್ರಮದ ಹನುಮಾನ ದೇವರ ಓಕುಳಿ
Team Udayavani, Jul 8, 2019, 2:27 PM IST
ಜಮಖಂಡಿ: ನಗರದಲ್ಲಿ ರವಿವಾರ ನಡೆದ ಹನುಮಾನ ಓಕಳಿ ಸ್ಪರ್ಧೆ.
ಜಮಖಂಡಿ: ನಗರದ ಹನುಮಾನ ದೇವರ ಓಕುಳಿ ರವಿವಾರ ಸ್ಥಳೀಯ ಹಿರಿಯರ ನೇತೃತ್ವದಲ್ಲಿ ಯುವಕರಿಂದ ಓಕಳಿ ಕಂಬ ಏರುವ ಸ್ಪರ್ಧೆ ವಿಜೃಂಭಣೆಯಿಂದ ನಡೆಯಿತು.
ಅಂದಾಜು 50 ಅಡಿ ಎತ್ತರದ ಕಂಬವನ್ನು ಎರಲು ಹರಸಾಹಸ ಮಾಡುತ್ತಿದ್ದ ತಂಡಕ್ಕೆ ಮತ್ತೂಂದು ತಂಡದ ಯುವಕರು ನೀರು ಎರಚುವ ಮೂಲಕ ಕೆಳಗಡೆ ಇಳಿಸುವ ದೃಶ್ಯ ವಿಶೇಷವಾಗಿತ್ತು. ನೀರು ಎರಚುವ ತಂಡ ಲೆಕ್ಕಿಸದೇ ಕುಂಬಾರ ಗಲ್ಲಿ ಯುವಕರ ತಂಡ ಪರವಾಗಿ ಸೋಮಲಿಂಗ ಯುವಕ 50 ಅಡಿ ಕಂಬ ಏರುವ ಮೂಲಕ ವಿಜೇತರಾದರು. ನಂತರ ಹನುಮಾನ ದೇವಸ್ಥಾನ ಕಮೀಟಿ ಮತ್ತು ನಗರದ ಹಿರಿಯರು ವಿಜೇತ ತಂಡದ ಯುವಕನನ್ನು ಸನ್ಮಾನಿಸಿ ಮೆರವಣಿಗೆ ಮಾಡಿದರು.
ಐತಿಹಾಸಿಕ ಓಕಳಿ ಕಂಬ ಹತ್ತುವ ಸ್ಪರ್ಧೆಯನ್ನು ಜನತೆ ವೀಕ್ಷಿಸಿ ಸಂಭ್ರಮಿಸಿದರು. ನಂತರ ನೆರದಿದ್ದ ಜನರಿಗೆ ಬಣ್ಣದ ನೀರು ಎರಚುವ ಮೂಲಕ ಓಕುಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.