ಪತ್ರಿಕಾ ವಿತರಕರ ಕಾರ್ಯ ಬಹು ಮುಖ್ಯ
ಸರ್ಕಾರದ ಸೌಲಭ್ಯ ತಲುಪಿಸಲು ಒತ್ತಾಯ; ಜಿಲ್ಲಾ ಮಟ್ಟದ ಸಂಘ ರಚನೆಗೆ ಕ್ರಮ: ಅಂಗಡಿ
Team Udayavani, Sep 8, 2022, 5:54 PM IST
ಕಲಾದಗಿ: ವರದಿಗಾರರು ಸುದ್ದಿ ಬರೆದು ಕಳುಹಿಸಿದರೆ ಪತ್ರಿಕಾ ಸಂಸ್ಥೆಗಳು ವರದಿ ಪ್ರಕಟಿಸಿ ಪ್ರಸಾರ ಮಾಡುತ್ತವೆ. ವಿದೇಶ, ದೇಶ, ರಾಜ್ಯ, ಜಿಲ್ಲೆಯ ಸುದ್ದಿಗಳು ಪ್ರತಿ ಮನೆ-ಮನೆಗೆ ಓದುಗರನ್ನು ತಲುಪಬೇಕಾದರೆ ಪತ್ರಿಕಾ ವಿತರಕರ ಕಾರ್ಯ ಬಹು ಮುಖ್ಯ ಎಂದು ಮಾಜಿ ಶಾಸಕ ಜೆ.ಟಿ.ಪಾಟೀಲ ಹೇಳಿದರು.
ಕಲಾದಗಿ ಕಾರ್ಯನಿರತ ಪತ್ರಿಕಾ ಬಳಗದಿಂದ ಆಯೋಜಿಸಿದ್ದ ವಿಶ್ವ ಪತ್ರಿಕಾ ವಿತರಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಅನೇಕ ಜನರ ದಿನಚರಿ ಆರಂಭವಾಗುವುದು ಪತ್ರಿಕೆ ಓದುವುದರಿಂದಲೇ. ಪತ್ರಿಕೆಗಳು ನಂಬಿಗೆ, ವಿಶ್ವಾಸಾರ್ಹ ಮಾಧ್ಯಮ. ಪತ್ರಿಕಾ ವಿತರಕರಿಗೆ ಗ್ರಾಪಂ ಮಟ್ಟದಲ್ಲಿ ನಿವೇಶನ ಒದಗಿಸಲು ಪತ್ರಕರ್ತರು ಶ್ರಮಿಸಬೇಕು. ಸರ್ಕಾರದಿಂದ ವಿತರಕರಿಗೆ ಸಹಾಯ ಸೌಲಭ್ಯ ಒದಗಿಸಲು ಸಂಬಂಧಿಸಿದವರಿಗೆ ಒತ್ತಾಯಿಸುವೆ ಎಂದರು.
ಬೆಂಗಳೂರು ಕಾನಿಪ ಸಂಘದ ರಾಜ್ಯ ಕಾರ್ಯಕಾರಿಣಿ ಸದಸ್ಯ ಮಹೇಶ್ ಅಂಗಡಿ ಮಾತನಾಡಿ, ರಾಜ್ಯ ಮಟ್ಟದಲ್ಲಿ ಪತ್ರಿಕಾ ವಿತರಕರ ಒಕ್ಕೂಟ ಸಂಘವಿದೆ. ಜಿಲ್ಲಾ ಮಟ್ಟದಲ್ಲೂ ಪತ್ರಿಕಾ ವಿತರಕ ಸಂಘ ಆಗಬೇಕು. ಅದಕ್ಕಾಗಿ ಜಿಲ್ಲೆಯಲ್ಲಿನ ಎಲ್ಲ ಪತ್ರಿಕೆ ವಿತರಕರೊಂದಿಗೆ ಸಮಾಲೋಚಿಸಿ ಸಂಘ ಮಾಡಲು ಕ್ರಮ ವಹಿಸುವುದಾಗಿ ಹೇಳಿದರು.
ಬಾಗಲಕೋಟೆ ಜಿಲ್ಲಾ ಕಾನಿಪ ಸಂಘದ ಅಧ್ಯಕ್ಷ ಆನಂದ ದಲಭಂಜನ್ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿತರಕರ ಬೇಡಿಕೆ ಈಡೇರಿಸಿಕೊಳ್ಳಲು ತಮ್ಮದೇ ಸಂಘ ಸ್ಥಾಪಿಸಿಕೊಳ್ಳಬೇಕು. ಆ ಮೂಲಕ ಸರ್ಕಾರದಿಂದ ತಮ್ಮ ಬೇಡಿಕೆ ಈಡೇರಿಸಿಕೊಳ್ಳಬಹುದು ಎಂದರು.
ಸಿ.ಎಲ್. ಹೂಗಾರ, ಪಿಎಸೈ ಆರ್.ಎಂ. ಸಂಕನಾಳ, ಬಶೆಟ್ಟಿ ಅಂಗಡಿ, ಬಿ.ಎ.ಬಾಗವಾನ, ಶಂಕರ ನಿಂಬರಗಿ, ಮಲ್ಲಪ್ಪ ಜಮಖಂಡಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಹಿರಿಯ ಪತ್ರಿಕೆ ವಿತರಕ ಬಸಪ್ಪ ಪಾಣಿಶೆಟ್ಟಿ, ನೂರಹಮ್ಮದ್ ನದಾಫ್, ರಾಜು ಜೋಶಿ ಅವರನ್ನು ಸನ್ಮಾನಿಸಲಾಯಿತು. ಪತ್ರಕರ್ತ ದ.ರಾ.ಪುರೋಹಿತ ಪ್ರಾಸ್ತಾವಿಕ ಮಾತನಾಡಿದರು, ಚಂದ್ರಶೇಖರ ಹಡಪದ ನಿರೂಪಿಸಿದರು. ಮೆಹಬೂಬ ನದಾಫ್ ಸ್ವಾಗತಿಸಿದರು. ಸಿಕಂದರ ಬಾವಾಖಾನ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ
K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
India: ಒಂದು ದೇಶ ಒಂದು ಚುನಾವಣೆ ಜಾರಿ ಆಗಲಿ: ಪೇಜಾವರ ಸ್ವಾಮೀಜಿ
Rabkavi Banahatti: ಲೋಕ ಅದಾಲತ್ ನಲ್ಲಿ ಒಂದಾದ ದಂಪತಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ
Vasundhara Raje ಬೆಂಗಾವಲು ವಾಹನ ಪಲ್ಟಿ; ನಾಲ್ವರು ಪೊಲೀಸರಿಗೆ ಗಾಯ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.