![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
Team Udayavani, Aug 12, 2024, 10:05 AM IST
■ ಉದಯವಾಣಿ ಸಮಾಚಾರ
ಮುಧೋಳ: ಘಟಪ್ರಭಾ ಪ್ರವಾಹದಿಂದ ಉಂಟಾಗಿರುವ ಹಾನಿಗೆ ಸೂಕ್ತ ಪರಿಹಾರ ಒದಗಿಸಲು ನಾನೂ ಸಹ ನಿರಂತರವಾಗಿ
ಶ್ರಮಿಸುತ್ತಿದ್ದು, ರೈತರು ಹಾಗೂ ಸಂತ್ರಸ್ತರು ಸರ್ಕಾರದೊಂದಿಗೆ ಸಹಕಾರ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಮನವಿ ಮಾಡಿಕೊಂಡಿದ್ದಾರೆ.
ಸರ್ಕಾರದ ಮಟ್ಟದಲ್ಲಿ ಸಂತ್ರಸ್ತರಿಗೆ ಹಾಗೂ ಬೆಳೆಹಾನಿಯಾದ ರೈತರಿಗೆ ಎನ್‌ಡಿಆರ್ ಎಫ್ ಹಾಗೂ ಎಸ್‌ಡಿಆರ್‌ಎಫ್ ಅನ್ವಯ ಪರಿಹಾರ ಒದಗಿಸುವ ಸಲುವಾಗಿ ಹಾಗೂ ಪರಿಹಾರ ಹೆಚ್ಚಿಸಲು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸುವುದು ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚಿಸುವ ಸಲುವಾಗಿ ಆ. 6ರಂದು ನಗರದ ಲೋಕೋಪಯೋಗಿ ಪ್ರವಾಸಿ ಮಂದಿರದಲ್ಲಿ ರೈತರು, ಸಂತ್ರಸ್ತರು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ.
ಸಭೆಯಲ್ಲಿ ರೈತರ ಬೇಡಿಕೆ ಆಲಿಸಲು ಮುಖ್ಯಮಂತ್ರಿಗಳನ್ನು ಮುಧೋಳ ನಗರಕ್ಕೆ ಕರೆತರಲು ಸಮಯ ಕೇಳಲಾಗುವುದು
ಎಂದು ಭರವಸೆ ನೀಡಿದ್ದೆ. ಈ ಕಾರ್ಯದಲ್ಲಿ ನಾನು ನಿರತನಾಗಿದ್ದೇನೆ ಎಂದು ತಿಳಿಯಪಡಿಸುವೆ ಎಂದು ತಿಳಿಸಿದ್ದಾರೆ.
ಅಂದಿನ ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕಿವಡಿ, ಕಾಂಗ್ರೆಸ್ ಮುಖಂಡ ಸದುಗೌಡ ಪಾಟೀಲ, ರೈತ ಮುಖಂಡರಾದ ಸುಭಾಷ ಶಿರಬೂರ, ದುಂಡಪ್ಪ ಲಿಂಗರಡ್ಡಿ, ದುಂಡಪ್ಪ ಯರಗಟ್ಟಿ, ಉಪವಿಭಾಗಾ ಧಿಕಾರಿ ಶ್ವೇತಾ ಬೀಡಿಕರ, ತಹಶೀಲ್ದಾರ್ ವಿನೋದ ಹತ್ತಳ್ಳಿ ಸೇರಿದಂತೆ ಇತರರು ಉಪಸ್ಥಿತರಿದ್ದರು. ಸಭೆಯಲ್ಲಿ ರೈತಮುಖಂಡರು ಸಕ್ರಿಯವಾಗಿ ಸ್ಪಂದನೆ ನೀಡಿದ್ದರು.
ಘಟಪ್ರಭಾ ಪ್ರವಾಹದಲ್ಲಿ 14 ದಿನಗಳ ಕಾಲ ನೀರು ನಿಂತ ಪರಿಣಾಮ ಕಬ್ಬು ಬೆಳೆ ಹಾನಿಯಾಗಿದೆ. ರೈತರ ನಷ್ಟ ತಗ್ಗಿಸುವ ಸಲುವಾಗಿ ಕೃಷ್ಣಾ ಮೇಲ್ದಂಡೆ ಯೋಜನೆಯಡಿ ಪರಿಹಾರ ವಿತರಣೆ ಕುರಿತು ನೀರಾವರಿ ಸಚಿವರೊಂದಿಗೆ ಚರ್ಚಿಸಲಾಗುವುದು
ಎಂದು ತಿಳಿಸಿದ್ದಾರೆ.
ಕಾತರಕಿ-ಕಲಾದಗಿ ಸೇತುವೆಗೆ ಖುದ್ದು ಭೇಟಿ ನೀಡಿ ಜಿಲ್ಲಾ ಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಣಾ
ಧಿಕಾರಿಗಳೊಂದಿಗೆ ಚರ್ಚಿಸಿ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದುಬಂದಾಗ ಪ್ರವಾಹ ಉಂಟಾಗುವುದಕ್ಕೆ ಕಾರಣವೇನು
ಎಂಬುದನ್ನು ಅಧ್ಯಯನ ಮಾಡಿ ವರದಿ ನೀಡುವಂತೆ ನೀರಾವರಿ ಇಲಾಖೆ ಅಧಿಕಾರಿಗಳು ಹಾಗೂ ಕೆಬಿಜೆಎನ್‌ಎಲ್ ಅಧಿ ಕಾರಿಗಳಿಗೆ ಸೂಚನೆ ನೀಡಿರುವೆ. ಶೀಘ್ರ ನೀರಾವರಿ ಸಮಿತಿ ವರದಿ ಬರಲಿದ್ದು, ಆ ಬಳಿಕ ಪ್ರವಾಹ ತಡೆಗೆ ಯಾವ ರೀತಿ ಕ್ರಮ ಕೈಗೊಳ್ಳಬೇಕು ಎಂಬುದರ ಕುರಿತು ಚರ್ಚಿಸಲಾಗುವುದು ಎಂದು ಸಚಿವರು ತಿಳಿಸಿ ದ್ದಾರೆ.
ಕಾತರಕಿ-ನಿಂಗಾಪುರ ಬಳಿ ಬ್ಯಾರೇಜ್ ಅಗಲೀಕರಣ ಹಾಗೂ ಮುಧೋಳ-ಯಾದವಾಡ, ಚಿಂಚಖಂಡಿ ಸೇತುವೆ ಎತ್ತರಕ್ಕೆ ವರದಿ ಬಂದ ಬಳಿಕ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಘಟಪ್ರಭಾ ಪ್ರವಾಹದಿಂದ ಸಂತ್ರಸ್ತರಾದವರ ನೆರವಿಗೆ ನಮ್ಮ ಸರ್ಕಾರ ಸದಾ ಸಿದ್ದವಿದೆ. ರೈತರು ಹಾಗೂ ನೆರೆ ಸಂತ್ರಸ್ತರು ಎದೆಗುಂದದೆ ಸರ್ಕಾರಕ್ಕೆ ಸಹಕಾರ ನೀಡಬೇಕು ಎಂದು ಪ್ರಕಟಣೆ ಮೂಲಕ ಮನವಿ ಮಾಡಿಕೊಂಡಿದ್ದಾರೆ.
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
You seem to have an Ad Blocker on.
To continue reading, please turn it off or whitelist Udayavani.