ಮಳೇರಾಜೇಂದ್ರ ಮಠಕ್ಕೆ ಶಿಲಾನ್ಯಾಸ
Team Udayavani, Mar 5, 2019, 7:27 AM IST
ಬಾಗಲಕೋಟೆ: ಮಳೇರಾಜೇಂದ್ರಸ್ವಾಮಿ ಮಠ ರೈತರಿಗೆ ಆಶ್ರಯದಾಯಕ ಮಠ. ಈ ಭಾಗದಲ್ಲಿ ಕೃಷಿಕರ ಮಠ ಎಂದೇ ಹೆಸರುವಾಸಿಯಾಗಿದೆ ಎಂದು ಸಂಸದ ಪಿ.ಸಿ. ಗದ್ದಿಗೌಡರ ಹೇಳಿದರು.
ಮುರನಾಳ ಪುನರ್ವಸತಿ ಕೇಂದ್ರದಲ್ಲಿ ಮಳೆರಾಜೇಂದ್ರಸ್ವಾಮಿ ಮಠದ ಆವರಣದಲ್ಲಿ ನಡೆದ ನೂತನ ಮಠದ ಶಿಲಾನ್ಯಾಸ ಉದ್ಘಾಟಿಸಿ ಅವರು ಮಾತನಾಡಿದರು. ಮಳೇರಾಜೇಂದ್ರ ಸ್ವಾಮೀಜಿ ಪವಾಡ ಪುರುಷರಾಗಿದ್ದರು. ಮಳೆ ತರಸಿ ಭೂಮಿ ತರಿಸಿದ ಶ್ರೀಗಳು ಜಲ ಉಪಾಸಕರಾಗಿದ್ದರು. ಶ್ರೀಮಠ ಬೆಳವಣಿಗೆಯಾಗಬೇಕು ಎಂದು ತಿಳಿಸಿದರು.
ಬೀಳಗಿ ಶಾಸಕ ಮುರಗೇಶ ನಿರಾಣಿ ಮಾತನಾಡಿ, ಈ ಭಾಗದ ರೈತರಿಗೆ ಈ ಮಠ ಕೃಷಿ ವಿಶ್ವವಿದ್ಯಾಲವಿದ್ದಂತೆ, ಮಳೇರಾಜೇಂದ್ರ ಸ್ವಾಮೀಜಿ ಬರಗಾಲದಲ್ಲಿ ಮಳೆ ತರಿಸಿದ ಪವಾಡ ಪುರುಷರು. ಈಗಲೂ ಮಳೆ ಆಗದಿದ್ದರೆ ಮಠಕ್ಕೆ ಬಂದು ಮಳೆ ಕೇಳುವ ಪರಂಪರೆ ಈಗಲೂ ಜಾರಿಯಲ್ಲಿದೆ ಎಂದು ಹೇಳಿದರು.
ಮುಳುಗಡೆಯಾಗಿರುವ ಗ್ರಾಮದಲ್ಲಿನ ಮಠವನ್ನು ಹೊಸ ಮುರನಾಳದಲ್ಲಿ ನಿರ್ಮಿಸಲಾಗುವ ನೂತನ ಮಠಕ್ಕೆ ವೈಯಕ್ತಿಕವಾಗಿ 5 ಲಕ್ಷ ರೂ. ಹಾಗೂ ಶಾಸಕರ ಅನುದಾನಗಳಲ್ಲಿ ಮಠಕ್ಕೆ ನೆರವು ನೀಡಲಾಗುವುದು ಎಂದು ಭರವಸೆ ನೀಡಿದರು.
ಜಿಪಂ ಸದಸ್ಯ ಹೂವಪ್ಪ ರಾಠೊಡ ಮಾತನಾಡಿ, ಶ್ರೀಮಠದ ಅಭಿವೃದ್ಧಿಗಾಗಿ ವೈಯಕ್ತಿಕವಾಗಿ 2.5 ಲಕ್ಷ ರೂ. ನೀಡುವ ಭರವಸೆ ನೀಡಿದರು. ಶ್ರೀ ಮಳಿಯಪ್ಪಯ್ಯಸ್ವಾಮೀಜಿ ಮಾತನಾಡಿದರು. ಮಳೇರಾಜೇಂದ್ರ ಸ್ವಾಮೀಜಿಯ ಮೂರ್ತಿ ಪಲ್ಲಕ್ಕಿ ಮೆರವಣಿಗೆಯೊಂದಿಗೆ ಮಹಿಳೆಯರ ಕುಂಭಮೇಳ
ಮೆರವಣಿಗೆ ಅದ್ಧೂರಿಯಾಗಿ ಜರುಗಿತು.
ನಿತ್ಯಾನಂದ ಸ್ವಾಮೀಜಿ, ಶ್ರೀ ತಾರಾನಾಥ ಸ್ವಾಮೀಜಿ, ಶ್ರೀಗುರುಲಿಂಗ ಸ್ವಾಮೀಜಿ, ಅಖಂಡ ಸ್ವಾಮೀಜಿ, ನಿತ್ಯಾನಂದ ಸ್ವಾಮೀಜಿ, ಜಗನ್ನಾಥ ಸ್ವಾಮೀಜಿ, ಮೋನಪ್ಪಯ್ಯ ಸ್ವಾಮೀಜಿ, ಮೇಘರಾಜ ಸ್ವಾಮೀಜಿ, ಗಂಗಾಧರ ಸ್ವಾಮೀಜಿ, ಗುರುನಾಥ ಸ್ವಾಮೀಜಿ, ಮೇಘರಾಜ ಸ್ವಾಮೀಜಿ, ವಿಧಾನಪರಿಷತ್ ಸದಸ್ಯರಾದ ಎಸ್.ಆರ್. ಪಾಟೀಲ, ಹನಮಂತ ನಿರಾಣಿ, ಮಾಜಿ ಶಾಸಕ ಪಿ.ಎಚ್. ಪೂಜಾರ, ತಾಪಂ ಅಧ್ಯಕ್ಷ ಚೆನ್ನನಗೌಡ ಪರನಗೌಡ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
India: ಒಂದು ದೇಶ ಒಂದು ಚುನಾವಣೆ ಜಾರಿ ಆಗಲಿ: ಪೇಜಾವರ ಸ್ವಾಮೀಜಿ
Rabkavi Banahatti: ಲೋಕ ಅದಾಲತ್ ನಲ್ಲಿ ಒಂದಾದ ದಂಪತಿಗಳು
ವಿಳಾಸ ಕೇಳುವ ನೆಪದಲ್ಲಿ ವ್ಯಕ್ತಿಯ ಕೊರಳಲ್ಲಿದ್ದ ಚಿನ್ನದ ಚೈನ್ ಕದ್ದ ಅಪರಿಚಿತ ವ್ಯಕ್ತಿ
Mudhol: ಬಸ್ ಗೆ ಡಿಕ್ಕಿ ಹೊಡೆದ ಬೈಕ್… ಸವಾರರಿಗೆ ಗಂಭೀರ ಗಾಯ
MUST WATCH
ಹೊಸ ಸೇರ್ಪಡೆ
BBK11: ಕೊನೆಗೂ ಬಿಗ್ ಬಾಸ್ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್ ಸುರೇಶ್
ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು
Belthangady: ಕುತ್ಲೂರು ನಿವಾಸಿಗಳ ಕೂಗು ಅರಣ್ಯರೋದನ!
Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್
Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.