ಕಾರು ಬಿಟ್ಟು ಪೊಲೀಸ್ ಜೀಪ್ ಹತ್ತಿದ ಸಿದ್ದು!
Team Udayavani, Oct 23, 2019, 8:15 PM IST
ಬಾಗಲಕೋಟೆ: ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಬಾದಾಮಿ ಕ್ಷೇತ್ರದ ಮಲಪ್ರಭಾ ಪ್ರವಾಹ ಬಾಧಿತ ಗ್ರಾಮಗಳಿಗೆ ಭೇಟಿ ನೀಡಲು ತೆರಳುತ್ತಿದ್ದ ವೇಳೆ ತಮ್ಮ ಕಾರು ಬಿಟ್ಟು, ಪೊಲೀಸರ ಜೀಪ್ ಹತ್ತಿ ತೆರಳಿದ ಪ್ರಸಂಗ ಹೆಬ್ಬಳ್ಳಿ ಬಳಿ ನಡೆಯಿತು.
ಬಾದಾಮಿ ಕ್ಷೇತ್ರದ ಹಲವು ಹಳ್ಳಿಗಳಿಗೆ 3ನೇ ಬಾರಿ ಪ್ರವಾಹ ಬಂದಿದ್ದು, ಪ್ರವಾಹ ಬಾಧಿತ ಗ್ರಾಮಗಳಿಗೆ ಬುಧವಾರವೂ ಭೇಟಿ ನೀಡಿದರು. ಬಾದಾಮಿ ತಾಲೂಕಿನ ಹೆಬ್ಬಳ್ಳಿಯಿಂದ ಮುಮರಡ್ಡಿಕೊಪ್ಪ ಗ್ರಾಮಕ್ಕೆ ತೆರಳಲು ಗುಡ್ಡದ ರಸ್ತೆಗಳಿದ್ದು, ಕಾರು ಮುಂದೆ ಸಾಗಲು ಅಸಾಧ್ಯವಾದ ಹಿನ್ನೆಲೆಯಲ್ಲಿ ಪೊಲೀಸರ ಜೀಪು ಹತ್ತಿ ತೆರಳಿದರು. ಪೊಲೀಸರ ಜೀಪಿನಲ್ಲಿ ಮುಮರಡ್ಡಿಕೊಪ್ಪ, ಖ್ಯಾಡ ಗ್ರಾಮಗಳಿಗೆ ತೆರಳಿ ಸಂತ್ರಸ್ತರ ಅಹವಾಲು ಆಲಿಸಿದರು.
ಜಿಲ್ಲೆಯ ರನ್ನಬೆಳಗಲಿಯ ಬಾಲಕಿಯೊಬ್ಬಳು ರಸ್ತೆ ಸುಧಾರಣೆಗಾಗಿ ಆಗ್ರಹಿಸಿದ್ದಾಳೆ. ಗೋವಿಂದ ಕಾರಜೋಳ ಒಬ್ಬ ಬೇಜವಾಬ್ದಾರಿ ಡಿಸಿಎಂ ಎಂಬುದು ತೋರಿಸುತ್ತದೆ. ನನ್ನ ಪ್ರಕಾರ ಸರಕಾರ, ಪ್ರವಾಹ ವಿಷಯದಲ್ಲಿ ಗಂಭೀರವಾಗಿ ಕೆಲಸ ಮಾಡುತ್ತಿಲ್ಲ. ತೋರಿಕೆಗೋಸ್ಕರ, ಲೋಬಾನ ಹಾಕುವ ಕೆಲಸ ಮಾಡುತ್ತಿದ್ದಾರೆ. ಪ್ರವಾಹ ಬಂದಾಗ ಸ್ಪಂದಿಸಬೇಕಾದ ಜವಾಬ್ದಾರಿ ಸರಕಾರಕ್ಕಿದೆ. ಜನರ ಕಷ್ಟ-ಸುಖ ಕೇಳಬೇಕಾಗಿರುವುದು ಸರಕಾರದ ಜವಾಬ್ದಾರಿ. ನಾವು ಜನರ ಸಮಸ್ಯೆ ಹೇಳುವವರು. ಪರಿಹಾರ ಸರಕಾರ ಕೊಡಬೇಕು ಎಂದರು.
ಸಿದ್ದು ಕಾರು ತಡೆದ ವೃದ್ಧೆ
ಪ್ರವಾಹ ಬಾಧಿತ ಗ್ರಾಮಕ್ಕೆ ತೆರಳುತ್ತಿದ್ದ ವೇಳೆ ಕಿತ್ತಲಿಯಲ್ಲಿ ವೃದ್ಧೆಯೊಬ್ಬರು ಸಿದ್ದರಾಮಯ್ಯ ಕಾರು ತಡೆದು ಸಮಸ್ಯೆ ಹೇಳಿಕೊಂಡರು. ಕಿತ್ತಲಿ ಕೂಡ ಮಲಪ್ರಭಾ ನದಿ ಪ್ರವಾಹಕ್ಕೆ ಒಳಗಾಗಿದ್ದು, ವೃದ್ಧೆ ತನಗೆ ಮನೆಯಿಲ್ಲ. ಮನೆ ಕೊಡಿಸಿ ಎಂದು ಕೇಳಿಕೊಂಡರು. ಆಯ್ತಮ್ಮ ನಿನಗೆ ಮನೆ ಕೊಡಿಸುತ್ತೇನೆ ಎಂದು ಸಿದ್ದರಾಮಯ್ಯ ಭರವಸೆ ನೀಡಿ, ಮುಂದೆ ಸಾಗಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.