ಗ್ರಾಮೀಣ ಮಹಿಳೆಯರ ರೋಧನ
•ಅಡುಗೆ ಮಾಡಲು ಶುದ್ಧ ಕುಡಿಯುವ ನೀರಿಲ್ಲದೇ ಪರದಾಟ•ತಾತ್ಕಾಲಿಕ ಶೆಡ್‌ಗಳಲ್ಲಿ ಸಂಚಾರಿ ಶೌಚಾಲಯ
Team Udayavani, Aug 9, 2019, 11:39 AM IST
ಜಮಖಂಡಿ: ಕೃಷ್ಣಾ ನದಿ ದಡದಲ್ಲಿ ಬಟ್ಟೆ ತೊಳೆಯುತ್ತಿರುವ ಮಹಿಳೆಯರು.
ಜಮಖಂಡಿ: ಭೀಕರ ಪ್ರವಾಹದಿಂದ ತಾಲೂಕಿನ ಜನತೆ ತೊಂದರೆಗಳಿಗೆ ಸಿಲುಕಿದ್ದಾರೆ. ಮಹಿಳೆಯರಿಗೆ ಅಡುಗೆ ಮಾಡಲು ಶುದ್ಧ ನೀರಿಲ್ಲದೇ, ಬಟ್ಟೆ ಒಗೆಯಲು ನೀರಿಲ್ಲದೇ ಮತ್ತು ಶೌಚಾಲಯಗಳಿಲ್ಲದೇ ರೋಧನೆ ಪಡುತ್ತಿದ್ದಾರೆ.
ಕೃಷ್ಣಾನದಿ ಮಹಾಪುರದಿಂದ ತಾಲೂಕಿನ 27 ಗ್ರಾಮಗಳ ಜನರ ಜೀವನದ ಚಿತ್ರಣವೇ ಬದಲಾಗಿದ್ದು, ಉಕ್ಕಿ ಹರಿಯುತ್ತಿರುವ ನದಿ ದಡದಲ್ಲಿ ಜೀವನದ ಹಂಗು ತೊರೆದು ಮಹಿಳೆಯರು ಬಟ್ಟೆಗಳನ್ನು ತೊಳೆಯುತ್ತಿದ್ದಾರೆ. ಜೀವನದ ಅವಶ್ಯಕವಾದ ಶೌಚಾಲಯಗಳು ಪ್ರವಾಹದಲ್ಲಿ ಮುಳಗಿರುವ ಹಿನ್ನೆಲೆಯಲ್ಲಿ ಶೌಚಕ್ಕೆ ಕೂಡ ತೊಂದರೆಯಾಗುತ್ತಿದೆ.
ತಾಲೂಕಿನ ಆಲಗೂರ ಗ್ರಾಮದ ಹತ್ತಿರ ನಿರ್ಮಿಸಿರುವ ತಾತ್ಕಾಲಿಕ ಶೆಡ್‌ಗಳಲ್ಲಿ ತಾಲೂಕಾಡಳಿತ ಸಂಚಾರಿ ಶೌಚಾಲಯ ವ್ಯವಸ್ಥೆ ಮಾಡಲಾಗಿದ್ದು, ಉಳಿದ ಗ್ರಾಮೀಣ ಮಹಿಳೆಯರ ಲಭ್ಯವಾಗುತ್ತಿಲ್ಲ. ಮತಕ್ಷೇತ್ರದ ಗ್ರಾಮೀಣ ಭಾಗದಲ್ಲಿ ಅಂದಾಜು 40 ಸಾವಿರ ಮಹಿಳೆಯರಿಗೆ ಶೌಚಾಲಯದ ಸಮಸ್ಯೆ ಎದುರಾಗಿದೆ.
ನದಿಗೆ ಪ್ರವಾಹ ದಿನದಿಂದ ಏರುತ್ತಿದ್ದರೂ ಗ್ರಾಮಸ್ಥರು ಮನೆಗಳನ್ನು ತೊರೆಯುತ್ತಿಲ್ಲ. ಮನೆ ಬಾಗಿಲಕ್ಕೆ ನೀರು ಬಂದಾಗ ಎಚ್ಚೆತ್ತುಗೊಳ್ಳುವ ಜನರನ್ನು ತಾಲೂಕಾಡಳಿತ ಸುರಕ್ಷಿತ ಸ್ಥಳಗಳಿಗೆ ಕಳುಹಿಸಿಕೊಡುತ್ತಿದ್ದು, ಜಾನುವಾರುಗಳನ್ನು ರಕ್ಷಣೆ ಮಾಡಲಾಗುತ್ತಿದೆ. ತಾಲೂಕಿನಲ್ಲಿ 27 ಗ್ರಾಮಗಳಲ್ಲಿ ಅಂದಾಜು ಐದು ಸಾವಿರಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿದ್ದು, 12 ಸಾವಿರಕ್ಕೂ ಹೆಚ್ಚು ಜಾನುವಾರಗಳನ್ನು ಸ್ಥಳಾಂತರಿಸಲಾಗಿದೆ. ಕಳೆದ ಐದು ದಿನಗಳಿಂದ ಶಾಲಾ ಕಾಲೇಜು ರಜೆ ನೀಡಲಾಗಿದೆ.
ಬಾಡಿಗೆ ಮನೆಯಿಲ್ಲ: ತಾಲೂಕಿನಲ್ಲಿ ಕೃಷ್ಣಾನದಿ ಅಬ್ಬರಕ್ಕೆ 27 ಗ್ರಾಮಗಳಿಗೆ ಪ್ರವಾಹ ಭೀತಿ ಎದುರಾಗಿದ್ದು, ಗ್ರಾಮದಲ್ಲಿ ವಾಸಿಸುವ ಮನೆ ಗಳನ್ನು ಬಿಟ್ಟು ಜಮಖಂಡಿ ನಗರದಲ್ಲಿ ಬಾಡಿಗೆ ಪಡೆಯಲು ಹೋದರೆ ಮನೆಗಳು ಸಿಗುತ್ತಿಲ್ಲ. ಪ್ರವಾಹ ಪರಿಸ್ಥಿತಿಯಿಂದ ಜನರು ಆಸರೆಗೆ ಬಾಡಿಗೆ ಮನೆಗಳು ಲಭ್ಯವಾಗುತ್ತಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bagalakote: ಅನರ್ಹರ ಬಿಪಿಎಲ್ ಕಾರ್ಡ್ ಗಳು ಮಾತ್ರ ರದ್ದು: ಸಿಎಂ ಸಿದ್ದರಾಮಯ್ಯ
ಕಾಡಂಚಿನ ರೈತರ ಅರಣ್ಯರೋದನ; ಬೇರೆಯವರ ಜಮೀನಿನಲ್ಲಿ ದುಡಿಯಬೇಕಾದ ಸ್ಥಿತಿ
ಕೇವಲ 12 ರೂ.ಗೆ ಬಿಸಿ ಜುನುಕಾ ರೊಟ್ಟಿ ಊಟ:!ಶಿಕ್ಷಕ ಬಸವರಾಜ ಜಾಲೋಜಿ ನಿಸ್ವಾರ್ಥ ಸೇವೆ
ಲೋಕಾಪುರ: ಬಿಡಾಡಿ ದನಗಳ ಕಾಟಕ್ಕೆ ಜನ ಹೈರಾಣ
Mahalingpur: 2020ರ ಪುರಸಭೆ ಗಲಾಟೆ ಪ್ರಕರಣ: ಮರು ತನಿಖೆಗೆ ಕೋರ್ಟ್ ಆದೇಶ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.