ಕಲಾದಗಿಯಲ್ಲಿ ಗಾಳಿಗೆ ಹಾರಿ ಹೋದ ಮೇಲ್ಛಾವಣಿ
Team Udayavani, May 23, 2019, 7:35 AM IST
ಕಲಾದಗಿ: ಹಿರೇಶೆಲ್ಲಿಕೇರಿಯಲ್ಲಿ ಬಿರುಗಾಳಿಗೆ ಮನೆಯ ಮೇಲ್ಚಾವಣಿಗೆ ಹಾರಿ ಹೋಗಿದೆ.
ಕಲಾದಗಿ: ಮಂಗಳವಾರ ಸಂಜೆ ಬೀಸಿದ ಬಿರುಗಾಳಿಗೆ ಕಲಾದಗಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮನೆ ಮೇಲ್ಚಾವಣಿ ಹಾರಿ ಹೋಗಿವೆ.
ಹಿರೇಶೆಲ್ಲಿಕೇರಿಯ ದುಂಡಪ್ಪ ಹನಮಪ್ಪ ಮಾದರ ಎಂಬುವರ ಮನೆಯ ಮೇಲ್ಚಾವಣಿಯ 9 ತಗಡುಗಳು ಹಾರಿ ಹೋಗಿವೆ. ಈ ಸಂದರ್ಭ ದೊಡ್ಡ ಪ್ರಮಾಣದ ಕಲ್ಲುಗಳು ಮನೆಯ ಒಳಗಡೆ ಬಿದ್ದ ಪರಿಣಾಮ ಟಿವಿ, ಬಾಂಡೆ ಸಾಮಗ್ರಿಗಳಿಗೆ ಹಾನಿಯಾಗಿದೆ. ಮನೆಯಲ್ಲಿನ 15 ಚೀಲ ಜೋಳ, 3 ಚೀಲ ಗೋದಿ, 4 ಚೀಲ ತುಂಬಿಟ್ಟ ಸಜ್ಜೆ ಕಾಳುಗಳು ಮಳೆಗೆ ನೆನೆದು ಹಾನಿಯಾಗಿವೆ, ಗಾಳಿಗೆ ಏಕಾಏಕಿ ಕುಂಬಿ ಸಮೇತ ತಗಡುಗಳು ಹಾರಿ ಹೋಗಿವೆ. ಯಾವುದೇ ಪ್ರಣಾಪಾಯ ಸಂಭವಿಸಿಲ್ಲ. ಗ್ರಾಮಲೆಕ್ಕಾಧಿಕಾರಿ ಎ.ವಿ. ಸೂರ್ಯವಂಶಿ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು.
ತುಳಿಸಿಗೇರಿಯಲ್ಲಿ ಅಲ್ಲಲ್ಲಿ ಅಂಗಡಿಗಳ ಮುಂದಿನ ತಗಡುಗಳು ಹಾರಿ ಹೋಗಿವೆ, ಬೇವಿನ ಮರದ ರೆಂಬೆ ಕೊಂಬೆಗಳು ಮುರಿದು ಬಿದ್ದಿವೆ. ಹೊಲ ಗದ್ದೆಗಳಲ್ಲಿನ 15ಕ್ಕೂ ಅಧಿಕ ಗಿಡ ಮರಗಳು ಬಿದ್ದಿವೆ, ವೆಂಕಣ್ಣ ಹೊಸಕೋಟಿ, ಗೋಪಾಲ ದೊಡ್ಡಮನಿ ಇವರ ಅಂಗಡಿ ಮುಂದಿನ ತಗಡುಗಳು ಹಾರಿ ಹೋಗಿವೆ.
5 ಕುರಿ ಸಾವು: ಸೀಮಿಕೇರಿ ಗ್ರಾಮದ ತಿಪ್ಪಣ್ಣ ಹನಮಂತ ಬಂಟನೂರು ಅವರ ಮೂರು ದೊಡ್ಡ ಕುರಿಗಳು, ಎರಡು ಸಣ್ಣ ಕುರಿಗಳು ಆಲಿಕಲ್ಲು ಮಳೆಗೆ ಮೃತಪಟ್ಟಿವೆ. ಗ್ರಾಮದ ಹೊರವಲಯದ ಹೊಲದಲ್ಲಿನ ಕುರಿ ದಡ್ಡಿಯಲ್ಲಿ ಮೃತಪಟ್ಟಿದೆ. ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಆನ್‌ಲೈನ್ ಗೇಮ್‌ನಲ್ಲಿ ವಂಚಕರ ಪರಿಚಯ; ಜಾಲ ಸೇರಿದ್ದ ಯುವಕ
Mangaluru: ಸಾಲಗಾರನ ಆತ್ಮಹ*ತ್ಯೆಗೆ ಪ್ರಚೋದನೆ ಆರೋಪ: ಎಂಸಿಸಿ ಬ್ಯಾಂಕ್ ಅಧ್ಯಕ್ಷನ ಬಂಧನ
Over Remarks: ʼಸಿದ್ದರಾಮೋತ್ಸವʼ ಮಾಡಿಸುವ ನೀವು ‘ಅಂಬೇಡ್ಕರ್ ಉತ್ಸವ’ ಮಾಡಲ್ಲ: ಬಿಜೆಪಿ
Mumbai Coast: ಗೇಟ್‌ವೇ ಆಫ್ ಇಂಡಿಯಾ ಬಳಿ ದೋಣಿ ದುರಂತ: 13 ಮಂದಿ ದುರ್ಮರಣ!
Daily Horoscope: ಸಕಾರಾತ್ಮಕ ಚಿಂತನೆಯಿಂದ ಯಶಸ್ಸು, ಪ್ರತಿಭೆ ವೃದ್ಧಿಗೆ ಅವಕಾಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.