ಕಥೆಗಾರನಿಗೆ ಲೋಕಾನುಭವ ಅರಿವು ಅಗತ್ಯ
Team Udayavani, May 23, 2020, 7:56 AM IST
ಶಿರೂರ: ಕಳೆದ ನಾಲ್ಕು ವಾರಗಳಿಂದ ಗ್ರಾಮದ ಗ್ರಾಮೀಣ ಕಲೆ ಹಾಗೂ ಸಾಹಿತ್ಯ ವೇದಿಕೆ ಕೋವಿಡ್ ಲಾಕ್‌ಡೌನ್ ಆದ ಸಮಯದಲ್ಲಿ ವಿಶೇಷ ಸಾಹಿತ್ಯ ಓದು ಅಭಿಯಾನ ಹಮ್ಮಿಕೊಂಡು ಬರುತ್ತಿದೆ.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶ್ರೀಶೈಲ ಕರಿಶಂಕರಿ, ಇಂದು ಕಥೆಗಾರನಿಗೆ ಲೋಕಾನುಭವ ಸ್ಥಳೀಯತೆಯ ಅರಿವು ಬಹಳ ಮುಖ್ಯ. ಅದು ಇದ್ದಾಗಲೇ ಕಥೆಗಳು ಸಶಕ್ತವಾಗಿ ಬರಲು ಸಾಧ್ಯ ಎಂದರು. ಗ್ರಾಮದ ಕಥೆಗಾರ ಲಕ್ಷ್ಮಣ ಬಾದಾಮಿ ಅವರ ಒಂದು ಚಿಟಿಕೆಯ ಮಣ್ಣು ಕಥೆಯನ್ನು ಸಾಹಿತ್ಯ ವೇದಿಕೆಯ ಸದಸ್ಯ ಕಲ್ಲಪ್ಪ ಭಗವತಿ ಓದಿದರು. ನಂತರ ಕಥೆಯ ಕುರಿತು ಚರ್ಚೆ ನಡೆಯಿತು.
ದಿನದಿನಕ್ಕೆ ಮನುಷ್ಯ ಅನ್ನ ಬೆಳೆಯುವ ಭೂಮಿಯನ್ನು ಕಬಳಿಸುತ್ತಿರುವುದನ್ನು ಕಂಡು ನನ್ನಲ್ಲಿ ಉಂಟಾದ ನೋವು ಆತಂಕಗಳೇ “ಒಂದು ಚಿಟಿಕೆಯ ಮಣ್ಣು’ ಕಥೆಯಾಗಿದೆ ಎಂದು ಕಥೆಗಾರ ಲಕ್ಷ್ಮಣ ಬಾದಾಮಿ ಹೇಳಿದರು. ವೇದಿಕೆ ಅಧ್ಯಕ್ಷ ಶಂಕರ ಹೂಗಾರ, ಉಪಾಧ್ಯಕ್ಷ ಎನ್.ಪಿ. ಮೆಣಸಗಿ, ಮಲ್ಲು ಬೂದಿಹಾಳ, ಮತ್ತು ಕಾಚಿಟ್ಟಿ, ಕೆ.ಎಂ. ಭಗವತಿ, ಎಂ.ಎಸ್. ಕಲಗುಡಿ, ಎಸ್.ಬಿ. ನಡುವಿನಮನಿ, ಸುಭಾ ಹುಲ್ಯಾಳ, ಎಸ್.ಆರ್. ಜಡ್ರಾಮಕುಂಟಿ, ನಾಗೇಶ ಮಂಗಳೂರ, ಶ್ರೀಶೈಲ ಹೊಸೂರ, ಸಿದ್ದಪ್ಪ ಹಳ್ಳೂರ, ಸಿದ್ದರಾಜ ಹಳೇಮನಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap; ಬಸ್ ಢಿಕ್ಕಿ: ರಸ್ತೆ ದಾಟುತ್ತಿದ್ದ ವ್ಯಕ್ತಿ ಮೃತ್ಯು
Congress: ಡಿನ್ನರ್ ಪಾರ್ಟಿ ಮಾಡಿದರೆ ತಪ್ಪೇನಿಲ್ಲ?: ಸಚಿವ ಜಾರ್ಜ್
BJP ನನ್ನನ್ನು ತುಳಿದಿದೆ ಎನ್ನುವುದು ತಪ್ಪು: ಈಶ್ವರಪ್ಪ
Mudhol: ಮಧ್ಯರಾತ್ರಿ ನಡುರಸ್ತೆಯಲ್ಲಿ ಕಬ್ಬು ತುಂಬಿದ ಟ್ರೇಲರ್ ಪಲ್ಟಿ
Political Gap: ನಾನು ರಾಜಕೀಯದಿಂದ ಸ್ವಿಚ್ಡ್ ಆಫ್ ಆಗಿದ್ದೇನೆ: ಸ್ಪೀಕರ್ ಯು.ಟಿ. ಖಾದರ್
MUST WATCH
ಹೊಸ ಸೇರ್ಪಡೆ
Shimoga: ಜಮೀನಿನ ವಿದ್ಯುತ್ ಪರಿವರ್ತಕ ವಿಚಾರದ ಗಲಾಟೆ ಕೊಲೆಯಲ್ಲಿ ಅಂತ್ಯ; ಆರೋಪಿಗಳ ಬಂಧನ
Los Angeles: ಮತ್ತೊಂದು ಕಾಡ್ಗಿಚ್ಚು; 30 ಸಾವಿರಕ್ಕೂ ಹೆಚ್ಚು ಜನರ ಸ್ಥಳಾಂತರ
Threat Mail: ಹಾಸ್ಯ ನಟ ಕಪಿಲ್ ಶರ್ಮಾ ಸೇರಿದಂತೆ ನಾಲ್ವರು ಸೆಲೆಬ್ರಿಟಿಗಳಿಗೆ ಜೀವ ಬೆದರಿಕೆ
Karkala: ಸಾಣೂರಿನಲ್ಲಿ ಟೆಂಪೊಗೆ ಸರಕಾರಿ ಬಸ್ ಢಿಕ್ಕಿ, 10ಕ್ಕೂ ಅಧಿಕ ಮಂದಿಗೆ ಗಾಯ
Donald Trump: ಚೀನಾ ಆಮದು ಮೇಲೆ ಶೇ.10 ಸುಂಕ… ನೂತನ ಅಧ್ಯಕ್ಷ ಟ್ರಂಪ್