ಶುದ್ಧ ಕುಡಿಯುವ ನೀರಿಗಾಗಿ ಪರದಾಟ
ನಿರ್ವಹಣೆಯಿಲ್ಲದೇ ನಾಲ್ಕು ಘಟಕಗಳು ಸ್ಥಗಿತ
Team Udayavani, May 30, 2020, 11:04 AM IST
ಬೀಳಗಿ: ನಿರ್ವಹಣೆಯಿಲ್ಲದೆ ಪಟ್ಟಣದ ವಿವಿಧ ಬಡಾವಣೆಗಳಲ್ಲಿನ ಶುದ್ಧ ಕುಡಿಯುವ ನೀರಿನ ಘಟಕಗಳು ಹಲವು ತಿಂಗಳಿಂದ ಸ್ಥಗಿತಗೊಂಡಿವೆ. ಈ ಕುರಿತು ಪಪಂ ದಿವ್ಯ ನಿರ್ಲಕ್ಷ್ಯ ಧೋರಣೆ ತಾಳಿರುವ ಪರಿಣಾಮ, ಬಿರು ಬೇಸಿಗೆ ಹಾಗೂ ಕೊರೊನಾ ಭೀತಿಯ ನಡುವೆ ಸಾರ್ವಜನಿಕರು ಶುದ್ಧ ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ.
ಏಳರಲ್ಲಿ ಮೂರು ಸುಸ್ಥಿತಿಯಲ್ಲಿ: ಸದೃಢ ಆರೋಗ್ಯಕ್ಕೆ ಶುದ್ಧ ನೀರು ಪ್ರಮುಖ ಕಾರಣ ಎನ್ನುವ ಸದಾಶಯದಿಂದ ಲಕ್ಷಾಂತರ ವೆಚ್ಚ ಮಾಡಿ ಮಾಜಿ ಶಾಸಕ ಜೆ.ಟಿ.ಪಾಟೀಲರ ಅವಧಿಯಲ್ಲಿ ಪಟ್ಟಣದಲ್ಲಿ ನಿರ್ಮಾಣಗೊಂಡ ಏಳು ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಆರೇಳು ವರ್ಷ ಗತಿಸಿದೆ. ಆದರೆ, ಯಾವುದೇ ಭಾಗದ ಘಟಕಗಳೂ ನಿರಂತರ ಸೇವೆ ನೀಡುತ್ತಿಲ್ಲ. ಇಂತಹ ಬೇಜವಾಬ್ದಾರಿ ಸ್ಥಿತಿಗೆ ಜನ ರೋಸಿ ಹೋಗಿದ್ದಾರೆ. ಸದ್ಯ, ಪಟ್ಟಣದ ಏಳು ಘಟಕಗಳ ಪೈಕಿ ನಗರದ ಗಾಂಧಿ ವೃತ್ತ, ಡಾ|ಅಂಬೇಡ್ಕರ್ ನಗರ ಹಾಗೂ ಶಿವಾಜಿ ವೃತ್ತದ ಹತ್ತಿರ ಮೂರು ಘಟಕಗಳು ಮಾತ್ರ ಸುಸ್ಥಿತಿಯಲ್ಲಿವೆ. ಪರಿಣಾಮ, 20 ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಪಟ್ಟಣದಲ್ಲಿ ಶುದ್ಧ ಕುಡಿಯುವ ನೀರಿಗಾಗಿ ಓಣಿಯಿಂದ, ಓಣಿಗೆ ಅಲೆಯುವಂತಾಗಿದೆ.
ರಿಪೇರಿ ಕಾಣದ ಘಟಕಗಳು: ಪಟ್ಟಣದ ಜನತಾ ಪ್ಲಾಟ್, ಕಿಲ್ಲಾಗಲ್ಲಿ, ರೇಣುಕಾ ನಗರ (ಜೈನ್ ಮಂದಿರ ಹತ್ತಿರ) ಹಾಗೂ ಪಪಂ ಮೂಗಿನ ನೇರಕ್ಕೆ ಇರುವ ಡಾ|ಅಂಬೇಡ್ಕರ್ ವೃತ್ತದ ಘಟಕಗಳು ಸ್ಥಗಿತಗೊಂಡಿವೆ. ಇದರಲ್ಲಿ ಕೆಲ ಘಟಕಗಳು 60 ರಿಂದ 80 ಸಾವಿರದವರೆಗೆ ರಿಪೇರಿ ಖರ್ಚಿಗಾಗಿ ಕಾಯ್ದು ಕುಳಿತಿವೆ. ಹಲವು ತಿಂಗಳಿಂದ ನಿರ್ವಹಣೆಯಿಲ್ಲದೆ ಘಟಕಗಳು ತುಕ್ಕು ಹಿಡಿಯುತ್ತಿವೆ. ಸಾರ್ವಜನಿಕರ ಮೂಲಭೂತ ಸೌಕರ್ಯಗಳಲ್ಲಿ ಮೊದಲ ಆದ್ಯತೆಗೆ ಅರ್ಹವಾಗಿರುವ ಕುಡಿಯುವ ನೀರಿನ ಕುರಿತು ಪಪಂ ನಿರ್ಲಕ್ಷ್ಯ ಧೋರಣೆ ತಾಳಿರುವುದು ನಗರ ನಿವಾಸಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಪಪಂ ಅಧಿಕಾರಿಗಳಿಗೆ ಹಾಗೂ ಶಾಸಕರಾದಿಯಾಗಿ ಎಲ್ಲ ಜನಪ್ರತಿನಿಧಿಗಳಿಗೆ ಮನವಿ ಮಾಡಿಕೊಂಡಿರುವುದು ಬೇಸಿಗೆಯ ಪ್ರಖರತೆಗೆ ಆವಿಯಾದ ನೀರಿನಂತಾಗಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಸ್ಥಳೀಯ ನಾಗರಿಕರು, ಕೂಡಲೆ ಘಟಕಗಳ ಆರಂಭಕ್ಕೆ ಪಪಂ ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.
ಶುದ್ಧ ಕುಡಿಯುವ ನೀರಿನ ಘಟಕಗಳ ಉತ್ತಮ ನಿರ್ವಹಣೆ ಮಾಡದ ಪಪಂ ಇಲಾಖೆಯವರು ಕುಂಟುನೆಪ ಹೇಳುತ್ತಾರೆ. ಸಾರ್ವಜನಿಕರು ತೊಂದರೆ ಪಡುವಂತಾಗಿದೆ. ಈ ಕುರಿತು ಎಂಎಲ್‌ಎ, ಎಂಎಲ್‌ಸಿಗಳಿಗೆ, ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿರುವುದೆಲ್ಲ ವ್ಯರ್ಥವಾಗಿದೆ. ಘಟಕಗಳಿಗೆ ಕಾಯಂ ಕೀಲಿಯನ್ನಾದರು ಜಡಿಯಲಿ. –ಮುದ್ದುರಾವ್ ಸೊನ್ನ, ನಗರ ನಿವಾಸಿ
ಎರಡು ರೂಪಾಯಿಗೆ 20 ಲೀಟರ್ ನೀರು ಕೊಡುತ್ತೇವೆ. ನಿರ್ವಹಣಾ ವೆಚ್ಚ ಹಾಗೂ ವಿದ್ಯುತ್ ಬಿಲ್ ಕೂಡ ಭರಣಾ ಮಾಡಲು ಆಗುತ್ತಿಲ್ಲ. ನಿರ್ವಹಣೆ ಮಾಡಲು ಯಾರೂ ಮುಂದೆ ಬರುತ್ತಿಲ್ಲ. ಆದರೂ ಘಟಕಗಳನ್ನು ಕೂಡಲೆ ಆರಂಭಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು. – ದೇವೀಂದ್ರ ಧನಪಾಲ, ಮುಖ್ಯಾಧಿಕಾರಿಗಳು ಪಪಂ, ಬೀಳಗಿ
-ರವೀಂದ್ರ ಕಣವಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
India: ಒಂದು ದೇಶ ಒಂದು ಚುನಾವಣೆ ಜಾರಿ ಆಗಲಿ: ಪೇಜಾವರ ಸ್ವಾಮೀಜಿ
Rabkavi Banahatti: ಲೋಕ ಅದಾಲತ್ ನಲ್ಲಿ ಒಂದಾದ ದಂಪತಿಗಳು
ವಿಳಾಸ ಕೇಳುವ ನೆಪದಲ್ಲಿ ವ್ಯಕ್ತಿಯ ಕೊರಳಲ್ಲಿದ್ದ ಚಿನ್ನದ ಚೈನ್ ಕದ್ದ ಅಪರಿಚಿತ ವ್ಯಕ್ತಿ
Mudhol: ಬಸ್ ಗೆ ಡಿಕ್ಕಿ ಹೊಡೆದ ಬೈಕ್… ಸವಾರರಿಗೆ ಗಂಭೀರ ಗಾಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ
Padubidri: ಕೆಎಸ್‌ಆರ್‌ಟಿಸಿ ಬಸ್ಸು ಢಿಕ್ಕಿ; ಪಾದಚಾರಿ ಸಾವು
Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು
Surathkal: ಅಡುಗೆ ಅನಿಲ ಸೋರಿಕೆ ಪ್ರಕರಣ; ಸುಧಾರಿಸದ ಗಾಯಾಳುಗಳ ಆರೋಗ್ಯ
Mangaluru; ನೇತ್ರಾವತಿ ಸೇತುವೆ ದುರಸ್ತಿ ಆರಂಭ: ಸಂಚಾರ ಸಲಹೆ ನೀಡಿದ ಪೊಲೀಸರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.