ಕಾರ್ಮಿಕನ ಮಗನಿಗೆ 14 ಚಿನ್ನ
Team Udayavani, Mar 25, 2018, 6:40 AM IST
ಬಾಗಲಕೋಟೆ: ತಂದೆ, ತಾಯಿ ಕೂಲಿ ಕಾರ್ಮಿಕರು. ಮಗನಿಗೆ ಉನ್ನತ ಶಿಕ್ಷಣ ಕಲಿಸುವ ಆಸೆ ಇದ್ದರೂ ಆರ್ಥಿಕ ಸಮಸ್ಯೆ. ಆಗ ಆ ಪ್ರತಿಭಾವಂತನ ಕೈ ಹಿಡಿದವರು ಅತ್ತೆ, ಮಾವ. ಅವರ ಆಶ್ರಯದಲ್ಲೇ ಬೆಳೆದ ಆ ಹುಡುಗನಿಗೆ ಈಗ ಬರೋಬ್ಬರಿ 14 ಚಿನ್ನದ ಪದಕ ಪಡೆದ ಖುಷಿ.
ಆ ಪ್ರತಿಭಾವಂತ ವಿದ್ಯಾರ್ಥಿ ಹೆಸರು ರವಿಕಿರಣ ಎ.ಆರ್. ಈತನ ಮೂಲ ರಾಮನಗರ ಜಿಲ್ಲೆಯ ಅದೂರು. ತಂದೆ ರಾಜಣ್ಣ, ತಾಯಿ ಗಂಗಮ್ಮ ಅವರೊಂದಿಗೆ ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲೂಕಿನ ಕಚನಾಯಕನಹಳ್ಳಿಯಲ್ಲಿ ವಾಸವಾಗಿದ್ದಾರೆ.
ಅಲ್ಲಿಯೇ ಎಂಟಿಆರ್ ಕಂಪನಿಯಲ್ಲಿ ಕೂಲಿ ಕಾರ್ಮಿಕರಾಗಿ ತಂದೆ, ತಾಯಿ ಕೆಲಸ ಮಾಡಿಕೊಂಡಿದ್ದಾರೆ. ರವಿಕಿರಣಗೆ ರಾಧಮ್ಮ ಎಂಬ ಸಹೋದರಿ ಇದ್ದು, ಅವಳು ಲ್ಯಾಬ್ ಟೆಕ್ನಿಶಿಯನ್ ಆಗಿ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾಳೆ.
ರವಿಕಿರಣ ಅವರು ಬೆಂಗಳೂರು ಹೆಬ್ಬಗೋಡಿಯ ಸೆಂಟ್ ಮೇರಿಸ್ ಇಂಗ್ಲಿಷ್ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಪೂರ್ಣಗೊಳಿಸಿ, ಚಂದಾಪುರದ ಸ್ವಾಮಿ ವಿವೇಕಾನಂದ ಗ್ರಾಮೀಣ ಪಿಯು ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣ ಪಡೆದಿದ್ದಾರೆ. ದ್ವಿತೀಯ ಪಿಯು ಬಳಿಕ ವೈದ್ಯರಾಗಬೇಕೆಂಬ ಆಸೆ ಇತ್ತಾದರೂ, ಸರ್ಕಾರಿ ಕೋಟಾದಡಿ ಸೀಟು ಸಿಗಲಿಲ್ಲ. ಬಳಿಕ, ಬಿಎಸ್ಸಿಗೆ (ತೋಟಗಾರಿಕೆ) ಸೇರಿದರು. ಈಗ ಅವರಿಗೆ 14 ಚಿನ್ನದ ಪದಕ ಬಂದಿದೆ. ಸದ್ಯ ರವಿಕಿರಣ,ಬೆಂಗಳೂರಿನ ಜಿಕೆವಿಕೆಯಲ್ಲಿ ಎಂಎಸ್ಸಿ ವಂಶವಾಯಿ ವಿಜ್ಞಾನ (ಜನಟಿಕ್ ಸೈನ್ಸ್)ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದು, ಮುಂದೆ ಕೃಷಿ ಸಂಶೋಧಕರಾಗಿ, ರೈತ ಮಿತ್ರನಾಗಬೇಕೆಂಬ ಗುರಿ ಹೊಂದಿದ್ದಾರೆ.
ತೋಟಗಾರಿಕೆ ವಿವಿ ಘಟಿಕೋತ್ಸವ
ಬಾಗಲಕೋಟೆ: ರಾಜ್ಯದ 23 ಜಿಲ್ಲೆಯ ವ್ಯಾಪ್ತಿ ಹೊಂದಿರುವ ದೇಶದ 2ನೇ ಅತಿ ದೊಡ್ಡ ತೋಟಗಾರಿಕೆ ವಿವಿ ಎಂಬ ಖ್ಯಾತಿ
ಪಡೆದ ಇಲ್ಲಿನ ತೋಟಗಾರಿಕೆ ವಿಜ್ಞಾನಗಳ ವಿಶ್ವ ವಿದ್ಯಾಲಯದ 7ನೇ ಘಟಿಕೋತ್ಸವ ಶನಿವಾರ ನಡೆಯಿತು. ಘಟಿಕೋತ್ಸವದಲ್ಲಿ
22 ಜನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ 55 ಚಿನ್ನದ ಪದಕ ನೀಡಲಾಯಿತು.
ತೋಟಗಾರಿಕೆ ವಿವಿಯ ಸಹ ಕುಲಾಧಿಪತಿಯೂ ಆಗಿರುವ ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರು ಪದವಿ ಪ್ರದಾನ ಮಾಡಿದರು. ನವ ದೆಹಲಿಯ ಭಾರತೀಯ ಕೃಷಿ ಅನು ಸಂಧಾನ ಪರಿಷತ್ ಮತ್ತು ಕೃಷಿ ವಿಜ್ಞಾನಿಗಳ ನೇಮಕಾತಿ ಮಂಡಳಿಯ ಮಾಜಿ ಅಧ್ಯಕ್ಷ ಡಾ|ಸಿ.ಡಿ. ಮಾಯಿ, ಘಟಿಕೋತ್ಸವ ಭಾಷಣ ಮಾಡಿದರು. ವಿವಿಯ ಕುಲಪತಿ ಡಾ|ಡಿ.ಎಲ್. ಮಹೇಶ್ವರ ಅವರು ವಿವಿಯ ಪ್ರಗತಿ ವರದಿ ವಾಚಿಸಿದರು.
ವೈದ್ಯರ ಮಗಳಿಗೆ 7 ಚಿನ್ನದ ಪದಕ: ಸ್ವಂತ ಭೂಮಿ ಇಲ್ಲ. ಕೃಷಿ, ತೋಟಗಾರಿಕೆ ಅಂದ್ರೆ ಗೊತ್ತೂ ಇಲ್ಲ. ಆದರೂ, ಸತತ ಅಧ್ಯಯನ, ಪ್ರಾಯೋಗಿಕ ತೋಟಗಾರಿಕೆ ಮೂಲಕ ತೋಟಗಾರಿಕೆ ಎಂಎಸ್ಸಿಯಲ್ಲಿ 7 ಚಿನ್ನದ ಪದಕ ಪಡೆದ ಸಂಭ್ರಮ. ಜಾರ್ಖಂಡ್‌ನ ಹಾಜಾರಿಬಾಗ್ ಜಿಲ್ಲೆಯ ಬಾಹ್ರಿ ಗ್ರಾಮದ ನುಸ್ರತ್ ಪರ್ವೀಣ ತಂದೆ ನಿಜಾಮುದ್ದೀನ್ ವೈದ್ಯರು. ತಾಯಿ ಶಕೀಲಾ ಖಾತೂನ್ ಗೃಹಿಣಿ. ತಂದೆ, ತನ್ನಂತೆಯೇ ನೀನೂ ವೈದ್ಯಳಾಗು ಎಂದರು. ಆದರೆ, ನುಸ್ರತ್ ಪರ್ವೀಣಗೆ ಕೃಷಿ ಮತ್ತು ತೋಟಗಾರಿಕೆ ಅಂದ್ರೆ ಅಚ್ಚು ಮೆಚ್ಚು. ಹೀಗಾಗಿ, ಬಾಗಲ ಕೋಟೆಯ ತೋಟಗಾರಿಕೆ ವಿವಿಯಲ್ಲಿ ಎಂಎಸ್ಸಿ (ಹಣ್ಣು ವಿಜ್ಞಾನ) ಮಾಡಿ, ಈಗ ಇಡೀ ವಿವಿಗೆ ಎಂಎಸ್ಸಿಯಲ್ಲಿ ಮೊದಲ ರ್‍ಯಾಂಕ್ ಪಡೆದು, 7 ಚಿನ್ನದ ಪದಕ ಪಡೆದಿದ್ದಾಳೆ. ಸದ್ಯ ಹೆಸರುಘಟ್ಟ ಕೃಷಿ ಸಂಶೋಧನೆಯಲ್ಲಿ ಪಿಎಚ್.ಡಿ ಅಧ್ಯಯನ ಮಾಡುತ್ತಿದ್ದು, ಬಳಿಕ ತೋಟಗಾರಿಕೆ ಕೃಷಿ ವಿಜ್ಞಾನಿಯಾಗಿ ಕೆಲಸ ಮಾಡುವ ಬಯಕೆಯಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ
BJP; ಬಣ ರಾಜಕೀಯ ತಪ್ಪಿಸಲು ತೃತೀಯ ಬಣ ಸಭೆ?
English ತರಬೇತಿ ಮಾಧ್ಯಮವಷ್ಟೇ ಆಗಲಿ: ಗೊ.ರು.ಚನ್ನಬಸಪ್ಪ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ
Puttur: ತೆಂಕಿಲದಲ್ಲಿ ರಿಕ್ಷಾ ಅಪಘಾತ: ಚಾಲಕ ಸಾವು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.