Bagalkote ಹಳ್ಳಿಯಲ್ಲೊಂದು ಹೈಟೆಕ್ ಮೆಡಿಕಲ್ ಕಾಲೇಜು
ಬಾಡಗಂಡಿಯಲ್ಲಿ 630 ಹಾಸಿಗೆಯ ಅತ್ಯಾಧುನಿಕ ಆಸ್ಪತ್ರೆ ; ನಾಳೆ ಪಾಟೀಲರ 75ನೇ ಜನ್ಮದಿನದಂದೇ ಲೋಕಾರ್ಪಣೆ
Team Udayavani, Jul 30, 2024, 6:15 AM IST
ಬಾಗಲಕೋಟೆ: ವೈದ್ಯಕೀಯ ಅಥವಾ ಎಂಜಿನಿಯರಿಂಗ್ ಕಾಲೇಜುಗಳನ್ನು ನಗರ-ಪಟ್ಟಣಗಳಲ್ಲಿ ಆರಂಭಿಸುವುದು ಸಾಮಾನ್ಯ. ಆದರೆ ಜಿಲ್ಲೆಯ ಪುಟ್ಟ ಹಳ್ಳಿಯೊಂದರಲ್ಲಿ 630 ಹಾಸಿಗೆಯ ಹೈಟೆಕ್ ಆಸ್ಪತ್ರೆಯೊಂದಿಗೆ ವೈದ್ಯಕೀಯ ಕಾಲೇಜು ಆರಂಭಗೊಳ್ಳುತ್ತಿರುವುದು ವಿಶೇಷ.
ಮಾಜಿ ಸಚಿವ, ಸಹಕಾರಿ ಧುರೀಣ ಎಸ್.ಆರ್. ಪಾಟೀಲ್ ತಮ್ಮ ಹುಟ್ಟೂರಿನಲ್ಲಿ ಈ ಬೃಹತ್ ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜು ಆರಂಭಿಸಿ ತಮ್ಮ 75ನೇ ಜನ್ಮದಿನವಾದ ಜು. 31ರಂದು ಲೋಕಾರ್ಪಣೆಗೊಳಿಸುತ್ತಿದ್ದಾರೆ.”ಆರೋಗ್ಯ ಧಾಮ’ ಹೆಸರಿನ ಇಲ್ಲಿ ಆಯುರ್ವೇದ ಕಾಲೇಜು, ಸಿಬಿಎಸ್‌ಇ ಸ್ಕೂಲ್ ಸಹಿತ ಶೈಕ್ಷಣಕ ಸಂಸ್ಥೆಗಳು ಒಂದೇ ಸೂರಿನಡಿ ಇವೆ. ಎಸ್.ಆರ್. ಪಾಟೀಲ ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರ ಕೇಂದ್ರಕ್ಕೆ ರಾಜ್ಯ ಸರಕಾರದ ಶಿಫಾರಸಿನ ಮೇರೆಗೆ ಕೇಂದ್ರ ಸರಕಾರವೂ ಅನುಮತಿ ನೀಡಿದೆ. ವಿಜಯಪುರ-ಬಾಗಲಕೋಟೆ ಅವಳಿ ಜಿಲ್ಲೆಯಲ್ಲಿ ಇದು 4ನೇ ವೈದ್ಯಕೀಯ ಕಾಲೇಜು.
ಇಲ್ಲಿ ಶ್ರೀಮತಿ ಶಾಂತಾದೇವಿ ಸ್ಮರಣಾರ್ಥ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಹಾಗೂ ಬಿಎಸ್ಸಿ ನರ್ಸಿಂಗ್ ಮಹಾವಿದ್ಯಾಲಯ ಕೂಡ ಇದೆ. ವೈದ್ಯಕೀಯ ಶಿಕ್ಷಣ ಹಾಗೂ ಚಿಕಿತ್ಸೆಗಾಗಿ ಈ ಭಾಗದ ಜನಸಾಮಾನ್ಯರು ಬಾಗಲಕೋಟೆ, ವಿಜಯಪುರ, ಮೀರಜ್, ಸೋಲಾಪುರದಂತಹ ನಗರಗಳಿಗೆ ತೆರಳಬೇಕಿತ್ತು. ಆ ಸಮಸ್ಯೆ ಇನ್ನು ಇಲ್ಲ.
100 ಎಂಬಿಬಿಎಸ್ ಸೀಟು
ಒಟ್ಟು 630 ಹಾಸಿಗೆಯ ಆಸ್ಪತ್ರೆ ಹಾಗೂ 100 ಎಂಬಿಬಿಎಸ್ ಸೀಟುಗಳ ಅನುಮತಿ ಪಡೆದಿದ್ದು, ಅಂಗರಚನಾಶಾಸ್ತ್ರ, ಶರೀರಶಾಸ್ತ್ರ, ಜೀವರಸಾಯನಶಾಸ್ತ್ರ, ರೋಗಶಾಸ್ತ್ರ, ಸೂಕ್ಷ್ಮ ಜೀವವಿಜ್ಞಾನ, ಫಾರ್ಮಕಾಲಜಿ, ಫೋರೆನ್ಸಿಕ್ ಮೆಡಿಸಿನ್, ಟಾಕ್ಸಿಕಾಲಜಿ, ಸಮುದಾಯ ಔಷಧ, ಜನರಲ್ ಮೆಡಿಸಿನ್, ಪಿಡಿಯಾಟ್ರಿಕ್ಸ್, ಮನೋವೈದ್ಯಶಾಸ್ತ್ರ, ಡರ್ಮಟಾಲಜಿ, ಸಾಮಾನ್ಯ ಶಸ್ತ್ರಚಿಕಿತ್ಸೆ, ಆಥೋಪೆಡಿಕ್ಸ್, ರೇಡಿಯೋ-ರೋಗ ನಿರ್ಣಯ, ಓಟೋ-ರೈನೋಲಾರಿಂಗೋಲಜಿ, ನೇತ್ರವಿಜ್ಞಾನ, ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ, ಅರಿವಳಿಕೆ ಶಾಸ್ತ್ರ, ದಂತ ವೈದ್ಯಶಾಸ್ತ್ರ, ಇಂಟಿಗ್ರೇಟಿವ್ ಮೆಡಿಕಲ್ ರಿಸರ್ಚ್ ಹೀಗೆ ಒಟ್ಟು 21 ವಿಭಾಗ ಹೊಂದಿದೆ.
204 ಜನ ವೈದ್ಯರಿದ್ದು, 400ಕ್ಕಿಂತ ಹೆಚ್ಚು ಸಿಬಂದಿ ಇದ್ದಾರೆ.
ಸಹಕಾರ, ಶಿಕ್ಷಣ, ಸಾಮಾಜಿಕ, ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದೇನೆ. ಈ ಬಾರಿ ಜನ್ಮದಿನಕ್ಕೆ ಜನರ ಸೇವೆಗಾಗಿ ವೈದ್ಯಕೀಯ ಕಾಲೇಜು ಕಾಣಿಕೆಯಾಗಿ ನೀಡಬೇಕೆಂಬ ಹಂಬಲ ನನ್ನದು. ಜು. 31ರಂದು ನನಗೆ ಜನ್ಮಕೊಟ್ಟ ಬಾಡಗಂಡಿಯಲ್ಲಿ ವೈದ್ಯಕೀಯ ಕಾಲೇಜು ಆರಂಭಗೊಳ್ಳಲಿದೆ.
– ಎಸ್.ಆರ್. ಪಾಟೀಲ, ಮಾಜಿ ಸಚಿವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ
K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
India: ಒಂದು ದೇಶ ಒಂದು ಚುನಾವಣೆ ಜಾರಿ ಆಗಲಿ: ಪೇಜಾವರ ಸ್ವಾಮೀಜಿ
Rabkavi Banahatti: ಲೋಕ ಅದಾಲತ್ ನಲ್ಲಿ ಒಂದಾದ ದಂಪತಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.