ನನ್ನ ಹೊಟ್ಯಾನ ಕಂದನ ಜೀವಾನೂ ಉಳಿಸಿದ್ರು..
Team Udayavani, Aug 20, 2019, 12:04 PM IST
ಗುಳೇದಗುಡ್ಡ: ನಮ್ಮ ಮನಿಮಟಾ ಏನ್ ನೀರ್ ಬರ್ತೈತಿ. ಗರ್ಭಿಣಿ ಹೆಣ್ಮಕ್ಕಳನ್ ಕಟ್ಟಗೊಂಡು ಎಲ್ಲಿಗಿ ಹೋಗೂದಂತ ಅಪ್ಪ ಹೇಳ್ತಿದ್ರು. ಬಾಳ್ ನೀರ್ ಬಂದ್ರ ನೋಡೋಣಂತ ಮನೆಯಲ್ಲೇ ಇದ್ದೇವು. ಆದ್ರ ಒಮ್ಮೇ ಮನಿಮಟಾ ನೀರು ಬಂತು. ಮನ್ಯಾನ್ ಮಂದೆಲ್ಲ ಸಾಮಾನ ಜೋಡಸಾಕ್ ಹತ್ತಿದ್ರು. ಅಷ್ಟೊತ್ತಿಗೆ ನೀರು ಬಾಳ್ ಬಂತು. ಇನ್ನೇನು ನಮ್ಮ ಜೀವಾ ಹೋತು ಅನ್ಕೊಂಡಿದ್ವಿ. ಪೊಲೀಸರು, ಸೈನಿಕರು ಸೇರಿ ಬೋಟ್ನಾಗ್ ಬಂದು ಕಾಪಾಡಿದ್ರು. ನನ್ನ ಜೋಡಿ, ನನ್ನ ಹೊಟ್ಯಾನ್ ಜೀವಾನೂ ಉಳಿಸ್ಯಾರಿ. ಅವರಿಗೆ ನಮ್ಮ ಜೀವನ್ದಾಗ ಮರಿಯುದಿಲ್ರಿ..
ಪ್ರವಾಹದಲ್ಲಿ ಸಿಲುಕಿದ್ದ ಲಾದಯಗುಂದಿಯ ಗರ್ಭಿಣಿ ಮಹಿಳೆ ಅಕ್ಷತಾ ಹಿರೇಮಠ ಹೀಗೆ ಹೇಳಿ ಕಣ್ಣೀರಾದರು. ನೀರು ಬರುತ್ತ ಅಂತಾ ಹೇಳಿದಾಗ ಮನೆಯ ಸಾಮಾನು ಖಾಲಿ ಮಾಡುವ ಅವಸರ. ಅದರ ಜೊತೆಗೆ ಗರ್ಭಿಣಿಯರಾದ ನನ್ನ ಮತ್ತು ನಮ್ಮ ಅಕ್ಕನನ್ನು ರಕ್ಷಿಸುವುದು ನಮ್ಮ ಹೆತ್ತವರಿಗೆ ದೊಡ್ಡ ಚಿಂತೆಯಾಗಿತ್ತು. ಆ ದೇವರ ರೂಪದಲ್ಲಿ ಹಲವರು ಬಂದು ಕಾಪಾಡಿದರು ಎಂದು ಅಕ್ಷತಾ ನೆನೆದರು.
ಹೌದು ಲಾಯದಗುಂದಿಗೆ ಇತಿಹಾಸದಲ್ಲಿಯೇ ಇಷ್ಟು ಪ್ರಮಾಣದಲ್ಲಿ ನೀರು ಬಂದಿರಲಿಲ್ಲ. ಇಡೀ ಗ್ರಾಮವೇ ಇಷ್ಟು ನೀರು ನೋಡಿ ಒಂದು ಕ್ಷಣ ದಂಗಾಗಿ ಹೋಗಿದೆ. ಅಷ್ಟರ ಮಟ್ಟಿಗೆ ಗ್ರಾಮಸ್ಥರ ಜೀವನವನ್ನು ಪ್ರವಾಹ ಅಕ್ಷರಶಃ ನೀರಿನಲ್ಲಿಯೇ ಮುಳುಗಿಸಿದೆ.
ಮುಂದಿನ ಜೀವನವೇ ಕತ್ತಲು: ಪ್ರವಾಹವೇನು ಇಳಿಮುಖವಾಗಿದೆ. ಆದರೆ ಅದರಿಂದಾದ ನಷ್ಟ, ಕಷ್ಟವನ್ನು ಎದುರಿಸಿ, ಹೊಸ ಜೀವನ ಕಟ್ಟಿಕೊಳ್ಳುವುದೇ ಆಸಂಗಿ, ಕಟಗಿನಹಳ್ಳಿ, ಲಾಯದಗುಂದಿ ಗ್ರಾಮಸ್ಥರಿಗೆ ಮುಂದಿರುವ ದೊಡ್ಡ ಸವಾಲಾಗಿದೆ. ಕಷ್ಟಪಟ್ಟು ಬೆಳೆದಿದ್ದ ಬೆಳೆ ನೀರಿನಿಂದ ಆವರಿಸಿ, ಹಾಳಾಗಿದೆ. ಮನೆ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ.
ಒಲೆ ಹತ್ತುತ್ತಿಲ್ಲ: ಪ್ರವಾಹದಿಂದ ನೀರು ಮನೆಯೊಳಗೆ ನುಗ್ಗಿದ್ದರಿಂದ ಮನೆಯಲ್ಲಿ 4-5ಅಡಿಗಳಷ್ಟು ನೀರು ತುಂಬಿತ್ತು. ಆ ಮನೆಗಳಿದ್ದ ನೀರು ಈಗ ಹೋಗಿದೆ. ಆದರೆ, ಮನೆಗಳಲ್ಲಿನ ಒಲೆಗಳು ಉರಿಯುತ್ತಿಲ್ಲ. ಕಟ್ಟಿಗೆ ಇಟ್ಟು ಬೆಂಕಿ ಹಾಕಿದರು ಒಲೆಗೆ ಬೆಂಕಿ ಹತ್ತುತ್ತಿಲ್ಲ. ಅಷ್ಟರಮಟ್ಟಿಗೆ ಮನೆಗಳಲ್ಲಿ ನೀರು ನುಗ್ಗಿ ಜನರ ಜೀವನವನ್ನೇ ನಲುಗಿಸಿಬಿಟ್ಟಿದೆ. ಅವರಿವರು ಕೊಟ್ಟಿದ್ದು ತಿನ್ನುತ್ತ ಪರಿಹಾರ ಕೇಂದ್ರದಲ್ಲಿ ಮಾಡಿದ ಅನ್ನ, ಸಾರು ಊಟ ಮಾಡುತ್ತ ಜೀವನ ಕಳೆಯುತ್ತಿದ್ದಾರೆ. ಮುಂದಿನ ಜೀವನ ನೆನೆದು ಚಿಂತೆಯಲ್ಲಿದ್ದಾರೆ.
ಮನೆಗಳ ಸ್ವಚ್ಛತೆಯೆ ನಿತ್ಯದ ಕೆಲಸ: ಲಾಯದಗುಂದಿ, ಆಸಂಗಿ ಗ್ರಾಮಗಳ ಮನೆಗಳಲ್ಲಿ ನೀರು ಹೊಕ್ಕಿದ್ದರಿಂದ ಕೆಸರು ತುಂಬಿದೆ. ಅದನ್ನು ಕಳೆದ ಮೂರ್‍ನಾಲ್ಕು ದಿನಗಳಿಂದ ಸ್ವಚ್ಛ ಮಾಡುವುದರಲ್ಲಿಯೇ ಜನರು ಹೈರಾಣಾಗಿದ್ದಾರೆ. ಮನೆಗಳ ಸ್ವಚ್ಛತೆ ಕೆಲಸಕ್ಕೆ ಮುಂದಾದ ಗ್ರಾಮಸ್ಥರಿಗೆ ಮನೆಗಳಲ್ಲಿ ಹಾವು ಚೇಳುಗಳ ಸಹ ಕಾಣಿಸಿಕೊಂಡಿವೆ. ಲಾಯದಗುಂದಿ ಗ್ರಾಮದಲ್ಲಂತೂ ಅನೇಕ ಮನೆಗಳು ಬಿದ್ದಿವೆ. ರಾಡಿ ತುಂಬಿದ ಮನೆಯಲ್ಲಿ ಕಾಲಿಡದ ಸ್ಥಿತಿ ನಿರ್ಮಾಣಗೊಂಡಿದೆ. ಆದರೆ, ಮುಂದಿನ ಬದುಕಿಗಾಗಿ ಮನೆಗಳ ಸ್ವಚ್ಛತೆಯಲ್ಲಿ ತೊಡಗಿದ್ದಾರೆ.
ಕುಸಿದ ಗೋಡೆಗಳು: ಲಾಯದಗುಂದಿ, ಅಲ್ಲೂರ, ಆಸಂಗಿ ಗ್ರಾಮಗಳಲ್ಲಿ ಅನೇಕ ಮನೆಗಳ ಸುತ್ತಲು ನೀರು ಆವರಿಸಿದ್ದರಿಂದ ಮನೆಯ ಗೋಡೆಗಳು ಕುಸಿದು ಬಿದ್ದಿವೆ. ಕೆಲವರ ಮನೆಗಳ ಮೇಲ್ಛಾವಣಿಗಳು ಕುಸಿದಿವೆ. ಇದರಿಂದ ಮನೆಗಳನ್ನು ಸ್ವಚ್ಛಗೊಳಿಸದೇ ಹಾಗೇ ಬಿಟ್ಟಿದ್ದಾರೆ. ಸರ್ಕಾರ ಕೊಡುವ ಪರಿಹಾರದಲ್ಲಿ ಮನೆ ಕಟ್ಟಿಕೊಳ್ಳುವ ಚಿಂತನೆಯಲ್ಲಿದ್ದಾರೆ.
ಹಾಳಾದ ಮನೆಯ ವಸ್ತುಗಳು: ನೀರು ಬರುತ್ತದೆ ಎಂಬ ಭಯದಲ್ಲಿ ಮನೆ ಬಿಟ್ಟು ಹೊರಗೆ ಬಂದ ಗ್ರಾಮಸ್ಥರ ಮನೆಗಳಲ್ಲಿ ವಸ್ತುಗಳು ಹಾಳಾಗಿವೆ. ಸಂತ್ರಸ್ತರ ಬದುಕು ನೀರು ಪಾಲಾಗಿದೆ. ಮನೆಯಲ್ಲಿನ ಟಿವಿ, ಟ್ರೇಜುರಿ, ಊರುವಲು ಸಂಗ್ರಹಿಸಿದ್ದ ಕಟ್ಟಿಗೆಗಳು ಸೇರಿದಂತೆ ಮನೆಯಲ್ಲಿನ ಅನೇಕ ವಸ್ತುಗಳು ನೀರಿನಲ್ಲಿ ಹರಿದುಕೊಂಡು ಹೋಗಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kulageri Cross: ಹೂಳು ತುಂಬಿದ ಕಾಲುವೆ…ಪೋಲಾಗುತ್ತಿದೆ ಮಲಪ್ರಭಾ ಎಡದಂಡೆ ಕಾಲುವೆ ನೀರು…
New year : ಬಾಗಲಕೋಟೆ ಜಿಲ್ಲೇಲಿ ಅಭಿವೃದ್ಧಿ ಬಾಗಿಲು ತೆರೆಯಲಿ-ಸ್ಥಳಾಂತರವಾಗಬೇಕಿದೆ ಐಹೊಳೆ!
Rabakavi: ಬ್ರಹ್ಮಾನಂದ ಉತ್ಸವ; ಗಮನ ಸೆಳೆದ ರೊಟ್ಟಿ ಜಾತ್ರೆ
Bagalkot : ಸಕಲ ಸರ್ಕಾರಿ ಗೌರವಗಳೊಂದಿಗೆ ಯೋಧ ಮಹೇಶ್ ಮರೆಗೊಂಡ ಅಂತ್ಯಸಂಸ್ಕಾರ
ಪತ್ನಿ ಊರಿನತ್ತ ಪ್ರಯಾಣ ಬೆಳೆಸಿದರೆ… ಸಾವಿನ ಮನೆಯ ಕದ ತಟ್ಟಿದ ಯೋಧ ನಾಗಪ್ಪ ಮರೆಗೊಂಡ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ
Shivamogga: ಮಾಂಗಲ್ಯ ಸರ ಕಿತ್ತು ಪರಾರಿಯಾದ ಖರ್ತನಾಕ್ ಕಳ್ಳರು; ಸಿಸಿಟಿವಿಯಲ್ಲಿ ಸೆರೆ
Mollywood: ʼಮಾರ್ಕೊʼ ಬಳಿಕ ಮೋಹನ್ ಲಾಲ್ ನಿರ್ದೇಶನದ ʼಬರೋಜ್ʼ ಚಿತ್ರಕ್ಕೂ ಪೈರಸಿ ಕಾಟ
BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್ ಗೆ ಆಹ್ವಾನವಿಲ್ಲ! ದಿಗ್ಗಜನ ಬೇಸರ
Gundlupete: ಅಕ್ರಮವಾಗಿ 3 ಕೆ.ಜಿ. 100 ಗ್ರಾಂ ಗಾಂಜಾ ಸಾಗಣೆ: ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.