ಮಧ್ಯಪ್ರದೇಶಕ್ಕೆ ಅತಂತ್ರ ಕಬ್ಬು ಕಟಾವು ಕಾರ್ಮಿಕರ ರವಾನೆ

ವೇತನ ಕೂಡ ಕೊಡದೇ ಸತಾಯಿಸುತ್ತಿದ್ದ ಗ್ಯಾಂಗ್‌ ಮನ್‌ ತಲೆಮರೆಸಿಕೊಂಡಿದ್ದ.

Team Udayavani, Mar 3, 2022, 6:20 PM IST

ಮಧ್ಯಪ್ರದೇಶಕ್ಕೆ ಅತಂತ್ರ ಕಬ್ಬು ಕಟಾವು ಕಾರ್ಮಿಕರ ರವಾನೆ

ಜಮಖಂಡಿ: ವಿಜಯಪುರದ ಕಬ್ಬು ಕಟಾವು ಗ್ಯಾಂಗ್‌ಮನ್‌ ಅಪನಂಬಿಕೆಗೆ ಒಳಗಾಗಿದ್ದ ಮಧ್ಯಪ್ರದೇಶ ಮೂಲದ 9 ಮಕ್ಕಳು ಸಹಿತ 25 ಕಾರ್ಮಿಕರು ಅತಂತ್ರ ಸ್ಥಿತಿಯಲ್ಲಿ ಸಿಲುಕಿದ್ದು, ಇವರ ರಕ್ಷಣೆಗೆ ಮುಧೋಳ ತಾಲೂಕು ಆಡಳಿತ ಹಾಗೂ ಉಪವಿಭಾಗಾಧಿಕಾರಿ ಮುಂದಾಗಿದ್ದು, ಸಂಕಷ್ಟದಲ್ಲಿದ್ದವರನ್ನು ಮಧ್ಯಪ್ರದೇಶದ ಅವರ ಸ್ವಗ್ರಾಮಕ್ಕೆ ಕಳುಹಿಸಲಾಯಿತು.

ವಿಜಯಪುರದ ಗ್ಯಾಂಗ್‌ಮನ್‌ ರಾಠೊಡ ಎಂಬಾತನೊಂದಿಗೆ ಮಧ್ಯಪ್ರದೇಶದ ಕಾರ್ಮಿಕರು ಷರತ್ತುಗಳೊಂದಿಗೆ ಮುಧೋಳ ತಾಲೂಕಿನ ಪಿಎಂ ಬುದ್ನಿ ಗ್ರಾಮದಲ್ಲಿ ಕಬ್ಬು ಕಟಾವು ಮಾಡಲು ಆಗಮಿಸಿದ್ದರು. ನಿಗದಿತ ಅವಧಿ ಮುಗಿದು 21 ದಿನ ಕಳೆದರೂ ಮಧ್ಯಪ್ರದೇಶದಕ್ಕೆ ಕಳುಹಿಸಿಕೊಡದೇ ಎಲ್ಲ ಕಾರ್ಮಿಕರನ್ನು ಹೆಚ್ಚಿನ ಅವಧಿಗೆ ದುಡಿಸಿಕೊಂಡಿರುವ ವೇತನ ಕೂಡ ಕೊಡದೇ ಸತಾಯಿಸುತ್ತಿದ್ದ ಗ್ಯಾಂಗ್‌ ಮನ್‌ ತಲೆಮರೆಸಿಕೊಂಡಿದ್ದ.

ಮಧ್ಯಪ್ರದೇಶ ಕಾರ್ಮಿಕರು ತಮ್ಮ ಜಿಲ್ಲೆಯ ಸಂಸದ ಮತ್ತು ಆದಿವಾಸಿ ಬುಡಕಟ್ಟು ಜನಾಂಗ ಅಭಿವೃದ್ಧಿ ಸಂಸ್ಥೆ ಅಧ್ಯಕ್ಷರಿಗೆ ಮೊಬೈಲ್‌ ಕರೆ ಮಾಡಿ ಮಾಹಿತಿ ನೀಡುವ ಮೂಲಕ ಮಧ್ಯಪ್ರದೇಶದಲ್ಲಿ ವಂಚನೆ ಪ್ರಕರಣ ದಾಖಲಿಸಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದರು.

ಮಧ್ಯಪ್ರದೇಶದ ಕಲೆಕ್ಟರ್‌ ಜಿಲ್ಲಾಧಿಕಾರಿಗೆ ಎಫ್‌ ಐಆರ್‌ ಪ್ರಕರಣ ದಾಖಲಿಸಿದ ದಾಖಲಾತಿ ನೀಡುವ ಮೂಲಕ ಎಲ್ಲರನ್ನು ಸುರಕ್ಷಿತವಾಗಿ ಮಧ್ಯಪ್ರದೇಶದ ಬೆಳವಂಡಿ ಜಿಲ್ಲೆಗೆ ತಲುಪಿಸಬೇಕೆಂಬ ಮಾಹಿತಿ ನೀಡಿದರು. ಇದರಿಂದ ಕಾರ್ಯಪ್ರವೃತ್ತರಾದ ಜಿಲ್ಲಾ ಧಿಕಾರಿಗಳು ಮುಧೋಳ ತಹಶೀಲ್ದಾರ್‌ ಮತ್ತು ಪಿಎಸೈ ಅವರೆಗೆ ನಿರ್ದೇಶನ ನೀಡಿ ಗ್ಯಾಂಗ್‌ಮನ್‌ ಠಾರೋಡ ಎಂಬಾತನನ್ನು ಬಂಧಿಸಿ ನ್ಯಾಯಾಲಯ ವಶಕ್ಕೆ ನೀಡಲಾಗಿದೆ. ಅಲ್ಲದೇ ಎಲ್ಲ ಕಾರ್ಮಿಕರನ್ನು ಸುರಕ್ಷಿತವಾಗಿ ಕಳುಹಿಸಿ ಕೊಡಬೇಕೆಂದು ಜಮಖಂಡಿ ಉಪವಿಭಾಗಾಧಿಕಾರಿ ಡಾ| ಸಿದ್ದು ಹುಲ್ಲೊಳ್ಳಿ ನಿರ್ದೇಶನ ನೀಡಿದ್ದರು.

ನಗರದ ಕುಡಚಿ ರಸ್ತೆಯಲ್ಲಿರುವ ತಾಲೂಕು ಆಡಳಿತ ಸೌಧದಲ್ಲಿ ವಾಸವಿದ್ದ ಮಧ್ಯಪ್ರದೇಶ ಕಾರ್ಮಿಕರಿಗೆ 4 ದಿನಗಳವರೆಗೆ ಉಪಹಾರ-ಊಟದ ವ್ಯವಸ್ಥೆ ಮಾಡಲಾಗಿತ್ತು.

ಉಪ ವಿಭಾಗಾಧಿ ಕಾರಿ ಡಾ| ಸಿದ್ದು ಹುಲ್ಲೋಳ್ಳಿ ನೇತೃತ್ವದಲ್ಲಿ ಬುಧವಾರ ಖಾಸಗಿ ವಾಹನದ ಮೂಲಕ ಸರಕು ಸಾಮಾನುಗಳೊಂದಿಗೆ ಕಬ್ಬು ಕಟಾವಿಗೆ ಬಂದಿದ್ದ ಎಲ್ಲ ಕಾರ್ಮಿಕರನ್ನು ಕಳುಹಿಸಿಕೊಡಲಾಯಿತು. ಮುಧೋಳ ಎಎಸೈ ಕೋಲಾರ, ಓರ್ವ ಮಹಿಳೆ ಮತ್ತು ಪುರುಷ ಆರಕ್ಷಕ, ಕಾರ್ಮಿಕ ಇಲಾಖೆ ಅಧಿಕಾರಿ, ಕಂದಾಯ ಇಲಾಖೆ ಅಧಿಕಾರಿ ಸೇರಿದಂತೆ 5 ಜನರ ತಂಡ ಸುರಕ್ಷಿತವಾಗಿ ತಲುಪಿಸುವ ಜವಾಬ್ದಾರಿ ನೀಡಿ ಅವರು ಕೂಡ ಮಧ್ಯಪ್ರದೇಶಕ್ಕೆ ತೆರಳಿದರು.

ಈ ಸಂದರ್ಭದಲ್ಲಿ ಮುಧೋಳ ತಹಶೀಲ್ದಾರ್‌ ಸಂಗಮೇಶ ಬಾಡಗಿ, ಶಿರಸ್ತೇದಾರ್‌ ನಿಂಗಪ್ಪ ಬಿರಡಿ, ಕಂದಾಯ ನಿರೀಕ್ಷಕ ಬಿ.ಎಸ್‌. ಜಿಗಳೂರ, ಚುನಾವಣೆ ಇಲಾಖೆ ಅ ಧಿಕಾರಿ ಸಂತೋಷ ರಬಕವಿ, ಮೋಹನ ಸಬರದ ಸೇರಿದಂತೆ ಇತರರಿದ್ದರು.

ಪತ್ರಕರ್ತರ ಸಹಕಾರ-ವ್ಯಾಪಾರಸ್ಥರ ದಾಸೋಹ
ನಗರದ ತಾಲೂಕು ಆಡಳಿತ ಸೌಧದ ಕೆಳ ಅಂತಸ್ತಿನಲ್ಲಿ ಮಧ್ಯಪ್ರದೇಶದ ಚಿಕ್ಕಮಕ್ಕಳ ಸಹಿತ 25 ಜನ ಕಬ್ಬು ಕಟಾವು ಮಾಡುವ ಕಾರ್ಮಿಕರು ಕಳೆದ 5 ದಿನದಿಂದ ವಾಸವಾಗಿದ್ದು, 4 ದಿನದವರೆಗೆ ತಾಲೂಕು ಆಡಳಿತದಿಂದ ಊಟದ ವ್ಯವಸ್ಥೆ ಮಾಡಿಲಾಗಿತ್ತು. ಮಂಗಳವಾರ ಕಾರ್ಮಿಕರಿಗೆ ಊಟದ ವ್ಯವಸ್ಥೆಯಲ್ಲಿ ತೊಂದರೆಯಾದ ಹಿನ್ನೆಲೆಯಲ್ಲಿ ಮಕ್ಕಳು ಹೊಟ್ಟೆ ಹಸಿವಿನಿಂದ ರೋದಿಸುತ್ತಿದ್ದರು. ಇದನ್ನು ಗಮನಿಸಿದ ಜಮಖಂಡಿ ನಗರದ ಕೆಲ ಪತ್ರಕರ್ತರು ದಾನಿಗಳ ಮೊರೆ ಹೋಗಿ ಸಮಸ್ಯೆ ತಿಳಿಸಿದಾಗ ಶಬ್ಬೀರ ಬಾಗವಾನ, ಮುನ್ನಾ ನದಾಫ್‌, ಮೀರಾ ಝಾರೆ, ಯಾಸೀನ್‌ ಸಪ್ತಸಾಗರ ಉಚಿತವಾಗಿ ಬಾಳೆ, ಚಿಕ್ಕು, ಸೇಬು ಹಣ್ಣು, ಭಜ್ಜಿ, ಮಸಾಲಾ ರೈಸ್‌ ನೀಡಿ ಮಾನವೀಯತೆ ಮೆರೆದರು.

ಟಾಪ್ ನ್ಯೂಸ್

jamia

Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ

Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!

Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ನಿಧನ

Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ವಿಧಿವಶ

SMAT: ಸಯ್ಯದ್‌ ಮುಷ್ತಾಕ್‌ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ

SMAT 2024: ಸಯ್ಯದ್‌ ಮುಷ್ತಾಕ್‌ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ

2-news

ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ

IPL Auction: Mallika Sagar will conduct the entire IPL auction

IPL Auction: ಸಂಪೂರ್ಣ ಐಪಿಎಲ್‌ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್

Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ

Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಾಡಂಚಿನ ರೈತರ ಅರಣ್ಯರೋದನ; ಬೇರೆಯವರ ಜಮೀನಿನಲ್ಲಿ ದುಡಿಯಬೇಕಾದ ಸ್ಥಿತಿ

ಕಾಡಂಚಿನ ರೈತರ ಅರಣ್ಯರೋದನ; ಬೇರೆಯವರ ಜಮೀನಿನಲ್ಲಿ ದುಡಿಯಬೇಕಾದ ಸ್ಥಿತಿ

ಕೇವಲ 12 ರೂ.ಗೆ ಬಿಸಿ ಜುನುಕಾ ರೊಟ್ಟಿ ಊಟ:!ಶಿಕ್ಷಕ ಬಸವರಾಜ ಜಾಲೋಜಿ ನಿಸ್ವಾರ್ಥ ಸೇವೆ

ಕೇವಲ 12 ರೂ.ಗೆ ಬಿಸಿ ಜುನುಕಾ ರೊಟ್ಟಿ ಊಟ:!ಶಿಕ್ಷಕ ಬಸವರಾಜ ಜಾಲೋಜಿ ನಿಸ್ವಾರ್ಥ ಸೇವೆ

ಲೋಕಾಪುರ: ಬಿಡಾಡಿ ದನಗಳ ಕಾಟಕ್ಕೆ ಜನ ಹೈರಾಣ

ಲೋಕಾಪುರ: ಬಿಡಾಡಿ ದನಗಳ ಕಾಟಕ್ಕೆ ಜನ ಹೈರಾಣ

3-

Mahalingpur: 2020ರ ಪುರಸಭೆ ಗಲಾಟೆ ಪ್ರಕರಣ: ಮರು ತನಿಖೆಗೆ ಕೋರ್ಟ್ ಆದೇಶ

ಬಾಗಲಕೋಟೆ: ಸರ್ಕಾರಿ ಕಚೇರಿ-ಆಶ್ರಯ ಮನೆಗಳೂ ವಕ್ಫ್ ಆಸ್ತಿ!

ಬಾಗಲಕೋಟೆ: ಸರ್ಕಾರಿ ಕಚೇರಿ-ಆಶ್ರಯ ಮನೆಗಳೂ ವಕ್ಫ್ ಆಸ್ತಿ!

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

jamia

Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ

Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!

Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ನಿಧನ

Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ವಿಧಿವಶ

SMAT: ಸಯ್ಯದ್‌ ಮುಷ್ತಾಕ್‌ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ

SMAT 2024: ಸಯ್ಯದ್‌ ಮುಷ್ತಾಕ್‌ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ

2-news

ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.