ಕೊಚ್ಚಿ ಹೋಯ್ತು ರೈತರ ಬದುಕು

ನೀರು ನುಗ್ಗಿದ ತಾಲೂಕುವಾರು ಗ್ರಾಮಗಳ ವಿವರ

Team Udayavani, Aug 17, 2019, 10:09 AM IST

bk-tdy-1

ಬಾಗಲಕೋಟೆ: ಕೃಷ್ಣಾ ನದಿ ಪ್ರವಾಹಕ್ಕೆ ತತ್ತರಿಸಿದ ಬಾದಾಮಿ ತಾಲೂಕಿನ ಮಣ್ಣೇರಿ ಗ್ರಾಮದ ದುಸ್ಥಿತಿ.

ಬಾಗಲಕೋಟೆ: ಜಿಲ್ಲೆಯ ಇತಿಹಾಸದಲ್ಲೇ ಕಂಡರಿಯದ ಪ್ರವಾಹ ಈ ಬಾರಿ ರೈತರ ಬದುಕು ತನ್ನೊಟ್ಟಿಗೆ ಸೆಳೆದುಕೊಂಡು ಹೋಗಿದೆ. ಎಲ್ಲಿ ನೋಡಿದರಲ್ಲ ನೆಲಸಮಗೊಂಡ ಬೆಳೆಗಳು. ನಾಲ್ಕು ವರ್ಷ ಬರಕ್ಕೆ ನಲುಗಿದ್ದರೆ, ಈ ಬಾರಿ ಪ್ರವಾಹದ ಹೊಡೆತಕ್ಕೆ ರೈತರ ಬದುಕು ಛಿದ್ರವಾಗಿದೆ.

ಹೌದು, ಘಟಪ್ರಭಾ, ಮಲಪ್ರಭಾ ಹಾಗೂ ಕೃಷ್ಣಾ ನದಿ ಪ್ರವಾಹ ಹಿಂದೆಂದೂ ಕಂಡರಿಯದಷ್ಟು ಬಂದಿವೆ. ಮೂರು ನದಿಗಳ ರುದ್ರ ನರ್ತನಕ್ಕೆ 9 ತಾಲೂಕಿನ 194 ಹಳ್ಳಿಗಳು ಅಕ್ಷರಶಃ ನಲುಗಿವೆ. ರೈತರು, ಸಣ್ಣಪುಟ್ಟ ವ್ಯಾಪಾರಸ್ಥರು, ಕೂಲಿಕಾರರು, ನೇಕಾರರು, ನಿತ್ಯ ದುಡಿದು ಜೀವನ ಸಾಗಿಸುವ ಬಡವರು, ಬೇರೊಬ್ಬ ಹೊಲ ಲಾವಣಿಗೆ ಮಾಡಿದ್ದ ರೈತರು ನಿತ್ಯ ಕಣ್ಣೀರಿನಲ್ಲಿದ್ದಾರೆ. ಮುಂದಿನ ಬದುಕು ಹೇಗೆ? ಎಂಬ ಚಿಂತೆಯಲ್ಲಿದ್ದಾರೆ. ಸರ್ಕಾರ ಕೊಡುವ ಪರಿಹಾರದಲ್ಲಿ ಪುನರ್‌ ಬದುಕು ಕಟ್ಟಿಕೊಳ್ಳಲಾಗುತ್ತದೆಯೇ, ಭ್ರಷ್ಟಾಚಾರ ವ್ಯವಸ್ಥೆಯಲ್ಲಿ ನಮಗೆಲ್ಲ ಸೂಕ್ತ ಪರಿಹಾರ ಸಿಗುತ್ತಾ ಎಂಬ ಆತಂಕ ಕಾಡುತ್ತಿದೆ.

1.25 ಲಕ್ಷ ಎಕರೆ ಕಬ್ಬು ನಾಶ: ಉತ್ತರ ಕರ್ನಾಟಕದಲ್ಲಿ ಬೆಳಗಾವಿ ಬಿಟ್ಟರೆ, ಬಾಗಲಕೋಟೆಗೆ ಸಕ್ಕರೆ ನಾಡು ಎಂದೂ ಕರೆಲಾಗುತ್ತಿದೆ. ಕಬ್ಬು ಬೆಳೆಗಾರ ರೈತರನ್ನು ನಂಬಿಕೊಂಡೇ ಜಿಲ್ಲೆಯಲ್ಲಿ 11 ಸಕ್ಕರೆ ಕಾರ್ಖಾನೆಗಳೂ ಇವೆ. ವಾರ್ಷಿಕ ಜಿಲ್ಲೆಯಲ್ಲಿ 1 ಕೋಟಿ ಮೆಟ್ರಿಕ್‌ ಟನ್‌ ನಷ್ಟು ಕಬ್ಬು ಬೆಳೆಯುತ್ತಿದ್ದು, ಸುಮಾರು 2,835 ಮೆಟ್ರಿಕ್‌ ಟನ್‌ ಸಕ್ಕರೆ ಉತ್ಪಾದನೆಯಾಗುತ್ತದೆ.

ಒಂದು ಅಂದಾಜಿನ ಪ್ರಕಾರ ಜಿಲ್ಲೆಯಲ್ಲಿ ಈ ಬಾರಿ 2.40 ಲಕ್ಷ ಎಕರೆ ಭೂಮಿಯಲ್ಲಿ ಕಬ್ಬು ಬೆಳೆಯಲಾಗಿತ್ತು. ಆದರೆ, ಮೂರು ನದಿಗಳ ಪ್ರವಾಹಕ್ಕೆ 1.25 ಹೆಕ್ಟೇರ್‌ನಷ್ಟು ಕಬ್ಬು ಬೆಳೆ ಸಂಪೂರ್ಣ ನೆಲಸಮವಾಗಿದೆ ಎಂದು ಅಂದಾಜಿಸಲಾಗಿದೆ. ಇದರಿಂದ ರೈತರು, ಕಬ್ಬು ಬೆಳೆಯಿಂದ ಪಡೆಯುತ್ತಿದ್ದ ಸುಮಾರು 3 ಸಾವಿರ ಕೋಟಿಗೂ ಅಧಿಕ ಹಾನಿಯಾಗಿದೆ ಎಂದು ಪ್ರಾಥಮಿಕ ಮಾಹಿತಿ ಹೇಳುತ್ತಿದೆ.

ರೈತರಿಗೆ ಇಷ್ಟೊಂದು ಪ್ರಮಾಣದ ಹಾನಿಯಾದರೆ, ಇನ್ನು ಕಬ್ಬು ನುರಿಸಿ, ಸಕ್ಕರೆ ಉತ್ಪಾದಿಸಿ, ಮಾರಾಟ ಮಾಡುತ್ತಿದ್ದ ಜಿಲ್ಲೆಯ ಕಾರ್ಖಾನೆಗಳ ಉದ್ಯಮಿಗಳೂ ಈ ಬಾರಿ ಕಬ್ಬಿಗಾಗಿ ಪರಿತಪಿಸುವ ಅನಿವಾರ್ಯತೆ ಬಂದಿದೆ. ರೈತರು ಎಷ್ಟೇ ಗೋಳಾಡಿದರೂ, ಹೋರಾಟ ಮಾಡಿದರೂ ತಕ್ಷಣಕ್ಕೆ ಕಬ್ಬು ಕಟಾವು ಮಾಡಿಕೊಂಡು ಹೋಗದ ಹಾಗೂ ಕಬ್ಬು ನುರಿಸಿದ ಬಳಿಕ ಬಾಕಿ ಕೊಡದೇ ಸತಾಯಿಸುವ ಕಾರ್ಖಾನೆ ಮಾಲಿಕರು, ಈ ಬಾರಿ ನಮಗೆ ಕಬ್ಬು ಕೊಡಿ ಎಂದು ಕೇಳುವ ಪರಿಸ್ಥಿತಿ ಬರಲಿದೆ.

ಹಾನಿ ಸಮೀಕ್ಷೆಗೆ ಡ್ರೋಣ್‌ ಬಳಕೆ: ಜಿಲ್ಲೆಯ ಮಲಪ್ರಭಾ ಮತ್ತು ಘಟಪ್ರಭಾ ನದಿ ಪಾತ್ರದಲ್ಲಿ ಭೂಮಿ, ಗ್ರಾಮಗಳಿಗೆ ನುಗ್ಗಿದ್ದ ನೀರು ಕಡಿಮೆಯಾಗಿದ್ದು, ಕೃಷ್ಣಾ ನದಿ ಪಾತ್ರದಲ್ಲಿ ಇನ್ನೂ ಪ್ರವಾಹ ಯಥಾಸ್ಥಿತಿ ಮುಂದುವರೆದಿದೆ. ಕೃಷ್ಣಾ ನದಿ ಪಾತ್ರದ ಜಮಖಂಡಿ, ರಬಕವಿ-ಬನಹಟ್ಟಿ, ಬೀಳಗಿ, ಬಾಗಲಕೋಟೆ ಹಾಗೂ ಹುನಗುಂದ ತಾಲೂಕಿನ (ನಾರಾಯಣಪುರ ಜಲಾಶಯದ ಹಿನ್ನೀರು) ಜಲಾವೃತಗೊಂಡ ಗ್ರಾಮ, ಭೂಮಿ ಮೇಲಿನ ನೀರು ಸರಿದಿಲ್ಲ. ಹೀಗಾಗಿ ನೀರು ಕಡಿಮೆಯಾದ ಸ್ಥಳಗಳಲ್ಲಿ ಬೆಳೆ ಹಾನಿ ಕುರಿತು ಪ್ರತ್ಯೇಕ ಸಮೀಕ್ಷೆ ಮಾಡಲಾಗುತ್ತಿದೆ. ಇದಕ್ಕಾಗಿ ಜಿಲ್ಲಾಡಳಿತ ಡ್ರೋಣ್‌ ಕ್ಯಾಮರಾ ಬಳಸುತ್ತಿದೆ ಎನ್ನಲಾಗಿದೆ.

• 194 ಹಳ್ಳಿಗಳು ಅಯೋಮಯ

• 3 ಸಾವಿರ ಕೋಟಿ ಮೌಲ್ಯದ ಕಬ್ಬು ಬೆಳೆ ನೆಲಸಮ

• ಈ ಬಾರಿ ಕಾರ್ಖಾನೆ ಮಾಲಿಕರಿಗೂ ನಷ್ಟ

ಕಾಲು ಜಾರಿ ಬಿದ್ದ ಸಂತ್ರಸ್ತನ ರಕ್ಷಣೆ:  ತಮದಡ್ಡಿ ಗ್ರಾಮದ ಸಂತ್ರಸ್ತ ಸುರೇಶ ಪೂಜಾರಿ ಎಂಬಾತನು ಗುರುವಾರ ರಾತ್ರಿ ತನ್ನ ಮನೆಗೆ ತೆರಳಿ ವಾಪಸ್‌ ಪರಿಹಾರ ಕೇಂದ್ರಕ್ಕೆ ಬರುವಾಗ ನೀರಿನ ಪ್ರವಾಹದಲ್ಲಿ ಕಾಲು ಜಾರಿ ಬಿದ್ದು 300 ಅಡಿ ದೂರ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ. ಆಪತ್ಪಾಂಧವನಂತಿದ್ದ ವಿದ್ಯುತ್‌ ಕಂಬವೊಂದನ್ನು ಹಿಡಿದು ಅದರ ಮೇಲೆ ಹತ್ತಿ ಕುಳಿತಿದ್ದನ್ನು ನೋಡಿದ ಕೆಲವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ಧಾವಿಸಿದ ಬನಹಟ್ಟಿ ವೃತ್ತ ನಿರೀಕ್ಷಕ ಅಶೋಕ ಸದಲಗಿ ಹಾಗೂ ತೇರದಾಳ ಠಾಣಾಧಿಕಾರಿ ಕೆ.ಟಿ. ಶೋಭಾ ಅವರು ಬೋಟ್ ಮೂಲಕ ಎನ್‌ಡಿಆರ್‌ಎಫ್‌ ತಂಡದೊಂದಿಗೆ ತೆರಳಿ ವ್ಯಕ್ತಿಯನ್ನು ಪ್ರಾಣಾಪಾಯದಿಂದ ಪಾರು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಕಬ್ಬು ಬೆಳೆಗಾರರಿಗೆ ಸಂಕಷ್ಟದ ಮೇಲೆ ಸಂಕಷ್ಟ ಬರುತ್ತಲೇ ಇವೆ. ಕಾರ್ಖಾನೆಗಳು ಒಂದೆಡೆ ಬಾಕಿ ಕೊಟ್ಟಿಲ್ಲ. ನಾಲ್ಕು ವರ್ಷದಿಂದ ಬರದಿಂದ ಕಬ್ಬು ಬೆಳೆ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗಿಲ್ಲ. ಈ ಬಾರಿ ರೈತರು ಕಷ್ಟಪಟ್ಟು ಕಬ್ಬು ಬೆಳೆದರೆ, ಮೂರು ನದಿಗಳ ಪಾತ್ರದಡಿ ಬರುವ ಸುಮಾರು 2.50 ರಿಂದ 2.80 ಲಕ್ಷ ಎಕರೆ ವರೆಗೆ ಕಬ್ಬು ಬೆಳೆ ಹಾನಿಯಾಗಿದೆ. ಈ ಹಾನಿಯ ಅಂದಾಜು ನೆನಸಿಕೊಂಡರೆ ಕಣ್ಣೀರು ಬರುತ್ತಿದೆ.•ನಾಗೇಶ ಹೆಗಡೆ, ಕಬ್ಬು ಬೆಳೆಗಾರ ಮತ್ತು ಹೋರಾಟಗಾರ
•ಶ್ರೀಶೈಲ ಕೆ. ಬಿರಾದಾರ

ಟಾಪ್ ನ್ಯೂಸ್

Ullal: ಎಂಡಿಎಂಎ ಸಾಗಾಟ: ಮೂವರ ಬಂಧನ

Ullal: ಎಂಡಿಎಂಎ ಸಾಗಾಟ: ಮೂವರ ಬಂಧನ

ವಿಷಸೇವಿಸಿ ಆತ್ಯಹ*ತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ,ಚಿಕಿತ್ಸೆಗೆ ಸ್ಪಂದಿಸದೆ ಸಾವು

ವಿಷಸೇವಿಸಿ ಆತ್ಯಹ*ತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ,ಚಿಕಿತ್ಸೆಗೆ ಸ್ಪಂದಿಸದೆ ಸಾವು

Draupadi Murmu addresses the joint House at the Old Parliament House

Old Parliament House: ಭಾರತದ ಸಂವಿಧಾನವು ಜೀವಂತಿಕೆಯ, ಪ್ರಗತಿಪರ ದಾಖಲೆ: ರಾಷ್ಟ್ರಪತಿ

Congress: ದ.ಕ ಗ್ರಾಮ ಪಂಚಾಯತ್‌; 24ರಲ್ಲಿ 19 ಸ್ಥಾನ ಕಾಂಗ್ರೆಸ್‌ ಬೆಂಬಲಿತರಿಗೆ ಗೆಲುವು

Congress: ದ.ಕ ಗ್ರಾಮ ಪಂಚಾಯತ್‌; 24ರಲ್ಲಿ 19 ಸ್ಥಾನ ಕಾಂಗ್ರೆಸ್‌ ಬೆಂಬಲಿತರಿಗೆ ಗೆಲುವು

16-moodbidri

Moodabidri: ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಪಿ.ನೇಮಿರಾಜ ಹೆಗ್ಡೆ ನಿಧನ

Pakistan: 6 security personnel hit, shoot-at-sight order

Pakistan: 6 ಮಂದಿ ಭದ್ರತಾ ಸಿಬ್ಬಂದಿ ಸಾವು, ಕಂಡಲ್ಲಿ ಗುಂಡು ಆದೇಶ

Yadagiri: ವಕ್ಫ್ ಹೋರಾಟ ರೈತರ ಪರವಾಗಿದೆ: ಶಾಸಕ ಯತ್ನಾಳ

Yadagiri: ವಕ್ಫ್ ಹೋರಾಟ ರೈತರ ಪರವಾಗಿದೆ: ಶಾಸಕ ಯತ್ನಾಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮುಧೋಳ: ಹಲಗಲಿಯಲ್ಲಿ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಸಾಥ್‌

ಮುಧೋಳ: ಹಲಗಲಿಯಲ್ಲಿ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಸಾಥ್‌

Bisanala-Dairy

Achievement: ಮಹಾಲಿಂಗಪುರದ ಬಿಸನಾಳ ಹಾಲಿನ ಡೇರಿಗೆ ಕೇಂದ್ರದ ಪ್ರಶಸ್ತಿ ಗರಿ!

Bagalakote-Dryer

Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!  

70 ವಿದ್ಯಾರ್ಥಿಗಳಿಗೆ ಒಂದೇ ಶೌಚಾಲಯ; ಮೂತ್ರ ವಿಸರ್ಜನೆಗೆ ಬಯಲೇ ಗತಿ

70 ವಿದ್ಯಾರ್ಥಿಗಳಿಗೆ ಒಂದೇ ಶೌಚಾಲಯ; ಮೂತ್ರ ವಿಸರ್ಜನೆಗೆ ಬಯಲೇ ಗತಿ

Mudhol: ಕೈಕೊಟ್ಟ ಬೆಳೆ… ಸಾಲಬಾಧೆಗೆ ಹೆದರಿ ನೇಣಿಗೆ ಶರಣಾದ ರೈತ

Mudhol: ಕೈಕೊಟ್ಟ ಬೆಳೆ… ಸಾಲಬಾಧೆಗೆ ಹೆದರಿ ನೇಣಿಗೆ ಶರಣಾದ ರೈತ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

crime

Padubidri: ಸ್ಕೂಟಿಯಿಂದ ಬಿದ್ದು ಮಹಿಳೆಗೆ ತೀವ್ರ ಗಾಯ

Ullal: ಎಂಡಿಎಂಎ ಸಾಗಾಟ: ಮೂವರ ಬಂಧನ

Ullal: ಎಂಡಿಎಂಎ ಸಾಗಾಟ: ಮೂವರ ಬಂಧನ

ವಿಷಸೇವಿಸಿ ಆತ್ಯಹ*ತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ,ಚಿಕಿತ್ಸೆಗೆ ಸ್ಪಂದಿಸದೆ ಸಾವು

ವಿಷಸೇವಿಸಿ ಆತ್ಯಹ*ತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ,ಚಿಕಿತ್ಸೆಗೆ ಸ್ಪಂದಿಸದೆ ಸಾವು

accident

Vitla: ರಿಕ್ಷಾ- ಬೈಕ್‌ ಢಿಕ್ಕಿ; ಮೂವರಿಗೆ ಗಾಯ

Draupadi Murmu addresses the joint House at the Old Parliament House

Old Parliament House: ಭಾರತದ ಸಂವಿಧಾನವು ಜೀವಂತಿಕೆಯ, ಪ್ರಗತಿಪರ ದಾಖಲೆ: ರಾಷ್ಟ್ರಪತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.