40 ದಿನಗಳಲ್ಲಿ ದಾಖಲೆಯ 4 ಅಡಿ ಎತ್ತರದ ಅರಿಶಿನ : ಎಕರೆಗೆ 50 ಕ್ವಿಂಟಲ್ ಬೆಳೆ ನಿರೀಕ್ಷೆ
Team Udayavani, Jul 23, 2022, 8:42 PM IST
ರಬಕವಿ-ಬನಹಟ್ಟಿ : ಸಕ್ಕರೆ ಪ್ರದೇಶದಲ್ಲಿ ಕಬ್ಬು ಬೆಳೆಗಾರರು ಕ್ರಮೇಣ ಇತರೆ ಬೆಳೆಗಳಿಗೂ ಒತ್ತು ನೀಡುತ್ತಿದ್ದು, ಇದೀಗ ಅರಿಶಿನ ಬೆಳೆಯಲ್ಲಿ ರೈತನೋರ್ವ ದಾಖಲೆ ಬರೆಯುವಲ್ಲಿ ಹೊರಟಿರುವುದು ವಿಶೇಷ..!
ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಯರಗಟ್ಟಿ ಗ್ರಾಮದ 70 ವರ್ಷದ ರೈತ ಶ್ರೀಕಾಂತ ಘೂಳನ್ನವರ ಮೂಲತಃ ಕೃಷಿಯಿಂದಲೇ ಬದುಕು ಸಾಗಿಸಿದವರು. ಇದೀಗ ತಮ್ಮ ಮೂರುವರೆಷ್ಟು ಎಕರೆ ಪ್ರದೇಶದಲ್ಲಿ ಅರಿಶಿನ ಬೀಜ ಹಾಕಿದ 40 ದಿನಗಳಲ್ಲಿ 4 ಅಡಿ ಎತ್ತರ ಬೆಳೆದು ರೈತರನ್ನೇ ದಿಗ್ಬ್ರಮೆ ಮೂಡಿಸುವಲ್ಲಿ ಕಾರಣರಗಿದ್ದಾರೆ. ಇದಕ್ಕೆ ಹನಿ ನೀರಾವರಿ ವ್ಯವಸ್ಥೆ ಮಾಡಿಕೊಂಡಿದ್ದಾರೆ.
ಹೊಸ ಬೀಜ: ನೆರೆಯ ಮಹಾರಾಷ್ಟ್ರದ ಸಾಂಗಲಿ ಮಾರುಕಟ್ಟೆಯಲ್ಲಿ ಈ ಬಾರಿ ಸೇಲಂ ಕಂಪನಿಯ ಹೊಸ ಬೀಜವನ್ನು ಪ್ರಯೋಗ ಮಾಡುವಲ್ಲಿ ಜಿಲ್ಲೆಯಲ್ಲಿಯೇ ಪ್ರಪ್ರಥಮ ರೈತರಾಗಿದ್ದು, ಪ್ರಾಯೋಗಿಕವಾಗಿ ಬೆಳೆದ ಅರಿಷಿಣ 9 ತಿಂಗಳ ಬೆಳೆಯಾಗಿದ್ದು, ಬಹುತೇಕ ಏಳು ತಿಂಗಳಲ್ಲಿ ಫಸಲು ನೀಡಿ ಇಷ್ಟೊಂದು ಬೆಳೆಯಬಹುದೇ ಅಂತ ಎಲ್ಲರೂ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುತ್ತಿದ್ದಾರೆ.
ಬೆಳೆದದ್ದು ಹೇಗೆ? : ಮೂರುವರೆ ಎಕರೆಯಷ್ಟು ಜಮೀನಿನಲ್ಲಿ ಹೆಚ್ಚು ತಿಪ್ಪೆ ಗೊಬ್ಬರ ಹಾಕಿದ್ದು ಡಿಎನ್‌ಪಿ, ಎಂಓಪಿ ಗೊಬ್ಬರವನ್ನು ಮಣ್ಣಲ್ಲಿ ಮಿಶ್ರಣ ಮಾಡಿದ್ದಾರೆ. 3 ಅಡಿಗೆ ಒಂದರಂತೆ ಸಾಲುಗಳನ್ನು ಬಿಟ್ಟು ಅರಿಷಿಣ ಬೀಜ ನಾಟಿ ಮಾಡಲಾಗಿದೆ. ಬಳಿಕ ಹನಿ ನೀರಾವರಿ ಮೂಲಕವೇ ಗೊಬ್ಬರ ಸಿಂಪರಣೆ, ಇತರೆ ಗೊಬ್ಬರಗಳ ತಾಲೀಮು ಇನ್ನೂ ಇದ್ದು, ಇಷ್ಟೊಂದು ವಿಪುಲ ಬೆಳೆಗೆ ರೈತ ಸಂತಸದಲ್ಲಿದ್ದಾರೆ.
ಇದನ್ನೂ ಓದಿ : ರೇಷ್ಮೆ ಕೃಷಿಯನ್ನು ಮರ ಕಡ್ಡಿ ಪದ್ಧತಿಯಲ್ಲಿ ಬೆಳೆಯುವುದು ಹೇಗೆ ?
ಒಟ್ಟಾರೆ ವೈಜ್ಞಾನಿಕ ತಳಹದಿಯಲ್ಲಿ ಬೆಳೆ ಬೆಳೆಯುತ್ತಿರುವದರಿಂದ ಬಲು ಸಹಕಾರಿಯಾಗಿದೆ. ಎಕರೆಗೆ ಸಾಮಾನ್ಯವಾಗಿ 30 ಕ್ವಿಂಟಲ್‌ನಷ್ಟು ಅರಿಶಿನ ಉತ್ಪಾದನೆಯಾಗುವದು. ಈ ಬೆಳೆಯು 50 ಕ್ವಿಂಟಲ್ ನಷ್ಟು ಉತ್ಪಾದನೆ ನೀಡುವ ನಿರೀಕ್ಷೆಯಿದೆ ಎನ್ನುತ್ತಾರೆ ರೈತ ಘೂಳನ್ನವರ.
ಮಾಹಿತಿಗೆ : 81233-21606
ಅರಿಷಿಣದ ಹೊಸ ತಳಿಯ ಬೀಜ ಪ್ರಾಯೋಗಿಕವಾಗಿ ಬೆಳೆದಿದ್ದು, 40 ದಿನಗಳಲ್ಲಿ ಇಷ್ಟೊಂದು ಉತ್ತಮ ಬೆಳೆ ಬಂದಿರುವದು ಸಂತಸವೆನಿಸುತ್ತಿದೆ. ಕಡಿಮೆ ಅವಧಿಯಲ್ಲಿ ಉತ್ತಮ ಬೆಳೆ ನಿರೀಕ್ಷೆಯಲ್ಲಿದ್ದೇನೆ.’
-ಶ್ರೀಕಾಂತ ಘೂಳನ್ನವರ, ಅಧ್ಯಕ್ಷ, ರೈತ ಸಂಘ, ರಬಕವಿ-ಬನಹಟ್ಟಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
MUST WATCH
ಹೊಸ ಸೇರ್ಪಡೆ
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.