Ugadi ಫಲ ಭವಿಷ್ಯ: ಬಲಿಷ್ಠ ರಾಜನೇ ಮರಳಿ ರಾಜನಾಗುತ್ತಾನೆ
ಹೆಸರು, ಬಿಳಿಜೋಳ, ಕಡಲೆ, ಗೋಧಿ ಬಂಪರ್ ಬೆಳೆ
Team Udayavani, Apr 9, 2024, 8:58 PM IST
ಗುಳೇದಗುಡ್ಡ : ರಾಜ ಬಲಿಷ್ಠನಾಗಿದ್ದಾನೆ. ಹೀಗಾಗಿ ಈ ಬಾರಿಯು ರಾಜನೇ ರಾಜನಾಗುವ ಯೋಗವಿದ್ದು, ರಾಜ, ಪ್ರಜೆಗಳು, ಮಂತ್ರಿ ಸೈನ್ಯ ಬಲಿಷ್ಠವಾಗಿದೆ ಎನ್ನುವ ಮತ್ತು ಈ ದೇಶದಲ್ಲಿ ಯಾವ ರಾಜನಿದ್ದಾನೋ ಅವನೇ ಮುಂದೆವರೆಯುತ್ತಾನೆ ಎಂಬ ಭವಿಷ್ಯವನ್ನು ಮಲ್ಲಿಕಾರ್ಜುನ ಗೊಬ್ಬಿ ಅವರು ಯುಗಾದಿ ಫಲ ಭವಿಷ್ಯದಲ್ಲಿ ನುಡಿದರು. ಯುಗಾದಿ ಫಲ ಭವಿಷ್ಯದ ಕೇಳಿದ ಅದೇಷ್ಟೋ ಜನರು ಈ ಬಾರಿ ಮತ್ತೆ ಮೋದಿ ಅವರು ಅಧಿಕಾರಕ್ಕೆ ಬರಲಿದ್ದಾರೆ ಎಂಬ ಮಾತುಗಳನ್ನಾಡಿದರು.
ಪಟ್ಟಣದ ಬಗೀಚ್‌ನಲ್ಲಿ ಇಲ್ಯಾಳ ಮ್ಯಾಳದವರು ಪ್ರತಿ ವರ್ಷ ಯುಗಾದಿ ಹಬ್ಬದ ನಿಮಿತ್ತ ನಡೆಸಿಕೊಂಡು ಬಂದಿರುವ ಯುಗಾದಿ ಫಲ ಭವಿಷ್ಯದಲ್ಲಿ ಭವಿಷ್ಯ ನುಡಿದು, ದೇಶದಲ್ಲಿ ಈ ವರ್ಷ ಹೆಸರು ಬಿಳಿಜೋಳ, ಕಡಲೆ, ಗೋಧಿ ಬಂಪರ್ ಬೆಳೆ ಇದೆ. ತೊಗರಿ ಸಜ್ಜೆಗೆ ಕೀಟ ಭಾದೆ ಕಾಡಲಿದೆ. ಅಲ್ಲದೇ ಎಳ್ಳು ಅತ್ಯುತ್ತಮವಾಗಿ ಬೆಳೆಯಲಿದ್ದು, ಗುಳೇದಗುಡ್ಡ ಖಣ, ಇಲಕಲ್ ಸೀರೆಯ ವ್ಯಾಪಾರ ವಹಿವಾಟು ಕುಂಠಿತ ಕಾಣಲಿದೆ. ಅಲ್ಲದೇ ಬಟ್ಟೆ ವ್ಯಾಪಾರದಲ್ಲಿ ಈ ಭಾರಿ ಗಣನೀಯ ಏರಿಕೆ ಕಾಣಲಿದ್ದು, ಬಟ್ಟೆ ವ್ಯಾಪಾರಿ ಶೆಟ್ಟಿಯು ವ್ಯಾಪಾರದಲ್ಲಿ ಭರಪೂರವಾಗಿ ತೊಡಗಿರುತ್ತಾನೆ. ಸಿಮೆಂಟ್, ಕಬ್ಬಿಣ, ಉಸುಕು ವ್ಯಾಪಾರ ಜೋರಾಗಲಿದೆ ಎಂದರು.
ಈ ಭಾರಿ ಭರಣಿ,ಆರಿದ್ರಾ, ಪುನರ್ವಸು, ಮಾಘ, ಹುಬ್ಬಾ, ಚಿತ್ತಿ ಮಳೆಗಳು ಸಂಪೂರ್ಣವಾಗಿದ್ದು, ರಾಜ್ಯ, ದೇಶದಲ್ಲಿ ಮಳೆರಾಯ ಕಣ್ತೆರೆಯಲಿದ್ದಾನೆ. ಜನರಿಗೆ ನೀರಿನ ಬವಣೆ ತಪ್ಪಲಿದ್ದು, ಹಳಸಂದಿ, ನವಣಿ ಸೇರಿದಂತೆ ಇನ್ನಿತರ ಬೆಳೆಗಳು ಉತ್ತಮವಾಗಿ ಬರಲಿವೆ ಎಂದು ಯುಗಾಧಿ ಫಲ ಭವಿಷ್ಯದಲ್ಲಿ ಭವಿಷ್ಯ ನುಡಿಯಲಾಯಿತು. ಸುಮಾರು ನೂರು ವರ್ಷಗಳಿಂದ ಪಟ್ಟಣದ ಇಲಾಳ ಮ್ಯಾಳದವರು ಯುಗಾದಿ ಫಲ ಭವಿಷ್ಯ ಹೇಳುತ್ತ ಬಂದಿದ್ದು, ಜನರು ಫಲ ಭವಿಷ್ಯ ಕೇಳಲು ತಂಡೋಪ ತಂಡವಾಗಿ ಆಗಮಿಸುತ್ತಾರೆ.
ಈ ಸಂದರ್ಭದಲ್ಲಿ ಮ್ಯಾಳದ ಮಲ್ಲಿಕಾರ್ಜುನ ಗೊಬ್ಬಿ, ನಾಗಪ್ಪ ಚಿಂದಿ, ಪ್ರಶಾಂತ ರಂಜಣಗಿ, ಶಂಕರ ರಂಜಣಗಿ, ಮಲ್ಲೇಶಪ್ಪ ಶೀಪ್ರಿ, ಶಿವು ಹುಣಸಿಮರದ, ಈರಣ್ಣ ರಂಜಣಗಿ ಸೇರಿದಂತೆ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kollegala: ಶಾಲಾ ಮಕ್ಕಳಿಗೆ ನೀಡುವ KMF ಹಾಲಿನ ಪುಡಿ ಅಕ್ರಮ ದಾಸ್ತಾನು… ಓರ್ವನ ಬಂಧನ
Namma Metro; 314 ಮನೆಗಳ ಮೇಲೆ ಹಾದು ಹೋಗಲಿದೆ ಮೆಟ್ರೋ ಮಾರ್ಗ
Bidar; ಗುತ್ತಿಗೆದಾರ ಆತ್ಮಹತ್ಯೆ ಕೇಸ್; ಕರ್ತವ್ಯ ನಿರ್ಲಕ್ಷ್ಯ ತೋರಿದ 2 ಪೇದೆಗಳ ಅಮಾನತು
ಮಾದಕ ವಸ್ತು ಪತ್ತೆಯಲ್ಲಿ ಕೊಡಗಿನ ಕಾಪರ್ ಗೆ ಚಿನ್ನ, ಅಪರಾಧ ಪತ್ತೆಯಲ್ಲಿ ಬ್ರೂನೊಗೆ ಕಂಚು
Belagavi; ಅಗಲಿದ ಮನಮೋಹನ್ ಸಿಂಗ್ ಅವರಿಗೆ ಕಾಂಗ್ರೆಸ್ ಭಾವಪೂರ್ಣ ಶ್ರದ್ಧಾಂಜಲಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
New Delhi: ಸಂಸತ್ತಿನ ಬಳಿ ಬೆಂಕಿ ಹಚ್ಚಿಕೊಂಡಿದ್ದ ಯುವಕ ಸಾ*ವು
Vijayapura; ಮಾಜಿ ಪ್ರಧಾನಿ ಡಾ.ಸಿಂಗ್ ನಿಧನ ಹಿನ್ನೆಲೆಯಲ್ಲಿ ವಿಜಯಪುರ ಬಂದ್ ಮುಂದೂಡಿಕೆ
Kollegala: ಶಾಲಾ ಮಕ್ಕಳಿಗೆ ನೀಡುವ KMF ಹಾಲಿನ ಪುಡಿ ಅಕ್ರಮ ದಾಸ್ತಾನು… ಓರ್ವನ ಬಂಧನ
Dangerous Stunt: 5 ವರ್ಷದ ಬಾಲಕನನ್ನು ಕಾರಿನ ಬಾನೆಟ್ ಮೇಲೆ ಕೂರಿಸಿ ಸ್ಟಂಟ್
BBK11: ಕ್ಯಾಪ್ಟನ್ ಆಗುವ ಆತುರದಲ್ಲಿ ಗೇಮ್‌ನಲ್ಲಿ ಮೋಸ? – ಭವ್ಯ ವಿರುದ್ದ ಗಂಭೀರ ಆರೋಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.