ಬಿಜೆಪಿ-ಆರೆಸ್ಸೆಸ್ ಸುಳ್ಳು ಸೃಷ್ಟಿಗೆ ಟಕ್ಕರ್ ನೀಡಿ: ಉಮಾಶ್ರೀ
Team Udayavani, Jun 30, 2020, 3:00 PM IST
ಬನಹಟ್ಟಿ: ಭಾರತಕ್ಕೆ ಆಧುನಿಕ ತಂತ್ರಜ್ಞಾನ ತಂದವರ ಕಾಂಗ್ರೆಸ್ಸಿಗರು. ಆದರೆ ಈ ತಂತ್ರಜ್ಞಾನ ಬಳಸಿಕೊಂಡು ಬಿಜೆಪಿ ಮತ್ತು ಆರೆಸ್ಸೆಸ್ ಸುಳ್ಳುಗಳನ್ನು ಸೃಷ್ಟಿಸಿ ಜನರಿಗೆ ಹೇಳುತ್ತಿದೆ. ಅದಕ್ಕೆ ನಾವು ಟಕ್ಕರ್ ನೀಡಬೇಕು. ಆದ್ದರಿಂದ ಕಾಂಗ್ರೆಸ್ ಯುವಕರು ಸಾಮಾಜಿಕ ಜಾಲತಾಣ ಬಳಸಿಕೊಂಡು ಪಕ್ಷದ ಪ್ರಚಾರದಲ್ಲಿ ತೊಡಗಬೇಕು ಎಂದು ಮಾಜಿ ಸಚಿವೆ ಉಮಾಶ್ರೀ ತಿಳಿಸಿದರು.
ಭದ್ರನ್ನವರ ಮನೆ ಆವರಣದಲ್ಲಿ ಸೋಮವಾರ ನೂತನ ಕಾಂಗ್ರೆಸ್ ಕಾರ್ಯಾಲಯದಲ್ಲಿ ಪೂಜೆ ಸಲ್ಲಿಸಿ ಅವರು ಮಾತನಾಡಿ, ಇತಿಹಾಸ ಸರಿಯಾಗಿ ತಿಳಿದುಕೊಂಡು ಅದನ್ನು ಜನರಿಗೆ ಮುಟ್ಟಿಸುವ ಕಾರ್ಯ ಕಾರ್ಯಕರ್ತರು ಮಾಡಬೇಕು. ಪ್ರಾಮಾಣಿಕತೆ ಮತ್ತು ನಿಷ್ಠೆಯಿಂದ ಪಕ್ಷಕ್ಕಾಗಿ ಶ್ರಮಿಸಬೇಕು ಎಂದರು. ಕೇಂದ್ರ ಸರ್ಕಾರ ಕೋವಿಡ್ ಗೆ ಸಂಬಂಧಿಸಿದಂತೆ ಜನರ ಮೇಲೆ ಜವಾಬ್ದಾರಿ ನೀಡಿದೆ. ಕೋವಿಡ್ ಗೆ ಔಷಧಿ ದೊರೆಯುವವರೆಗೆ ಎಲ್ಲರೂ ಜಾಗ್ರತೆಯಿಂದ ಇರಬೇಕು. ಜು. 2 ರಂದು ನಡೆಯಲಿರುವ ಡಿ.ಕೆ. ಶಿವಕುಮಾರ ಅಧಿಕಾರ ಸ್ವೀಕಾರ ಸಮಾರಂಭ ಯಶಸ್ವಿಯಾಗಲು ಪ್ರತಿಯೊಬ್ಬರೂ ಶ್ರಮಿಸಬೇಕು ಎಂದರು.
ದೇಶದ ಜನತೆಗೆ ಒಳಿತು ಮಾಡಲು ಕಾಂಗ್ರೆಸ್ ಕಾರ್ಯಕರ್ತರು ಒಟ್ಟಾಗಿ ಹೋರಾಡಿ ಜನರ ಕಷ್ಟಕ್ಕೆ ಸ್ಪಂದಿಸೋಣ. ಕೋವಿಡ್-19 ಭಯಾನಕ ರೋಗವಾಗಿದ್ದು, ಸಾಮಾಜಿಕ ಅಂತರ ಹಾಗೂ ಮಾಸ್ಕ್ಗಳನ್ನು ಕಡ್ಡಾಯವಾಗಿ ಎಲ್ಲರೂ ಧರಿಸಬೇಕು. ಬರುವ ದಿನಗಳಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದೇ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಜು.7ರಂದು ಬನಹಟ್ಟಿಯಲ್ಲಿ ಪೆಟ್ರೋಲ್ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಶ್ರೀಪಾದ ಗುಂಡಾ, ಪ್ರಕಾಶ ಮಮದಾಪುರ ಮತ್ತು ಡಾ| ಎ.ಆರ್. ಬೆಳಗಲಿ ಮಾತನಾಡಿದರು. ಈ ವೇಳೆ ಶಂಕರ ಜಾಲಿಗಿಡದ, ರಾಜೇಂದ್ರ ಭದ್ರನವರ, ಮಲ್ಲಪ್ಪ ಸಿಂಗಾಡಿ, ಲಕ್ಷ್ಮಣ ದೇಸಾರಟ್ಟಿ, ಶಂಕರಗೌಡ ಪಾಟೀಲ, ಸತ್ಯಪ್ಪ ಮಗದುಮ್, ನಿಜಗುಣಿ ಶಿರಹಟ್ಟಿ, ಬಸವರಾಜ ಗುಡೋಡಗಿ, ಈಶ್ವರ ಚಮಕೇರಿ, ರಾಹುಲ ಕಲಾಲ, ಎಸ್.ಬಿ. ಭಜಂತ್ರಿ, ಬಸವರಾಜ ಕೊಕಟನೂರ, ನೀಲಕಂಠ ಮುತ್ತೂರ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mudhol: ಮಧ್ಯರಾತ್ರಿ ನಡುರಸ್ತೆಯಲ್ಲಿ ಕಬ್ಬು ತುಂಬಿದ ಟ್ರೇಲರ್ ಪಲ್ಟಿ
Political Gap: ನಾನು ರಾಜಕೀಯದಿಂದ ಸ್ವಿಚ್ಡ್ ಆಫ್ ಆಗಿದ್ದೇನೆ: ಸ್ಪೀಕರ್ ಯು.ಟಿ. ಖಾದರ್
Excise: ಅಬಕಾರಿ ಇಲಾಖೆಯಲ್ಲಿ ವರ್ಗಾವಣೆಗೆ ಇನ್ನು ಕೌನ್ಸೆಲಿಂಗ್: ಸಚಿವ ತಿಮ್ಮಾಪುರ
ನಿರ್ವಹಣೆಯೇ ಇಲ್ಲದ ಬಸ್ ನಿಲ್ದಾಣ! ರಾತ್ರಿ ವೇಳೆ ಬಸ್‌ಗಳ ಓಡಾಟ ತೀರಾ ಕಡಿಮೆ
Rabakavi-Banahatti: ಯಲ್ಲಟ್ಟಿ ಬಳಿ ಸಿಎನ್‌ಜಿ ಟ್ಯಾಂಕರ್ ಪಲ್ಟಿ
MUST WATCH
ಹೊಸ ಸೇರ್ಪಡೆ
ತುಬಚಿ- ಬಬಲೇಶ್ವರ ಏತ ನೀರಾವರಿ: 3,048 ಎಕರೆ ಸ್ವಾಧೀನ, ಹಣ ಬಿಡುಗಡೆಗೆ ಎಂ.ಬಿ.ಪಾಟೀಲ ಸೂಚನೆ
Vijayapura; ಕಾರ್ಮಿಕರ ಕೂಡಿ ಹಾಕಿ ರಾಕ್ಷಸಿ ಕೃತ್ಯ: ಎಲ್ಲ 5 ಆರೋಪಿಗಳ ಬಂಧನ
Tarikere: ತಂದೆ ಸಾವಿನ ವಿಷಯ ಗೊತ್ತಿಲ್ಲದೆ ಹಸೆಮಣೆ ಏರಿದ ಮಗಳು!
Padubidri: ಸ್ಕೂಟಿಗೆ ಈಚರ್ ವಾಹನ ಢಿಕ್ಕಿ; ಸವಾರನಿಗೆ ಗಾಯ
BJP Rift; ಯತ್ನಾಳ್ ಒಬ್ಬ 420, ಗೋಮುಖ ವ್ಯಾಘ್ರ: ರೇಣುಕಾಚಾರ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.