Weaver ನೇಕಾರಿಕೆಯ ಜೊತೆ ವೈಜ್ಞಾನಿಕತೆಯನ್ನು ಬಳಸಿಕೊಳ್ಳಿ: ಸಚಿವ ಶಿವಾನಂದ ಪಾಟೀಲ

ವಿಶ್ವಾಸ ನೀಡುವ ಮೊದಲೇ ಆದೇಶ ಸಂತಸ ತಂದಿದೆ

Team Udayavani, Aug 27, 2023, 6:13 PM IST

Weaver ನೇಕಾರಿಕೆಯ ಜೊತೆ ವೈಜ್ಞಾನಿಕತೆಯನ್ನು ಬಳಸಿಕೊಳ್ಳಿ: ಸಚಿವ ಶಿವಾನಂದ ಪಾಟೀಲ

ರಬಕವಿ ಬನಹಟ್ಟಿ : ನೇಕಾರಿಕೆಯ ಜೊತೆ ವೈಜ್ಞಾನಿಕತೆಯನ್ನು ಬಳಸಿಕೊಂಡು ನೇಕಾರರು ಮುಂದೆ ಬರಲು ಪ್ರಯತ್ನಿಸಬೇಕು ಎಂದು ಜವಳಿ ಹಾಗೂ ಸಕ್ಕರೆ ಖಾತೆ ಸಚಿವ ಶಿವಾನಂದ ಪಾಟೀಲ ಹೇಳಿದರು.

ರವಿವಾರ ನಗರದ ಶ್ರೀ ಕಾಡಸಿದ್ಧೇಶ್ವರ ದೇವಾಲಯದಲ್ಲಿ ನೇಕಾರ ಒಕ್ಕೂಟಗಳು ಹಮ್ಮಿಕೊಂಡಿದ್ದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನೇಕಾರ ಮಕ್ಕಳು ಪ್ರತಿಭಾವಂತರಾಗಿದ್ದಾರೆ. ತಂತ್ರಜ್ಞಾನವನ್ನು ಬಳಸಿಕೊಂಡು ನೇಕಾರರು ಬದುಕಲು ಕಲಿಯಬೇಕು. ಕೈಮಗ್ಗದ ಜೊತೆ ಪಾವರಲೂಮ್ ಮಗ್ಗಗಳನ್ನು ಕಾಲಕ್ಕೆ ತಕ್ಕಂತೆ ಬದಲಾವಣೆ ಮಾಡುತ್ತಾ ಅಭಿವೃದ್ಧಿ ಹೊಂದಬೇಕು.

ರಾಜ್ಯದ ನೇಕಾರ ಅಭಿವೃದ್ಧಿಗೆ ಸರಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ನೇಕಾರರ ಬರವಸೆಯನ್ನು ಆದಷ್ಟು ಬೇಗನೆ ಈಡೇರಿಸುವ ವಿಶ್ವಾಸ ವ್ಯಕ್ತಪಡಿಸುವ ಮೊದಲೇ ಆದೇಶ ಹೊರಡಿಸಿರುವುದು ಸಂತಸ ತಂದಿದೆ ಅದು ಜವಳಿ ಹಾಗು ಸಕ್ಕರೆ ಸಚಿವ ಪಾಟೀಲ ಹೇಳಿದರು.

ಪ್ರತಿಯೊಬ್ಬ ನೇಕಾರನಿಗೂ ಗರಿಷ್ಠ 10 ಎಚ್‌ಪಿವರೆಗಿನ ವಿದ್ಯುತ್ ಬಿಲ್‌ನ್ನು ಯಾವುದೇ ನಿಯಮ ಹಾಕದೆ ಸಂಪೂರ್ಣ ಉಚಿತ ನೀಡುವಲ್ಲಿ ಸರ್ಕಾರ ಸೂಚಿಸಿದೆ. ಸರ್ಕಾರದ ವಿವಿಧ ಗ್ಯಾರಂಟಿಗಳ 52 ಸಾವಿರ ಕೋಟಿಗಳ ಹಣ ವಿನಿಯೋಗ ಮಾಡಬೇಕಿದೆ. ಹೀಗಾಗಿ ನೇಕಾರರ ಉಚಿತ ಗ್ಯಾರಂಟಿಯ ವಿಳಂಬವಾಗಿದೆ ಎಂದು ಪಾಟೀಲ ತಿಳಿಸಿದರು.

ಹಲವಾರು ಯೋಜನೆಗಳ ಜಾರಿಯಿಂದ ಮಾಸಿಕ 120 ಕೋಟಿ ರೂ.ಗಳಷ್ಟು ಹೊರೆಯಾಗುತ್ತಿದೆ. ಆದಾಗ್ಯೂ ಸರ್ಕಾರ ಎಲ್ಲ ಯೋಜನೆಗಳನ್ನು ಒದಗಿಸುವಲ್ಲಿ ನುಡಿದಂತೆ ನಡೆಯುವಲ್ಲಿ ಯಶಸ್ವಿಯಾಗಿದೆ ಎಂದರು.

ನಿರಂತರ ಉದ್ಯೋಗ ನಿಶ್ಚಿತ: ಹಿಂದಿನ ಸರ್ಕಾರ ಮಾಡಿದ ತಪ್ಪು ನಿರ್ಧಾರಗಳಿಂದ ಕೆಎಚ್‌ಡಿಸಿ ನೇಕಾರರರಿಗೆ ಕಚ್ಚಾ ವಸ್ತು ಪೂರೈಕೆ ಸ್ಥಗಿತಗೊಂಡಿದೆ. ಕೇಂದ್ರಿಯ ಭಂಡಾರ ಹಾಗು ಎನ್‌ಸಿಸಿಎಫ್‌ಗಳಿಗೆ ಬಟ್ಟೆ ಪಡೆಯುವುದು ಸ್ಥಗಿತಗೊಳಿಸಿದ್ಧಾರೆ. ವಿದ್ಯಾ ವಿಕಾಸ ಯೋಜನೆಯಡಿ ಕಳಪೆ ಮಟ್ಟದ ಹಾಗು ಕಾನೂನು ಬಾಹಿರವಾಗಿ ಬಟ್ಟೆ ವಿತರಣೆ ಮಾಡಿದ್ದು ತೊಂದರೆಯಾಗಿದೆ. ಕೆಎಚ್‌ಡಿಸಿ ನೇಕಾರರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಕೊಂಡು ಮತ್ತೇ ನೇಕಾರರಿಗೆ ಉದ್ಯೋಗ ಕಲ್ಪಿಸುವುದಾಗಿ ಭರವಸೆ ನೀಡಿದರು.

ಈಗಾಗಲೇ ಈ ಕುರಿತು ಸಚಿವರುಗಳಾದ ಸತೀಶ ಜಾರಕಿಹೊಳಿ ಹಾಗು ಮಧು ಬಂಗಾರಪ್ಪನವರೊಂದಿಗೆ ಮಹತ್ವದ ಮಾತುಕತೆ ಮೂಲಕ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದಾಗಿದೆ. ಬರುವ ಶುಕ್ರವಾರದಂದು ಜರುಗಲಿರುವ ಕ್ಯಾಬೆನೇಟ್ ಸಭೆಯಲ್ಲಿ ಎಲ್ಲದಕ್ಕೂ ಸೂಕ್ತ ಪರಿಹಾರ ಕಂಡು ಕೊಳ್ಳಲಾಗುವುದು ಎಂದು ಸಚಿವ ಪಾಟೀಲ ತಿಳಿಸಿದರು.

ಇಲ್ಲಿನ ನೇಕಾರ ಮುಖಂಡರು ಅನೇಕ ಬೇಡಿಕೆಗಳನ್ನು ಇಟ್ಟಿದ್ದು, ಹಂತ ಹಂತವಾಗಿ ನೇಕಾರರ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸುತ್ತೇವೆ. ನೇಕಾರರ ಜೊತೆ ನಮ್ಮ ಸರಕಾರ ಯಾವಾಗಲೂ ಇರುತ್ತದೆ. ಜವಳಿ ಇಲಾಖೆಯನ್ನು ಸದೃಢ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಇದೇ ಸಂದರ್ಭ ಸಿದ್ದು ಕೊಣ್ಣೂರ, ಮಾಮೂನ್ ಪಾರ್ಥನಳ್ಳಿ, ರಾಜು ಭದ್ರನ್ನವರ, ಪರಪ್ಪ ಉರಭಿನವರ, ಬಸವರಾಜ ಕೊಕಟನೂರ, ಶಿವಲಿಂಗ ಟಿರ್ಕಿ, ಕಾಡಪ್ಪ ಜಿಡ್ಡಿಮನಿ, ಆನಂದ ಜಗದಾಳ, ಶಂಕರ ಕೆಸರಗೊಪ್ಪ, ಪಂಡಿತ ಬೋಸ್ಲೆ, ವಿಜಯ ಜವಳಗಿ, ಸಂಗಪ್ಪ ಉದಗಟ್ಟಿ, ಮಹಾದೇವ ನುಚ್ಚಿ, ಹರ್ಷವರ್ಧನ ಪಟವರ್ಧನ, ಎಸ್. ಡಿ. ಮುರಗೋಡ ಸೇರಿದಂತೆ ಅನೇಕರಿದ್ದರು.

ಟಾಪ್ ನ್ಯೂಸ್

Test Team; ಆಸ್ಟ್ರೇಲಿಯಾ ಪ್ರಕಟಿಸಿದ ವರ್ಷದ ಟೆಸ್ಟ್‌ ತಂಡಕ್ಕೆ ಭಾರತೀಯ ನಾಯಕ; ರೋಹಿತ್‌ ಅಲ್ಲ

TestTeam; ಆಸ್ಟ್ರೇಲಿಯಾ ಪ್ರಕಟಿಸಿದ ವರ್ಷದ ಟೆಸ್ಟ್‌ ತಂಡಕ್ಕೆ ಭಾರತೀಯ ನಾಯಕ; ರೋಹಿತ್‌ ಅಲ್ಲ

10-koratagere

Koratagere: ರಸ್ತೆಯಲ್ಲಿ ಚರಂಡಿ ನೀರು; ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಗ್ರಾಮಸ್ಥರು

9-rabakavi

Rabakavi: ಬ್ರಹ್ಮಾನಂದ ಉತ್ಸವ; ಗಮನ ಸೆಳೆದ ರೊಟ್ಟಿ ಜಾತ್ರೆ

8-

Panaji: ಕಲಂಗುಟ್ ಬೀಚ್ ನಲ್ಲಿ ಪ್ರವಾಸಿ ಕೊಲೆ

Glass Bridge: India’s first glass bridge inaugurated at Kanyakumari

Glass Bridge: ಕನ್ಯಾಕುಮಾರಿಯಲ್ಲಿ ಭಾರತದ ಮೊದಲ ಗಾಜಿನ ಸೇತುವೆ ಉದ್ಘಾಟನೆ

Rane-Kerala-Cm

Rane’s Remark: ಕೇರಳ ʼಮಿನಿ ಪಾಕಿಸ್ಥಾನʼವೆಂದ ಸಚಿವ ನಿತೇಶ್ ರಾಣೆ; ಸಿಎಂ ಪಿಣರಾಯಿ ಖಂಡನೆ

Team India;  key players to miss England series; young batsman takes on leadership role

Team India: ಇಂಗ್ಲೆಂಡ್‌ ಸರಣಿಗಿಲ್ಲ ಪ್ರಮುಖ ಆಟಗಾರರು; ಯುವ ಬ್ಯಾಟರ್‌ ಗೆ ನಾಯಕತ್ವದ ಹೊಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9-rabakavi

Rabakavi: ಬ್ರಹ್ಮಾನಂದ ಉತ್ಸವ; ಗಮನ ಸೆಳೆದ ರೊಟ್ಟಿ ಜಾತ್ರೆ

10

Bagalkot : ಸಕಲ ಸರ್ಕಾರಿ ಗೌರವಗಳೊಂದಿಗೆ ಯೋಧ ಮಹೇಶ್ ಮರೆಗೊಂಡ ಅಂತ್ಯಸಂಸ್ಕಾರ

ಪತ್ನಿ ಊರಿನತ್ತ ಪ್ರಯಾಣ ಬೆಳೆಸಿದರೆ… ಸಾವಿನ ಮನೆಯ ಕದ ತಟ್ಟಿದ ಯೋಧ ನಾಗಪ್ಪ ಮರೆಗೊಂಡ

ಪತ್ನಿ ಊರಿನತ್ತ ಪ್ರಯಾಣ ಬೆಳೆಸಿದರೆ… ಸಾವಿನ ಮನೆಯ ಕದ ತಟ್ಟಿದ ಯೋಧ ನಾಗಪ್ಪ ಮರೆಗೊಂಡ

4-soldier

Mahalingpur: ಇಂದು ಮೃತ ಯೋಧ ಮಹೇಶ ಅಂತ್ಯಕ್ರಿಯೆ; ಯೋಧನ ಮನೆಗೆ ಸಚಿವ ತಿಮ್ಮಾಪುರ ಭೇಟಿ

Mudhola

Mudhola: ಸಿಲಿಂಡರ್ ಸ್ಫೋಟ: ಹೊತ್ತಿ ಉರಿದ ಮನೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

11-

Kottigehara:ಸಿಲಿಂಡರ್ ಸ್ಫೋಟ, ಮನೆ ಸಂಪೂರ್ಣ ನೆಲಸಮ,ಕೆಲಸಕ್ಕೆ ಹೋಗಿದ್ದರಿಂದ ಮನೆಮಂದಿ ಪಾರು

Test Team; ಆಸ್ಟ್ರೇಲಿಯಾ ಪ್ರಕಟಿಸಿದ ವರ್ಷದ ಟೆಸ್ಟ್‌ ತಂಡಕ್ಕೆ ಭಾರತೀಯ ನಾಯಕ; ರೋಹಿತ್‌ ಅಲ್ಲ

TestTeam; ಆಸ್ಟ್ರೇಲಿಯಾ ಪ್ರಕಟಿಸಿದ ವರ್ಷದ ಟೆಸ್ಟ್‌ ತಂಡಕ್ಕೆ ಭಾರತೀಯ ನಾಯಕ; ರೋಹಿತ್‌ ಅಲ್ಲ

10-koratagere

Koratagere: ರಸ್ತೆಯಲ್ಲಿ ಚರಂಡಿ ನೀರು; ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಗ್ರಾಮಸ್ಥರು

ಸಂಸ್ಕೃತ ಕಾಲೇಜಿನ 120ರ ಸಂಭ್ರಮದಲ್ಲಿ ಹಳೆ ವಿದ್ಯಾರ್ಥಿಗಳು ಒಟ್ಟಾಗಲಿ: ವಿ| ಪ್ರಸನ್ನಾಚಾರ್ಯ

ಸಂಸ್ಕೃತ ಕಾಲೇಜಿನ 120ರ ಸಂಭ್ರಮದಲ್ಲಿ ಹಳೆ ವಿದ್ಯಾರ್ಥಿಗಳು ಒಟ್ಟಾಗಲಿ: ವಿ| ಪ್ರಸನ್ನಾಚಾರ್ಯ

9-rabakavi

Rabakavi: ಬ್ರಹ್ಮಾನಂದ ಉತ್ಸವ; ಗಮನ ಸೆಳೆದ ರೊಟ್ಟಿ ಜಾತ್ರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.