ವಿದೇಶಿ ಬಟ್ಟೆ ಬಹಿಷ್ಕರಿಸಿ; ಖಾದಿ ಬಟ್ಟೆ ಬಳಸಿ: ಚರಂತಿಮಠ


Team Udayavani, Oct 3, 2020, 1:11 PM IST

ವಿದೇಶಿ ಬಟ್ಟೆ ಬಹಿಷ್ಕರಿಸಿ; ಖಾದಿ ಬಟ್ಟೆ ಬಳಸಿ: ಚರಂತಿಮಠ

ಬಾಗಲಕೋಟೆ: ಕೋವಿಡ್‌ನ‌ಂತಹ ಇಂದಿನ ಸಂದಿಗ್ಧ ಸಂದರ್ಭದಲ್ಲಿ ಜನರು ಸರಳ ಮತ್ತು ಸಾತ್ವಿಕ ಬದುಕು, ಅವರ ರಾಷ್ಟ್ರಭಕ್ತಿ, ಆತ್ಮಗೌರವ, ಸ್ವಾಭಿಮಾನ ನಮಗೆ ಅನುಕರಣೀಯವಾಗಬೇಕಾಗಿದೆ ಎಂದು ಬಿವಿವಿ ಸಂಘದ ಕಾರ್ಯಾಧ್ಯಕ್ಷ, ಶಾಸಕ ಡಾ|ವೀರಣ್ಣ ಚರಂತಿಮಠ ಹೇಳಿದರು.

ನಗರದ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 151ನೇ ಮತ್ತು ವಿಶ್ವಕಂಡ ಅಪ್ರತಿಮ ದೇಶಭಕ್ತ ಲಾಲ್‌ಬಹದ್ದೂರ ಶಾಸ್ತ್ರೀಜಿಯವರ 116ನೇ ಜಯಂತ್ಯೋತ್ಸವದ ಅಂಗವಾಗಿ ಗಾಂಧಿ ಭಜನ್‌ ಹಾಗೂ ಬಿವಿವಿ ಸಂಘದ ನರ್ಸಿಂಗ್‌ ಕಾಲೇಜಿನ ನವೀಕೃತಗೊಂಡ ನೂತನ ಕಟ್ಟಡದ ಉದ್ಘಾಟನೆ ಇಂದು ಜರುಗಿತು.

ಸಾಂಸ್ಕೃತಿಕ ಪರಂಪರೆಯನ್ನು ಹೊಂದಿದ ಈ ದೇಶವನ್ನು ಗೌರವಿಸಿ, ಭಾಷೆ-ನಾಡು-ನುಡಿಯನ್ನು ಅರ್ಥೈಸಿಕೊಂಡು
ಸೌಹಾರ್ದಯುತವಾಗಿ ಬದುಕು ನಡೆಸುವುದು ಇಂದಿನ ದಿನಗಳಲ್ಲಿ ಅಗತ್ಯವಾಗಿದೆ ಎಂದರು. ಗೌರವ ಕಾರ್ಯದರ್ಶಿ ಮಹೇಶ ಎನ್‌. ಅಥಣಿ, ವೈದ್ಯಕೀಯ ಕಾಲೇಜುಗಳ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಸಿದ್ದಣ್ಣ ಶೆಟ್ಟರ ಹಾಗೂ ಕಾಲೇಜುಗಳ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷರಾದ ಅಶೋಕ ಎಂ. ಸಜ್ಜನ (ಬೇವೂರ) ಉಪಸ್ಥಿತರಿದ್ದು, ಈರ್ವರು ಮಹಾತ್ಮರ ಭಾವಚಿತ್ರಕ್ಕೆ ನಮನ ಸಲ್ಲಿಸಿದರು.

ಬಿವಿವಿ ಸಂಘದ ಗೌರವಾನ್ವಿತ ಸದಸ್ಯರಾದ ಸಿ.ಎಂ. ಅಥಣಿ, ಮಲ್ಲಪ್ಪಣ್ಣ ಆರಬ್ಬಿ, ಶಾಲಾ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಗುರುಬಸವ ಸೂಳಿಬಾವಿ, ವಸತಿನಿಲಯದ ಕಾರ್ಯಾಧ್ಯಕ್ಷ ಶಿವಕುಮಾರ ಹಿರೇಮಠ, ಬಿವಿವಿ ಸಂಘದ ಕಾಲೇಜುಗಳ ಆಡಳಿತ ಮಂಡಳಿಯ ಸದಸ್ಯರಾದ ನಿಂಬೆಣ್ಣ ಎಸ್‌. ದೇವಣಗಾವಿ, ಚಂದ್ರಶೇಖರ ಜಿಗಜಿನ್ನಿ, ರಾಜು ಎಂ. ಪಾಟೀಲ, ಬಸವರಾಜ ಇಂಡಿ, ಬಸವರಾಜ ಎಸ್‌. ಹಿರೇಗೌಡರ, ಶರಣ ನಾವಲಗಿ ಉಪಸ್ಥಿತರಿದ್ದರು.

ನಗರದ ಬಿವಿವಿ ಸಂಘದ ಅಕ್ಕಮಹಾದೇವಿ ಮಹಿಳಾ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಕಾಲೇಜಿನ ಎನ್‌ಎಸ್‌ ಎಸ್‌ ಘಟಕದಿಂದ ಶುಕ್ರವಾರ 150ನೇ ಗಾಂಧೀ ಜಯಂತಿ ಮತ್ತು ಲಾಲ್‌ ಬಹದ್ದೂರ ಶಾಸ್ತ್ರೀ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಪ್ರಾಚಾರ್ಯೆ ಎಸ್‌.ಜೆ. ಒಡೆಯರ, ಶ್ರೀಲತಾ ಮುರುಗೋಡ ಮುಂತಾದವರು ಉಪಸ್ಥಿತರಿದ್ದರು. ವಿದ್ಯಾಗಿರಿಯ ಎಂಬಿಎ ಸಂಸ್ಥೆಯಾದ ಬಿಮ್ಸ್‌ನಲ್ಲಿ ಶುಕ್ರವಾರ ಮಹಾತ್ಮ ಗಾಂಧಿ ಹಾಗೂ ಲಾಲ್‌ ಬಹದ್ದೂರ್‌ ಶಾಸ್ತ್ರಿ ಜಯಂತಿ ಆಚರಿಸಲಾಯಿತು. ಬಿಮ್ಸ್‌ ನಿರ್ದೇಶಕ ಡಾ|ಆರ್‌.ಜಿ. ಅಳ್ಳಗಿ, ಡಾ|ಅಶೋಕ ಉಟಗಿ, ಡಾ|ಪ್ರಕಾಶ ವಡವಡಗಿ, ಪ್ರೊ. ಮಾಣಿಕಚಂದ ಬಸ್ತವಾಡೆ, ಪ್ರೊ| ಶಿವಕುಮಾರ ಮಲಗಿಹಾಳ ಉಪಸ್ಥಿತರಿದ್ದರು.

ನಗರದ ಬಿವಿವಿ ಸಂಘದ ಬಸವೇಶ್ವರ ವಾಣಿಜ್ಯ ಕಾಲೇಜನಲ್ಲಿ ಮಹಾತ್ಮ ಗಾಂಧಿ ಮತ್ತು ಲಾಲ್‌ ಬಹದ್ದೂರ ಶಾಸ್ತ್ರಿ ಜಯಂತಿ
ಆಚರಿಸಲಾಯಿತು. ಪ್ರಾಚಾರ್ಯೆ ಎಸ್‌.ಎಚ್‌. ಶೆಟ್ಟರ, ಐಕ್ಯೂಎಸಿ ಸಂಯೋಜಕ ಡಾ|ಜೆ.ವಿ. ಚವ್ಹಾಣ್‌, ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರೊ| ಎಂ.ವಿ. ಜಿಗಬಡ್ಡಿ, ಪ್ರೊ| ಪಿ.ಬಿ. ತಿಪ್ಪಣ್ಣವರ, ಬಿಬಿಎ ವಿಭಾಗದ ಸಂಯೋಜಕ ಪ್ರೊ| ವಿದ್ಯಾ ವಸ್ತ್ರದ ಮುಂತಾದವರು ಉಪಸ್ಥಿತರಿದ್ದರು. ವಿದ್ಯಾಗಿರಿಯ ಬಿವಿವಿ ಸಂಘದ ಬಸವೇಶ್ವರ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಘಟಕಗಳ ಸಹಯೋಗದಲ್ಲಿ ಮಹಾತ್ಮ ಗಾಂಧಿ ಹಾಗೂ ಲಾಲ್‌ ಬಹದ್ದೂರ ಜಯಂತಿ ಆಚರಿಸಲಾಯಿತು. ಪ್ರಾಚಾರ್ಯ ಟಿ.ಬಿ. ಕೋರಿಶೆಟ್ಟಿ, ಪ್ರಾಧ್ಯಾಪಕರಾದ ಲಕ್ಷ್ಮಣ ಕಾಂಬಳೆ, ಮಲ್ಲಪ್ಪ ನಾಡಗೌಡರ ಮುಂತಾದವರು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

EVM’s cannot be tampered with, they are safe: Rajiv Kumar

EVM: ಮತಯಂತ್ರ ತಿರುಚಲು ಸಾಧ್ಯವಿಲ್ಲ, ಅವು ಸುರಕ್ಷಿತ: ರಾಜೀವ್‌ಕುಮಾರ್‌

Eshwar–forest

Forest Department: ಇದ್ದಲ್ಲಿಯೇ ಅರಣ್ಯ ಅಪರಾಧಗಳ ದಾಖಲು: “ಗರುಡಾಕ್ಷಿ’ಗೆ ಚಾಲನೆ

Congress-Symbol

Commission: 60 ಪರ್ಸೆಂಟ್‌ ಕಮಿಷನ್‌: ಎಚ್‌ಡಿಕೆ ವಿರುದ್ಧ ಮುಗಿಬಿದ್ದ ಆಡಳಿತ ಪಕ್ಷ

BBMP-ED

illegal Investigation: ಬಿಬಿಎಂಪಿ ಮುಖ್ಯ ಎಂಜಿನಿಯರ್‌ ಕಚೇರಿ ಮೇಲೆ ಇ.ಡಿ. ದಾಳಿ

Bjp-Rijiju

Waqf Report: ಅಮಿತ್‌ ಶಾ ಅಂಗಳಕ್ಕೆ ಭಿನ್ನರ ವಕ್ಫ್ ವರದಿ: ಕಿರಣ್‌ ರಿಜಿಜು ಮೂಲಕ ಸಲ್ಲಿಕೆ

Udupi:ಗೀತಾರ್ಥ ಚಿಂತನೆ 149: ಜಗತ್ತಿನಲ್ಲಿ ಇಷ್ಟೊಂದು ವ್ಯತ್ಯಾಸವೇಕೆ? ಪ್ರಶ್ನೆಗುತ್ತರವಿಲ್ಲ

Udupi:ಗೀತಾರ್ಥ ಚಿಂತನೆ 149: ಜಗತ್ತಿನಲ್ಲಿ ಇಷ್ಟೊಂದು ವ್ಯತ್ಯಾಸವೇಕೆ? ಪ್ರಶ್ನೆಗುತ್ತರವಿಲ್ಲ

ಮಮ್ತಾಜ್‌ ಅಲಿ ಆತ್ಮಹ*ತ್ಯೆ ಪ್ರಚೋದನೆ ಆರೋಪ: ಆರೋಪಿಗಳ ವಿರುದ್ದ ಆರೋಪ ಪಟ್ಟಿ ಸಲ್ಲಿಕೆ

ಮಮ್ತಾಜ್‌ ಅಲಿ ಆತ್ಮಹ*ತ್ಯೆ ಪ್ರಚೋದನೆ ಆರೋಪ: ಆರೋಪಿಗಳ ವಿರುದ್ದ ಆರೋಪ ಪಟ್ಟಿ ಸಲ್ಲಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬಾಗಲಕೋಟೆ: ಕುಳಗೇರಿ ಕೆರೆಗೆ ಸೋಮನಕೊಪ್ಪ ಚರಂಡಿ ನೀರು!

ಬಾಗಲಕೋಟೆ: ಕುಳಗೇರಿ ಕೆರೆಗೆ ಸೋಮನಕೊಪ್ಪ ಚರಂಡಿ ನೀರು!

6-kulageri-cross

Kulageri Cross: ಹೂಳು ತುಂಬಿದ ಕಾಲುವೆ…ಪೋಲಾಗುತ್ತಿದೆ ಮಲಪ್ರಭಾ ಎಡದಂಡೆ ಕಾಲುವೆ ನೀರು…

New year : ಬಾಗಲಕೋಟೆ ಜಿಲ್ಲೇಲಿ ಅಭಿವೃದ್ಧಿ ಬಾಗಿಲು ತೆರೆಯಲಿ-ಸ್ಥಳಾಂತರವಾಗಬೇಕಿದೆ ಐಹೊಳೆ!

New year : ಬಾಗಲಕೋಟೆ ಜಿಲ್ಲೇಲಿ ಅಭಿವೃದ್ಧಿ ಬಾಗಿಲು ತೆರೆಯಲಿ-ಸ್ಥಳಾಂತರವಾಗಬೇಕಿದೆ ಐಹೊಳೆ!

9-rabakavi

Rabakavi: ಬ್ರಹ್ಮಾನಂದ ಉತ್ಸವ; ಗಮನ ಸೆಳೆದ ರೊಟ್ಟಿ ಜಾತ್ರೆ

10

Bagalkot : ಸಕಲ ಸರ್ಕಾರಿ ಗೌರವಗಳೊಂದಿಗೆ ಯೋಧ ಮಹೇಶ್ ಮರೆಗೊಂಡ ಅಂತ್ಯಸಂಸ್ಕಾರ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Thalassery; CPM leader’s hit case: 9 RSS members sentenced to life imprisonment

Thalassery: ಸಿಪಿಎಂ ನಾಯಕನ ಹತ್ಯೆ ಪ್ರಕರಣ: ಆರೆಸ್ಸೆಸ್‌ನ 9 ಸದಸ್ಯರಿಗೆ ಜೀವಾವಧಿ ಶಿಕ್ಷೆ

EVM’s cannot be tampered with, they are safe: Rajiv Kumar

EVM: ಮತಯಂತ್ರ ತಿರುಚಲು ಸಾಧ್ಯವಿಲ್ಲ, ಅವು ಸುರಕ್ಷಿತ: ರಾಜೀವ್‌ಕುಮಾರ್‌

Eshwar–forest

Forest Department: ಇದ್ದಲ್ಲಿಯೇ ಅರಣ್ಯ ಅಪರಾಧಗಳ ದಾಖಲು: “ಗರುಡಾಕ್ಷಿ’ಗೆ ಚಾಲನೆ

Congress-Symbol

Commission: 60 ಪರ್ಸೆಂಟ್‌ ಕಮಿಷನ್‌: ಎಚ್‌ಡಿಕೆ ವಿರುದ್ಧ ಮುಗಿಬಿದ್ದ ಆಡಳಿತ ಪಕ್ಷ

BBMP-ED

illegal Investigation: ಬಿಬಿಎಂಪಿ ಮುಖ್ಯ ಎಂಜಿನಿಯರ್‌ ಕಚೇರಿ ಮೇಲೆ ಇ.ಡಿ. ದಾಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.