ವಿಭೂತಿ ಪುರುಷ ಗೌರಿಶಂಕರ ಜಾತ್ರೆ
Team Udayavani, May 4, 2019, 12:36 PM IST
ರಾಂಪುರ: ಹಿಂದಿನ ಕಾಲದಲ್ಲಿ ಸಾಧು-ಸಂತರು, ಶರಣರು, ಮಹಾತಪಸ್ವಿಗಳು ಕಾಲಕಾಲಕ್ಕೆ ಆಗಾಗ ಅವತರಿಸಿ ಪುರಾತನ ಕಾಲದ ಧಾರ್ಮಿಕ ತತ್ವ ಪ್ರಚಾರಗೈದು, ಇಡೀ ಜಗತ್ತಿಗೆ ಭಕ್ತಿಯ ರಸ ಊಣ ಬಡಿಸಿದ್ದಾರೆ. ಹಿಂದೂ ಧರ್ಮದ ಉಳಿವಿಗಾಗಿ ಹಲವು ಶರಣರು ತಮ್ಮ ಜೀವನವನ್ನೇ ಮುಡುಪಾಗಿಸಿದ್ದಾರೆ. ಅಂತಹ ಮಹಾನ್ ವಿಭೂತಿ ಪುರುಷರಲ್ಲಿ ಕಿರಸೂರಿನ ಗೌರಿಶಂಕರ ಸ್ವಾಮಿಗಳು ಒಬ್ಬರು.
ಹೌದು, ಬಾಗಲಕೋಟೆ ತಾಲೂಕಿನ ಕಿರಸೂರ ಗ್ರಾಮದಲ್ಲಿ ಜಗದ್ಗುರು ಪಂಡಿತರಾಧ್ಯ ಸೂರ್ಯ ಸಿಂಹಾಸನ ಪೀಠದ ಶಾಖಾ ಮಠಗಳಲ್ಲಿ ಕಿರಸೂರಿನ ಮಠವೂ ಒಂದು. ಲೌಕಿಕ ಸಂಪತ್ತಿನ ಮೇಲೆ ಎಳ್ಳಷ್ಟು ಆಸೆ ಇಟ್ಟುಕೊಳ್ಳದ ಸರ್ವಸಂಗ ಪರಿತ್ಯಾಗಿಗಳಾಗಿ ಗೌರಿಶಂಕರ ಶ್ರೀಗಳು, ಸಿದ್ಧಾಂತ ಶಿಖಾಮಣಿಯ ಹರಿಕಾರರಾದ ಶಿವಯೋಗಿ ಶಿವಾಚಾರ್ಯರ ಯುಕ್ತಿಯಂತೆ ನಡೆದುಕೊಂಡು ಬಂದವರು. ಲೋಕ ಕಲ್ಯಾಣಕ್ಕಾಗಿ ಕೋಟಿ ಕೋಟಿ ಜಪಯಜ್ಞ ಗೈದ ಹೆಗ್ಗಳಿಕೆ ಇವರದ್ದು. ಈ ಕ್ಷೇತ್ರ ಭವರೋಗಳಗಳ ನಿವಾರಣಾ ಸ್ಥಳವಾಗಿ ಮಾರ್ಪಟಿದೆ.
ಧರ್ಮದ ಪ್ರಸಾರಕ: ಶ್ರೀಗಳು ಮಾನವತಾ ಧರ್ಮದ ಪ್ರಸಾರಕರಾಗಿದ್ದರು. ತಪೋನುಷ್ಠಾನ ಗೈದಿದ್ದರಿಂದ ಈ ಭಾಗವು ಪಾವನವಾಗಿದೆ. ಅರಸಿಬಂದ ಭಕ್ತರ ಭವರೋಗ ಕಳೆಯುವ, ಭಕ್ತರ ಮನೋಬಯಕೆ ಈಡೇರಿಸುವ ಕಾಮಧೇನು ಕಲ್ಪವೃಕ್ಷವಾಗಿದೆ. ಶ್ರೀಗಳು ಜಗತ್ತಿನಿಂದ ಮರೆಯಾದರೂ ಸರ್ವರ ಹೃದಯ ಮಂದಿರದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ. ಶಿವಾಚಾರ್ಯರ ವ್ಯಕ್ತಿತ್ವ ಹಿಮಾಲಯ ಪರ್ವತದ ಶಿಖರದಷ್ಟೇ ಎತ್ತರವಾಗಿದೆ. ಸಾಗರದಷ್ಟು ವಿಶಾಲವಾಗಿರುವ ಶ್ರೀಮಠದಲ್ಲಿ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಧಾನ ಧರ್ಮಗಳ ಕಾರ್ಯ ಇಂದಿಗೂ ಬರದಿಂದ ಸಾಗಿವೆ.
ಜೋಳದ ನುಚ್ಚು ಪ್ರಸಾದ: ಬಡವರ ಬದಾಮಿ ಎಂದೇ ಈ ಭಾಗದಲ್ಲಿ ಪ್ರಸಿದ್ಧಿ ಹೊಂದಿರುವ ಬಿಳಿ ಜೋಳದ ನುಚ್ಚು ಶ್ರೀಮಠದ ವಿಶೇಷ ಪ್ರಸಾದ. ಜಾತ್ರೆಗೆ ಬಂದವರು ಜೋಳದ ನುಚ್ಚಿನ ಪ್ರಸಾದ ಸ್ವೀಕರಿಸಿಯೇ ಹೋಗಬೇಕು. ಭಕ್ತರು ನೀಡಿದ ದೇಣಿಗೆ ಹಾಗೂ ಸೇವೆ ಹಣದಿಂದ ಜಾತ್ರಾ ಮಹೋತ್ಸವ, ವಿವಿಧ ಧಾರ್ಮಿಕ ಪೂಜೆ ಕಾರ್ಯಕ್ರಮಗಳು ಶ್ರದ್ಧಾ ಭಕ್ತಿಯಿಂದ ನಡೆಸಿಕೊಂಡು ಬರುತ್ತಿದ್ದಾರೆ.
ವಿವಿಧ ಕಾರ್ಯಕ್ರಮ: ಮೇ 4ರಂದು ರಾತ್ರಿ 10:30ಕ್ಕೆ ಭಜನಾ ಕಾರ್ಯಕ್ರಮ ನಡೆಯಲಿದೆ. ಮೇ 5ರಂದು ಬೆಳಗ್ಗೆ 6ಕ್ಕೆ ಕತುೃರ್ ಗದುಗ್ಗೆಗೆ ಮಹಾ ರುಧ್ರಾಭಿಷೇಕ, ಬೆಳಗ್ಗೆ 8ಕ್ಕೆ ಸಕಲ ವಾದ್ಯಮೇಳಗಳೊಂದಿಗೆ ಡೊಳ್ಳಿನ ಕುಣಿತ ಮತ್ತು ಭಜನಾ ಮೇಳಗಳೊಂದಿಗೆ ಉತ್ಸವ ಮೂರ್ತಿ, ಪಲ್ಲಕ್ಕಿ, ಕಳಸದ ಮೆರವಣಿಗೆ, ಸುಮಂಗಲೆಯರಿಂದ ಕುಂಭಮೇಳ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಜರುಗಲಿದೆ. ಸಂಜೆ 5ಕ್ಕೆ ಸಕಲ ಶ್ರೀಗಳ ಸಾನ್ನಿಧ್ಯದಲ್ಲಿ ಮಹಾರಥೋತ್ಸವ ಜರುಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
India: ಒಂದು ದೇಶ ಒಂದು ಚುನಾವಣೆ ಜಾರಿ ಆಗಲಿ: ಪೇಜಾವರ ಸ್ವಾಮೀಜಿ
Rabkavi Banahatti: ಲೋಕ ಅದಾಲತ್ ನಲ್ಲಿ ಒಂದಾದ ದಂಪತಿಗಳು
ವಿಳಾಸ ಕೇಳುವ ನೆಪದಲ್ಲಿ ವ್ಯಕ್ತಿಯ ಕೊರಳಲ್ಲಿದ್ದ ಚಿನ್ನದ ಚೈನ್ ಕದ್ದ ಅಪರಿಚಿತ ವ್ಯಕ್ತಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.