![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Sep 21, 2019, 9:50 AM IST
ಬಾಗಲಕೋಟೆ: ಪ್ರವಾಹದಿಂದ ಸಂಕಷ್ಟಕ್ಕೆ ಒಳಗಾದ ಮಿರ್ಜಿ ಗ್ರಾಮಸ್ಥರನ್ನು ತಾಲೂಕು ಆಡಳಿತ ಸಂಪೂರ್ಣ ನಿರ್ಲಕ್ಷ್ಯ ಮಾಡಿದೆ ಎಂದು ಆರೋಪಿಸಿ ಗ್ರಾಮಸ್ಥರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಮಿರ್ಜಿ ಗ್ರಾಮದಿಂದ ಆಗಮಿಸಿದ್ದ ನೂರಾರು ಜನರು, ಡಿಸಿ ಕಚೇರಿ ಎದುರು ಪ್ರತಿಭಟಿಸಿ ಮನವಿ ಸಲ್ಲಿಸಿದರು. ಕಳೆದ ತಿಂಗಳು ಘಟಪ್ರಭಾ ನದಿ ಪ್ರವಾಹದಿಂದ ಮಿರ್ಜಿ ಗ್ರಾಮಕ್ಕೆ ನೀರು ಹೊಕ್ಕಿತ್ತು. ಇದರಿಂದ ಶೇ.70ರಷ್ಟು ಮನೆಗಳು ಬಿರುಕು ಬಿಟ್ಟು ಬೀಳುವ ಸ್ಥಿತಿಯಲ್ಲಿವೆ. ಆದರೆ, ಅಧಿಕಾರಿಗಳು ಮನೆಗಳ ಸಮೀಕ್ಷೆಯಲ್ಲಿ ಕೇವಲ ಶೇ.40ರಷ್ಟು ಮನೆಗಳನ್ನು ಪರಿಗಣಿಸಿದ್ದಾರೆ. ಇದರಿಂದ ಸಂತ್ರಸ್ತರಿಗೆ ತೀವ್ರ ಅನ್ಯಾಯವಾಗಿದೆ. ಕೂಡಲೇ ಪ್ರವಾಹದಿಂದ ಬಿರುಕುಬಿಟ್ಟ ಮನೆಗಳಿಗೆ ಪರಿಹಾರ ನೀಡುವ ಜತೆಗೆ ಸಂತ್ರಸ್ತರಿಗೆ ಪುನರ್‌ವಸತಿ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಗ್ರಾಮದ ಪ್ರಮುಖರಾದ ಯಲ್ಲಪ್ಪ ಲೋಗಾವಿ, ಈಶ್ವರ ಸವದತ್ತಿ, ಅಜಿತ ಕಲ್ಲೋಳಿ, ವೆಂಕಪ್ಪ ಲೋಕಾವಿ, ಬಸಪ್ಪ ಕಂಬಾರ, ಬಸಪ್ಪ ಜ್ಯೋತೆಪ್ಪಗೋಳ, ಮಂಜು ಆಲಕಟ್ಟಿ, ಸದಾಶಿವ ತಮದಟ್ಟಿ, ಪ್ರಕಾಶ ಕುಂಬಾರ, ಈರಪ್ಪ ಕವಳ್ಳಿ, ಬಾಳಾಸಾಬ ಇಂಗಳೆ, ರಾಚಪ್ಪ ಕಣಬೂರ, ಪ್ರಕಾಶ ನಾಗನೂರ ಸೇರಿದಂತೆ ನೂರಾರು ಜನರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.