ಯೋಗಪಟು ಸಾಧನೆಗೆ ಬೇಕಿದೆ ಸಹಾಯಹಸ್ತ
ಅಂತಾರಾಷ್ಟ್ರೀಯ ಮಟ್ಟಕ್ಕೆ ಹಳ್ಳಿ ಹುಡುಗ ಆಯ್ಕೆ! ರಾಷ್ಟ್ರಮಟ್ಟದ ಯೋಗ ಸ್ಪರ್ಧೆಯಲ್ಲಿ ಚಿನ್ನದ ಪದಕ
Team Udayavani, Jul 29, 2021, 4:01 PM IST
ಜಮಖಂಡಿ: ಗುಜರಾತ ರಾಜ್ಯದಲ್ಲಿ ನಡೆದ 4ನೇ ರಾಷ್ಟ್ರಮಟ್ಟದ ಯೋಗ ಸ್ಪರ್ಧೆಯಲ್ಲಿ ಯೋಗಪಟು ವಿಜಯ ಮಹಾವೀರ ಸಿದ್ದಗೌಡ ಅವರು ಚಿನ್ನದ ಪದಕ ಪಡೆದು ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ತಾಲೂಕಿನ ಮೈಗೂರ ಗ್ರಾಮದ ವಿಜಯ ಮಹಾವೀರ ಸಿದ್ದಗೌಡ ಅವರು ಚಿನ್ನದ ಪದಕ ಪಡೆದು ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ದೇಶದ ವಿವಿಧ ರಾಜ್ಯಗಳಿಂದ 228 ಯೋಗ ಕ್ರೀಡಾಪಟುಗಳು ಪಾಲ್ಗೊಂಡಿದ್ದರು. ಹಸ್ತ ವೃಶ್ಚಿಕಾಸನ, ಪೂರ್ಣಧನುರಸನ, ಹನುಮನಾಸನ, ಪೂರ್ಣಚಕ್ರಾಸನ, ಮಯೂರಸನ, ನಟರಾಜಾಸನ, ಪಶ್ಚಿಮೊತ್ತಾನಾಸನ ಸಹಿತ ವಿವಿಧ ಕಠಿಣ ಆಸನಗಳ ಗಮನ ಸೆಳೆದಿದ್ದಾರೆ.
ಥೈಲ್ಯಾಂಡ್ ಅಥವಾ ನೇಪಾಳದಲ್ಲಿ ಜರಗುವ ಅಂತಾರಾಷ್ಟ್ರೀಯ ಯೋಗ ಕ್ರೀಡಾಕೂಟಕ್ಕೆ ಆಯ್ಕೆಗೊಂಡಿದ್ದಾರೆ. ತಂದೆ ಮಹಾವೀರ ಗರಡಿಯಲ್ಲಿ ಪಳಗಿದ ವಿಜಯ ಚಿಕ್ಕ ವಯಸ್ಸಿನಲ್ಲಿಯೇ ಯೋಗ ಪರಿಪಾಠ ಮಾಡಿಕೊಂಡಿದ್ದರು. ತಂದೆಯವರನ್ನೆ ಗುರು ಮಾಡಿಕೊಂಡು ಯೋಗ ಕಲಿತು, ಬಾಗಲಕೋಟೆ, ಜಮಖಂಡಿ, ಹಳಿಂಗಳಿ ಸೇರಿದಂತೆ 21 ಯೋಗ ತರಬೇತಿಗಳನ್ನು ನಡೆಸಿದ್ದಾರೆ.
ಬಿಪಿಎಡ್ ಓದುತ್ತಿರುವ ವಿಜಯ ಯೋಗ ಶಿಕ್ಷಕ ತಯಾರಿ ನಡೆಸುತ್ತಿದ್ದಾರೆ. 2021ರಲ್ಲಿ ರಾಜಪುತ್‌ನಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಪಡೆದು ಪ್ರಥಮ ಸ್ಥಾನ ಪಡೆದು ಅಂತಾರಾಷ್ಟ್ರೀಯ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದರು. ಆರ್ಥಿಕ ತೊಂದರೆ ಅನುಭವಿಸುವ ಮೂಲಕ ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸಲು ಸಾಧ್ಯವಾಗಿರಲಿಲ್ಲ. ಈ ಸಲ ಥೈಲ್ಯಾಂಡ್ ಅಥವಾ ನೇಪಾಳದಲ್ಲಿ ಜರಗುವ ಅಂತಾರಾಷ್ಟ್ರೀಯ ಕ್ರೀಡೆಗೆ ತೆರಳಲು ಮತ್ತೆ ಆರ್ಥಿಕ ತೊಂದರೆಯಿಂದ ವಂಚಿತರಾಗದಂತೆ ಸರ್ಕಾರ, ಕ್ರೀಡಾ ಇಲಾಖೆ, ದಾನಿಗಳು, ಕ್ರೀಡಾ ಪ್ರೇಮಿಗಳು ಸಹಾಯ ಸಹಕಾರಕ್ಕಾಗಿ ಕಾಯುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
US Election 2024, Kamala Vs Trump: ಅಮೆರಿಕ ಅಧ್ಯಕ್ಷರ ಚುನಾವಣೆ ಹೇಗೆ? ಏನು? ಎತ್ತ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.