ಪರಿಶೀಲಿಸ್ತಿರೋ; ಚಹಾ ಕುಡಿದು ಹೋಗ್ತಿರೋ! : ಅಂಗನವಾಡಿ ಸೂಪರ್‌ವೈಜರ್‌ಗೆ ತರಾಟೆ
Team Udayavani, Feb 21, 2021, 4:42 PM IST
ಬಾಗಲಕೋಟೆ: ಏನಮ್ಮ, ಅಂಗನವಾಡಿ ವಿಜಿಟ್ (ಪರಿಶೀಲನೆ)ಗೆ ಬಂದಾಗ ಎಲ್ಲವನ್ನೂ ನೋಡ್ತಿರೋ, ಇಲ್ಲಾ ಚಹಾ ಕುಡಿದು ಹೋಗ್ತಿರೋ.. ಯಾವುದೇ ದಾಖಲೆ ಸರಿಯಾಗಿಲ್ಲ. ನಾವೆಲ್ಲ ಬರುತ್ತೇವೆಂದು ದಾಖಲೆ ಪುಸ್ತಕಕ್ಕೆ ಕವರ್ ಹಾಕಿ, ಶುಭ್ರವಾಗಿಟ್ಟಿದ್ದಾರೆ. ಅದರಲ್ಲಿ ಏನೂ ಬರೆದಿಲ್ಲ…ರಾಂಪುರ ಭಾಗದ ಅಂಗನವಾಡಿ ಸೂಪರ್ ವೈಜರ್ ಬಡಿಗೇರ ಅವರಿಗೆ ತಹಶೀಲ್ದಾರ್ ಗುರುಸಿದ್ದಯ್ಯ ಹಿರೇಮಠ ತರಾಟೆಗೆ ತೆಗೆದುಕೊಂಡ ಪರಿಯಿದು.
ರಾಜ್ಯ ಸರ್ಕಾರದ ನಿರ್ದೇಶನದ ಮೇರೆಗೆ ತಾಲೂಕಿನ ಬಿಲ್‌ಕೆರೂರ ಗ್ರಾಮದಲ್ಲಿ ಇಡೀ ತಾಲೂಕು ಆಡಳಿತ ಗ್ರಾಮ ವಾಸ್ತವ್ಯ ನಡೆಸಿತು. ತಾಪಂ ಇಒ ಎನ್.ವೈ. ಬಸರಿಗಿಡದ, ಭೂದಾಖಲೆಗಳ ಸಹಾಯಕ ನಿರ್ದೇಶಕ ಕೊಲ್ಹಾರ, ಹೆಸ್ಕಾಂ ಎಇಇ ಹಲಗತ್ತಿ ಸೇರಿದಂತೆ ವಿವಿಧ ತಾಲೂಕು ಮಟ್ಟದ ಅಧಿಕಾರಿಗಳು ಸುಮಾರು 3 ಗಂಟೆಗಳ ಕಾಲ ಗ್ರಾಮಸ್ಥರ ಅಹವಾಲು ಆಲಿಸಿದರು.
ಪಿಂಚಣಿ ಬಂದಿಲ್ಲ; ಆಶ್ರಯ ಮನೆ ಹಣ ಕೊಟ್ಟಿಲ್ಲ: ವಾಸ್ತವ್ಯದ ವೇಳೆ ಕಂದಾಯ ಇಲಾಖೆ ಸಮಸ್ಯೆಗಿಂತ ಪಿಂಚಣಿ, ಆಶ್ರಯ ಮನೆ, ಪಡಿತರ ಚೀಟಿ ಹೀಗೆ ವಿವಿಧ ಸಮಸ್ಯೆಗಳ ಅಹವಾಲು ಹೆಚ್ಚಿನ ಪ್ರಮಾಣದಲ್ಲಿ ಸಲ್ಲಿಕೆಯಾದವು. ಹೊಲಕ್ಕೆ ಹೋಗುವ ದಾರಿ ವಿಷಯದಲ್ಲಿ ಗಲಾಟೆ ಆಗುತ್ತಿರುವ ವಿಷಯವೂ ತಹಶೀಲ್ದಾರ್ ಗಮನಕ್ಕೆ ಬಂತು.
ಗ್ರಾಮದಲ್ಲಿ 1993 ಮತ್ತು 2000ನೇ ಸಾಲಿನಲ್ಲಿ ಆಶ್ರಯ ಯೋಜನೆಯಡಿಹಕ್ಕುಪತ್ರ ಕೊಡಲಾಗಿದೆ. ಫಲಾನುಭವಿಗಳು ಮನೆಯನ್ನೂ ಕಟ್ಟಿಕೊಂಡಿದ್ದಾರೆ. ಆ ಜಾಗೆ ಗ್ರಾಪಂನ ದಾಖಲೆ ನಂ.9ರಲ್ಲಿ ನಮೂದಾಗಿವೆ. ಆದರೆ, ಜಾಗೆ ಮಾಲೀಕರಿಗೆ ಇ ಸ್ವತ್ತಿನಲ್ಲಿ ಉತಾರೆ ದೊರೆಯುತ್ತಿಲ್ಲ. ಈ ಸಮಸ್ಯೆ ಕುರಿತು ಹಲವರು ಮನವಿ ಸಲ್ಲಿಸಿದ್ದು, ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು. ಅವರಿಂದ ನಿರ್ದೇಶನ ಬಂದ ಬಳಿಕ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಹಶೀಲ್ದಾರ ಹಿರೇಮಠ ತಿಳಿಸಿದರು.
ಪಿಂಚಣಿ ಬಂದಿಲ್ರಿ ಸಾಹೇಬ್ರ: ವಿಧವೆಯರು, ವೃದ್ಧರು, ವಿಕಲಚೇತನರು ತಮ್ಮ ಪಿಂಚಣಿ ಬಂದಿಲ್ರೀ ಸಾಹೇಬ್ರ ಎಂದು ಅಹವಾಲು ಸಲ್ಲಿಸಿದರು. ಈ ವೇಳೆ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗದ ಕಾರಣ ಹಲವರಿಗೆ ಪಿಂಚಣಿ ಹಣ ಬಂದಿಲ್ಲ. ಬ್ಯಾಂಕ್‌ಗೆ ಖಾತೆಗೆ ಆಧಾರ್ ಲಿಂಕ್ ಮಾಡಿಸಲು ಸೂಚಿಸಿದರು. ಹೊಸದಾಗಿ ಪಡಿತರ ಚೀಟಿಗೆ ಅರ್ಜಿ ಕರೆದಿದ್ದು, ಅರ್ಹ ಫಲಾನುಭವಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕೆಂದು ಸೂಚಿಸಿದರು.
ದಾರಿಗಿ ಅಡ್ಡ ಆಗಬ್ಯಾಡ್ರಿ: ನಮ್ಮ ಹೊಲಕ್ಕೆ ಹೋಗುವ ದಾರಿ ಬಂದ್ ಮಾಡಿದ್ದಾರೆ. ನಾವು ಹೊಲಕ್ಕೆ ಹೇಗೆ ಹೋಗುವುದೆಂದು ವೃದ್ಧೆಯೊಬ್ಬರು ಸಮಸ್ಯೆ ಹೇಳಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ತಹಶೀಲ್ದಾರ್ ಗುರುಸಿದ್ದಯ್ಯ ಹಿರೇಮಠ,ಇಂತಹ ಸಮಸ್ಯೆ ಗ್ರಾಮಸ್ಥರೇ ಒಗ್ಗಟ್ಟಿ ನಿಂದ ಬಗೆಹರಿಸಿಕೊಳ್ಳಬೇಕು. ದಾರಿಗೆ ಅಡ್ಡ ಮಾಡಿ, ಕೋಟಿ ಗಳಿಸಲು ಆಗಲ್ಲ. ಹೊಲಕ್ಕೆ ಹೋಗುವ ದಾರಿಗೆ ಯಾರೂ ಅಡ್ಡಿಪಡಿಸಬಾರದು ಎಂದರು. ಆಟಿಗೆ ಸಾಮಗ್ರಿ ಸವೆಯಲ್ಲ: ಅಹವಾಲು ಪಡೆದ ಬಳಿಕ ಗ್ರಾಮದ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿದ ತಹಶೀಲ್ದಾರ್ ಗ್ರಾಪಂನಿಂದಅಂಗನವಾಡಿ ಕೇಂದ್ರಗಳಿಗೆ ಮಕ್ಕಳ ಆಟಿಗೆ ವಸ್ತು, ಟಿವಿ ಹಾಗೂ ವಿವಿಧ ಸಾಮಗ್ರಿ ನೀಡಿದ್ದು, ಅವುಗಳನ್ನು ಬಳಕೆ ಮಾಡುತ್ತಿರುವ ಕುರಿತು ಪ್ರಶ್ನಿಸಿದರು. ಬಹುತೇಕ ಸಾಮಗ್ರಿಗಳು ಇನ್ನೂ ಸುಭ್ರವಾಗಿ ಒಂದೆಡೆ ಜೋಡಿಸಿಟ್ಟಿದ್ದನ್ನು ಕಂಡು, ಇವೆಲ್ಲ ಮಕ್ಕಳ ಆಟಿಕೆಗೆ ನೀಡಿದ್ದು, ಅವರಿಗೆ ಆಡಲು ಕೊಟ್ಟರೆ ಸವೆಯುವುದಿಲ್ಲ.ಮಕ್ಕಳಿಗೆ ಆಹಾರಧಾನ್ಯ ವಿತರಣೆ, ಗರ್ಭಿಣಿ, ಬಾಣಂತಿಯರಿಗೆ ಸರಿಯಾಗಿ ಪೌಷ್ಟಿಕ ಆಹಾರ ಕೊಡಬೇಕು. ಈ ಕುರಿತು ಸರಿಯಾಗಿ ದಾಖಲೆಗಳನ್ನೇ ಇಟ್ಟಿಲ್ಲ ಎಂದು ಎಂದು ಅಂಗನವಾಡಿ ಕಾರ್ಯಕರ್ತೆ ಹಾಗೂ ಸೂಪರ್ ವೈಜರ್ ಅವರನ್ನು ತರಾಟೆಗೆ ತೆಗೆದುಕೊಂಡರು.
ಖಾಸಗಿ ಶಾಲೆಯಲ್ಲೂ ಇಂತಹ ಸೌಲಭ್ಯ ಇರಲ್ಲ :
ಬಿಲ್‌ಕೆರೂರಿನ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿದ ವೇಳೆ ಅಲ್ಲಿ ಮಕ್ಕಳಿಗಾಗಿ ಹೈಟೆಕ್ ಮಾದರಿ ಆಟಿಕೆ ವಸ್ತುಗಳು, ಟಿ.ವಿ, ಗಣಿತ ಮಾದರಿ ಕಲಿಕೆಗೆ ಅನುಕೂಲವಾಗುವ ವಸ್ತುಗಳು ಕಂಡು ಖುಷಿ ಪಟ್ಟರು. ಇಂತಹ ಸೌಲಭ್ಯ ಯಾವುದೇ ಖಾಸಗಿ ಕಾನ್ವೆಂಟ್ ಶಾಲೆಯಲ್ಲೂ ಇರಲ್ಲ ಎಂದು ತಹಶೀಲ್ದಾರ್ ಗುರುಸಿದ್ದಯ್ಯ ಹಿರೇಮಠ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
India: ಒಂದು ದೇಶ ಒಂದು ಚುನಾವಣೆ ಜಾರಿ ಆಗಲಿ: ಪೇಜಾವರ ಸ್ವಾಮೀಜಿ
Rabkavi Banahatti: ಲೋಕ ಅದಾಲತ್ ನಲ್ಲಿ ಒಂದಾದ ದಂಪತಿಗಳು
ವಿಳಾಸ ಕೇಳುವ ನೆಪದಲ್ಲಿ ವ್ಯಕ್ತಿಯ ಕೊರಳಲ್ಲಿದ್ದ ಚಿನ್ನದ ಚೈನ್ ಕದ್ದ ಅಪರಿಚಿತ ವ್ಯಕ್ತಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.