Waqf Issue: ಪಕ್ಷದ ಕಾರ್ಯಕರ್ತನಾಗಿ ಯಾರೇ ಹೋರಾಟಕ್ಕೆ ಕರೆದರೂ ಹೋಗ್ತಿನಿ: ಪ್ರತಾಪ್ ಸಿಂಹ
ರಾಜ್ಯಾಧ್ಯಕ್ಷ ವಿಜಯೇಂದ್ರ ಕರೆ ಕೊಟ್ಟ ಪ್ರತಿಭಟನೆಯಲ್ಲೂ ಭಾಗಿಯಾಗಿದ್ದೆ: ಮಾಜಿ ಸಂಸದ
Team Udayavani, Nov 30, 2024, 7:32 PM IST
ರಬಕವಿ-ಬನಹಟ್ಟಿ: ವಕ್ಫ್ ಭೂ ಕಬಳಿಕೆ ವಿರುದ್ಧ ಬೃಹತ್ ಜನಾಂದೋಲನವನ್ನೇ ರೂಪಿಸಿರುವ ಬಸನಗೌಡ ಪಾಟೀಲ್ ಯತ್ನಾಳ್ರ ಕರೆ ಮೇರೆಗೆ ಬಂದಿದ್ದೇನೆ ಹಾಗೆಯೇ ಪಕ್ಷದ ಕಾರ್ಯಕ್ಕೆ ಯಾರೇ ಕರೆದರೂ ಹೋಗುತ್ತೀನಿ ಎಂದು ಮಾಜಿ ಸಂಸದ ಪ್ರತಾಪ ಸಿಂಹ ಪ್ರತಿಪಾದಿಸಿದರು.
ಬನಹಟ್ಟಿಯ ಪ್ರವಾಸಿ ಮಂದಿರದಲ್ಲಿ ವಕ್ಫ್ ಭೂ ಕಬಳಿಕೆ ವಿರುದ್ಧ ಯತ್ನಾಳ್ ನೇತೃತ್ವದ ಹೋರಾಟಕ್ಕೆ ಅಸಮಾಧಾನ ವಿಚಾರವಾಗಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿ ಮಾತನಾಡಿ ನಾನು ನ.22ರಂದು ರಾಜ್ಯಾಧ್ಯಕ್ಷ ವಿಜಯೇಂದ್ರ ಪ್ರತಿಭಟನೆಗೆ ಕರೆ ಕೊಟ್ಟಾಗ ಈ ಮೊದಲಿನ ಕ್ಷೇತ್ರವಾದ ಕೊಡಗು ಭಾಗಕ್ಕೆ ತೆರಳಿ ಪ್ರತಿಭಟನೆಯಲ್ಲಿ ಭಾಗಿಯಾಗಿ ಬಂದಿದ್ದೇನೆ. ನಾನು ಪಕ್ಷದ ಕಾರ್ಯಕರ್ತನಾಗಿ ಈ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದೇನೆ ಎಂದರು.
ಇದೂ ಬಿಜೆಪಿ ಕಾರ್ಯಕ್ರಮ:
ಅಲ್ಲದೇ ವಿಜಯಪುರ ಭಾಗದಲ್ಲಿ ಶಾಸಕ ಯತ್ನಾಳ್ ವಕ್ಫ್ ಬಗ್ಗೆ ದೊಡ್ಡ ಹೋರಾಟ ಮಾಡಿದ್ದಾರೆ. ಅದರಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕೂಡ ಭಾಗಿಯಾಗಿದ್ದರು. ಕೇಂದ್ರದಿಂದ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ಅಧ್ಯಕ್ಷ ಜಗದಾಂಬಿಕಾ ಪಾಲ್ ಕೂಡ ಬಂದಿದ್ದರು ಆದ್ದರಿಂದ ಇದರಲ್ಲಿ ಬಣ ಅಂತ ಏನಿದೆ. ತೇರದಾಳದಲ್ಲಿಯೂ ನೂರಾರೂ ಎಕರೆ ವಕ್ಫ್ ಆಸ್ತಿ ಎಂದು ನಮೂದಾಗಿದೆ. ಈ ಹಿನ್ನೆಲೆಯಲ್ಲಿ ಶನಿವಾರ ತೇರದಾಳದಲ್ಲಿ ವಕ್ಫ್ ವಿರೋಧ ಆಂದೋಲನ ಸಭೆ ಇದೆ. ವಕ್ಫ್ ವಿರುದ್ಧ ಯಾವುದೇ ಬಿಜೆಪಿ ಕಾರ್ಯಕರ್ತರೂ ಹೋರಾಟ ಮಾಡಿದರು. ಅದು ಬಿಜೆಪಿ ಕಾರ್ಯಕ್ರಮ ಎಂದರು.
ಅಪ್ರಸ್ತುತ ವ್ಯಕ್ತಿಗಳ ವ್ಯರ್ಥ ಆಲಾಪನೆಗೆ ಉತ್ತರ ಕೊಡಲ್ಲ:
ಯತ್ನಾಳ ಹಾಗೂ ಟೀಮ್ ವಿರುದ್ಧ ಬಿಜೆಪಿ ಮುಖಂಡ ರೇಣುಕಾಚಾರ್ಯರ ಹೇಳಿಕೆ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮ ರೈತರು ಭೂಮಿ ಕಳೆದು ಕೊಳ್ಳುತ್ತಿದ್ದಾರೆ. ಇದು ನಮ್ಮ ರೈತರ ಉಳಿಸಲು ಹೋರಾಟ ಮಾಡುತ್ತಿದ್ದೇವೆ. ಅಪ್ರಸ್ತುತ ವ್ಯಕ್ತಿಗಳ ವ್ಯರ್ಥ ಆಲಾಪನೆ ಬಗ್ಗೆ ಉತ್ತರ ಕೊಡುವ ಅಗತ್ಯವಿಲ್ಲ. ಉತ್ತರವನ್ನೂ ಕೊಡುವುದಿಲ್ಲ. ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬಂದಾಗ ಹೂಗುಚ್ಛ ಹಿಡಿದು ಸಿದ್ದರಾಮಯ್ಯ ಮನೆಗೆ, ಡಿಸಿಎಂ ಅವರ ಮನೆಗೆ ಹೋಗಿ ಕಾಲು ಹಿಡಿದುಕೊಂಡ ವ್ಯಕ್ತಿಗಳಿಂದ ನಾವು ಪಕ್ಷ ನಿಷ್ಠೇ, ಸಿದ್ಧಾಂತ, ಬದ್ಧತೆಯನ್ನು ಕಲಿಯಬೇಕಾಗಿಲ್ಲ. ಹಾಗಾಗೀ ಜನರಿಂದ ತಿರಸ್ಕೃತಗೊಂಡು ತಿಪ್ಪೆ ಸೇರಿರುವ ವ್ಯಕ್ತಿಗಳ ಬಗ್ಗೆ ಪ್ರಶ್ನೇ ಕೇಳಬೇಡಿ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ
Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ
Congress; ಔತಣಕೂಟದ ಸಭೆಗೆ ರಾಜಕೀಯ ಮಹತ್ವ ಬೇಕಿಲ್ಲ: ಸತೀಶ್ ಜಾರಕಿಹೊಳಿ
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Retirement: ವೃತ್ತಿ ನಿವೃತ್ತಿ ವ್ಯಕ್ತಿಯಲ್ಲಿ ಖಿನ್ನತೆಗೆ ಕಾರಣವಾಗುವುದೇ? ಇಲ್ಲಿದೆ ಮಾಹಿತಿ
16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಛೋಟಾ ರಾಜನ್ ಗ್ಯಾಂಗ್ನ ಸದಸ್ಯ ಅರೆಸ್ಟ್
Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್ ಜಾಮೀನ ಮಂಜೂರು
Vijay Hazare; ವಾಸುಕಿ,ಗೋಪಾಲ್ ಬೊಂಬಾಟ್ ಬೌಲಿಂಗ್; ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ
ಗದಗ: ಮಾವು ಬಂಪರ್ ಬೆಳೆ ನಿರೀಕ್ಷೆ- ಬೆಳೆಗಾರರಿಗೆ ಸಂತಸ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.