Waqf Issue: ಬಸವಣ್ಣನವರ ಕುರಿತ ಹೇಳಿಕೆಗೆ ಬಸನಗೌಡ ಯತ್ನಾಳ್ ಕೊಟ್ಟ ಸಮರ್ಥನೆ ಏನು?
ಅಖಿಲ ಭಾರತ ವೀರಶೈವ ಮಹಾಸಭಾ ತ್ರಿಮೂರ್ತಿಗಳಾದ "ಬಿಎಸ್‌ವೈ" ಹತೋಟಿಯಲ್ಲಿದೆ: ಬಿಜೆಪಿ ಶಾಸಕ
Team Udayavani, Nov 30, 2024, 9:45 PM IST
ಬನಹಟ್ಟಿಯ ನಿರೀಕ್ಷಣಾ ಮಂದಿರದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಬಸವಣ್ಣನವರ ಶಿವಾನುಭವ ಮಂಟಪದಲ್ಲೇ ದನ ಕಡಿಯುತ್ತಿದ್ದಾರೆ. ಅಖಿಲ ಭಾರತ ವೀರಶೈವ ಮಹಾಸಭಾದ ಈಶ್ವರ ಖಂಡ್ರೆ ಏನು ಮಾಡುತ್ತಿದ್ದಾರೆ. ಎಲ್ಲ ಡೋಂಗಿ ನಾಟಕ ಮಾಡುತ್ತಾ ಬಂದಿದ್ದಾರೆ. ಬಸವಣ್ಣನವರ ಇತಿಹಾಸ ಏನಿದೆ, ಬುದ್ಧಂದು ಏನಾಯಿತು, ಅಂಬೇಡ್ಕರ್‌ಗೆ ಎಷ್ಟು ಅಪಮಾನ ಮಾಡಿದರು ಎಂಬ ಚರ್ಚೆ ಇದೆ. ಚರ್ಚೆಗೆ ಬೇಕಾದರೆ ಬಾ ಅಂತ ಹೇಳಿ. ಅದು ಬಿಟ್ಟು ವಾಟ್ಸ್ಯಾಪ್ನಲ್ಲಿ ಮಂಗನಂತೆ ಮಾತಾಡಿದರೆ ಆಗಲ್ಲ. ಎಲ್ಲರೂ ಅಂಜುವ ಹಾಗೆ ನಾನು ಅಂಜುವ ಮಗನಲ್ಲ ಎಂದು ವಾಗ್ದಾಳಿ ಮಾಡಿದ್ದಾರೆ.
ವೀರಶೈವ ಮಹಾಸಭಾ ಅಂದ್ರೆ “ಬಿಎಸ್‌ವೈ”
ಸದ್ಯ ಅಖಿಲ ಭಾರತ ವೀರಶೈವ ಮಹಾಸಭಾದಲ್ಲಿ ಈಶ್ವರ ಖಂಡ್ರೆ, ಶಾಮನೂರು, ಯಡಿಯೂರಪ್ಪ ಮನೆ ಮುಂದೆ ಓಡಾಡುವ ಗಿರಾಕಿಗಳೇ ಅಧಿಕ, ಅಖಿಲ ಭಾರತ ವೀರಶೈವ ಮಹಾಸಭಾ ಅಂದ್ರೆ ಬಿಎಸ್‌ವೈ ಅಂತ ಮೂರು ಮಂದಿಯದ್ದೇ ಆಗಿಬಿಟ್ಟಿದೆ. ಬಿ ಅಂದ್ರೆ ಭೀಮಣ್ಣ ಖಂಡ್ರೆ, ಎಸ್ ಅಂದ್ರೆ ಶಾಮನೂರು ಶಿವಶಂಕರಪ್ಪ, ವೈ ಅಂದ್ರೆ ಯಡಿಯೂರಪ್ಪ ಆಗಿಬಿಟ್ಟಿದೆ. ಢೋಂಗಿ ನಾಟಕ ಮಾಡುತ್ತ ಕೆಲ ಬೆಂಬಲಿಗರನ್ನಿಟ್ಟುಕೊಂಡು ಮಹಾಸಭೆ ಹಾಳು ಮಾಡಿದ್ದಾರೆ ಎಂದು ಯತ್ನಾಳ್ ಟೀಕಿಸಿದರು.
ಅಂಬೇಡ್ಕರ್‌ಗೆ ಕಾಂಗ್ರೆಸ್‌ನಿಂದ ಅವಮಾನ:
ಬಸವಣ್ಣನವರ ಕುರಿತು ನೀಡಿದ ಹೇಳಿಕೆಯ ಪ್ರಶ್ನೆಗೆ ಉತ್ತರಿಸುತ್ತ, ಈ ಕುರಿತು ಸಮಗ್ರ ಚರ್ಚೆಯಾಗಬೇಕು, ಮುಚ್ಚಿಟ್ಟ ವಿಷಯದ ಕುರಿತು ಚರ್ಚೆ ನಡೆಯಬೇಕು. ಬಾಬಾ ಸಾಹೇಬ್ ಅಂಬೇಡ್ಕರ್ ವಿಷಯ ಕುರಿತು ದೇಶದಲ್ಲಿ ಚರ್ಚೆ ಆಗಿದಿಯೇ. ಅಂಬೇಡ್ಕರ್ ಅವರ ಅಂತ್ಯಕ್ರಿಯೆಗೆ ದೆಹಲಿಯಲ್ಲಿ ನೂರು ಅಡಿ ಸ್ಥಳ ನೀಡಲಾರದವರು ನಮಗೆ ಹೇಳುವ ನೈತಿಕೆಯೇ ಇಲ್ಲ. ಅಂದು ಅಂಬೇಡ್ಕರ್ ಅವರಿಗೆ ಭಾರತ ರತ್ನ ಕೊಡಲಿಲ್ಲ. ಮುರಾರ್ಜಿ ದೇಸಾಯಿ ಸರ್ಕಾರ ಅವರಿಗೆ ಭಾರತ ರತ್ನ ನೀಡಿ ಗೌರವಿಸಿತು. ನೆಹರೂ, ಇಂದಿರಾ ಗಾಂಧಿ ಮತ್ತು ರಾಜೀವ ಗಾಂಧಿ ತಾವೇ ಭಾರತ ರತ್ನ ಪ್ರಶಸ್ತಿಗಳ ಪಡೆದುಕೊಂಡರು ಎಂದು ಯತ್ನಾಳ್ ವ್ಯಂಗ್ಯವಾಡಿದರು.
ಸನಾತನಿಗಳನ್ನು ನಾವು ಓಲೈಸುತ್ತಿಲ್ಲ. ಸನಾತನ ಧರ್ಮ ದೇಶದ ಸಂಸ್ಕೃತಿ. ಸನಾತನ ಬಿಟ್ಟು ನಾವು ಯಾರು ಇಲ್ಲ. ನಮ್ಮ ಭೂಮಿಯಲ್ಲಿಯೇ ಸನಾತನವಿದೆ. ನಾವು ಬಸವಣ್ಣನವರ ಪರವಾಗಿದ್ದೇವೆ. ನಾವು ಬಸವಣ್ಣನವರ ವಿಚಾರಗಳಲ್ಲಿ ಇದ್ದೇವೆ. ಡಾ. ಬಾಬಾಸಾಹೇಬ್ ಅಂಬೇಡ್ಕರ್ ನಮ್ಮ ಆದರ್ಶ ಪುರುಷ ಎಂದು ಬಸನಗೌಡ ಪಾಟೀಲ ಯತ್ನಾಳ್ ತಿಳಿಸಿದರು.
ಇಸ್ಲಾಂನಲ್ಲಿ ಸಹೋದರತೆ ಇಲ್ಲ:
ಇಸ್ಲಾಂನಲ್ಲಿ ಸಹೋದರತೆಯೇ ಇಲ್ಲವೆಂಬುದನ್ನು ಡಾ. ಅಂಬೇಡ್ಕರ್ ಅವರೇ ತಿಳಿಸಿದ್ದಾರೆ. ಸಮೃದ್ಧ ದೇಶಕ್ಕೆ ಕಾಂಗ್ರೆಸ್ಸಿಗರು ಅವಕಾಶ ನೀಡಲಿಲ್ಲವೆಂದು ಯತ್ನಾಳ ಆರೋಪಿಸಿದರು.
ನಮ್ಮಲ್ಲಿ ಬಣವಿಲ್ಲ, ಡಿ.2ರಂದು ವಕ್ಫ್ ಕುರಿತು ವರದಿ ಸಲ್ಲಿಕೆ:
ನಾವು ಯಾವುದೇ ಪಕ್ಷದ ವಿರುದ್ಧ ಹೋರಾಟ ಮಾಡುತ್ತಿಲ್ಲ, ನಮ್ಮದು ವಕ್ಫ್ ವಿರುದ್ಧ ಮಾತ್ರ ಹೋರಾಟ. ಮುಡಾ, ವಾಲ್ಮೀಕಿ ಹಗರಣದಲ್ಲಿಯ ರೂ. 187 ಕೋಟಿ ಮತ್ತು ಎಸ್ ಸಿ, ಎಸ್ ಟಿ ಹಗರಣದಲ್ಲಿ ರೂ.24 ಸಾವಿರ ಕೋಟಿ ಹಣದ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ಡಿ.2ರಂದು ನಾನು, ಪ್ರತಾಪ ಸಿಂಹ, ಜಿ.ಎಂ.ಸಿದ್ಧೇಶ್ವರ್, ಕುಮಾರ ಬಂಗಾರಪ್ಪನವರು, ಶಾಸಕ ಚಂದ್ರಪ್ಪ ಮತ್ತು ಹರೀಶ ಸೇರಿಕೊಂಡು ದೆಹಲಿಗೆ ತೆರಳಿ ವಕ್ಫ್ ಕುರಿತು ಒಂದು ಮಧ್ಯಂತರ ವರದಿಯ ನೀಡುತ್ತಿದ್ದೇವೆ.
ಈಗಾಗಲೇ ನಾವು ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕದಲ್ಲಿ ಪ್ರವಾಸ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಕರ್ನಾಟಕ ಇನ್ನಿತರ ಭಾಗಗಳಿಗೂ ತೆರಳಲಿದ್ದೇವೆ. ನಮ್ಮಲ್ಲಿ ಯಾವುದೇ ಬಣವಿಲ್ಲ. ನಾವು ಕೂಡ ಬಿಜೆಪಿ ಮೂಲಕವೇ ಹೋರಾಟ ಮಾಡುತ್ತಿದ್ದೇವೆ. ನಮ್ಮ ಹೋರಾಟಕ್ಕೆ ಬಹಳಷ್ಟು ಸಂಸದರು, ಶಾಸಕರು ಮತ್ತು ಅನೇಕ ಮುಖಂಡರು ಬೆಂಬಲ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ
Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ
Congress; ಔತಣಕೂಟದ ಸಭೆಗೆ ರಾಜಕೀಯ ಮಹತ್ವ ಬೇಕಿಲ್ಲ: ಸತೀಶ್ ಜಾರಕಿಹೊಳಿ
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.