ಪಪಂ ರಸ್ತೆಯಲ್ಲೇ ಕಸದ ರಾಶಿ!
Team Udayavani, Jan 1, 2020, 1:13 PM IST
ಬೀಳಗಿ: ಸ್ಥಳೀಯ ಡಾ|ಅಂಬೇಡ್ಕರ್ ವೃತ್ತದ ಬಳಿಯ ಬುಡ್ಡರ ಓಣಿಗೆ ಸಂಪರ್ಕ ಕಲ್ಪಿಸುವ ಮುಖ್ಯ ಬಜಾರ್ ರಸ್ತೆಯ ಬದಿಗೆ ನಿತ್ಯ ಕಸ-ಮುಸುರಿ ಚೆಲ್ಲುತ್ತಿರುವ ಪರಿಣಾಮ ಗಬ್ಬೆದ್ದು ನಾರುತ್ತಿದೆ. ಇದನ್ನು ಶುಚಿಗೊಳಿಸಲು ಪಪಂಗೆ ಮನವಿ ಮಾಡಿಕೊಳ್ಳುತ್ತಿರುವುದು ವ್ಯರ್ಥ ಪ್ರಯತ್ನವಾಗಿದೆ ಎಂದು ಇಲ್ಲಿನ ರಸ್ತೆ ಬದಿಯ ವ್ಯಾಪಾರಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದು ಒಂದು ದಿನದ ಗೋಳಲ್ಲ. ಕಳೆದ ಹಲವಾರು ತಿಂಗಳುಗಳ ವ್ಯಥೆ. ಇಲ್ಲಿನ ಓಣಿಯ ಸುತ್ತಮುತ್ತಲಿನ ಸಾರ್ವಜನಿಕರು ಈ ರಸ್ತೆ ಸ್ಥಳವನ್ನು ಅಕ್ಷರಶ ಕಸದ ತೊಟ್ಟಿಯನ್ನಾಗಿಸಿಕೊಂಡಿದ್ದಾರೆ. ಮನೆಯಲ್ಲಿನ ಕಸ, ಮುಸುರಿ ಯಾರ ಭಯವೂ ಇಲ್ಲದೆ ರಸ್ತೆಗೆ ಎಸೆಯುತ್ತಿರುವುದರಿಂದ ಈ ಪ್ರದೇಶದಲ್ಲಿ ಸುತ್ತಾಡುವುದು ಅಸಹ್ಯವಾಗಿದೆ. ಸಾರ್ವಜನಿಕರು ರಸ್ತೆಯ ಮೇಲೆ ಕಸ-ಮುಸುರಿ ಹಾಕುವುದನ್ನು ನಿಲ್ಲಿಸುವಂತೆ ಪಪಂ ಕಟ್ಟುನಿಟ್ಟಿನ ಸೂಚನೆ ನೀಡುತ್ತಿಲ್ಲ.
ಸ್ವತಾ ಕಾರ್ಯವನ್ನಾದರೂ ಕೈಗೊಳ್ಳುತ್ತಿಲ್ಲ ಅಥವಾ ಕಸದ ತೊಟ್ಟಿ ಇಡುವಲ್ಲಿಯೂ ಕೂಡಾ ಮುತುವರ್ಜಿ ವಹಿಸುತ್ತಿಲ್ಲ. ಇಲ್ಲಿನ ಸುತ್ತಮುತ್ತಲಿನ ಅಂಗಡಿ ವ್ಯಾಪಾರಸ್ಥರು ಸಾಂಕ್ರಾಮಿಕ ರೋಗ ಭೀತಿಯಿಂದ ನರಳುವಂತಾಗಿದೆ. ಈ ಕುರಿತು ಪಪಂ ಸಿಬ್ಬಂದಿಗೆ ಹಲವು ಬಾರಿ ಮನವಿ ಮಾಡಿಕೊಂಡರೂ ಗಮನಹರಿಸುತ್ತಿಲ್ಲ. ಇಲ್ಲಿ ಅಶುಚಿತ್ವವಾಗದಂತೆ ಜಾಗೃತಿ ವಹಿಸುವಂತೆ ಸ್ಥಳೀಯರ ಆಗ್ರಹವಾಗಿದೆ.
ಸ್ಥಳಿಯರೆ ಗಲೀಜು ಮಾಡುತ್ತಿರುವುದು ಗಮನಕ್ಕೆ ಬಂದಿದೆ. ನಾಳೆಯಿಂದ ಆ ಸ್ಥಳದಲ್ಲಿ ಬೆಳಗ್ಗೆ ಕಸದ ವಾಹನ ನಿಲ್ಲಿಸುವ ವ್ಯವಸ್ಥೆ ಮಾಡುವುದರ ಜತೆಗೆ, ಯಾರೂ ಕಸ-ಮುಸುರಿ ಹಾಕದಂತೆ ಎಚ್ಚರಿಕೆ ನೀಡಲಾಗುವುದು. ಉಲ್ಲಂಘಿಸಿದರೆ ದಂಡ ವಿಧಿಸಲು ಕ್ರಮ ಕೈಗೊಳ್ಳುವೆ. –ದೇವೀಂದ್ರ ಧನಪಾಲ, ಮುಖ್ಯಾಧಿಕಾರಿಗಳು, ಪಪಂ ಬೀಳಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ration Card: ಅನರ್ಹರಿಗೆ ಬಿಪಿಎಲ್ ಕಾರ್ಡ್ ಕೊಡಲ್ಲ, ಅರ್ಹರಿಗೆ ತಪ್ಪಿಸಲ್ಲ: ಸಿದ್ದರಾಮಯ್ಯ
Bagalakote: ಅನರ್ಹರ ಬಿಪಿಎಲ್ ಕಾರ್ಡ್ ಗಳು ಮಾತ್ರ ರದ್ದು: ಸಿಎಂ ಸಿದ್ದರಾಮಯ್ಯ
ಕಾಡಂಚಿನ ರೈತರ ಅರಣ್ಯರೋದನ; ಬೇರೆಯವರ ಜಮೀನಿನಲ್ಲಿ ದುಡಿಯಬೇಕಾದ ಸ್ಥಿತಿ
ಕೇವಲ 12 ರೂ.ಗೆ ಬಿಸಿ ಜುನುಕಾ ರೊಟ್ಟಿ ಊಟ:!ಶಿಕ್ಷಕ ಬಸವರಾಜ ಜಾಲೋಜಿ ನಿಸ್ವಾರ್ಥ ಸೇವೆ
ಲೋಕಾಪುರ: ಬಿಡಾಡಿ ದನಗಳ ಕಾಟಕ್ಕೆ ಜನ ಹೈರಾಣ
MUST WATCH
ಹೊಸ ಸೇರ್ಪಡೆ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.