ಸರಕಾರಿ ಶಾಲಾ ವಿದ್ಯಾರ್ಥಿಗಳಿಂದ ಜಲ ಸಂರಕ್ಷಣೆ ಅಭಿಯಾನ
Team Udayavani, Jul 19, 2019, 2:39 PM IST
ಕೆರೂರ: ಹೂಲಗೇರಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಜಲ ಸಂರಕ್ಷಣೆ ಜಾಗೃತಿ ಅಭಿಯಾನ ನಡೆಸಿದರು.
ಕೆರೂರ: ಹೂಲಗೇರಿ ಗ್ರಾಮದ ಎಚ್.ಆರ್. ಪಾಟೀಲ ಸರ್ಕಾರಿ ಪ್ರೌಢಶಾಲೆ ಹಾಗೂ ಸಾಲು ಮರದ ತಿಮ್ಮಕ್ಕ ಇಕೋ ಕ್ಲಬ್‌ಗಳ ಸಹಯೋಗದಲ್ಲಿ ಗುರುವಾರ ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿದ್ಯಾರ್ಥಿಗಳು ಪ್ರಭಾತ ಪೇರಿ ಮೂಲಕ ಜಲ ಸಂರಕ್ಷಣೆಯ ಜಾಗೃತಿ ಅಭಿಯಾನ ನಡೆಸಿದರು.
ಇಕೋ ಕ್ಲಬ್ ಸಂಚಾಲಕ ಪ್ರೇಮಾನಂದ ದೊಡಮನಿ, ಆಧುನಿಕ ಬದುಕಿನಲ್ಲಿ ನಾವುಗಳೆಲ್ಲಾ ಸಾಕಷ್ಟು ನೀರು ಪೋಲು ಮಾಡುತ್ತಿದ್ದೇವೆ. ಭವಿಷ್ಯದ ಯುವ ಜನಾಂಗಕ್ಕೆ ನೀರು ಉಳಿಸುವುದು ಅಗತ್ಯವಾಗಿದೆ. ಜನರಲ್ಲಿ ಜಾಗೃತಿ ಅರಿವು ಮೂಡಿಸಬೇಕಿದೆ ಎಂದರು.
ನೀರು ಸಂರಕ್ಷಣೆ ಅವಶ್ಯಕತೆ, ಭವಿಷ್ಯದ ಪೀಳಿಗೆಗೆ ನೀರು ಉಳಿಸಲು ಈಗಿನಿಂದಲೇ ಜಾಗೃತಿಯ ಅಗತ್ಯತೆ ಕುರಿತು ಘೋಷ ವಾಕ್ಯ ಮತ್ತು ಬ್ಯಾನರ್ ಮೂಲಕ ಗ್ರಾಮಸ್ಥರಲ್ಲಿ ಅರಿವು ಮೂಡಿಸುವಲ್ಲಿ ಮುಂದಾದರು.
ಕಾರ್ಯಕ್ರಮದಲ್ಲಿ ವೈ.ಡಿ. ಹಂಡಿ, ಪ್ರಕಾಶ ಗೌಡರ, ಎಸ್.ಎಂ. ಮಲಜಿ, ಎಸ್.ಎಸ್. ಓಂಕಾರ, ಎಸ್.ಎಸ್. ರಾಠೊಡ, ಎಸ್.ಎನ್. ಕಲ್ಲಗೋನಾಳ, ವಿ.ಎಸ್. ಯಾವಗಲ್ ಮತ್ತು ಹೂಲಗೇರಿ ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Encounter: ಬೆಳ್ಳಂಬೆಳಗ್ಗೆ ಜಮ್ಮು ಕಾಶ್ಮೀರದಲ್ಲಿ ಗುಂಡಿನ ದಾಳಿ; 5 ಭಯೋತ್ಪಾದಕರು ಹತ
22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?
Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್
Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.