ಕ್ಷೇತ್ರದ ಅಭಿವೃದ್ಧಿಗೆ ಶಕ್ತಿಮೀರಿ ಪ್ರಯತ್ನಿಸುವೆ: ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ
Team Udayavani, Oct 15, 2024, 9:05 PM IST
ಮುಧೋಳ: ಜನರು ನನಗೆ ಆಶೀರ್ವಾದ ಮಾಡಿರುವ ಪರಿಣಾಮ ಮಂತ್ರಿಯಾಗಿ ನಿಮ್ಮ ಮುಂದೆ ನಿಂತಿದ್ದೇನೆ. ನಿಮ್ಮ ಸೇವೆಗೆ ಸದಾ ಸಿದ್ದನಿದ್ದು ನನ್ನ ಆಡಳಿತಾವಧಿಯಲ್ಲಿ ಕ್ಷೇತ್ರದ ಅಭಿವೃದ್ದಿಗೆ ಶಕ್ತಿ ಮೀರಿ ಪ್ರಯತ್ನಿಸುವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಹೇಳಿದರು.
ಮುಧೋಳ ನಗರದ ರನ್ನ ಕ್ರೀಡಾಂಗಣದಲ್ಲಿ ನಿರ್ಮಾಣಗೊಳ್ಳಲಿರುವ ರನ್ನಿಂಗ್ ಟ್ರ್ಯಾಕ್ (ಮಡ್ ಟ್ರ್ಯಾಕ್) ಕಾಮಗಾರಿಗೆ ಅ.15ರ ಮಂಗಳವಾರ ಭೂಮಿ ಪೂಜೆ ನೆರವೇರಿಸಿ ಮಾತನಾನಡಿದ ಅವರು, ಮೊದಲ ಬಾರಿಗೆ ಶಾಸಕನಾದಾಗ ಹಲವು ಕಠಿಣ ನಿರ್ಧಾರ ತೆಗೆದುಕೊಂಡ ಪರಿಣಾಮ ನಮಗೆ ಸೋಲಾಯಿತು. ಒಳ್ಳೆಯ ಕೆಲಸ ಮಾಡುವಾಗ ನನ್ನ ಜೊತೆಗೆ ನೀವು ನಿಲ್ಲದಿದ್ದರೆ ರಾಜಕಾರಣ ಜೀವನದಲ್ಲಿ ನನಗೂ ಕಷ್ಟವಾಗಲಿದೆ ಎಂದು ತಮ್ಮ ರಾಜಕೀಯ ಏಳು-ಬೀಳುಗಳ ಮೆಲುಕು ಹಾಕಿದರು.
ಮುಧೋಳ ನಗರಕ್ಕೆ ಹೆಚ್ಚಿನ ಕೆಲಸಗಳಾಗಬೇಕಿದೆ. ಉದ್ಯಾನವನಗಳ ಸ್ವಚ್ಛತೆ, 24*7 ಕುಡಿಯುವ ನೀರು, ವೈಜ್ಞಾನಿಕ ವ್ಯಾಯಾಮ ಶಾಲೆ ನಿರ್ಮಾಣ ಕಾರ್ಯಕ್ಕೆ ಶೀಘ್ರದಲ್ಲಿಯೇ ಕಾರ್ಯ ಯೋಜನೆ ಹಾಕಿಕೊಳ್ಳಲಾಗುವುದು ಎಂದರು.
ತಾಲೂಕಿನ 20-50 ಶಾಲೆಗಳಿಗೆ ಶುದ್ದ ಕುಡಿಯುವ ನೀರಿನ ಘಟಕ ನಿರ್ಮಾಣಕ್ಕೆ ಕ್ರಮ ಕೈಗೊಂಡಿದ್ದೇವೆ ಎಂದು ತಿಳಿಸಿದರು.
ಮೈಸೂರು ದಸರಾದಲ್ಲಿ ನಮ್ಮ ಊರಿನ ಕುಸ್ತಿಪಟುಗಳು ಮುಧೋಳದ ಹೆಸರನ್ನು ಉತ್ತುಂಗಕ್ಕೇರಿಸಿದ್ದಾರೆ ಅವರೆಲ್ಲರಿಗೂ ಧನ್ಯವಾದವನ್ನು ಹೇಳಿದರು.
ನಮ್ಮ ಭಾಗದಲ್ಲಿ ಕುಸ್ತಿಗೆ ಬೇಕಾದ ಎಲ್ಲ ವ್ಯವಸ್ಥೆ ಕಲ್ಪಿಸಲು ನಾನು ಬದ್ದ ಎಂದು ಭರವಸೆ ನೀಡಿ, ನಿಮ್ಮ ಸೇವಕನಾಗಿ ನಿಮ್ಮ ಕೆಲಸ ಕಾರ್ಯಗಳನ್ನು ಮಾಡುತ್ತೇನೆ ಎಂದು ವಾಗ್ದಾನ ಮಾಡಿದರು.
ಮುಖಂಡ ವೆಂಕಣ್ಣ ಗಿಡ್ಡಪ್ಪನವರ ಮಾತನಾಡಿ, 15 ವರ್ಷದಿಂದ ಬೇಡಿಕೆಯಿದ್ದ ಮಡ್ ಟ್ರ್ಯಾಕ್ ಇಂದು ನನಸಾಗುವ ಕಾಲ ಸನ್ನಿಹಿತವಾಗಿದೆ. ಇದರಿಂದ ನಗರದ ಕ್ರೀಡಾಪಟುಗಳಿಗೆ, ವಾಯು ವಿಹಾರಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಹೇಳಿದರು.
ಡಾ. ಶಿವಾನಂದ ಕುಬುಸದ ಮಾತನಾಡಿ, ಆರೋಗ್ಯದ ದೃಷ್ಟಿಯಿಂದ ಮಡ್ ಟ್ರ್ಯಾಕ್ ಹೆಚ್ಚು ಅನುಕೂಲ. ಧೂಳು ಇಲ್ಲದ ದಾರಿಯಿಂದ ಜನರ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಿ ಟ್ರ್ಯಾಕ್ ನಿರ್ಮಾಣ ಕಾರ್ಯಕ್ಕೆ ಮುಂದಾಗಿರುವ ತಿಮ್ಮಾಪುರ ಅವರಿಗೆ ಅಭಿನಂದನೆ ಸಲ್ಲಿಸಿದರು.
ನಗರಸಭೆ ಅಧ್ಯಕ್ಷ ಸುನಂದಾ ತೇಲಿ, ಉಪಾಧ್ಯಕ್ಷ ಎಂ.ಎಂ. ಬಾಗವಾನ, ಸದಸ್ಯರಾದ ಡಾ.ಸತೀಶ ಮಲಘಾಣ, ಸಂತೋಷ ಪಾಲೋಜಿ, ಬ್ಲಾಕ್ ಕಾಂಗ್ರೆದ್ ಅಧ್ಯಕ್ಷ ಅಶೋಕ ಕಿವಡಿ, ಬಸವಂತ ಕಾಟೆ, ನ್ಯಾಯವಾದಿ ಎಂ.ಬಿ. ಹಿರೇಮಠ, ವಿ.ಎನ್. ನಾಯಕ, ಗೋವಿಂದಪ್ಪ ಗುಜ್ಜನ್ನವರ, ಬಿಡಿಸಿಸಿ ಮಾಜಿ ಉಪಾಧ್ಯಕ್ಷ ಶಿವಾನಂದ ಉದುಪುಡಿ, ಡಾ. ಉದಯ ನಾಯಕ, ಶಿವಾನಂದ ಕತ್ತಿ, ರಾಘವೇಂದ್ರ ಮೊಕಾಶಿ, ಉದಯಸಿಂಗ್ ಪಡತಾರೆ, ಶಿವಾನಂದ ಕುಬುಸದ, ಶಫಿಕ ಬೇಪಾರಿ, ಮಲ್ಲಿಕಾರ್ಜುನ ಅಂಬಿಗೇರ, ರಜಮಾ ಬೇಪಾರಿ, ತಹಸೀಲ್ದಾರ್ ಮಹಾದೇವ ಸಣಮುರಿ, ತಾಪಂ ಇಒ ಉಮೇಶ ಸಿದ್ನಾಳ, ಸಹಾಯಕ ನಿರ್ದೇಶಕ ಗುರುಪಾದ ಡೋಗಿ, ಲೋಕೋಪಯೋಗಿ ಇಲಾಖೆ ಎಇಇ ಚನ್ನಬಸು ಮಾಚನವರ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮೋಹನ ಕೋರಡ್ಡಿ ಸೇರದಂತೆ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
India: ಒಂದು ದೇಶ ಒಂದು ಚುನಾವಣೆ ಜಾರಿ ಆಗಲಿ: ಪೇಜಾವರ ಸ್ವಾಮೀಜಿ
Rabkavi Banahatti: ಲೋಕ ಅದಾಲತ್ ನಲ್ಲಿ ಒಂದಾದ ದಂಪತಿಗಳು
ವಿಳಾಸ ಕೇಳುವ ನೆಪದಲ್ಲಿ ವ್ಯಕ್ತಿಯ ಕೊರಳಲ್ಲಿದ್ದ ಚಿನ್ನದ ಚೈನ್ ಕದ್ದ ಅಪರಿಚಿತ ವ್ಯಕ್ತಿ
Mudhol: ಬಸ್ ಗೆ ಡಿಕ್ಕಿ ಹೊಡೆದ ಬೈಕ್… ಸವಾರರಿಗೆ ಗಂಭೀರ ಗಾಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.