15 ವರ್ಷಗಳಲ್ಲಿ ಗದ್ದಿಗೌಡರ ಕೊಡುಗೆಯೇನು?: ವೀಣಾ
Team Udayavani, Apr 11, 2019, 2:42 PM IST
ಜಮಖಂಡಿ: ಕಳೆದ 15 ವರ್ಷದ ಅವಧಿಯಲ್ಲಿ ಜಿಲ್ಲೆಯ ಸಮಸ್ಯೆಗಳಿಗೆ ಸಂಸತ್ ಅಧಿವೇಶನದಲ್ಲಿ ಧ್ವನಿಯೆತ್ತದೆ, ಸಹಿ ಮಾಡಲು ಸೀಮಿತವಾಗಿರುವ ಸಂಸದರ ಕೊಡುಗೆಯೇನು? ಎಂದು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ವೀಣಾ ಕಾಶಪ್ಪನವರ ಪ್ರಶ್ನಿಸಿದರು.
ಮುತ್ತೂರು ಗ್ರಾಮದಲ್ಲಿ ಮಹಾಲಕ್ಷ್ಮೀ ದೇವಸ್ಥಾನದ ಆವರಣದಲ್ಲಿ ಬುಧವಾರ ನಡೆದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ನನ್ನ ಜಿಲ್ಲೆಯನ್ನು ಮಾದರಿಯಾಗಿ ಕಟ್ಟಲು ಮಹತ್ತರ ಕನಸು ಹೊಂದಿದ್ದೇನೆ. ಬಡವ, ದೀನ ದಲಿತರು, ಹಿಂದುಳಿದ ವರ್ಗದವರು, ಕೃಷಿಕರು, ಮಹಿಳೆಯರು, ಯುವಕರ ಸಮಸ್ಯೆಗಳಿಗೆ ಹೆಚ್ಚಿನ ಆದ್ಯತೆ ನೀಡುವ ಬಯಕೆ ನನ್ನದಾಗಿದೆ.
ಈಗಿನ ಸಂಸದರು ಬಗ್ಗೆ ಒಮ್ಮೆಯಾದರೂ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿದ್ದಾರಾ ಕೇಳಿ, ನಿಮ್ಮ ಜಿಲ್ಲೆಗೆ ಯಾರು ಸೂಕ್ತ ಎಂದು ತೀರ್ಮಾನಿಸುವ ಅಧಿಕಾರ ನಿಮ್ಮ ಕೈಯಲ್ಲೇ ಇದೆ ಎಂದರು. ಶಾಸಕ ಆನಂದ ನ್ಯಾಮಗೌಡ ಮಾತನಾಡಿ, ಜಿಲ್ಲೆಯ ಸಂಸದರಿಂದ ನಯಾಪೈಸೆ ಅನುದಾನ ಬಂದಿಲ್ಲ.
ಪ್ರತಿಸಾರಿ ಬಿಜೆಪಿ ಭಾವನಾತ್ಮಕ ವಿಷಯದ ಮೇಲೆ ಮತ ಕೇಳುತ್ತಿದ್ದು, ಈ ಚುನಾವಣೆಯಲ್ಲಿ ಸರ್ಜಿಕಲ್ ಸ್ಟ್ರೆ çಕ್ ಮಾಡಿದ್ದೇವೆಂದು ಪ್ರಚಾರ ಮಾಡುತ್ತಿರುವ ನಾಚಿಕೆಗೇಡಿನ ಸಂಗತಿ ಎಂದು ಹೇಳಿದರು.
ಭೂಸೇನಾ ನಿಗಮದ ಮಾಜಿ ಅಧ್ಯಕ್ಷ ಶ್ರೀಶೈಲ ದಳವಾಯಿ, ಜೆಡಿಎಸ್ ಮುಖಂಡ ಬಸವರಾಜ ಕೊಣ್ಣೂರ, ವಕೀಲ ಎನ್.ಎಸ್. ದೇವರವರ, ಮುತ್ತಣ್ಣ ಹಿಪ್ಪರಗಿ ಮಾತನಾಡಿದರು. ರಕ್ಷಿತಾ ಇಟ್ಟಿ, ಯಶೋಮತಿ, ನಜೀರ ಕಂಗನೊಳ್ಳಿ, ಪಾರಸಗೌಡ ಪಾಟೀಲ, ಮಹೇಶ ಕೋಳಿ, ಸಿದ್ದು ಮೀಸಿ, ಇಲಾಯಿ ಕಂಗನೊಳ್ಳಿ, ಸುಂದ್ರವ್ವ ಬೆಳಗಲಿ, ರವಿ ಯಡಹಳ್ಳಿ, ವರ್ಧಮಾನ ನ್ಯಾಮಗೌಡ, ಕಲ್ಲಪ್ಪ ಗಿರಡ್ಡಿ ಇನ್ನಿತರರಿದ್ದರು.
15 ವರ್ಷದಿಂದ ಕುಡಚಿ ಬಾಗಲಕೋಟೆ ರೈಲುಮಾರ್ಗ ನನೆಗುದಿಗೆ ಬಿದ್ದಿದ್ದು, ವೀಣಾ ಕಾಶಪ್ಪನವರಿಗೆ ಅವಕಾಶ ನೀಡಿದಲ್ಲಿ 5 ವರ್ಷದಲ್ಲಿ ಕೆಲಸವನ್ನು ಮುಗಿಸುತ್ತೇವೆ.
ವಿಜಯಾನಂದ ಕಾಶಪ್ಪನವರ, ಮಾಜಿ ಶಾಸಕ
ವಿಜಯಾನಂದ ಕಾಶಪ್ಪನವರ, ಮಾಜಿ ಶಾಸಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ
Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ
Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.