![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Jun 8, 2021, 9:53 AM IST
ಬನಹಟ್ಟಿ : 26 ವರ್ಷದ ಯುವಕನೋರ್ವ ಅಪಘಾತದಲ್ಲಿ ತೀವ್ರ ಗಾಯಗೊಂಡ ಪರಿಣಾಮ ಬಾಗಲಕೋಟೆ ಆಸ್ಪತ್ರೆಯಲ್ಲಿ ಸಾವು ಗೆದ್ದು ಸೋಮವಾರ ಆಸ್ಪತ್ರೆಯಿಂದ ಬಿಡುಗಡೆ ಆಗುವದಿತ್ತು. ಆದರೆ ಕಿತ್ತು ತಿನ್ನುವ ಬಡತನದಲ್ಲಿ ಕಿಂಚಿತ್ತೂ ದುಡ್ಡು ಇಲ್ಲದ ಕಾರಣ ವಾಟ್ಸಾಪ್ ಗುಂಪೊಂದು ಸಹಾಯಕ್ಕೆ ಧಾವಿಸಿದ ಘಟನೆ ಬಾಗಲಕೋಟೆ ಜಿಲ್ಲೆ ರಬಕವಿ-ಬನಹಟ್ಟಿಯಲ್ಲಿ ನಡೆದಿದೆ.
ಹೌದು, ಕಳೆದ ತಿಂಗಳು ಮುಧೋಳದ ಬಸ್ ನಿಲ್ದಾಣ ಬಳಿ ಚೇತನ ಹೊಸಮನಿ(26 ವ) ಎಂಬ ಖಾಸಗಿ ಕಂಪನಿ ಉದ್ಯೋಗಿ ಬೈಕ್ ನಲ್ಲಿ ಸಂಚರಿಸುವ ಸಂದರ್ಭ ಅಪಘಾತದಲ್ಲಿ ತಲೆಗೆ ತೀವ್ರ ಸ್ವರೂಪದ ಗಾಯವಾಗಿತ್ತು. ಬಾಗಲಕೋಟೆ ಆಸ್ಪತ್ರೆಗೆ ಸಂಪೂರ್ಣ ಖರ್ಚು ಭರಿಸಲು ಸಾಧ್ಯವಾಗದ ಸಂದರ್ಭ ಆತನ ಗೆಳೆಯರು ಆರ್ಥಿಕ ಸಹಾಯ ಮಾಡಿದ್ದಾರೆ.
ಇನ್ನೂ 1.5 ಲಕ್ಷ ರೂ. ಹಣ ಒದಗಿಸುವುದು ಸಮಸ್ಯೆಯಾದಾಗ, ಸಂಕಷ್ಟದಲ್ಲಿರುವ ಕುಟುಂಬಕ್ಕೆ ಆರ್ಥಿಕವಾಗಿ ನೆರವಾಗೋಣವೆಂದು ಹೇಳಿದ ಕೇವಲ ಮೂರು ಗಂಟೆಗಳಲ್ಲಿಯೇ ಒಂದು ಲಕ್ಷ ರೂ. ಕ್ಕೂ ಅಧಿಕ ಹಣವನ್ನು ಫೋನ್ ಪೇ ಹಾಗು ಗೂಗಲ್ ಪೇ ಮೂಲಕ ತಕ್ಷಣದಲ್ಲಿಯೇ ಖಾತೆಯೊಂದಕ್ಕೆ ಹಣ ಜಮಾ ಮಾಡಿ ನಂತರ ಆತನ ಕುಟುಂಬಕ್ಕೆ ಹಣ ಒದಗಿಸುವ ಮೂಲಕ ಮಾನವೀಯತೆಯನ್ನು ಮೆರೆಯುವಲ್ಲಿ ಸಾಮಾಜಿಕ ಜಾಲತಾಣ ಯಶಸ್ವಯಾಗಿರುವುದು ನಿಜಕ್ಕೂ ಶ್ಲಾಘನೀಯ.
ರಬಕವಿ-ಬನಹಟ್ಟಿ ಪಟ್ಟಣದ `ಮಾಧ್ಯಮ’ ನಾಮದಡಿ ವ್ಯಾಟ್ಸಾಪ್ ಸಮೂಹದ ಎಲ್ಲರೂ ಸೇರಿ ಸುಮಾರು ಒಂದುವರೆ ಲಕ್ಷದವರೆಗೆ ಹಣ ಸಂಗ್ರಹಿಸಿ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಯ ತಂದೆ ಅಶೋಕ ಹೊಸಮನಿ ಅವರಿಗೆ ಸಲ್ಲಿಸಿ ಮಾನವೀಯತೆ ಮೆರೆದಿದ್ದಾರೆ.
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.