ರೈಲು ಬಸ್ ಸಂಚಾರ ಪುನಾರಂಭ ಯಾವಾಗ?
ವರ್ಷದ ಹಿಂದೆ ಆರಂಭಗೊಂಡಿದ್ದ ಸೇವೆ ಒಂದೇ ತಿಂಗಳಲ್ಲಿ ಸ್ಥಗಿತ • ಸಾರ್ವಜನಿಕರ ಕನಸು ನನಸಾಗುವಷ್ಟರಲ್ಲೇ ಮತ್ತೆ ಕನಸಾಯ್ತು!
Team Udayavani, Jun 15, 2019, 9:36 AM IST
ಕಲಾದಗಿ: ಬಾಗಲಕೋಟೆ-ಖಜ್ಜಿಡೋಣಿ ರೈಲು ಬಸ್ ಖಜ್ಜಿಡೋಣಿ ರೈಲ್ವೆ ನಿಲ್ದಾಣದಲ್ಲಿ ನಿಂತಿರುವುದು. (ಸಾಂದರ್ಭಿಕ ಚಿತ್ರ)
ಕಲಾದಗಿ: ಬಾಗಲಕೋಟೆ -ಕುಡಚಿ ರೈಲು ಮಾರ್ಗ ಖಜ್ಜಿಡೋಣಿವರಗೆ ಮುಗಿದಿದ್ದು, ಈ ಮಾರ್ಗದಲ್ಲಿ ರೈಲ್ ಬಸ್ ಸಂಚಾರ ಆರಂಭವಾಗಿ ವರ್ಷವಾಗುವುದರೊಳಗೆ ಸ್ಥಗಿತಗೊಂಡಿದೆ. ಈ ಒಂದು ವರ್ಷದಲ್ಲಿ ರೈಲ್ ಬಸ್ ಖಜ್ಜಿಡೋಣಿ ನಿಲ್ದಾಣಕ್ಕೆ ಬಂದ ದಿನಕ್ಕಿಂತ ಬಾರದ ದಿನಗಳೇ ಹೆಚ್ಚು. ಇದರಿಂದ ಈ ಭಾಗದ ಜನರ ರೈಲು ಸಂಚಾರದ ಕನಸು ಕನಸಾಗಿಯೇ ಉಳಿದಿದೆ.
ಹೌದು, ಬಾಗಲಕೋಟೆ-ಕುಡಚಿ ರೈಲು ಮಾರ್ಗ ಜಿಲ್ಲೆಯ ಜನರ ಸ್ವಾತಂತ್ರ್ಯಪೂರ್ವ ಬೇಡಿಕೆಯಾಗಿದೆ. ಈ ರೈಲು ಮಾರ್ಗ ಕಾಮಗಾರಿ 2009ರಲ್ಲಿ ಆರಂಭವಾಗಿದ್ದು, 2017ರಲ್ಲಿ ಖಜ್ಜಿಡೋಣಿವರೆಗೆ 33 ಕಿ.ಮೀ. ಕಾಮಗಾರಿ ಮುಕ್ತಾಯಗೊಂಡಿದೆ. ಈ ಮಾರ್ಗ ವ್ಯಾಪ್ತಿ ಬರುವ ಜನರ ಅನುಕೂಲಕ್ಕಾಗಿ 2018, ಜೂನ್ 15ರಂದು ರೈಲು ಬಸ್ ಸೇವೆ ಆರಂಭಿಸಲಾಗಿತ್ತು. ಆದರೆ, ಈ ಸೇವೆ ಆರಂಭಗೊಂಡ ಒಂದು ತಿಂಗಳಲ್ಲಿಯೇ ಸ್ಥಗಿತಗೊಂಡಿದೆ. ಹೀಗಾಗಿ ಈ ಭಾಗದ ಜನರಿಗೆ ರೈಲು ಸಂಚಾರ ಕನಸು ಕನಸಾಗಗೇ ಉಳಿದಿದೆ.
ಜನಪ್ರತಿನಿಧಿಗಳ ನಿರ್ಲಕ್ಷ್ಯ: ಬಾಗಲಕೋಟೆ ಜಿಲ್ಲೆಯ ಜನರ ಬಹುನಿರೀಕ್ಷೆಯ ಮಹತ್ವಕಾಂಕ್ಷೆಯ ಬಾಗಲಕೋಟೆ-ಕುಡಚಿ ರೈಲು ಮಾರ್ಗ ನಿರ್ಮಾಣ ಕಾಮಗಾರಿ ಮಂದ ಗತಿಯಲ್ಲಿ ಸಾಗಲು ಜನಪ್ರತಿನಿಧಿಗಳ ಇಚ್ಚಾಶಕ್ತಿ ಕೊರತೆಯೇ ಕಾರಣ. ರೈಲು ಮಾರ್ಗ ಪೂರ್ಣಗೊಂಡ ಮಾರ್ಗ ಮಧ್ಯೆ ರೈಲು ಬಸ್ ಸಂಚಾರ ನಡೆಯುವಂತೆ ನೋಡಿಕೊಳ್ಳುವುದರಲ್ಲೂ ತಮ್ಮ ಇಚ್ಚಾಶಕ್ತಿ ತೋರುತ್ತಿಲ್ಲ ಎಂದು ಈ ಭಾಗದ ಜನರ ಆರೋಪ. ಆದರೆ, ಬಾಗಲಕೋಟೆ-ಖಜ್ಜಿಡೋಣಿ ರೈಲು ಮಾರ್ಗದಲ್ಲಿ ರೈಲು ಬಸ್ ಸಂಚಾರ ಸ್ಥಗಿತಗೊಳ್ಳಲು ಪ್ರಯಾಣಿಕರ ಕೊರತೆ ಪ್ರಮುಖ ಕಾರಣ ಎಂದು ರೈಲ್ವೆ ಅಧಿಕಾರಿಯೊಬ್ಬರು ಪತ್ರಿಕೆಗೆ ತಿಳಿಸಿದ್ದಾರೆ.
ಪುನರಾರಂಭಕ್ಕೆ ಆಗ್ರಹ: ಖಜ್ಜಿಡೋಣಿ, ಕಲಾದಗಿ, ಹಿರೇಶೆಲ್ಲಿಕೇರಿ, ಚಿಕ್ಕಶೆಲ್ಲಿಕೇರಿ, ನೀರಬೂದಿಹಾಳ, ಕೆರಕಲಮಟ್ಟಿ, ಸೂಳಿಕೇರಿ ಇನ್ನಿತರ ಗ್ರಾಮಗಳ ಜನರಿಗೆ ಬಾಗಲಕೋಟೆಗೆ ತೆರಳಲು ರೈಲು ಬಸ್ ಸಂಚಾರ ಅನುಕೂಲವಾಗಿದೆ. ಈ ರೈಲು ಬಸ್ ಸಂಚಾರವನ್ನು ಪುನರಾರಂಭಿಸಬೇಕೆಂದು ಈ ಭಾಗದ ಜನರು ಆಗ್ರಹಿಸಿದ್ದಾರೆ.
•ಚಂದ್ರಶೇಖರ ಆರ್.ಎಚ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bagalkot : ಸಕಲ ಸರ್ಕಾರಿ ಗೌರವಗಳೊಂದಿಗೆ ಯೋಧ ಮಹೇಶ್ ಮರೆಗೊಂಡ ಅಂತ್ಯಸಂಸ್ಕಾರ
ಪತ್ನಿ ಊರಿನತ್ತ ಪ್ರಯಾಣ ಬೆಳೆಸಿದರೆ… ಸಾವಿನ ಮನೆಯ ಕದ ತಟ್ಟಿದ ಯೋಧ ನಾಗಪ್ಪ ಮರೆಗೊಂಡ
Mahalingpur: ಇಂದು ಮೃತ ಯೋಧ ಮಹೇಶ ಅಂತ್ಯಕ್ರಿಯೆ; ಯೋಧನ ಮನೆಗೆ ಸಚಿವ ತಿಮ್ಮಾಪುರ ಭೇಟಿ
Mudhola: ಸಿಲಿಂಡರ್ ಸ್ಫೋಟ: ಹೊತ್ತಿ ಉರಿದ ಮನೆ
Banahatti: ತಾಂತ್ರಿಕ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಬದ್ಧಳಾಗಿದ್ದೇನೆ: ಉಮಾಶ್ರೀ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.