ಮಹಿಳೆಯರು ಪ್ರಶ್ನೆ ಮಾಡುವ ಮನೋಭಾವನೆ ಬೆಳೆಸಿಕೊಳ್ಳಬೇಕು: ಉಮಾಶ್ರೀ
ಜಾತಿ ಧರ್ಮಗಳು ಮುಖ್ಯವಾದರೆ ದೇಶದ ಅಭಿವೃದ್ಧಿ ಕುಂಠಿತ
Team Udayavani, Jul 27, 2022, 7:16 PM IST
ರಬಕವಿ-ಬನಹಟ್ಟಿ: ಮಹಿಳೆಯರು ತಮ್ಮ ಹಕ್ಕುಗಳ ಮೊಟಕುಗೊಳಿಸುವ ನಿಟ್ಟಿನಲ್ಲಿ ನಾವು ಹೋರಾಡಬೇಕಾಗಿದೆ ಮತ್ತು ಹೆಚ್ಚಿನ ಹಕ್ಕುಗಳಿಗೆ ಮಹಿಳೆಯರು ಬೇಡಿಕೆಯನ್ನು ಸಲ್ಲಿಸಬೇಕಾಗಿದೆ. ಮಹಿಳೆಯರು ಪ್ರಶ್ನೆ ಮಾಡುವ ಮನೋಭಾವನೆಯನ್ನು ಬೆಳೆಸಿಕೊಳ್ಳದೆ ಹೋದರೆ ಸಮಾಜ ಮುಖಿಯಾಗಿ ಕಾರ್ಯ ನಿರ್ವಹಿಸಲು ಸಾಧ್ಯವಿಲ್ಲ ಎಂದು ಮಾಜಿ ಸಚಿವೆ ಉಮಾಶ್ರೀ ಹೇಳಿದರು.
ಬನಹಟ್ಟಿಯ ಎಸ್‌ಟಿಸಿ ಕಾಲೇಜಿನ ಮಹಿಳಾ ವೇದಿಕೆಯ ಆಶ್ರಯದಲ್ಲಿ ನಡೆದ ಸಮಾಜದಲ್ಲಿಯ ಮಹಿಳೆ ಪಾತ್ರ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿ,ಸೃಷ್ಟಿಯ ನಿಯಮದಲ್ಲಿ ಪುರುಷ ಮತ್ತು ಮಹಿಳೆಯರು ಸಮಾನರು. ಆದರೂ ಮಹಿಳೆ ಶೋಷಣೆ ಮತ್ತು ತುಳಿತಕ್ಕೆ ಒಳಗಾಗುತ್ತಿದ್ದಾಳೆ. ಮೂಢ ನಂಬಿಕೆ, ಧಾರ್ಮಿಕ, ಸಂಪ್ರದಾಯಿಕ ಆಚರಣೆಯಿಂದಾಗಿ ಮಹಿಳೆ ತೊಂದರೆಯನ್ನು ಅನುಭವಿಸುತ್ತಿದ್ದಾಳೆ. ಮಹಿಳೆಯರ ಮೇಲೆ ಕಟ್ಟು ನಿಟ್ಟಿನ ಕ್ರಮಗಳನ್ನು ಹಾಕದೆ ಅವಳನ್ನು ಸಮಾನವಾಗಿ ಗುರುತಿಸಬೇಕಾಗಿದೆ. ಶಿಕ್ಷಣದಿಂದ ಮಹಿಳೆ ವಂಚಿರಾಗಬಾರದು. ಕೇವಲ ಪ್ರಮಾಣ ಪತ್ರಕ್ಕಾಗಿ ಶಿಕ್ಷಣ ಪಡೆಯದೆ ಜೀವನಾನುಭವದ ವಿದ್ಯೆ, ಸಮಾಜ ಮುಖಿಯಾಗಿ ಚಿಂತನೆ ಮಾಡುವ ಸಾಮರ್ಥ್ಯವನ್ನು ಮಹಿಳೆಯರು ಬೆಳೆಸಿಕೊಳ್ಳಬೇಕು. ದೇಶವನ್ನು ಬದಲಾಯಿಸಲು ಮಹಿಳೆಯರಿಂದ ಸಾಧ್ಯ. ಈ ನಿಟ್ಟಿನಲ್ಲಿ ಮಹಿಳೆಯರು ಗಮನ ನೀಡಬೇಕು ಸಮಾಜದಲ್ಲಿ ಮಹಿಳೆಯರ ಪರವಾಗಿರುವ ಮನಸ್ಸುಗಳು ಇದ್ದರೆ ಮಾತ್ರ ಮಹಿಳೆ ಅಭಿವೃದ್ಧಿಯಾಗಲು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಡಾ.ರೇಶ್ಮಾ ಗಜಾಕೋಶ ಮತ್ತು ರಶ್ಮಿ ಕೊಕಟನೂರ ಮಾತನಾಡಿದರು.ವೇದಿಕೆಯ ಮೇಲೆ ಪ್ರೊ.ಗೀತಾ ಸಜ್ಜನ, ಶೋಭಾ ಪಿಟಗಿ, ಶ್ವೇತಾ ಮಠದ ಇದ್ದರು.ಮಧು ಗುರುವ ಪ್ರಾರ್ಥಿಸಿದರು. ಕಾವೇರಿ ಜಗದಾಳ ಸ್ವಾಗತಿಸಿದರು. ಆರತಿ ಅಡವಿತೋಟ ನಿರೂಪಿಸಿದರು. ಲಕ್ಷ್ಮಿ ಖವಾಸಿ ವಂದಿಸಿದರು.ಮಹಾವಿದ್ಯಾಲಯದ ಉಪನ್ಯಾಸಕಿಯರು ಮತ್ತು ವಿದ್ಯಾರ್ಥಿನಿಯರು ಇದ್ದರು.
ಸಿದ್ಧರಾಮಯ್ಯನವರ ಹುಟ್ಟು ಹಬ್ಬದಲ್ಲಿ ಭಾಗವಹಿಸುವೆ
ಸಿದ್ಧರಾಮಯ್ಯನವರು ಈ ದೇಶ ಕಂಡ ಅದ್ಭುತ ರಾಜಕೀಯ ಧುರೀಣರು. ಸಿದ್ಧರಾಮಯ್ಯವರ ಹುಟ್ಟಿದ ಹಬ್ಬ ಒಂದು ಸಂಭ್ರಮ. ಈ ಸಂದರ್ಭದಲ್ಲಿ ಅವರನ್ನು ಪ್ರೀತಿಸುವಂತಹ, ಗೌರವಿಸುವಂತಹ ಮತ್ತು ಅವರ ನಿಲವುಗಳನ್ನು, ಆಡಳಿತವನ್ನು ಮೆಚ್ಚುವಂತಹ ಎಲ್ಲ ಜನರು ಕೂಡಿಕೊಂಡು ಮಾಡುವ ಸಂಭ್ರಮವಾಗಿದ್ದು, ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದಾಗಿ ಉಮಾಶ್ರೀ ಅವರು ಎಸ್‌ಟಿಸಿ ಕಾಲೇಜಿನ ಬಳಿ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ತಿಳಿಸಿದರು.
ಅವರ ಹುಟ್ಟು ಹಬ್ಬದ ಸಂಭ್ರಮದ ಸಾಂಸ್ಕೃತಿಕ ಸಮಿತಿ ಸದಸ್ಯೆಯಾಗಿದ್ದೇನೆ. ಹುಟ್ಟು ಹಬ್ಬದ ಸಂದರ್ಭದ ನಿಮಿತ್ತವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈಗಾಗಲೇ ಬಹಳಷ್ಟು ಕಾರ್ಯಗಳನ್ನು ಮಾಡಿ ಬಂದಿದ್ದೇನೆ. ಮಹಿಳಾ ಸಂಘಟನೆಯಲ್ಲೂ ಕೂಡಾ ಜಯಮಾಲಾ, ಲಕ್ಷ್ಮಿ ಹೆಬ್ಬಾಳ್ಕರ್ ಜತೆ ಕೂಡಿಕೊಂಡು ಜಬಾಬ್ದಾರಿಗಳನ್ನು ನಿರ್ವಹಿಸುತ್ತಿದ್ಧೇನೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ
K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
India: ಒಂದು ದೇಶ ಒಂದು ಚುನಾವಣೆ ಜಾರಿ ಆಗಲಿ: ಪೇಜಾವರ ಸ್ವಾಮೀಜಿ
Rabkavi Banahatti: ಲೋಕ ಅದಾಲತ್ ನಲ್ಲಿ ಒಂದಾದ ದಂಪತಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.