ಮಹಿಳೆಯರಲ್ಲಿ ಆತ್ಮವಿಶ್ವಾಸ ಬಲಪಡಿಸಿ
Team Udayavani, Mar 15, 2021, 3:03 PM IST
ಬನಹಟ್ಟಿ: ಮಹಿಳೆಯರಲ್ಲಿ ಆತ್ಮವಿಶ್ವಾಸ ಬಲಪಡಿಸುವುದು ಮಹಿಳಾ ದಿನಾಚರಣೆಯಉದ್ಧೇಶವಾಗಿದೆ ಎಂದು ರಬಕವಿ-ಬನಹಟ್ಟಿಯಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದಪ್ರಾಚಾರ್ಯೆ ಚಂದ್ರಪ್ರಭಾ ಬಾಗಲಕೋಟ ಹೇಳಿದರು.
ಬನಹಟ್ಟಿಯ ತೇರದಾಳ ಮತಕ್ಷೇತ್ರದ ಬಿಜೆಪಿ ಕಾರ್ಯಾಲಯದಲ್ಲಿ ಮಹಿಳಾ ಮೋರ್ಚಾ ವತಿಯಿಂದ ನಡೆದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರುಮಾತನಾಡಿದರು. ಮಹಿಳಾ ಸಮಾನತೆ ಎಂದರೆಮನೆ ಹಾಗೂ ಮನೆಯ ಆಚೆಗಿನ ಪರಿಸರದಲ್ಲಿಆಕೆಗೆ ಸಹಜವಾಗಿ ಸಿಗುವ ಮತ್ತು ಸಿಗಬೇಕಾದಅವಕಾಶಗಳು. ಪುರುಷ ಪಾರುಪತ್ಯವೇ ಅಧಿ ಕವಾಗಿರುವ ಅಧಿ ಕಾರದ ಸ್ಥಾನಗಳಲ್ಲಿ, ರಾಜ್ಯಹಾಗೂ ಕೇಂದ್ರದ ಮೇಲ್ಮನೆ, ಕೆಳಮನೆಗಳಲ್ಲಿ ಅವಳಪಾಲಿನ ಅವಕಾಶಗಳು ಅವಳಿಗೆ ಯಾವ ಯಾರತಕರಾರು ಹಸ್ತಕ್ಷೇಪ ಇಲ್ಲದೇ ಸಿಗುವಂತಾಗುವುದುನಿಜವಾದ ಸಮಾನತೆ ಎಂದರು. ಇಂದಿರಾ ಗಾಂಧಿ ,ಪ್ರತಿಭಾ ಪಾಟೀಲ, ಸುಷ್ಮಾ ಸ್ವರಾಜ್ಯ, ನಿರ್ಮಲಾ ಸೀತಾರಾಮನ್ ಇವರೆಲ್ಲ ಸಮರ್ಥವಾಗಿ ತಮ್ಮ ಪ್ರತಿಭೆಯನ್ನು ಸಶಕ್ತವಾಗಿ ಸಾಬೀತುಪಡಿಸಿದ್ದಾರೆ ಎಂದರು.
ಶಾಸಕ ಸಿದ್ದು ಸವದಿ ಮಾತನಾಡಿ, ಇಂದಿನ ದಿನಮಾನಗಳಲ್ಲಿ ಮಹಿಳೆ ಎಲ್ಲ ರಂಗಗಳಲ್ಲಿಯೂ ಮಿಂಚುತ್ತಿದ್ದು, ಸರಕಾರ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಹಲವಾರು ಯೋಜನೆಗಳನ್ನುಹಾಕಿಕೊಂಡಿದೆ. ಮಹಿಳೆಯರು ಸ್ವಾವಲಂಬಿಗಳಾಗಿಬದುಕಲು ಕೂಡಾ ಸರಕಾರ ಹಲವಾರು ಯೋಜನೆಅನುಷ್ಠಾನಗೊಳಿಸಿದ್ದು, ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಮೀನಾಕ್ಷಿ ಸವದಿ ಉದ್ಘಾಟಿಸಿದರು. ನಗರ ಘಟಕದ ಅಧ್ಯಕ್ಷೆ ಸುವರ್ಣ ಕೊಪ್ಪದ ಅಧ್ಯಕ್ಷತೆವಹಿಸಿದ್ದರು. ನಗರ ಘಟಕದ ಅಧ್ಯಕ್ಷ ಧರೆಪ್ಪಉಳ್ಳಾಗಡ್ಡಿ, ಗ್ರಾಮೀಣ ಘಟಕದ ಅಧ್ಯಕ್ಷ ಸುರೇಶಅಕ್ಕಿವಾಟ, ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾ ಅಧ್ಯಕ್ಷೆ ಸವಿತಾ ಹೊಸೂರ, ಕಾರ್ಯದರ್ಶಿ ವೈಷ್ಣವಿ ಬಾಗೇವಾಡಿ, ಅನುರಾಧಾ ಹೊರಟ್ಟಿ, ಗೌರಿ ಮಿಳ್ಳಿ, ಶಾಂತಾ ಸೊರಗಾಂವಿ, ಸುನೀತಾ ನಂದಗೊಂಡ,ರತ್ನಾ ಕೊಳಕಿ, ಮಾಲಾ ಬಾವಲತ್ತಿ, ಗಂಗಾ ಹೊರಟ್ಟಿ,ಮಹಾದೇವಿ ಮುದಕವಿ, ಭಾರತಿ ಬಿಲವಡಿ, ಮಂಜುಳಾ ಬೀಳಗಿ, ರಾಜೇಶ್ವರ ಕೈಸಲಗಿ, ಪವಿತ್ರಾ ತುಕ್ಕಣ್ಣವರ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಧೋಳ: ಹಲಗಲಿಯಲ್ಲಿ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಸಾಥ್
Achievement: ಮಹಾಲಿಂಗಪುರದ ಬಿಸನಾಳ ಹಾಲಿನ ಡೇರಿಗೆ ಕೇಂದ್ರದ ಪ್ರಶಸ್ತಿ ಗರಿ!
Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
70 ವಿದ್ಯಾರ್ಥಿಗಳಿಗೆ ಒಂದೇ ಶೌಚಾಲಯ; ಮೂತ್ರ ವಿಸರ್ಜನೆಗೆ ಬಯಲೇ ಗತಿ
Mudhol: ಕೈಕೊಟ್ಟ ಬೆಳೆ… ಸಾಲಬಾಧೆಗೆ ಹೆದರಿ ನೇಣಿಗೆ ಶರಣಾದ ರೈತ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Udupi; ಎಂಜಿಎಂ ಅಮೃತೋತ್ಸವ: ಕಣ್ಮನ ಸೆಳೆದ ವಸ್ತು ಪ್ರದರ್ಶನ
Indiranagar; ಅಸ್ಸಾಂ ಯುವತಿ ಹ*ತ್ಯೆ ಕೇಸ್: ಆರೋಪಿ ಬಂಧಿಸಿದ ಪೊಲೀಸರು
Kalaburagi: ಅನುಭವ ಮಂಟಪ ಸ್ಥಳ ಮರಳಿ ಪಡೆಯಲು ದೆಹಲಿ ಚಲೋ
Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ
Karnataka Govt.,: ರಾಜ್ಯ ಪ್ರವಾಸೋದ್ಯಮ ನೀತಿಗೆ ಸಂಸದ ಕಾಗೇರಿ ಖಂಡನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.