ಆತ್ಮಹತ್ಯೆಗೆ ಯತ್ನ? ಟೆರರಿಸ್ಟ್ ಆಗುವಂತೆ ಯುವಕನಿಗೆ ಟಾರ್ಚರ್
Team Udayavani, Dec 16, 2017, 12:37 PM IST
ಬಾಗಲಕೋಟೆ; ಉಗ್ರರು ತನಗೆ ಟೆರರಿಸ್ಟ್ ಆಗುವಂತೆ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ ಯುವಕನೋರ್ವ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಗಜೇಂದ್ರಗಢದಲ್ಲಿ ನಡೆದಿದೆ.
ಮೈಸೂರಿನಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ಶರಣಪ್ಪ ನಾಗರಾಳ ಎಂಬಾತ, ತನಗೆ ಉಗ್ರರು ಟೆರರಿಸ್ಟ್ ಆಗುವಂತೆ ಒತ್ತಡ ಹೇರುತ್ತಿದ್ದಾರೆಂದು ಆರೋಪಿಸಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸಿದ್ದ.
ಟೆರರಿಸ್ಟ್ ಆಗುವಂತೆ ಹಾಗೂ ಕಾಲೇಜ್ ಗೆ ಬಾಂಬ್ ಇಡುವಂತೆ ಬೆದರಿಕೆ ಹಾಕುತ್ತಿದ್ದರು..ನಾನು ಟೆರಿರಿಸ್ಟ್ ಆಗಲ್ಲ ಎಂದು ಪತ್ರ ಬರೆದಿಟ್ಟು ಶರಣಪ್ಪ ನಿನ್ನೆ ಗಜೇಂದ್ರಗಢ ಬಳಿ ವಿಷ ಸೇವಿಸಿದ್ದ. ಬಳಿಕ ಆತನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. ಇಬ್ಬರು ವ್ಯಕ್ತಿಗಳು ತನಗೆ ಕಿರುಕುಳ ನೀಡುತ್ತಿದ್ದರೆಂದು ಪತ್ರದಲ್ಲಿ ದೂರಿದ್ದ ಎಂದು ಮಾಧ್ಯಮದ ವರದಿ ತಿಳಿಸಿದೆ.
ಆದರೆ ಈ ವಿಷಯವನ್ನು ಆತನ ಕುಟುಂಬದವರು ಅಲ್ಲಗಳೆದಿದ್ದು, ಶರಣಪ್ಪ ಹೇಳುತ್ತಿರುವುದು ಸುಳ್ಳು ಎಂದು ಹೇಳಿದ್ದಾರೆ. ಶರಣಪ್ಪನಿಗೆ ಮಾನಸಿಕ ಅಸ್ವಸ್ಥತೆ ಇದ್ದು, ಆತನಿಗೆ ಯಾವುದೇ ಭಯೋತ್ಪಾದಕರ ಜತೆ ಸಂಪರ್ಕ ಇಲ್ಲ ಎಂದು ಗದಗ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಬಾಬು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.