ಭತ್ತ ನಾಟಿ ಕಾರ್ಯ ಚುರುಕು
Team Udayavani, Jan 10, 2020, 4:42 PM IST
ಬಳಗಾನೂರು: ಮಾರ್ಚ್‌ನಲ್ಲಿ ಬೇಸಿಗೆ ಬೆಳೆಗೆ ನೀರಿನ ಕೊರತೆ ಎದುರಾಗುವ ಭೀತಿ ಹಿನ್ನೆಲೆಯಲ್ಲಿ ಈ ಭಾಗದ ರೈತರು ಈಗಲೇ ಭತ್ತ ನಾಟಿ ಮಾಡುತ್ತಿದ್ದಾರೆ.
ಜನವರಿ ಅಂತ್ಯದಲ್ಲಿ ಭತ್ತ ನಾಟಿ ಮಾಡಿದರೆ ಬೆಳೆ ಕಾಳು ಕಟ್ಟುವ ಹಂತದಲ್ಲಿ ಅಂದರೆ ಮಾರ್ಚ್‌ನಲ್ಲಿ ನೀರಿನ ಕೊರತೆ ಎದುರಾಗಬಹುದೆಂಬ ಆತಂಕದಿಂದ ಬಳಗಾನೂರು ಸೇರಿ ಸುತ್ತಲಿನ ಗ್ರಾಮಗಳ ಬಹುತೇಕ ರೈತರು ಡಿಸೆಂಬರ್ ಕೊನೆ ವಾರ ಮತ್ತು ಜನವರಿ ಮೊದಲ ವಾರದಿಂದಲೇ ಭತ್ತ ನಾಟಿ ಕಾರ್ಯ ಮಾಡುತ್ತಿದ್ದಾರೆ. ಈಗಾಗಲೇ ಅನೇಕ ರೈತರು ಭತ್ತ ನಾಟಿ ಮಾಡಿ ಮೊದಲ ಹಂತದ ಗೊಬ್ಬರ ಕೂಡ ಹಾಕಿದ್ದಾರೆ.
ಮುಂಗಾರು ಭತ್ತ ಕಟಾವಿನ ನಂತರ ರೈತರು ಗದ್ದೆಯಲ್ಲಿನ ಭತ್ತದ ಕವುಲಿಯನ್ನು ಟ್ರ್ಯಾಕ್ಟರ್ ಟಿಲ್ಲರ್ ಹೊಡೆಸಿ ಸ್ವತ್ಛಗೊಳಿಸಿ ನೀರು ಹರಿಸಿದ್ದಾರೆ. ಟ್ರ್ಯಾಕ್ಟರ್‌ನಿಂದ ಪಟ್ಲರ್ ಹೊಡೆದು ಮತ್ತೆ ಭತ್ತ ನಾಟಿ
ಮಾಡುತ್ತಿದ್ದಾರೆ. ಕೆಲ ರೈತರು ಸಸಿ ಮಡಿಗಳನ್ನು ಹಾಕಿದ್ದು, ನಾಟಿಗೆ ಸಿದ್ಧತೆ ನಡೆಸಿದ್ದಾರೆ. ಮತ್ತೇ ಕೆಲ ರೈತರು ಬೇರೆಡೆಯಿಂದ ಭತ್ತದ ಸಸಿ ತಂದು ನಾಟಿ ಮಾಡುತ್ತಿದ್ದಾರೆ. ಕೆಲವೆಡೆ ಈಗಾಗಲೇ ಭತ್ತ, ತೊಗರಿ, ಜೋಳ, ಕಡ್ಲಿ ಕಟಾವಿಗೆ ಬಂದಿರುವ ಹಿನ್ನೆಲೆಯಲ್ಲಿ ಭತ್ತ ನಾಟಿಗೆ ಕೂಲಿ ಕಾರ್ಮಿಕರ ಕೊರತೆ ಎದುರಾಗಿದೆ. ಹೀಗಾಗಿ ಬೇರೆ ಗ್ರಾಮಗಳಿಂದ ವಾಹನಗಳಲ್ಲಿ ಕೂಲಿ ಕಾರ್ಮಿಕರನ್ನು ಕರೆದುಕೊಂಡು ಬಂದು ಭತ್ತ ನಾಟಿ ಮಾಡುತ್ತಿದ್ದಾರೆ. ಕೆಲ ಕೂಲಿ ಕಾರ್ಮಿಕರು ಎಕರೆಗೆ ಇಂತಿಷ್ಟು ಅಂತ ಗುತ್ತಿಗೆ ಪಡೆದು ಭತ್ತ ನಾಟಿ ಮಾಡಿಕೊಡುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ನಿಲ್ಲದ ಪಟಾಕಿ ಅವಘಡ: ಮತ್ತೆ 10 ಮಂದಿ ಕಣ್ಣಿಗೆ ತೊಂದರೆ
Puttur: ವಿದ್ಯುತ್ ಕಂಬ ಏರುವ ತರಬೇತಿ!; ಪವರ್‌ಮನ್ ಉದ್ಯೋಗಕ್ಕೆ ಸ್ಥಳೀಯರಿಗೆ ಪ್ರೋತ್ಸಾಹ
Belthangady: ಗ್ರಾಮೀಣ ರಸ್ತೆಗಳಲ್ಲೂ ಗುಂಡಿ
Belagavi: ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ ಮುಗಿದ ಅಧ್ಯಾಯ: ಸಚಿವ ಎಚ್.ಕೆ. ಪಾಟೀಲ್
Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.