ಬಂಡೆ ರಂಗನಾಥ ಸ್ವಾಮಿ ಜಾತ್ರೆ; ಕುಸ್ತಿ ಪಂದ್ಯಾವಳಿ
Team Udayavani, Mar 25, 2019, 2:32 PM IST
ಹಗರಿಬೊಮ್ಮನಹಳ್ಳಿ: ತಾಲೂಕಿನ ತಂಬ್ರಹಳ್ಳಿ ಬಂಡೆ ರಂಗನಾಥ ಸ್ವಾಮಿ ಜಾತ್ರೆ ಪ್ರಯುಕ್ತ ಕುಸ್ತಿ ಪಂದ್ಯಾವಳಿ ಆಯೋಜಿಸಲಾಗಿತ್ತು.
ತಂಬ್ರಹಳ್ಳಿಯ ಬಂಡೆ ರಂಗನಾಥ ಸೇವಾ ಸಮಿತಿ, ಹನುಮಾನ್ ಕುಸ್ತಿ ಮಂಡಳಿ ಮತ್ತು ರಂಗನಾಥ ಹಮಾಲರ ಸಂಘದಿಂದ ಗ್ರಾಮದ ಎಪಿಎಂಸಿ ಆವರಣದಲ್ಲಿ ಏರ್ಪಡಿಸಿದ್ದ ಕುಸ್ತಿ ಪಂದ್ಯಾಟಗಳು ರೋಚಕವಾಗಿದ್ದವು. ಪರ್ಸಿ ಪೈಕಿ ಕುಸ್ತಿಯಲ್ಲಿ ಹರಪನಹಳ್ಳಿ ಕಿರಣಗೆ ಮರಿಯಮ್ಮನಹಳ್ಳಿಯ ವಿಶ್ವನಾಥ ಸೋಲುಣಿಸಿ ಬೆಳ್ಳಕಡಗ ಮತ್ತು ನಗದು ಮೊತ್ತ ಗಿಟ್ಟಿಸಿಕೊಂಡರು.
ಕನಕಭಟ್ಟಂಗಿ ಕುಸ್ತಿಯಲ್ಲಿ ಹರಪನಹಳ್ಳಿ ಕೆಂಚಪ್ಪ, ಮರಿಯಮ್ಮನಹಳ್ಳಿಯ ಹಂಪಿ ಕಿಶೋರ ಸೈಫುಲ್ಲಾ ಕಾದಾಟ ಸಮಬಲದಲ್ಲಿ ಕೊನೆಗೊಂಡು ಪ್ರೇಕ್ಷಕರಿಗೆ ನಿರಾಸೆಯುಂಟು ಮಾಡಿದರು. ಪರಸ್ಪರರು ಕುಸ್ತಿಯಲ್ಲಿ ಸಾಮಾನ್ಯ ಪಟ್ಟುಗಳನ್ನು ಪ್ರದರ್ಶಿಸುತ್ತಾ ಪ್ರೇಕ್ಷಕರ ಟೀಕೆಗೆ ಗುರಿಯಾದರು. ಬಹುಮಾನದ 1500 ರೂ.ಮೊತ್ತ ಮತ್ತು ಬೆಳ್ಳಿಕಡಗವನ್ನು ಪರಸ್ಪರರು ಹಂಚಿಕೊಂಡರು.
ಶಿವಮೊಗ್ಗ, ದಾವಣಗೆರೆ, ಹೊಸಪೇಟೆ, ಹರಪನಹಳ್ಳಿ, ಹೂವಿನಹಡಗಲಿ, ನಾರಾಯಣ ದೇವನಕೆರೆ, ಹೊಸಪೇಟೆ ತಾಲೂಕಿನ ಕುಸ್ತಿಪಟುಗಳ ಸೆಣಸಾಟಕ್ಕೆ ಪ್ರೇಕ್ಷಕರು ಕೇಕೆ ಹಾಕಿ ಹುರುದುಂಬಿಸಿದರು. ಕೆಲ ಆಟಗಾರರು ಭಾರೀ ಪ್ರದರ್ಶನ ನೀಡುವ ಮೂಲಕ ಮೆಚ್ಚುಗೆಗೆ ಪಾತ್ರರಾದರು. ಪಂದ್ಯಾವಳಿಗೆ ಎಎಸ್‌ಐ ಸಿದ್ದಲಿಂಗಪ್ಪ ಚಾಲನೆ ನೀಡಿದರು. ಗಂಗಾಧರಗೌಡ,
ಹುಳ್ಳಿ ಪ್ರಕಾಶ, ಏಣಗಿ ರಾಮಣ್ಣ, ಮೈಲಪ್ಪ, ಪಕ್ರುದ್ದೀನ್, ಶರಣಪ್ಪ, ತಿರುಕರೆಡ್ಡಿ ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದರು. ಹಮಾಲರ ಸಂಘದ ಅಧ್ಯಕ್ಷ ಬಾಚಿನಳ್ಳಿ ಮಹೇಶ, ಬಂಡೆ ರಂಗನಾಥ ದೇವಸ್ಥಾನ ಸಮಿತಿ ಅಧ್ಯಕ್ಷ ಕಡ್ಡಿ ಚನ್ನಬಸಪ್ಪ, ಕಾರ್ಯದರ್ಶಿ ಪರಿಗಿ ವಿರೂಪಾಕ್ಷಪ್ಪ, ಗ್ರಾಪಂ ಸದಸ್ಯ ಸೊಬಟಿ ಹರೀಶ, ಎಂ.ಪಿ. ಪರಮೇಶಪ್ಪ, ಮ್ಯಗಳಮನಿ ಮರಿಯಜ್ಜ, ಮೋರಿಗೇರಿ ವಿಶ್ವನಾಥ, ಡಂಬ್ರಹಳ್ಳಿ ಪರಸಪ್ಪ, ರಫಿ, ಕಾಸೀಂಸಾಬ್, ಆನೇಕಲ್ ಶಾಂತಪ್ಪ, ಸಂಡೂರು ಮೆಹಬೂಬ್
ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.